Wednesday, September 25, 2013

"ಬೇಡವಾದ ಬೇಡಿಕೆಯ ಕೋರ್ಸುಗಳ ಪಟ್ಟಿಯಲ್ಲಿ ಸಮಾಜಕಾರ್ಯ" ಈ ಸ್ಥಿತಿಗೆ ನಾವೆಲ್ಲರೂ ಕಾರಣವಲ್ಲವೇ ?



"If you have a work instead of a job, Every day is holiday"
- Paulo Coelho

            ಹಿರಿಯ ಪ್ರೊಫೆಸರ್ ಒಬ್ಬರ ಅನೌಪಚಾರಿಕ ಮಾತುಕತೆಯಲ್ಲಿ ನೋಡಿ ಸಾರ್ ನಾನು ಪಿ.ಎಚ್ಡಿ ಕನ್ಸಲ್ಟೆಂಟ್ ಯಾರಿಗಾದರೂ ಪಿ.ಎಚ್ಡಿ ಬೇಕೆಂದರೆ ನನ್ನ ಬಳಿ ಕಳುಹಿಸಿಕೊಡಿ ಅವರಿಗೆ ಪಿ.ಎಚ್ಡಿ ದೊರಕುವವರೆಗೂ ಅಭ್ಯರ್ಥಿಯ ಪರವಾಗಿ ನಾನು ಕೆಲಸ ಮಾಡುತ್ತೇನೆ, ಅದಕ್ಕಾಗಿ 1 ಲಕ್ಷದ ವರೆಗೂ ಹಣ ತೆಗೆದುಕೊಳ್ಳುತ್ತೇನೆ ಎಂದರು. ಹಾಗಾದರೆ ಅವರಿಗೆ ಯಾವ ರೀತಿಯ ಸೇವೆ ನೀಡುತ್ತೀರಿ ಎಂದೇ? ನೋಡಿ ನಮ್ಮ ಹತ್ತಿರ ಪಿ.ಎಚ್ಡಿ ಎಂದರೇನು ಗೊತ್ತಿರದವರೇ ಬರುತ್ತಾರೆ. ಸಂಶೋಧನೆಯ ಎಬಿಸಿಡಿ ಅವರಿಗೆ ಗೊತ್ತಿರುವುದಿಲ್ಲ. ಅವರಿಗೆ ನಾವು ಪಿ.ಎಚ್ಡಿ ಕೊಡಿಸಬೇಕಾದ ಜವಾಬ್ದಾರಿ ನಮ್ಮದಲ್ಲವೇ ಎಂದು ನಕ್ಕರು. ಆದರೆ, ಇದು ತಪ್ಪಲ್ಲವೆ ಎಂಬ ಮರುಪ್ರಶ್ನೆಗೆ ನೋಡಿ ಸಾರ್ ನಾನು ಕೆಲಸ ಮಾಡದಿದ್ದರೆ ಬೇರೊಬ್ಬರು ಮಾಡುತ್ತಾರೆ, ನಾನಾದರೂ ಪರವಾಗಿಲ್ಲ ಪಿ.ಎಚ್ಡಿ ವೈವ ದಲ್ಲಿನ ಪ್ರಶ್ನೆಗಳೂ ಪೂರ್ವ ನಿಗದಿಯಾಗಿರುವ ನಿದರ್ಶನಗಳು ನಮ್ಮ ಮುಂದಿವೆ ಎಂದರು. ಪಿ.ಎಚ್ಡಿ ವೈವ ದಿನದ ಸಂಪೂರ್ಣ ಖರ್ಚು, ವೈಭವೋಪೇರಿತ ವಸತಿ ಮತ್ತು ಊಟದ ವ್ಯವಸ್ಥೆ ಪ್ರತಿಯೊಂದನ್ನೂ ಪಿ.ಎಚ್ಡಿ ಪಡೆಯಬೇಕಾದ ಅಭ್ಯರ್ಥಿ ನೋಡಿಕೊಳ್ಳಬೇಕಾಗುತ್ತದೆ.
            ಇನ್ನೊಬ್ಬ ಮಹಾನುಭವ ಪ್ರೊಫೆಸರ್ರವರು ನೋಡಿ ರಮೇಶ್ ನನಗೆ ಒಂದು ತಿಂಗಳಿಗೆ ಒಂದು ಲಕ್ಷ ಸಂಬಳ ಬರುತ್ತೆ. ಹಾಗೆಯೇ ಎಕ್ಸಾಮಿನೇಷನ್ ಅಂತಾ ಹಲವಾರು ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿ ತಿಂಗಳಿಗೆ 50 ಸಾವಿರ ಸಂಪಾದಿಸುತ್ತೇನೆ. ವಿದ್ಯಾರ್ಥಿಗಳಿಗೆ ಪಾಠ ಮಾಡಿದರೂ ಹಣ, ಮಾಡದಿದ್ದರೂ ಹಣ ನಾವೇಕೆ ಶ್ರಮಪಡಬೇಕು. ನಮ್ಮ ಸಮಾಜಕಾರ್ಯ ವೃತ್ತಿ ಕಟ್ಟಿಕೊಂಡು ನಾವೇನು ಮಾಡಬೇಕು.
            ಅಂದು ಸಮಾಜಕಾರ್ಯ ಶಿಕ್ಷಣ ಪಡೆದು ಇಂದು ಅತ್ಯುನ್ನತದ ಸ್ಥಾನದಲ್ಲಿದ್ದಲ್ಲಿರುವ ಸಮಾಜಕಾರ್ಯಕರ್ತರು ಸಮಾಜಕಾರ್ಯ ಕ್ಷೇತ್ರವನ್ನೇ ಮರೆತ ಪರಿಣಾಮವಾಗಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಬೇಡವಾದ ಬೇಡಿಕೆಯ ಕೋರ್ಸುಗಳ ಪಟ್ಟಿಯಲ್ಲಿ ಸಮಾಜಕಾರ್ಯ ಸ್ಥಾನ ಪಡೆದಿದೆ. ಇದರ ಪರಿಣಾಮ ನಾವೆಲ್ಲರೂ ಎದುರಿಸಬೇಕಾಗುತ್ತದೆ.
            ಇಂದಿನ ಸಮಾಜಕಾರ್ಯ ಶಿಕ್ಷಣದ ಗುಣಮಟ್ಟದ ಬಗ್ಗೆ ಪ್ರತಿಯೊಬ್ಬರಲ್ಲೂ ಅತೃಪ್ತಿ ಮಡುಗಟ್ಟಿ ನಿಂತಿದೆ. ಅತೃಪ್ತಿಯ ಕಟ್ಟೆ ಒಡೆದು ಪರಿಹಾರ ಕಂಡುಕೊಳ್ಳಲಿಕ್ಕೆ ಪ್ರಸ್ತುತ ಸಂದರ್ಭಗಳು ನಮಗೆಲ್ಲರಿಗೂ ವೇದಿಕೆಯಾಗಿದೆ. ಇನ್ನೂ ವಿಳಂಬವಾದರೆ ಸಮಾಜಕಾರ್ಯದ ಶಿಕ್ಷಣ ಕರ್ನಾಟಕದಲ್ಲಿ ಇಲ್ಲದಂತಾಗಿ ಅನ್ಯ ರಾಜ್ಯಗಳಿಗೆ ಸಮಾಜಕಾರ್ಯದ ಶಿಕ್ಷಣಕ್ಕಾಗಿ ವಲಸೆ ಹೋಗುವ ಸ್ಥಿತಿ ಬಂದರೂ ಆಶ್ಚರ್ಯವೇನಿಲ್ಲ. ಆದ್ದರಿಂದ ನಾವೆಲ್ಲರೂ ಸಕ್ರಿಯವಾಗಿ ಸಮಾಜಕಾರ್ಯ ಕ್ಷೇತ್ರದ ಅಭಿವೃದ್ಧಿಗಾಗಿ ದುಡಿಯಬೇಕಾದುದು ಆದ್ಯ ಕರ್ತವ್ಯವಾಗಿದೆ
            ನಿರಾತಂಕದ ಪ್ರತಿ ಹೆಜ್ಜೆಯಲ್ಲಿಯೂ ಸಹಕರಿಸುತ್ತಾ ಬಂದಿರುವ ಡಾ.ಎಚ್.ಎಂ. ಮರುಳಸಿದ್ಧಯ್ಯ (ನಿವೃತ್ತ ಪ್ರೊಫೆಸರ್, ಸಮಾಜಕಾರ್ಯ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ)ಅವರ ಜೀವನ ಚರಿತ್ರೆಯ (ಸಮಾಜಕಾರ್ಯದ ಕಣಸುಗಾರ) ಪುಸ್ತಕ ಬಿಡುಗಡೆ ಸಮಾರಂಭವು ಜುಲೈ 10 2011ರಂದು ಬೆಳಗ್ಗೆ ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್ನಲ್ಲಿ ನಡೆಯುತ್ತದೆ. ಸಮಾರಂಭಕ್ಕೆ ದಯಮಾಡಿ ಸಮಾಜಕಾರ್ಯಕರ್ತರೆಲ್ಲರೂ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಯಾಗಿಸಬೇಕಾಗಿ ವಿನಂತಿ. ಸರ್ವರಿಗೂ ಆದರ ಸ್ವಾಗತ.
            ಅದೇ ದಿನ ಮಧ್ಯಾಹ್ನ ನಿರಾತಂಕ ಸಂಸ್ಥೆಯ ಸದಸ್ಯರೆಲ್ಲರೂ ಸಭೆ ಸೇರಲಿದ್ದೇವೆ. ತಿಂಗಳಿಗೊಮ್ಮೆ ಎಲ್ಲಾ ಸಮಾಜಕಾರ್ಯದ ಹಿರಿಯ ವೃತ್ತಿಪರರು ಕಿರಿಯ ವೃತ್ತಿಪರರು ಒಂದು ವೇದಿಕೆಯಲ್ಲಿ ಭೇಟಿಯಾಗುವಂತೆ ನಿರಾತಂಕ ತಂಡ ಪ್ರಯತ್ನಿಸುತ್ತಿದೆ. ಹಿರಿಯ ವೃತ್ತಿಪರರು ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿ. ವೇದಿಕೆಯಲ್ಲಿ ಪ್ರತಿಯೋರ್ವರು ತಮ್ಮ ತಮ್ಮ ವೃತ್ತಿಗಳಿಗೆ ಸಂಬಂಧಿಸಿದ ತಮಗೆ ಆವಶ್ಯಕವಿರುವ ವಿಷಯಗಳನ್ನು ಭರ್ತಿಮಾಡಿ ನಿರಾತಂಕಕ್ಕೆ ನೀಡಿದರೆ ವೇಳೆಯಲ್ಲಿ ಕೆಲಸ ಹುಡುಕುತ್ತಿರುವವರಿಗೆ ನೆರವಾಗಬಹುದು. ಹಾಗೂ ವೃತ್ತಿಯಲ್ಲಿ ಎದುರಾಗುವ ಸಂಘರ್ಷಗಳನ್ನು ಮುಕ್ತವಾಗಿ ಹಂಚಿಕ್ಕೊಳ್ಳುವ ವೇದಿಕೆಯಾಗಲಿದೆ
            ಡಾ.ಎಚ್.ಎಂ.ಮರುಳಸಿದ್ಧಯ್ಯರ ಕೋರಿಕೆಯ ಮೇರೆಗೆ ಶ್ರೀಯುತ ಮ್ಯಾಗ್ನಸ್ ಒಟಿಲಿಡ್, ಡೈರೆಕ್ಟರ್ ಆಫ್ ಸ್ಟಡೀಸ್- ಮಾಸ್ಟರ್ ಪ್ರೋಗ್ರಾಮ್ ಇಂಟರ್ ನ್ಯಾಷನಲ್ ಕೋ-ಆರ್ಡಿನೇಟರ್, ಸ್ವಿಡನ್ರವರು ಕಳುಹಿಸಿದ ಲೇಖನಕ್ಕಾಗಿ ನಾವು ಆಭಾರಿಯಾಗಿದ್ದೇವೆ.
            ನಿರಾತಂಕ ಸಂಸ್ಥೆಯು ಉತ್ತರಕರ್ನಾಟಕದ ಹಲವಾರು ಸಮಾಜಕಾರ್ಯ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಅನೇಕ ಕಂಪೆನಿಗಳಲ್ಲಿ, ಎನ್.ಜಿ..ಗಳಲ್ಲಿ, ಕ್ಷೇತ್ರಕಾರ್ಯ, Block Placement ಸೌಲಭ್ಯಗಳನ್ನು ಒದಗಿಸುತ್ತಿದೆ.

ರಮೇಶ  ಎಂ.ಎಚ್.


No comments:

Post a Comment