ಏನಿದು ಸಮಾಜಕಾರ್ಯದ ಹೆಜ್ಜೆಗಳು ?
1.
ಸಮಾಜಕಾರ್ಯದಲ್ಲಿ ಪದವಿ ಸ್ನಾತಕೋತ್ತರ ಪದವಿ ಪಡೆದವರು ತಮ್ಮ ಅನುಭವ ಲೇಖನ ಹಂಚಿಕೊಳ್ಳುವ ವೇದಿಕೆ.
2.
2010ರ ಡಿಸಂಬರ್ ನಲ್ಲಿ ಆರಂಭವಾದ ಮಾಸಪತ್ರಿಕೆ ಸಮಾಜಕಾರ್ಯ ಕ್ಷೇತ್ರದ ಪ್ರಪ್ರಥಮ ದ್ವೈಭಾಷಿಕ
ಮಾಸಪತ್ರಿಕೆ, 28 ಸಂಚಿಕೆಗಳನ್ನು ಮಾಸಿಕವಾಗಿ ಹೊರತಂದ
ಹೆಗ್ಗಳಿಕೆ ಪ್ರಸ್ತುತ ತ್ರೈಮಾಸಿಕವಾಗಿ ಹೊರತರಲಾಗುತ್ತಿರುವ ಪತ್ರಿಕೆ.
ಮಾಸಪತ್ರಿಕೆ, 28 ಸಂಚಿಕೆಗಳನ್ನು ಮಾಸಿಕವಾಗಿ ಹೊರತಂದ
ಹೆಗ್ಗಳಿಕೆ ಪ್ರಸ್ತುತ ತ್ರೈಮಾಸಿಕವಾಗಿ ಹೊರತರಲಾಗುತ್ತಿರುವ ಪತ್ರಿಕೆ.
ಸಮಾಜಕಾರ್ಯ ಪದವಿದರರಿಗೆ ಉಪಯೋಗ ?
1.
ನಿಮ್ಮ ಅನುಭವಗಳನ್ನು ದಾಖಲಿಸಿ ಇತರೆ ಸಮಾಜಕಾರ್ಯಕರ್ತರಿಗೆ ಆಸಕ್ತರಿಗೆ ತಲುಪುವಂತೆ ಮಾಡುವ ಪ್ರಯತ್ನ.
2.
ಸಮಾಜಕಾರ್ಯ ಕ್ಷೇತ್ರದಲ್ಲಿರುವ ಸಮಸ್ಯೆಗಳಿಗೆ ಹಾಗೂ ಸಾಮಾಜಿಕ ಸಮಸ್ಯೆ ಪ್ರಾಮಾಣಿಕವಾಗಿ ಸ್ಪಂದಿಸುವ ಪ್ರಯತ್ನ.
3.
ಸಮಾಜಕಾರ್ಯ ಕ್ಷೇತ್ರದಲ್ಲಿ ನಡೆಯುವ ಎಲ್ಲಾ ಸಭೆ, ಸಮಾರಂಭ ಹಾಗೂ ಎಲ್ಲಾ ಚಟುವಟಿಕೆಗಳ ಮಾಹಿತಿ ನೀಡುವ ವೇದಿಕೆ.
4.
ಲೇಖಕರು ತಮ್ಮ ಪುಸ್ತಕ ಪ್ರಕಟಿಸಿ ಮಾರಾಟ ಮಾಡಲು ಇರುವ ವೇದಿಕೆ.
ಸಮಾಜಕಾರ್ಯ ಹೆಜ್ಜೆಗಳ ಬ್ಲಾಗ್ ನಲ್ಲಿ ಪ್ರಕಟಿಸಲು ಹಣ ನೀಡಬೇಕೆ ?
ಖಂಡಿತವಾಗಿ ಹಣ ನೀಡಬೇಕಾಗಿಲ್ಲ. ಸಹೃದಯಿಗಳು ನಮ್ಮ ಪತ್ರಿಕೆಗೆ ಚಂದಾದಾರರಾಗಬಹುದು ಹಾಗೂ ನಮ್ಮ ಸಂಸ್ಥೆಗೆ ದೇಣಿಗೆ ನೀಡಬಹುದು.
ಪುಸ್ತಕ ಖರೀದಿಸಬಹುದೆ ?
1.
ನಿಮಗೆ ಬೇಕೆನಿಸಿದ ಪುಸ್ತಕಗಳ ಪಟ್ಟಿಯನ್ನು ನಮಗೆ Email ಮಾಡಿ ಹಾಗೂ ಹಣವನ್ನು Check ಅಥವ DD ಮುಖಾಂತರ ನಿರುತ ಪಬ್ಲಿಕೇಷನ್ಸ್ ಗೆ ಕಳುಹಿಸಿ ಕೊಡಿ, ನಾವು ನಿಮಗೆ ಪುಸ್ತಕ ಕಳುಹಿಸಿ ಕೊಡುತ್ತೇವೆ.
2.
ಯಾವುದೇ ಪುಸ್ತಕ ಕಳುಹಿಸಿದರೂ ಪುಸ್ತಕ ಪರಿಚಯ ಮಾಡಿಕೊಡುವಿರಾ ?
3.
ಸಮಾಜಕಾರ್ಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಮಾತ್ರ ಇಲ್ಲಿ ಪ್ರಕಟಿಸಲಾಗುತ್ತದೆ.
ಲೇಖಕ ನಮ್ಮ ಪುಸ್ತಕ ಮಾರಾಟ ಮಾಡಲು ನಾವು ಏನು ಮಾಡಬೇಕು ?
ನಿಮ್ಮ ಪುಸ್ತಕವನ್ನು ಅದರ ಕಿರುಪರಿಚಯ ನಮಗೆ ಕಳುಹಿಸಿಕೊಡಿ, ನಿಮ್ಮ ಪುಸ್ತಕ ನಮ್ಮ ತಂಡ ಮಾರಾಟ ಮಾಡಲು ನಿರ್ಧರಿಸಿ ನಿಮಗೆ ತಿಳಿಸಲಾಗುವುದು.
ನಾವು ನಿರುತ ಪ್ರಕಾಶನದಿಂದ ಈಗಾಗಲೇ ಹಲವಾರು ಪುಸ್ತಕ ಹೊರತಂದಿದ್ದೇವೆ. ನಿಮ್ಮ ಪುಸ್ತಕದ ಹಸ್ತಪ್ರತಿಯನ್ನು ನಮಗೆ ನೀಡಿ, ನಮ್ಮ ತಂಡ ನಿಮ್ಮ ಪುಸ್ತಕ ಪ್ರಕಟಿಸಲು 30 ದಿನಗಳ ಒಳಗಾಗಿ ಪ್ರಕಟಿಸುತ್ತೇವೆ ಅಥವ ಇಲ್ಲಾ ಎಂದು ಮಾಹಿತಿ ನೀಡುತ್ತೇವೆ.
ನಿಮ್ಮ ಸಂಸ್ಥೆಯ ಮುಂದಿನ ಪುಸ್ತಕಗಳು ಯಾವುದು ?

1.
UGC NET - ಸಮಾಜಕಾರ್ಯ ಈಗಾಗಲೇ ಈ ಪುಸ್ತಕದ ರೂಪದಲ್ಲಿ ಹೊರಬರಲು ಸಿದ್ಧವಾಗುತ್ತಿದೆ. ಸಮಾಜಕಾರ್ಯದಲ್ಲಿ UGC Net Examಗಾಗಿ ಪುಸ್ತಕಗಳ ಕೊರತೆ ಇರುವುದನ್ನು
ಮನಗಂಡು ಈ ಪುಸ್ತಕ ಹೊರತರುತ್ತಿದ್ದೇವೆ.
ಮನಗಂಡು ಈ ಪುಸ್ತಕ ಹೊರತರುತ್ತಿದ್ದೇವೆ.
2.
ಸ್ವಯಂಸೇವಾ ಸಂಸ್ಥೆಗಳ ಮಾಹಿತಿ ಕೈಪಿಡಿ ಈಗಾಗಲೆ ಹೊರತಂದಿದ್ದೇವೆ.
3.
ಸಮಾಜಕಾರ್ಯದ ಕಿರು ವಿಶ್ವಕೋಶವನ್ನು ಹೊರತರಲು ಯೋಜನೆ ಸಿದ್ಧವಾಗಿದೆ. ಆಸಕ್ತರು ಈ ಯೋಜನೆಯಲ್ಲಿ ಪಾಲ್ಗೊಳ್ಳಬಹುದು.
4.
ಸಮಾಜಕಾರ್ಯದಲ್ಲಿರುವ ವಿವಿಧ ಕ್ಷೇತ್ರಗಳ ಪರಿಚಯ ನಾವು ಒಂದು ಪುಸ್ತಕ ರೂಪದಲ್ಲಿ ಹೊರತರಲು ಯೋಜಿಸಿದ್ದೇವೆ.
ನಮ್ಮ ಲೇಖನ ಪ್ರಕಟಿಸಲು ಏನು ಮಾಡಬೇಕು ?
1.
ನುಡಿ / Unicodeನಲ್ಲಿ ಟೈಪ್ ಮಾಡಬೇಕು.
2.
ಸಮಾಜಕಾರ್ಯ / ಸಾಮಾಜಿಕ ಸಮಸ್ಯೆ ಕುರಿತದ್ದಾಗಿರಬೇಕು.
3.
ಸಮಾಜಕಾರ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಅನುಭವಗಳನ್ನು ಲೇಖನದ ಜೊತೆ ಲೇಖನಕ್ಕೆಸಂಬಂಧಿಸಿದ ಚಿತ್ರ, ರೇಖಾಚಿತ್ರಗಳನ್ನು ಕಳುಹಿಸಿ ಮಾಡಬಹುದು.
4.
ಅತ್ಯುತ್ತಮ ಲೇಖನಗಳನ್ನು ಮುಂದಿನ ದಿನಗಳಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು.
5. ನಿಮ್ಮ ಲೇಖನಗಳನ್ನು socialworkfootprints@gmail.com ಗೆ ಕಳುಹಿಸಿಕೊಡಿ.
6.
ನಿಮ್ಮ ಸಲಹೆ, ಸೂಚನೆಗಳನ್ನು ನಮಗೆ ಕಳುಹಿಸಿ ಕೊಡಬಹುದು. ನಮ್ಮ ಬಗ್ಗೆ ಟೀಕೆಗಳಿದ್ದರೂ ಕಳುಹಿಸಿಕೊಡಿ, ನಾವು ನಿಮ್ಮ ಟೀಕೆಗಳನ್ನು ಪ್ರಕಟಿಸುತ್ತೇವೆ.
No comments:
Post a Comment