Thursday, January 29, 2015

ಸಾಮಾಜಿಕ ಸಮಸ್ಯೆಯಾಗುತ್ತಿರುವ ಲೈಂಗಿಕಾಪರಾಧ ಮತ್ತು ಏಡ್ಸ್ ರೋಗವನ್ನು ತಡೆಯುವ ಹಿನ್ನೆಲೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಲೈಂಗಿಕ ಶಿಕ್ಷಣದ ಅವಶ್ಯಕತೆ





. ಮಹಾಬಲಭಟ್ಟ


ತಿರುಳು
ಲೈಂಗಿಕಾಪರಾಧ ಮತ್ತು ಏಡ್ಸ್ ರೋಗ ಸಮಾಜವನ್ನು ಆವರಿಸುತ್ತಿದೆ. ಪಿಡುಗನ್ನು ನಿವಾರಿಸಲು ಸರಕಾರವು ಪೂರ್ಣ ಸಫಲತೆಯನ್ನು ಕಾಣುತ್ತಿಲ್ಲ. ಹಿನ್ನೆಲೆಯಲ್ಲಿ ಸಮಸ್ಯೆಯನ್ನು ನಿವಾರಿಸುವ ಶಿಕ್ಷಣದ ಪದ್ಧತಿಯನ್ನು ಪ್ರಾಚೀನ ಶಾಸ್ತ್ರಗಳು ಕೊಟ್ಟಿವೆ. ವಿಚಾರಧಾರೆಯನ್ನು ಸಂಶೋಧನಾತ್ಮಕವಾಗಿ ಸರಕಾರಕ್ಕೆ ಮತ್ತು ಶಿಕ್ಷಣತಜ್ಞರಿಗೆ ತಿಳಿಸಿ, ಇಂದಿನ ಶಿಕ್ಷಣದಲ್ಲಿ ಶಿಕ್ಷಣವನ್ನು ಕೂಡ ಅಳವಡಿಸಿ, ಸಮಾಜದ ಯುವಜನರಿಗೆ ತಿಳಿಸುವ ಯೋಗ್ಯ ಯೋಜನೆ ಕೈಗೊಳ್ಳುವ ಮೂಲಕ ಸಾಮಾಜಿಕ ಸಮಸ್ಯೆಯನ್ನು ಪರಿಹರಿಸಲು ಪೂರಕವಾದ ವಿಶೇಷ ಸಂಶೋಧನಾತ್ಮಕವಾದ ಲೇಖನ.
* * * * *
ಮನುಷ್ಯನು ಸಂಘಜೀವಿ. ಹಲವರೊಂದಿಗೆ ಹಲವು ರೀತಿಯಲ್ಲಿ ಜೀವನ ಮಾಡುವವನು. ಮನುಷ್ಯನ ಜೀವನ ಸುಗಮಗೊಳ್ಳಬೇಕಾದರೆ ಬದುಕು ಸಾರ್ಥಕಗೊಳ್ಳಬೇಕಾದರೆ ಶಿಕ್ಷಣ ಎಂಬುವುದು ಅವಶ್ಯಕ. ಶಿಕ್ಷಣವಿಲ್ಲದ ಜೀವನ ವಿದ್ಯಾವಿಹೀನಃ ಪಶುಃ1 ಎಂಬಂತೆ ಪ್ರಾಣಿಗಳ ಬದುಕಿನಂತಾಗುತ್ತದೆ. ಬಂಗಾರಕ್ಕೆ ಹೊಳಪು ಬರಲು ಒಪ್ಪಿಕೊಟ್ಟಂತೆ ಬದುಕಿಗೆ ಶಿಕ್ಷಣ ಎಂಬುವುದು ಸಿಕ್ಕಿದಾಗ ಬದುಕು ಸಾರ್ಥಕತೆಯನ್ನು ಪಡೆಯುತ್ತದೆ. ಹೀಗೆ ಶಿಕ್ಷಣದ ಪ್ರಭಾವ ಮನುಷ್ಯನ ಮೇಲೆ ಬಿದ್ದರೆ ಮಾತ್ರ ಮನುಷ್ಯನು ಮನುಷ್ಯನಂತೆ ಆಗುತ್ತಾನೆ. ಮನುಷ್ಯನ ಮೇಲೆ ಶಿಕ್ಷಣ ಪ್ರಭಾವ ಬೀರದೆ ಹೋದರೆ ಆತನು ದುಷ್ಟಪ್ರಾಣಿಗಳಂತೆ ಸಮಾಜ ಕಂಟಕನಾಗಬಹುದು. ಕೊನೆಗೆ ತನಗೆ ತಾನೆ ಶತ್ರುವೆನಿಸಿಕೊಂಡು ದುಃಖಕ್ಕೆ ಕೋಪಕ್ಕೆ ಒಳಗಾಗಿ ಜೀವನವನ್ನೆ ಹಾಳು ಮಾಡಿಕೊಳ್ಳಬಹುದು. ಹೀಗಾಗದಿರಬೇಕಾದರೆ ಆತನಿಗೆ ಉತ್ತಮ ಸಂಸ್ಕಾರ ಸಿಗಬೇಕು. ಮನುಷ್ಯನಿಗೆ ಉತ್ತಮಸಂಸ್ಕಾರ ಸಿಗಬೇಕಾದರೆ ಮೊದಲು ಸರಿಯಾದ ಶಿಕ್ಷಣದಿಂದ ವಿದ್ಯಾವಂತನಾಗಬೇಕು. ವಿದ್ಯಾವಂತನಾದರೆ ಬುದ್ಧಿಯುಳ್ಳವನಾಗುತ್ತಾನೆ. ಬುದ್ಧಿವಂತಿಕೆಯಿಂದ ಒಳ್ಳೆಯ-ಕೆಟ್ಟ ವಿಚಾರಗಳನ್ನು ತಿಳಿದುಕೊಂಡು ಒಳ್ಳೆಯದನ್ನು ಸ್ವೀಕರಿಸಿ, ಕೆಟ್ಟದ್ದನ್ನು ಬಿಟ್ಟು ಉತ್ತಮ ಜೀವನವನ್ನು ನಡೆಸಬಹುದು. ಹೀಗೆ ಮನುಷ್ಯನನ್ನು ಸರಿದಾರಿಗೆ ತರುವಂತಹುದು ಶಿಕ್ಷಣ.
ಎಲ್ಲೆಲ್ಲಿ ಬೆಳಕು ಇರುತ್ತದೋ ಅಲ್ಲಿ ಕತ್ತಲು ಇರುವುದಿಲ್ಲವೋ ಹಾಗೆಯೇ ಶಿಕ್ಷಣವಿದ್ದಲ್ಲಿ ಅಜ್ಞಾನವಿರುವುದಿಲ್ಲ. ಜ್ಞಾನಿ ಎನಿಸಿಕೊಂಡು ಪ್ರತಿಯೊಂದು ವಿಚಾರದಲ್ಲೂ ಕೂಡ ದುಃಖವನ್ನು ಹೊಂದುವುದಿಲ್ಲ. ಅದೇ ರೀತಿ ಇನ್ನೊಬ್ಬರಿಗೂ ದುಃಖವನ್ನು ಉಂಟು ಮಾಡುವುದಿಲ್ಲ. ದುಃಖಪ್ರಯುಕ್ತವಾದ ಕಷ್ಟನಷ್ಟವನ್ನು ಕೂಡ ಹೊಂದುವುದಿಲ್ಲ. ಶಿಕ್ಷಣದಿಂದ ಮನುಷ್ಯನಾಗಿ ತಾನು ಮಾಡಬೇಕಾದುದನ್ನು ಮಾಡಿ, ಪಡೆಯಬೇಕಾದುದನ್ನು ಪಡೆದು ಇನ್ನೊಬ್ಬರಿಗೆ ಆದರ್ಶಪ್ರಾಯನಾಗಿ ಬದುಕುತ್ತಾನೆ. ಇದು ಸಾರ್ವಕಾಲಿಕವಾದ ಸತ್ಯ. ಜೀವನವನ್ನು ಕೂಡ ಸಾರ್ಥಕಗೊಳಿಸಿಕೊಳ್ಳುತ್ತಾನೆ. ಇದನ್ನು ಸಂಸ್ಕೃತದ ಮೇರುಕವಿ ಕಾಳಿದಾಸನು ತನ್ನ ರಘುವಂಶ ಕಾವ್ಯದಲ್ಲಿ2 ರೀತಿ ಸುಂದರವಾಗಿ ವರ್ಣಿಸುತ್ತಾನೆ-
ಶೈಶವೇ ಅಭ್ಯಸ್ತವಿದ್ಯಾನಾಂ ಯೌವನೇ ವಿಷಯೈಷಿಣಾಮ್ |                                 
ವಾರ್ಧಕೇ ಮುನಿವೃತ್ತೀನಾಂ ಯೋಗೇನಾಂತೇ ತನುತ್ಯಜಾಮ್ ||
(ಬಾಲ್ಯದಲ್ಲಿ ಸರಿಯಾಗಿ ಶಿಕ್ಷಣವನ್ನು ಪಡೆದವರು, ಯೌವನದಲ್ಲಿ ಸರಿಯಾಗಿ  ಸುಖವನ್ನು ಪಡೆದವರಾಗಿ, ವೃದ್ಧಾಪ್ಯದಲ್ಲಿ ಮುನಿಗಳಂತೆ ಇದ್ದು ಕೊನೆಗೆ ಸುಖಮರಣವನ್ನಪ್ಪುತ್ತಾರೆ)
ಹೀಗೆ ಪಂಚಾಂಗಪ್ರಾಯವಾದ ಶಿಕ್ಷಣ ಸಾರ್ಥಕ ಬದುಕಿನಿಂದ ಹಿಡಿದು ಸುಖದಿಂದ ಸಾಯುವವರೆಗೂ ಅವಶ್ಯಕ. ಇದರರ್ಥ ಬಾಲ್ಯದ ವಿದ್ಯೆ ಸಾರ್ಥಕ ಜೀವನಕ್ಕೆ ಪ್ರಮುಖ ಕಾರಣ. ಬಾಲ್ಯದಲ್ಲಿ ಕಲಿತ ವಿದ್ಯೆಗಳಷ್ಟೆ ಯೌವನ ಮತ್ತು ವೃದ್ಧಾಪ್ಯದಲ್ಲಿ ಉಪಯೋಗಕ್ಕೆ ಬರುತ್ತದೆ. ಕಷ್ಟವನ್ನು ದುಃಖವನ್ನು ದೂರ ಮಾಡುತ್ತದೆ. ಆದ್ದರಿಂದ ಬಾಲ್ಯದಲ್ಲಿ ಎಲ್ಲಾ ರೀತಿಯ ಶಿಕ್ಷಣವು ಕೂಡ ಬಹಳ ಅವಶ್ಯಕ. ಯಾವ ವಿಷಯದಲ್ಲಿ ಶಿಕ್ಷಿತನಾಗುವುದಿಲ್ಲವೋ ಆಯಾಯ ವಿಷಯದಲ್ಲಿ ದುಃಖವನ್ನು, ಕಷ್ಟವನ್ನು ಅನುಭವಿಸುತ್ತಾನೆ. ದುಃಖದಿಂದ ಕಷ್ಟದಿಂದ ಪಾರಾಗಲು ವಿಷಯವನ್ನು ತಿಳಿದವನನ್ನು ಆಶ್ರಯಿಸುತ್ತಾನೆ. ಇದು ಅನುಭವಸಿದ್ಧವಾದುದು ಅಥವಾ ಅತಿಯಾದ ದುಃಖದಿಂದ ಕಷ್ಟದಿಂದ ಬಳಲಿದವನಾಗಿ ಇದರಿಂದ ಪಾರಾಗಲು ಕೆಟ್ಟಮಾರ್ಗವನ್ನು (ಅಡ್ಡದಾರಿಯನ್ನು) ಅನುಸರಿಸುವವನಾಗಿ (ಅಮಲು ಪದಾರ್ಥ ಸೇವನೆ, ವೇಶ್ಯಾವಾಟಿಕೆ, ಜೂಜು) ರೋಗಾದಿಗಳಿಗೆ ತುತ್ತಾಗುತ್ತಾನೆ. ಇಡೀ ಸಮಾಜದ ಜನರು ಇಂತಹ ಕಾರಣದಿಂದ ರೋಗಾದಿಗಳಿಗೆ ತುತ್ತಾದರೆ ದೊಡ್ಡ ಸಾಮಾಜಿಕ ಸಮಸ್ಯೆಯೇ ಉಂಟಾಗುವುದು. ಹೀಗೆ ಶಿಕ್ಷಣವಿಲ್ಲದ ಸಮಾಜ ನಿಧಾನವಾಗಿ ನಾಶವನ್ನು ಹೊಂದುತ್ತದೆ. ಆದ್ದರಿಂದ ಸಮಾಜದ ಏಳಿಗೆಗೆ ಮಕ್ಕಳಿಗೆ ಎಲ್ಲಾ ರೀತಿಯ ಶಿಕ್ಷಣ ಅಗತ್ಯವಿದೆ.
ಶಿಕ್ಷಣ3 ಎಂದರೆ ವಿದ್ಯೆ ಕೊಡುವಂತಹದೆಂದು ತಿಳಿದಿದ್ದೇವೆ. ಶಿಕ್ಷಣ ಕೊಡುವ ವಿದ್ಯೆಗಳು ಅಸಂಖ್ಯಾತವಾಗಿದೆ4. ಲೆಕ್ಕ ಹಾಕಲು ಸಾಧ್ಯವಿಲ್ಲದಷ್ಟು ಇವೆ. ವಿದ್ಯೆಗಳು ಇಷ್ಟೆ ಇರುವುದು, ಇವೇ ವಿದ್ಯೆಗಳು ಎಂದು ಹಿಂದಿನಿಂದಲೂ ಕೂಡ ನಿರ್ಧರಿಸಲಾಗಿಲ್ಲ. ಆದರೆ ವಿದ್ಯೆಗಳು ಕಾಲದಿಂದ ಕಾಲಕ್ಕೆ, ದೇಶದಿಂದ ದೇಶಕ್ಕನುಗುಣವಾಗಿ ಬದಲಾಗುತ್ತಾ ಬಂದಿವೆ. ಕೆಲವು ವಿದ್ಯೆಗಳು ಮಾತ್ರ ಪರಂಪರಾಗತವಾಗಿ ಬಂದಿವೆ. ಇದಕ್ಕೆಲ್ಲ ದೇಶಕಾಲಗುಣಗಳೇ ಕಾರಣ. ಇದರಂತೆ ಕಲಿಯುವ, ಕಲಿಸುವ ಮಟ್ಟವೂ ಕೂಡ ಬದಲಾಗುತ್ತಾ ಬಂದಿದೆ. ಕೆಲವು ವಿದ್ಯೆಗಳು ಸಂಪೂರ್ಣವಾಗಿ ನಾಶಗೊಂಡಿದ್ದರೆ, ಇನ್ನು ಕೆಲವು ವಿದ್ಯೆಗಳು ನಾಶದ ಅಂಚಿನಲ್ಲಿವೆ. ನಾಶಗೊಂಡ ಕೆಲವು ವಿದ್ಯೆಗಳಿಂದ ಅಪಾರ ನಷ್ಟವಾದರೆ (ಉದಾ-ರಸಾಯನವಿದ್ಯೆ) ಕೆಲವು ವಿದ್ಯೆಗಳ ಉಪಯೋಗವನ್ನು ಪಡೆಯುವ ಯೋಗವೇ ಇಲ್ಲದಾಗಿದೆ. ಉದಾ-ಯೋಗವಿದ್ಯೆ. ಕೆಲವು ವಿದ್ಯೆಗಳ ಶಿಕ್ಷಣದ ಅಭಾವದಿಂದಾಗಿ ಪರೋಕ್ಷವಾಗಿ ಹಲವಾರು ತೊಂದರೆಗಳು ಸಮಾಜದಲ್ಲಿ ಉಂಟಾಗಿವೆ ಉಂಟಾಗುತ್ತಿವೆ. ಉದಾ-ಲೈಂಗಿಕ ಶಿಕ್ಷಣ. ಇನ್ನು ಕೆಲವು ಶಿಕ್ಷಣಗಳು ಲೌಕಿಕ ಜೀವನಕ್ಕಾಗಿ ಮೀಸಲಾಗಿದ್ದರೆ, ಆಧ್ಯಾತ್ಮ ಮಾರ್ಗವನ್ನು ಮಾತ್ರ ಬೋಧಿಸುವ ಶಿಕ್ಷಣಗಳು. ಇದು ಶಿಕ್ಷಣದ ಇತಿಹಾಸ ಪರಂಪರೆ.  
ಇತಿಹಾಸದಲ್ಲಿ ದಂತಕಥೆಯಾಗಿರುವಂತಹ ಶಿಕ್ಷಣಗಳನ್ನು ಮತ್ತೊಮ್ಮೆ ಸಾರ್ವತ್ರಿಕವಾಗಿ ಜಾರಿಗೆ ತರಬೇಕಾಗಿದೆ. ಶಿಕ್ಷಣವನ್ನು ಜಾರಿಗೆ ತರಲು ಅಡ್ಡಿಯಾಗಿರುವ ಸಮಸ್ಯೆಗಳನ್ನು ದೂರ ಮಾಡಬೇಕಾಗಿದೆ. ಮೂಲಕ ಶಿಕ್ಷಣದ ಪುರೋಭಿವೃದ್ಧಿಯನ್ನು ಸಾಧಿಸಬೇಕಾಗಿದೆ. ಇದಕ್ಕಾಗಿ ಸರ್ಕಾರ ಮತ್ತು ಶಿಕ್ಷಣತಜ್ಞರ ಗಮನವನ್ನು ತರಬೇಕಾಗಿದೆ. ಶಿಕ್ಷಣದ ಅಭಾವದಿಂದ ಕಲುಷಿತಗೊಂಡಿರುವ ಸಮಾಜವನ್ನು ಶುದ್ಧಿಗೊಳಿಸಬೇಕಾಗಿದೆ ಮತ್ತು ಸಮಾಜಕ್ಕೆ ಮಾರ್ಗದರ್ಶನ ನೀಡಬೇಕಾಗಿದೆ. ಶಿಕ್ಷಣದ ಅಭಾವದಿಂದ ಅಡ್ಡದಾರಿಯನ್ನು ಹಿಡಿದಿರುವ ಹಿಡಿಯುತ್ತಿರುವ ಯುವಜನರನ್ನು ಎಚ್ಚರಿಸಿ ಸರಿದಾರಿಗೆ ತರಬೇಕಾಗಿದೆ. ಹಾಗೆ ದುಷ್ಕೃತ್ಯದ ಮೂಲಕ ಉಂಟಾಗುವ ದುಷ್ಟ ಪರಿಣಾಮಕ್ಕೆ ಮತ್ತು ರೋಗಾದಿಗಳಿಗೆ ಪೂರ್ಣವಿರಾಮವನ್ನು ಕೊಡುವ ಪ್ರಯತ್ನ ಮಾಡಬೇಕಾಗಿದೆ. ನಿಟ್ಟಿನಲ್ಲಿ ಸಂಶೋಧನಾ ಕ್ರಮದಲ್ಲಿ ವಿಚಾರವನ್ನು ಕೈಗೊಂಡು ಅದಕ್ಕಿರುವ ಸಾಧಕ ಬಾಧಕ ವಿಚಾರವೇ ಪ್ರಕೃತ ಸಂಶೋಧನ ಲೇಖನದ ಪೂರ್ವಭೂಮಿಕೆ.
ಹಿಂದೆ ಹೇಳಿದಂತೆ ಶಿಕ್ಷಣ ಕ್ಷೇತ್ರದಲ್ಲಿ ಅದೃಶ್ಯವಾಗುತ್ತಿರುವ ಒಂದು ಶಿಕ್ಷಣ ಲೈಂಗಿಕ ಶಿಕ್ಷಣ. ಇದನ್ನು ಜೀವನ ಶಿಕ್ಷಣವೆಂದು ಕರೆಯುತ್ತಾರೆ5. ವಿಜ್ಞಾನದ ಜೀವಶಾಸ್ತ್ರಕ್ಕೆ ಅತಿಸಮೀಪದಲ್ಲಿರುವ ಶಿಕ್ಷಣ ಎಂದರೂ ತಪ್ಪಿಲ್ಲ. ವೈದ್ಯಕೀಯ ಶಿಕ್ಷಣದ ಒಂದು ಅಂಗವೆಂದು ಪರಿಗಣಿಸಬಹುದು. ಆದರೆ ಶಿಕ್ಷಣ ಇಂದು ವಿಕೃತ ಮನಸ್ಸಿನವರ ಪ್ರಭಾವದಿಂದ ಕೆಟ್ಟ ಶಿಕ್ಷಣ ಎನ್ನುವ ಮಟ್ಟಿಗೆ ಸಮಾಜದಲ್ಲಿ ಕಳಂಕ ಭಾವನೆಯನ್ನು ಹೊಂದಿದೆ. ಒಂದು ಕಾಲದಲ್ಲಿ ಪರಮಪುರುಷಾರ್ಥ6ಗಳಲ್ಲಿ ಒಂದಾಗಿದ್ದ ವಿದ್ಯೆ ಪಡ್ಡೆ ಹುಡುಗರು ಓದುವ ವಿಷಯವಾಗಿ ಮಾರ್ಪಾಡಾದದ್ದು ಕಾಲಮಹಿಮೆಯೇ ಸರಿ. ಇಂತಹ ದುರ್ಭಾವನೆಯಿಂದ ಶಿಕ್ಷಣ ಪರಂಪರೆ ನಿಂತು ಹೋದದ್ದರಿಂದ ಇದರ ದುಷ್ಟ ಪ್ರಭಾವವನ್ನು ಸಮಾಜದಲ್ಲಿ ಇಂದು ಕಾಣುತ್ತಿದ್ದೇವೆ. ಪುನಃ ಶಿಕ್ಷಣಕ್ರಮವನ್ನು ಜಾರಿಗೆ ತರಲು ಆಗುತ್ತಿಲ್ಲ. ಲೈಂಗಿಕ ಶಿಕ್ಷಣವೆಂಬ ವಿದ್ಯೆ ಇಲ್ಲದಿದ್ದುದರಿಂದ ಸಮಾಜದಲ್ಲಿ ನಿತ್ಯವು ಲೈಂಗಿಕಾಪರಾಧಗಳು ಹೆಚ್ಚುತ್ತಿದೆ. ಏಡ್ಸ್7 ಮೊದಲಾದ ಲೈಂಗಿಕ ರೋಗಗಳು ಜನರಿಗೆ ಗೊತ್ತಿಲ್ಲದೆ ಹರಡುತ್ತಿವೆ. ಸಮಾಜವು ಒಂದು ಕಡೆಯಿಂದ ಲೈಂಗಿಕಾಪರಾಧ ಮತ್ತು ಏಡ್ಸ್ ರೋಗಯುಕ್ತ ಪ್ರಪಂಚವಾಗಿ ಬೆಳೆಯುತ್ತಿದೆ. ಭಾರತದಲ್ಲಿ ಕ್ರಿ. 1986 ಏಪ್ರಿಲ್8ನಿಂದ ಪ್ರಾರಂಭವಾದ ರೋಗಕ್ಕೆ ಮುಕ್ತಿಯು ಸಿಗಲಿಲ್ಲ. ಸರ್ಕಾರವು ಇದನ್ನು ನಿಯಂತ್ರಿಸುವಲ್ಲಿ ಪೂರ್ಣಸಫಲತೆಯನ್ನು ಸಾಧಿಸಿಲ್ಲ. ಸರ್ಕಾರವು ರೋಗವನ್ನು ನಿಯಂತ್ರಿಸುವಲ್ಲಿ ವೈದ್ಯಕೀಯ ತಜ್ಞರಿಂದ ಸಲಹೆಯನ್ನು ಕೋರುವಂತೆ ಎಲ್ಲಾ ರೀತಿಯ ವಿಷಯತಜ್ಞರನ್ನು ಕೋರಿದೆ. ಅದೇ ರೀತಿ ಶಿಕ್ಷಣ ತಜ್ಞರನ್ನೂ ಕೋರಿದೆ. ಶಿಕ್ಷಣತಜ್ಞರು ಕೂಡ ಏಡ್ಸ್‍ನ್ನು  ನಿಯಂತ್ರಿಸುವಲ್ಲಿ ಸಫಲತೆಯನ್ನು ಪಡೆಯುವ ಹಿನ್ನೆಲೆಯಲ್ಲಿ ಲೈಂಗಿಕ ಶಿಕ್ಷಣವನ್ನು ಶಿಕ್ಷಣಕ್ಷೇತ್ರದಲ್ಲಿ ಅಳವಡಿಸಲು ಸಮರ್ಥರಾಗಿಲ್ಲ. ಹಿನ್ನೆಲೆಯಲ್ಲಿ ಬಾಧಕಾಂಶಗಳನ್ನು ಪರಿಹರಿಸುವ ಮಹರ್ಷಿ ವಾತ್ಸ್ಯಾಯನನಿಂದ ರಚಿಸಲ್ಪಟ್ಟ ಕಾಮಸೂತ್ರಮ್9 ಎಂಬ ಗ್ರಂಥ ಲೈಂಗಿಕ ಶಿಕ್ಷಣಕ್ಕೆ ಕೊಟ್ಟ ಕೊಡುಗೆಗಳ ವಿಮರ್ಶೆಯೆ ಪ್ರಕೃತ ಸಂಶೋಧನಾ ಲೇಖನದ ಉತ್ತರಭೂಮಿಕೆ.
ಲೈಂಗಿಕ ಶಿಕ್ಷಣ ಎಂಬ ಶಬ್ದ ಕೇಳಿದ ಕೂಡಲೇ ಮೂಗು ಮುರಿಯುವವರೆ ಅಧಿಕ. ಇತರ ಶಿಕ್ಷಣಗಳಂತೆ ಇದು ಒಂದು ಶಿಕ್ಷಣ ವಿದ್ಯೆ ಎನ್ನುವ ಮನೋಭಾವನೆ ಇರುವವರು ಅತಿವಿರಳ. ವಿದ್ಯೆ ಬೇಕಿತ್ತು ಎನ್ನುವ ಅರಿವು ಮೂಡುವುದು ವಿಚಾರದಲ್ಲಿ ಸಂಕಷ್ಟಕ್ಕೆ ಸಿಲುಕಿದಾಗ ಮಾತ್ರ. ವಿದ್ಯೆ ಇರುತ್ತಿದ್ದರೆ ಹೀಗಾಗುತ್ತಿರಲಿಲ್ಲವೇನೋ ಎಂಬ ಆಲೋಚನೆ ಬರುತ್ತದೆ. ಆದರೆ ಮಿಂಚಿ ಹೋದ ಕಾರ್ಯಕ್ಕೆ ಫಲವೇನು ರೀತಿಯ ಪರಿಸ್ಥಿತಿ ಬರಬಾರದು ಎನ್ನುವ ಉದ್ದೇಶದಿಂದ ಲೈಂಗಿಕ ಶಿಕ್ಷಣ ಬೇಕು.
ಲೈಂಗಿಕ ಶಿಕ್ಷಣ ಎನ್ನುವುದು ಪ್ರಾಚೀನದಿಂದಲೇ ಇತ್ತು. ಕಾಮಶಾಸ್ತ್ರ ಎಂದು ಕರೆಯುತ್ತಿದ್ದರು. ದೈವೀ ಭಾವನೆ ಶಿಕ್ಷಣಕ್ಕೆ ಬೇಕು ಎನ್ನುವ ಉದ್ದೇಶದಿಂದಲೋ ಏನೋ ಅದಕ್ಕೆ ಶಾಸ್ತ್ರ ಎಂಬ ಮನ್ನಣೆಯು ಸಿಕ್ಕಿತ್ತು. ಸ್ವತಃ ತಾನಾಗಿಯೆ ಕಲಿಯುವ ವಿದ್ಯೆಯಲ್ಲ ಎಂಬ ಕಾರಣದಿಂದ ಅದು ಉಪದೇಶ ಪರಂಪರೆಯಿಂದ ಕೂಡಿತ್ತು. ವಿಷಯದಲ್ಲಿ ದುಃಖವನ್ನು ಅನುಭವಿಸಬಾರದು ಎಂಬ ಕಾರಣದಿಂದ ಪ್ರತಿಯೊಂದು ದೇವತಾಪೂಜೆ, ಹೋಮಹವನಗಳಲ್ಲಿ, ಧಾರ್ಮಿಕ ಕ್ರಿಯಾಭಾಗಗಳಲ್ಲಿ ಪ್ರಾರಂಭದಲ್ಲಿ ಮಾಡುವ ಸಂಕಲ್ಪ ಎಂಬುದರಲ್ಲಿ ಧರ್ಮಾಥಾಮೋಕ್ಷಗಳೊಂದಿಗೆ ಕಾಮವನ್ನು ಕೂಡಾ ಪ್ರಾಚೀನರು ಸೇರಿಸಿದ್ದಾರೆ. ಇದು ಕೂಡ ಜನರಿಗೆ ಲೈಂಗಿಕ ಶಿಕ್ಷಣವನ್ನು ಕೊಡುತ್ತಿತ್ತು. ಅದೇ ರೀತಿ ಪ್ರಾಣಿಗಳಿಂದ, ಶಿಲ್ಪಕಲೆಗಳಿಂದ, ವೃದ್ಧನಾರಿಯರಿಂದ ಮೊದಲಾದ ಕ್ರಮಗಳಿಂದ ಕಲಿಯಬಹುದಿತ್ತು. ಸೌಭರಿ ಎಂಬ ಋಷಿ ನದಿಯ ಬಳಿಯಲ್ಲಿ ತಪಸ್ಸನ್ನು ಆಚರಿಸುವಾಗ ಮೀನುಗಳು ಸಂಸಾರ ಮಾಡುವ ಕ್ರಮವನ್ನು ಕಂಡನು. ರೀತಿ ಮೀನುಗಳಿಂದ ಲೈಂಗಿಕ ಶಿಕ್ಷಣವನ್ನು ಪಡೆದವನಾದನು10. ಕುದುರೆಗಳು ಲೈಂಗಿಕ ವಿಚಾರಗಳಿಗೆ ಸಂಬಂಧಪಟ್ಟ ಪ್ರಾಣಿಗಳಾಗಿವೆ. ಲೈಂಗಿಕ ವಿಚಾರದಲ್ಲಿ ಅವುಗಳು ಶ್ರೇಷ್ಠವಾದುವುಗಳಾಗಿವೆ. ಲೈಂಗಿಕ ವಿದ್ಯೆಯನ್ನು ವಾಜಿವಿದ್ಯೆ11ಯೆಂದು ಕರೆಯುತ್ತಾರೆ. ಲೈಂಗಿಕತೆಯನ್ನು ಕಡಿಮೆ ಮಾಡಬೇಕೆಂಬುದನ್ನು ತಿಳಿಸಲು ಅಶ್ವಮೇಧ12, ವಾಜಿಮೇಧ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಉಜ್ಜಯಿನಿಯ ವೇಶ್ಯೆಯರು ಲೈಂಗಿಕ ಶಿಕ್ಷಣ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕೆಂಬ ಉದ್ದೇಶದಿಂದ ಸರ್ವವಿದ್ಯಾವಿಶಾರದನಾದ ದತ್ತಕನನ್ನು13 ಕರೆಸಿಕೊಂಡು ಶಿಕ್ಷಣವನ್ನು ಪಡೆಯುತ್ತಾರೆ. ಇದಕ್ಕಾಗಿ ವೈಶಿಕಾಧಿಕರಣ ಎಂಬ ಒಂದು ಗ್ರಂಥವನ್ನು ಮಾಡುತ್ತಾನೆ. ಷೋಡಶ ಸಂಸ್ಕಾರಗಳಲ್ಲಿ ಒಂದಾಗಿರುವ ಗರ್ಭಾದಾನ14 ಎಂಬ ಸಂಸ್ಕಾರವು ಲೈಂಗಿಕ ಶಿಕ್ಷಣದ ವ್ಯಾಪ್ತಿಯಲ್ಲೆ ಬಂದಿದೆ. ವೇದೋಪನಿಷತ್ತುಗಳು ಕೂಡ ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ಲೈಂಗಿಕ ಶಿಕ್ಷಣದ ವಿಚಾರವನ್ನು ಹೇಳಿದೆ. ಕೃಷ್ಣನಂತು ಭಗವದ್ಗೀತೆಯಲ್ಲಿ ಧರ್ಮಾವಿರುದ್ಧೋ ಕಾಮೋಸ್ಮಿ ಭರತರ್ಷಭ15-ಗಂಟಲು ಬಿಚ್ಚಿ ಹೇಳಿದ್ದಾನೆ. ಭಗವತ್ಪಾದರಾದ ಶ್ರೀಶಂಕರರು ಶಿಕ್ಷಣವಿಲ್ಲದೆ ಇದ್ದುದರಿಂದ ಮಂಡನ ಮಿಶ್ರರೊಂದಿಗಿನ ವಾದದಲ್ಲಿ ಸೋಲಬೇಕಾಯಿತು ಎಂಬ ದಂತಕಥೆಯು ಕರ್ಣಾಕರ್ಣಿಕೆಯಾಗಿ ಬಂದಿದೆ. ( ಬಗೆಗಿನ ಯಾವುದೇ ಸ್ಪಷ್ಟ ಆಧಾರಗಳು ಇಲ್ಲ.) ಖಜುರಾಹೋ, ಅಲ್ಲದೆ ಇತರ ಕಡೆಗಳಲ್ಲಿನ  ಕಲ್ಲಿನ ಶಿಲೆಗಳಲ್ಲಿನ ಮಿಥುನ ಚಿತ್ರಗಳ ಶಿಲ್ಪಕಲೆ ಶಿಕ್ಷಣಕ್ಕಾಗಿಯೇ ಬಂದಿವೆ. ಮೇಲಿನ ಎಲ್ಲಾ ವಿಚಾರಗಳಿಂದ ಪ್ರಾಚೀನ ಕಾಲದಲ್ಲೂ ಕೂಡ ಲೈಂಗಿಕ ಶಿಕ್ಷಣ ಇತ್ತು ಎಂದು ತಿಳಿದುಕೊಳ್ಳಬಹುದು. ವೃದ್ಧನಾರಿಯರೂ ಕೂಡ ಶಿಕ್ಷಣವನ್ನು (ವಿವರ ಮುಂದಿದೆ) ಕೊಡುವವರಾಗಿದ್ದರು.
ಕಾಮಸೂತ್ರವು ಕೂಡ ಉಪದೇಶ ಪರಂಪರೆ15ಯಿಂದಲೇ ಬಂದಿರುವುದು ಮತ್ತು ಪ್ರಮಾಣಸಹಿತವಾದುದು ಎಂಬುದನ್ನು ಅನುಬಂಧದಿಂದ ತಿಳಿದುಕೊಳ್ಳಬಹುದು. ಅಷ್ಟೇ ಅಲ್ಲ ಗ್ರಂಥ ಸರ್ವವಿದ್ವಜ್ಜನರಿಂದಲೂ ಮಾನ್ಯವಾಗಿತ್ತು ಎಂಬುವುದನ್ನು ವ್ಯಾಖ್ಯಾನಕ್ಕಾಗಿ16 ಸ್ವೀಕರಿಸುತ್ತಿದ್ದರು ಎಂಬುವುದರಿಂದ ತಿಳಿದುಕೊಳ್ಳಬಹುದು. ಎಲ್ಲಾ ಕಾರಣದಿಂದ ಆಧುನಿಕ ಸಮಾಜದಲ್ಲಿ ಮೇಳೈಸುತ್ತಿರುವ ಲೈಂಗಿಕಾಪರಾಧವನ್ನು ಕಡಿಮೆ ಮಾಡಲು, ಏಡ್ಸ್‍ನಂತಹ ರೋಗವನ್ನು ನಿಯಂತ್ರಿಸಲು ಲೈಂಗಿಕ ಶಿಕ್ಷಣವನ್ನು ಕೊಡಬಹುದು ಎಂದು ಸಿದ್ಧವಾಗುತ್ತದೆ.
ಲೈಂಗಿಕ ಶಿಕ್ಷಣ ಕೊಡಬೇಕು ಮೂಲಕ ಸಮಾಜವನ್ನು ಭೀಕರ ಲೈಂಗಿಕಾಪರಾಧಗಳಿಂದ ಮತ್ತು ಏಡ್ಸ್ ಮೊದಲಾದ ಲೈಂಗಿಕ ರೋಗಗಳಿಂದ ರಕ್ಷಿಸಬೇಕು. ಆದರೆ ಹೇಗೆ ಕೊಡಬೇಕು? ಎಲ್ಲಿ ಕೊಡಬೇಕು? ಯಾರಿಂದ ಕೊಡಿಸಬೇಕು? ಎಂಬ ಸಮಸ್ಯೆಗಳು ಸರ್ಕಾರಕ್ಕೆ ಶಿಕ್ಷಣತಜ್ಞರಿಗೆ ಇದ್ದೇ ಇದೆ. ಇದರ ಪರಿಹಾರದ ನಿಟ್ಟಿನಲ್ಲಿ ಕಾಮಸೂತ್ರ ಕೊಡುವ ಕೊಡುಗೆಯನ್ನು ಶೋಧಿಸೋಣ. ಅದು ಯಾವ ರೀತಿ  ಶಿಕ್ಷಣಕ್ರಮವನ್ನು ನೀಡುವಲ್ಲಿ ಸರ್ಕಾರಕ್ಕೆ ಮತ್ತು ಶಿಕ್ಷಣತಜ್ಞರಿಗೆ ಸಹಕಾರಿಯಾಗುವುದು. ಮೂಲಕ ಸಮಸ್ಯೆಗಳ ಪರಿಹಾರಕ್ಕೆ ಪರಿಹಾರವನ್ನು ನೀಡುವುದು ಎಂಬುದನ್ನು ಸಂಶೋಧನಾತ್ಮಕವಾಗಿ ತಿಳಿದುಕೊಳ್ಳೋಣ.
ಯಾವುದೇ ವಿಚಾರವನ್ನು ಎರಡು ರೀತಿಯಲ್ಲಿ ಸ್ವೀಕರಿಸಲು ಸಾಧ್ಯವಾಗುವುದು.
1) ಸಾಮಾನ್ಯ ವಿಚಾರವಾಗಿ 2) ಸಂಶೋಧನಾತ್ಮಕವಾಗಿ.17
ಯಾವುದೇ ವಿಚಾರವನ್ನು ಸಾಮಾನ್ಯವಾಗಿ ಸ್ವೀಕರಿಸಿದರೆ ಯಾವುದೇ ಹೆಚ್ಚಿನ ಫಲಿತಾಂಶವನ್ನು ಹೊಂದಲು ಸಾಧ್ಯವಿಲ್ಲ. ಸಂಶೋಧನಾತ್ಮಕವಾಗಿ ಸ್ವೀಕರಿಸಿದಾಗ ಹಲವು ಸಮಸ್ಯೆಗಳು ಬರುತ್ತದೆ. ಅವುಗಳನ್ನು ಸೂಕ್ತ ರೀತಿಯಲ್ಲೇ ಪರಿಹರಿಸಿಕೊಂಡು ಹೋಗಬೇಕಾಗುತ್ತದೆ. ಪ್ರಕೃತ ಲೈಂಗಿಕ ಶಿಕ್ಷಣದ ವಿಚಾರದಲ್ಲಿ ಸಂಶೋಧನಾತ್ಮಕವಾಗಿ ಹೊರಟಾಗ ಕೆಲವು ಸಮಸ್ಯೆಗಳು ಎದುರಾಗುತ್ತದೆ.
1-ವಿಷಯದ ಪ್ರಕೃಷ್ಟತೆ
2-ವಿಷಯದ ಮೇಲಿನ ತುಚ್ಛಭಾವನೆ
3-ಸಾರ್ವತ್ರಿಕವಾಗಿ ಪ್ರಸ್ತಾವನೆ ಮಾಡಲು ಇರುವ ಮಾನಸಿಕ ಸಮಸ್ಯೆ
4-ವಿಷಯದ ಬಗ್ಗೆ ಸಂದರ್ಶನ, ಅಭಿಪ್ರಾಯ ಸೂಚನೆಗೆ ಹಿಂದೇಟು
5-ಒಂದು ವೇಳೆ ಅತಿ ಅಭಿಮಾನದೊಂದಿಗೆ ಮುನ್ನಡೆದರೆ ಸಂಶೋಧಕನನ್ನು ಕೀಳರಿಮೆಯಿಂದ ಕಾಣುವಂತಹದು.
ಎಲ್ಲಾ ಕಾರಣದಿಂದ ವಿಷಯದ ಬಗೆಗಿನ ಸಂಶೋಧನೆ, ವಿಚಾರ ವಿನಿಮಯಗಳು ಸಾರ್ವಜನಿಕವಾಗಿ ಕಾಣಿಸುತ್ತಿಲ್ಲ. ಪಾಠ್ಯವಿಷಯವಾಗಿಯೂ ಸರ್ಕಾರದಿಂದಾಗಲೀ ಶಿಕ್ಷಣತಜ್ಞರಿಂದಾಗಲೀ ಅನುಮೋದಿಸಲ್ಪಡುತ್ತಿಲ್ಲ. ಸಂಶೋಧಕರು ಕೂಡ ವಿಷಯದ ಮೇಲೆ ಯಾವುದೇ ಸಂಶೋಧನೆಯನ್ನು ಕೂಡ ಕೈಗೊಳ್ಳುತ್ತಿಲ್ಲ. ಆದರೆ ವಿಷಯದಲ್ಲಿ ಸಂಶೋಧನೆ ಮೊದಲಾದುವುಗಳು ನಡೆಯದಿರುವುದರಿಂದ ಇಂದು ಹೆಚ್ಚಿನ ತೊಂದರೆಗಳನ್ನು ಇದರಿಂದಲೇ ಅನುಭವಿಸುತ್ತಿದ್ದೇವೆ. ಚಿಕ್ಕ ಪುಟ್ಟ ಸಂಶೋಧನೆಗಳು ನಡೆದರೂ ಅದರ ವರದಿಗಳು ಅಭಿಪ್ರಾಯಗಳು ಜನರಿಗೆ ಸಾರ್ವಜನಿಕರಿಗೆ ತಿಳಿಯುತ್ತಿಲ್ಲ. ಆದ್ದರಿಂದ ಪ್ರಾಚೀನದಿಂದಲೂ ವಿಷಯದಲ್ಲಿನ  ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಅಲ್ಲದೆ ರೋಗಾದಿಗಳಿಗೂ ಕೂಡ ಹಿಂದೆಯು ಈಗಲೂ ಕಾರಣವಾಗುತ್ತಿದೆ. ಅಲ್ಲದೆ ಕೋಮುಗಲಭೆ, ಕೊಲೆ, ಮಾರಾಮಾರಿ, ಹೊಡೆದಾಟ  ಇಂದಿಗೂ ವಿಷಯದಲ್ಲಿ ನಡೆಯುತ್ತಿದೆ. ಸಮಸ್ಯೆಗಳು ಇಂದು ದೇಶ ಕಾಣುವ ಜ್ವಲಂತ ಸಮಸ್ಯೆಗಳಲ್ಲಿ ಒಂದು. ಸಮಸ್ಯೆಗಳಲ್ಲಿ ಬದುಕುವವರಿಗೆ ಯಾವುದು ಸಮಸ್ಯೆಗಳಲ್ಲ ಎಂಬುವುದು ಸಮಸ್ಯೆಯ ಪರಿಹಾರದಲ್ಲಿ ಕಾಣುವ ಪರಿಹಾರ. ಆದರೆ ಇಂದು ಸಮಸ್ಯೆಗಳಲ್ಲಿ ಕಾಣುವ ದೊಡ್ಡ ದುರಂತವೆಂದರೆ ಭಯಾನಕ ರೋಗದ ಸೇರ್ಪಡೆ ರೋಗವನ್ನು ನಿವಾರಿಸುವ ದೃಷ್ಟಿಯಿಂದಲಾದರು ಶಿಕ್ಷಣ ಇಂದು ಅನಿವಾರ್ಯವಾಗಿದೆ.
ಶಿಕ್ಷಣ ಎಂದ ಕೂಡಲೆ ತಾನು ತಾನಾಗಿಯೆ ಓದಿಕೊಂಡು ತಿಳಿಯುವುದಲ್ಲ. ತಿಳಿದವರು ತಿಳಿಯದವರಿಗೆ ಕೊಡುವ ಕಲಿಸಿಕೊಡುವ ಕ್ರಮ. ಇದಕ್ಕೆ ಗುರುಗಳು ಮತ್ತು ಶಿಷ್ಯರು ಇಬ್ಬರು ಬೇಕು. ರೀತಿ ಕಲಿತಾಗ ಅದು ಶಿಕ್ಷಣ ಎನಿಸಿಕೊಳ್ಳುತ್ತದೆ. ಇತರ ಶಿಕ್ಷಣದಂತೆ ಶಿಕ್ಷಣವನ್ನು ಕೂಡ ಇದೇ ರೀತಿ ಕಲಿಯುತ್ತಿದ್ದರು ಎಂಬುವುದನ್ನು ಮಹರ್ಷಿ ವಾತ್ಸ್ಯಾಯನನ ಕಾಮಸೂತ್ರವು ಕೂಡ ತಿಳಿಸಿಕೊಡುವುದು.
ಧರ್ಮಾರ್ಥಾಂಗವಿದ್ಯಾಕಾಲಾನುಪರೋಧಯನ್ ಕಾಮಸೂತ್ರಂ ತದಂಗವಿದ್ಯಾಶ್ಚ ಪುರುಷೋಧಿಯೀತ.18 (ಮನುಷ್ಯರಾದವರು ಧರ್ಮಾರ್ಥವೆಂಬ ಪ್ರಧಾನ ವಿದ್ಯೆಯೊಂದಿಗೆ ಕಾಮಶಾಸ್ತ್ರವನ್ನು (ಲೈಂಗಿಕ ಶಿಕ್ಷಣವನ್ನು) ಅಂಗವಿದ್ಯೆಯೊಂದಿಗೆ ಅಧ್ಯಯನ ಮಾಡಬೇಕು.)
ಯೋಷಿತಾಂ ಶಾಸ್ತ್ರಗ್ರಹಣಸ್ಯಾಭಾವಾದಾನರ್ಥಕಮಿಹ ಶಾಸ್ತ್ರೇ ಸ್ತ್ರೀಶಾಸನ ಮಿತ್ಯಾಚಾರ್ಯಾಃ.19 (ಸ್ತ್ರೀಯರಿಗೆ ವಿದ್ಯೆ ಕಲಿಯಲು ಅವಕಾಶವಿಲ್ಲದಿದ್ದರೆ ದುಃಖವುಂಟಾದೀತು ಎಂಬ ಕಾರಣದಿಂದ ಶಾಸ್ತ್ರದಲ್ಲಿ (ಲೈಂಗಿಕ ಶಿಕ್ಷಣದಲ್ಲಿ) ಸ್ತ್ರೀಯರಿಗೂ ಅವಕಾಶವನ್ನು ಕೊಟ್ಟಿದೆ.                                   
ಸಂತ್ಯಪಿ ಖಲು ಶಾಸ್ತ್ರಪ್ರಹತಬುದ್ಧಯೋ ಗಣಿಕಾ ರಾಜಪುತ್ರ್ಯೋ ಮಹಾಮಾತ್ರದುಹಿತರಶ್ಚ20 (ಬೇರೆಲ್ಲ ವಿದ್ಯೆಯನ್ನು ಕಲಿತಿದ್ದರೂ ಕೂಡ ವೇಶ್ಯೆಯರು ರಾಜನ ಹೆಣ್ಣು ಮಕ್ಕಳು, ಮಂತ್ರಿಗಳ ಹೆಣ್ಣು ಮಕ್ಕಳು ಕೂಡ ವಿಷಯದಲ್ಲಿ ಶಿಕ್ಷಣವನ್ನು ಪಡೆಯಬೇಕಿತ್ತು.) ಎಲ್ಲಾ ಕಾರಣದಿಂದ ಪುರುಷರು ಮತ್ತು ಸ್ತ್ರೀಯರಿಗೆ ಲೈಂಗಿಕ ಶಿಕ್ಷಣ ಅಗತ್ಯ ಎಂದು ತಿಳಿಯಬಹುದು.
ಅದೇ ರೀತಿ ಆಧ್ಯಾತ್ಮಿಕ ಸಿದ್ಧಾಂತ ರೀತಿಯಲ್ಲೂ ಕೂಡ ಬ್ರಹ್ಮ ರುದ್ರ21 ಮೊದಲಾದ ದೇವತೆಗಳಿಂದ ಉಪದೇಶ ಪರಂಪರೆಯಿಂದ ಬಂದುದರಿಂದ ಕಲಿಸಬಾರದ ವಿದ್ಯೆಯಲ್ಲ. ಕಲಿಯಬಹುದಾದ ವಿದ್ಯೆ. ಲೌಕಿಕವಾಗಿಯು ಸಂಶೋಧನಾತ್ಮಕವಾಗಿ ಕಲಿಯಬೇಕಾದ ವಿದ್ಯೆಯೆಂದು ಸಂಶೋಧಿಸಿ ವಿದೇಶಿಯರು ತಮ್ಮ ದೇಶದಲ್ಲಿ ಶಿಕ್ಷಣವನ್ನು ಕೊಡುತ್ತಿದ್ದಾರೆ. ಆದ್ದರಿಂದಲೂ ಶಿಕ್ಷಣವನ್ನು ಖಂಡಿತವಾಗಿ ಕೊಡಬಹುದು. ವಿದೇಶಿಯರು22 ಕಾಮಸೂತ್ರಕ್ಕೆ ವಿಸ್ತಾರವಾಗಿ ವ್ಯಾಖ್ಯಾನವನ್ನು ಬರೆದು ಅವುಗಳನ್ನೇ ಪಾಠ್ಯವನ್ನಾಗಿ ಮಾಡಿದ್ದಾರೆ. ಸರ್ಕಾರಕ್ಕೂ ಶಿಕ್ಷಣತಜ್ಞರಿಗೆ ಶಿಕ್ಷಣ ಬೇಕು, ಮಕ್ಕಳಿಗೆ ಕೊಡಬೇಕು ಎನ್ನುವ ಇಚ್ಛೆಯಿರುವುದರಿಂದ ಶಿಕ್ಷಣವನ್ನು ನಮ್ಮ ಶಿಕ್ಷಣಪದ್ಧತಿಯಲ್ಲಿ ಅಳವಡಿಸಿಕೊಳ್ಳಬಹುದು.
ಲೈಂಗಿಕ ಶಿಕ್ಷಣ ಸಮರ್ಪಕ ರೀತಿಯಲ್ಲಿ ಅಳವಡಿಸಿಕೊಂಡಾಗ ಮಾತ್ರ ಅದು ಪೂರ್ಣಫಲಕಾರಿಯಾಗಬಹುದು. ಚಿಕ್ಕ ಅಸಡ್ಡೆಯು ಕೂಡ ವ್ಯತಿರಿಕ್ತ ಪರಿಣಾಮವನ್ನು ಬೀರಬಲ್ಲುದು. ಅದಕ್ಕಾಗಿ ಶಿಕ್ಷಣವನ್ನು ಕೊಡಬೇಕಾದರೆ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ.
1-ಲೈಂಗಿಕ ಶಿಕ್ಷಣವನ್ನು ಕೊಡುವ ಕ್ರಮ
2-ಲೈಂಗಿಕ ಶಿಕ್ಷಣವನ್ನು ಕೊಡಬೇಕಾದವರು ಯಾರು?
3-ಲೈಂಗಿಕ ಶಿಕ್ಷಣದ ಪಾಠಕ್ರಮ
4-ಲೈಂಗಿಕ ಶಿಕ್ಷಣವನ್ನು ಯಾವಾಗ ಕೊಡುವುದು.
5-ಲೈಂಗಿಕ ಶಿಕ್ಷಣವನ್ನು ಯಾವ ಮಕ್ಕಳಿಗೆ ಕೊಡಬೇಕು?
6-ಲೈಂಗಿಕ ಶಿಕ್ಷಣದಲ್ಲಿ ಯಾವೆಲ್ಲ ಪಾಠವನ್ನು ಸೇರಿಸಬೇಕು?
7-ಲೈಂಗಿಕ ಶಿಕ್ಷಣ ದುರುಪಯೋಗವಾಗದಂತೆ ತಡೆಯುವುದು ಹೇಗೆ?
8-ಲೈಂಗಿಕ ಶಿಕ್ಷಣದಿಂದ ಸ್ವೇಚ್ಛಾಚಾರವನ್ನು ತಡೆಯುವುದು ಹೇಗೆ?
ಇವುಗಳೆಲ್ಲ ಲೈಂಗಿಕ ಶಿಕ್ಷಣವನ್ನು ಕೊಡುವ ಹಂತದಲ್ಲಿ ತಲೆದೋರುವ ಸಮಸ್ಯೆಗಳು.   ಸಮಸ್ಯೆಯನ್ನು ಪರಿಹಾರ ಮಾಡುವಲ್ಲಿ ಕಾಮಸೂತ್ರ ಗ್ರಂಥ ಸೂಚಿಸುವ ಪರಿಹಾರ ಕ್ರಮ ಹೀಗಿದೆ.
ತಸ್ಮಾದ್ವೈಶ್ವಾಸಿಕಜ್ಜನಾದ್ರಹಸಿ ಪ್ರಯೋಗಾನ್ ಶಾಸ್ತ್ರಮೇಕದೇಶಂ ವಾ ಸ್ತ್ರೀ ಗೃಹ್ಣೀಯಾದ್23 23(ವಿಶ್ವಾಸಪಾತ್ರರಾದ ಜನರಿಂದ ರಹಸ್ಯವಾಗಿ ಸ್ತ್ರೀಯೂ ಕೂಡ ಶಿಕ್ಷಣವನ್ನು ಪಡೆಯಬೇಕು.)
ಆಚಾರ್ಯಾಸ್ತು ಕನ್ಯಾನಾಂ ಪ್ರವೃತ್ತಪುರುಷಸಂಪ್ರಯೋಗಾ ಸಹಸಂಪ್ರವೃದ್ಧಾ ಧಾತ್ರೇಯಿಕಾ ತಥಾಭೂತಾ ವಾ ನಿರತ್ಯಯಸಂಭಾಷಣಾ ಸಖೀ ಸವಯಸ್ಯಾಶ್ಚಮಾತೃಶ್ವಸಾ**** 24(ಸ್ತ್ರೀಯರಿಗೆ ಶಿಕ್ಷಣವನ್ನು ಕೊಡುವವರು ಮದುವೆಯಾದ ಸ್ತ್ರೀಯರು ಮುದುಕಿಯರಾದ ದಾಸಿಗಳು, ತನ್ನ ವಯಸ್ಸಿನ ಗೆಳತಿಯರು  ತಾಯಿಯ ತಂಗಿ ಅಥವಾ ಅಕ್ಕ) ಸ್ತ್ರೀ ಪುರುಷರಿಗೆ ಪ್ರತ್ಯೇಕವಾಗಿ ಕೊಡಬೇಕು ಎನ್ನುವುದನ್ನು  ರಹಸ್ಯದಲ್ಲಿ ಹೇಳುತ್ತದೆ. ಸ್ತ್ರೀಯರಿಗೆ ವಿಶೇಷವಾಗಿ ಹೇಳಿದುದೆಲ್ಲವನ್ನು ಪುರುಷರಿಗೂ ಅನ್ವಯಿಸಿಕೊಳ್ಳಬೇಕು.
ಪ್ರಾಗ್ಯೌವನಾತ್ ಸ್ತ್ರೀ | ಪ್ರತ್ತಾ ಪತ್ಯುರಭಿಪ್ರಾಯಾತ್ 25|| (ಸ್ತ್ರೀಯಾದವಳು ಬಾಲ್ಯದಲ್ಲಿ ಶಿಕ್ಷಣವನ್ನು ಪಡೆಯಬೇಕು. ಮದುವೆಯ ನಂತರ ಗಂಡನನ್ನು ಕೇಳಿ ಕಲಿಯಬೇಕು) ಪ್ರಾಥಮಿಕ ಹಂತದಲ್ಲೆ ಕಲಿಸಬೇಕು. ಯುವತಿ ಯುವಕರಿಗೆ ಅಲ್ಲಹೀಗೆ ಶಿಕ್ಷಣವನ್ನು ಪಡೆಯುವ ಕಾಲವನ್ನು ತಿಳಿಸುತ್ತದೆ.
ಧರ್ಮಾರ್ಥಾಂಗ ವಿದ್ಯಾಕಾಲಾನುಪರೋಧಯನ್  ಕಾಮಸೂತ್ರಂ ತದಂಗವಿದ್ಯಾಶ್ಚ ಪುರುಷೋಧಿಯೀತ26. (ಮನುಷ್ಯರಾದವರು ಧರ್ಮಾರ್ಥವೆಂಬ ಪ್ರಧಾನ ವಿದ್ಯೆಯೊಂದಿಗೆ ಕಾಮಶಾಸ್ತ್ರವನ್ನು (ಲೈಂಗಿಕ ಶಿಕ್ಷಣವನ್ನು) ಅಂಗವಿದ್ಯೆಯೊಂದಿಗೆ ಅಧ್ಯಯನ ಮಾಡಬೇಕು.) ಎಂಬಂತೆ ಶಿಕ್ಷಣ ಮುಖ್ಯಶಿಕ್ಷಣವಲ್ಲ. ಮುಖ್ಯ ಶಿಕ್ಷಣದೊಂದಿಗೆ ಸೇರಿಸಿಕೊಂಡು ಕೊಡಬೇಕು ಎನ್ನುತ್ತದೆ. ಇದು ಮಹರ್ಷಿ ವಾತ್ಸ್ಯಾಯನನು ವಿದ್ಯಾಕ್ಷೇತ್ರಕ್ಕೆ ಕೊಟ್ಟ ದೊಡ್ಡ ಕೊಡುಗೆ. ಇದನ್ನು ಆಧಾರಿಸಿಕೊಂಡು ಬೆಂಗಳೂರಿನ ವಿದ್ಯಾಲಯವು27 ಪಾಠಕ್ರಮವನ್ನು ರಚಿಸಿದ್ದನ್ನು ಗಮನಿಸಬಹುದು.
ಯೋಗಜ್ಞಾ ರಾಜಪುತ್ರೀ ಮಹಾಮಾತ್ರಾಸುತಾ ತಥಾ | ಸಹಸ್ರಾಂತಃಪುರಮಪಿ ಸ್ವವಶೇ ಕುರುತೇ ಪತಿಮ್28 || (ಸ್ತ್ರೀಯರು ಶಿಕ್ಷಣವನ್ನು ಪಡೆದರೆ ತಮ್ಮ ಗಂಡಂದಿರು ಇತರ ಸ್ತ್ರೀಯನ್ನು ವೇಶ್ಯಾಸ್ತ್ರೀಯನ್ನು  ಅರಸಿಕೊಂಡು ಹೋಗುವುದನ್ನು ನಿಲ್ಲಿಸಬಹುದು.)
ತಥಾ ಪತಿವಿಯೋಗೇ ವ್ಯಸನಂ ದಾರುಣಂ ಗತಾ | ದೇಶಾಂತರೇಪಿ ವಿದ್ಯಾಭಿಃ ಸಾ ಸುಖೇನೈವ ಜೀವತಿ29 || (ಗಂಡ ಸತ್ತಾಗ ಅಥವಾ ಬಿಟ್ಟುಹೋದರೆ, ಘೋರವಾದ ದುಃಖಕ್ಕೆ ಒಳಗಾದಾಗ, ಗಂಡನು ವಿದ್ಯೆಗಾಗಿಯೊ ಉದ್ಯೋಗಕ್ಕಾಗಿಯೋ ಪರದೇಶಕ್ಕೆ ಹೋದಾಗ, ಇನ್ನೊಬ್ಬರಿಂದ ದುಃಖಕ್ಕೆ ಒಳಗಾಗದ ಹಾಗೆ ಶಿಕ್ಷಣ ಕೊಡುತ್ತದೆ.) ಹೀಗೆ ಮೊದಲು ಸ್ತ್ರೀಯಾದವಳು ಜಾಗೃತಳಾದಾಗ ಪುರುಷನೆಂದೆನಿಸಿದವನಿಗೆ ಅಪರಾಧ ಮಾಡಲು ಆಗುವುದಿಲ್ಲ. ಪುರುಷನೂ ಕೂಡ ವಿಷಯದಲ್ಲಿ ವಿದ್ಯಾವಂತನಾದರೆ ಖಂಡಿತವಾಗಿಯೂ ಸಮಾಜವು ಅಪರಾಧ ಮತ್ತು ರೋಗಮುಕ್ತ ಎನಿಸಬಹುದು. ಉದಾ:- ಮದ್ಯಪಾನದ ಬಗ್ಗೆ ಸ್ತ್ರೀ ಪುರುಷರಿಬ್ಬರೂ ಜಾಗೃತವಾಗಿರುವುದರಿಂದ ಎಷ್ಟೋ ಕುಟುಂಬಗಳು ಉದ್ಧಾರವಾಗಿವೆ. ಉದ್ಧಾರವಾಗುತ್ತಿವೆ. ಉದಾ:- ಕರ್ನಾಟಕ ಸರ್ಕಾರ ಮದ್ಯನಿಷೇಧವನ್ನು ತರುವಾಗ ಇದಕ್ಕೆ ವಿರೋಧವಾಗಿ ಪ್ರತಿಭಟನೆ ನಡೆಯದಿರುವುದೇ ಜ್ವಲಂತ ನಿದರ್ಶನ.
ಶಿಕ್ಷಣ ಪ್ರಾಚೀನದಲ್ಲಿ ಭಾರತದಲ್ಲಿದ್ದಂತೆ ಇಂದು ವಿದೇಶದಲ್ಲಿದೆ. ಆದರೆ ಭಾರತದಲ್ಲಿ ಶಿಕ್ಷಣಕ್ಕಿದ್ದ ಉದ್ದೇಶ ಮತ್ತು ಪಾಠ್ಯಕ್ರಮ ವಿದೇಶದಲ್ಲಿರದೇ ಇರುವುದರಿಂದ ಅಲ್ಲಿ ಶಿಕ್ಷಣ ಸ್ವೇಚ್ಛಾಚಾರಕ್ಕೆ ಒಳಪಟ್ಟು ದುರುಪಯೋಗಗೊಂಡಿದೆ ಎಂದು  ಶಿಕ್ಷಣಕ್ಷೇತ್ರದಲ್ಲಿ ಅಳವಡಿಸದಿರುವುದು ಸರಿಯಲ್ಲ ಏಕೆಂದರೆ ಕ್ರಿಮಿಕೀಟ ಪಕ್ಷಿಗಳಿದ್ದಾವೆಯೆಂದು ಯಾರೂ ಕೂಡ ಹೊಲದಲ್ಲಿ ಬೆಳೆಯನ್ನು ಬಿತ್ತದಿರುವುದಿಲ್ಲ30. ಎಲ್ಲಿ ಸವಾಲುಗಳು ಸಮಸ್ಯೆಗಳಿವೆಯೋ ಅದನ್ನು ಸರಿಪಡಿಸಿಕೊಂಡು ಹೋಗುವುದು ಬುದ್ಧಿವಂತರ ಲಕ್ಷಣ
ಕೋ ಹ್ಯಬಾಲಿಶೋ ಹಸ್ತಗತಂ ಪರಗತಂ ಕುರ್ಯಾತ್31 || (ಯಾವ ಬುದ್ಧಿವಂತ ತನ್ನಲ್ಲಿರುವ ಅಮೂಲ್ಯವಸ್ತುವನ್ನು ನಾಶ ಮಾಡಿಕೊಳ್ಳುತ್ತಾನೆ?) ಎಂಬಂತೆ ಪ್ರಾಚೀನದಿಂದ ಬಂದಿರುವ ಉತ್ತಮಶಾಸ್ತ್ರವನ್ನು ಬಳಸಿಕೊಳ್ಳದೆ ನಾಶ ಮಾಡಿಕೊಳ್ಳುತ್ತಾನೆ. ಆದ್ದರಿಂದ ಶಿಕ್ಷಣದ ಬಗ್ಗೆ ಇರುವ ಎಲ್ಲಾ ಸವಾಲನ್ನು ಸಮಸ್ಯೆಯನ್ನು ನಿವಾರಿಸುವ ಕಾಮಶಾಸ್ತ್ರದ ಹಿನ್ನೆಲೆಯಲ್ಲಿ ಲೈಂಗಿಕ ಶಿಕ್ಷಣಕ್ರಮವನ್ನು ಸಿದ್ಧಗೊಳಿಸಿದರೆ ಇದಕ್ಕೆ ಇರುವ ಎಲ್ಲಾ ಸವಾಲನ್ನು ಎದುರಿಸಿ ಗೆದ್ದು ನಿಶ್ಚಿಂತೆಯಿಂದ ಶಿಕ್ಷಣವನ್ನು ಜಾರಿಗೊಳಿಸಿ ವಿಷಯದಲ್ಲೂ ಕೂಡ ವಿದ್ಯಾವಂತರನ್ನಾಗಿ ಮಾಡಿ ಸಮಾಜದಲ್ಲಿ ಕಂಡು ಬರುವ ಲೈಂಗಿಕಾಪರಾಧವನ್ನು ಮತ್ತು ಏಡ್ಸ್ ಮೊದಲಾದ ಲೈಂಗಿಕ ರೋಗವನ್ನು ತಡೆಗಟ್ಟಬಹುದು. ಮೂಲಕ ಸರ್ಕಾರದ ಪ್ರಯತ್ನಕ್ಕೆ ಸಹಕಾರವನ್ನು ಶಿಕ್ಷಣಕ್ಷೇತ್ರದಿಂದ ಕೊಡಬಹುದು. ಮೂಲಕ ಸಮಾಜವು ಸ್ವಸ್ಥವಾಗಿ ಬಾಳಬಹುದು.
ಅನ್ನೇನ ಕ್ಷಣಿಕಾ ತೃಪ್ತಿಃ ಯಾವಜ್ಜೀವಂತು ವಿದ್ಯಯಾ (ಆಹಾರದಿಂದ ಸಿಗುವ ಸುಖ ಕ್ಷಣ ಕಾಲದಲ್ಲಿ ನಾಶವಾದರೆ ವಿದ್ಯೆಯಿಂದ ಸುಖ ಸಾಯುವವರೆಗೆ ಸಿಗುತ್ತಲೇ ಇರುತ್ತದೆ.)32
    
ಅಡಿಟಿಪ್ಪಣಿಗಳು
1)     ಗ್ರಂಥಕರ್ತರು ಮತ್ತು ಪ್ರಕಾಶಕರು-ಮಾಗಡಿ ಕೃಷ್ಣಶಾಸ್ತ್ರಿ-ಭರ್ತೃಹರಿಯ ನೀತಿಶತಕ 1\16,
      ಇಸವಿ-1924, ಪುಟ ಸಂಖ್ಯೆ-16
2)     ಎಸ್.ವಿ ಪರಮೇಶ್ವರ ಭಟ್ಟ-ಕನ್ನಡ ಕಾಳಿದಾಸ ಮಹಾಸಂಪುಟ (ಮೂಲ-ಕಾಳಿದಾಸನ
      ರಘುವಂಶ)-ಸ್ನಾತಕೋತ್ತರ ಕೇಂದ್ರ ಮಂಗಳಗಂಗೋತ್ರಿ, ಮಂಗಳೂರು ವಿ.ವಿ, ಮಂಗಳೂರು-
      1972-ಪು.ಸಂ-173
3)     ಶಿಕ್ಷ-ಉಪಾದಾನೇ, ಸಂಸ್ಕೃತ ವೈಯಾಕರಣ ಕೌಮುದೀ-ಶ್ರೀಶಂಕರ ಅದ್ವೈತ ಶೋಧ ಕೇಂದ್ರ-
      ಶ್ರೀ ಜಗದ್ಗುರು ಮಹಾಸಂಸ್ಥಾನಮ್ ದಕ್ಷಿಣಾಮ್ನಾಯ ಶ್ರೀಶಾರದಾಪೀಠ, ಶೃಂಗೇರಿ-2005,
      ಪು.ಸಂ-531
4)     ಡಾ| ಜಗದೀಶಚಂದ್ರ ಮಿಶ್ರಾ,-ಶುಕ್ರನೀತಿಃ4\3\7-ಚೌಖಂಬಾ ಸುರಭಾರತೀ ಪ್ರಕಾಶನ-ವಾರಾಣಸೀ, 1998, ಪು.ಸಂ-521
5)     ಡಾ| ಅನುಪಮಾ ನಿರಂಜನ, ಕೇಳು ಕಿಶೋರಿ-ನ್ಯಾಷನಲ್ ಕಾಲೇಜು ಬಸವನಗುಡಿ, ಬೆಂಗಳೂರು, 1972 ಪು.ಸಂ 3 (ಮುನ್ನುಡಿ)
6)     ಗ್ರಂಥಕರ್ತರು ಮತ್ತು ಪ್ರಕಾಶಕರು ವಿದ್ವಾನ್ ಶ್ರೀ ಚಕ್ರವರ್ತಿ ಶ್ರೀನಿವಾಸ ಗೋಪಾಲಾಚಾರ್ಯ,-ಶಬ್ದಾರ್ಥಕೌಸ್ತುಭಃ-4, 1984, ಪು.ಸಂ 1813
7)     ಖೊರ್ಷಿದ್. ಎಮ್.ಪಾವ್ರಿ, ಏಡ್ಸ್ ಕಾಯಿಲೆಯ ಸವಾಲು,-ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ
      ದೆಹಲಿ, 1995 ಪು.ಸಂ-1
8)     ಖೊರ್ಷಿದ್. ಎಮ್.ಪಾವ್ರಿ, ಏಡ್ಸ್ ಕಾಯಿಲೆಯ ಸವಾಲು,-ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ
      ದೆಹಲಿ, 1995 ಪು.ಸಂ-15
9)     ಡಾ| ರಾಮಾನಂದಶರ್ಮಾ, ಕಾಮಸೂತ್ರಮ್-ಕೃಷ್ಣದಾಸ ಅಕಾಡೆಮಿ ವಾರಾಣಸೀ 2004
ಐಎಸ್‍ಬಿನ್ 81-218-0167-2
10) ಯಜ್ಞ ನಾರಾಯಣ ಉಡುಪ, ಪುರಾಣ ಭಾರತಕೋಶ-ಕರ್ನಾಟಕ ಸರ್ಕಾರ ಪುಸ್ತಕ
      ಪ್ರಾಧಿಕಾರ, ಬೆಂಗಳೂರು, 1997-ಪು.ಸಂ-728
11) ಗ್ರಂಥಕರ್ತರು ಮತ್ತು ಪ್ರಕಾಶಕರು  ವಿದ್ವಾನ್ ಶ್ರೀ ಚಕ್ರವರ್ತಿ ಶ್ರೀನಿವಾಸ ಗೋಪಾಲಾಚಾರ್ಯ,-
      ಶಬ್ದಾರ್ಥಕೌಸ್ತುಭಃ-5, 1984, ಪು.ಸಂ 2374
12) ಗ್ರಂಥಕರ್ತರು ಮತ್ತು ಪ್ರಕಾಶಕರು ವಿದ್ವಾನ್ ಶ್ರೀ ಚಕ್ರವರ್ತಿ ಶ್ರೀನಿವಾಸ ಗೋಪಾಲಾಚಾರ್ಯ,-
      ಶಬ್ದಾರ್ಥ ಕೌಸ್ತುಭಃ-6, 1984, ಪು.ಸಂ 2648
13) ಡಾ| ರಾಮಾನಂದಶರ್ಮಾ, ಕಾಮಸೂತ್ರಮ್-ಕೃಷ್ಣದಾಸ ಅಕಾಡೆಮಿ ವಾರಾಣಸೀ 2004
      ಐಎಸ್ಬಿಎನ್ 81-218-0167-2 ಪು.ಸಂ-13
14) ಶ್ರೀಮದ್ಭಗವದ್ಗೀತೆ, ಜ್ಞಾನವಿಜ್ಞಾನಯೋಗ 7\11, ಗೀತಾ ಪ್ರೆಸ್ ಗೋರಖ್ಪುರ, 2012-ಐಎಸ್‍ಬಿನ್ 81-293-0262-4 ಪು.ಸಮ್-207
15) ಡಾ| ರಾಮಾನಂದಶರ್ಮಾ, ಕಾಮಸೂತ್ರಮ್-ಕೃಷ್ಣದಾಸ ಅಕಾಡೆಮಿ ವಾರಾಣಸೀ 2004
      ಐಎಸ್ಬಿಎನ್ 81-218-0167-2
16) ಡಾ| ಕೆ. ಕೃಷ್ಣಮೂರ್ತಿ ಕನ್ನಡ ಕಾವ್ಯ ಮೀಮಾಂಸೆ (ಸಂಸ್ಕೃತ ಕವಿ ರಾಜಶೇಖರನ
      ಕಾವ್ಯಮೀಮಾಂಸಾ), ಶಾರದಾವಿಲಾಸ ಕಾಲೇಜ್, ಮೈಸೂರು, 1969, ಪು.ಸಂ-26, 32,
     33, ವಿ.ಸೂ-ರಾಜಶೇಖರನಿಂದ ಆರಂಭಿಸಿ ಪ್ರತಿಯೊಬ್ಬ ಸಂಸ್ಕೃತ ವಿದ್ವಾಂಸನು ತಮ್ಮ ಕೃತಿಯಲ್ಲಿ
     ಶಾಸ್ತ್ರವನ್ನು ಆಶ್ರಯಿಸಿದ್ದಾರೆ)
17) ಡಾ| ಎಮ್. ಚಿದಾನಂದಮೂರ್ತಿ, ಸಂಶೋಧನೆಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು, 1984
18) ಡಾ| ರಾಮಾನಂದಶರ್ಮಾ, ಕಾಮಸೂತ್ರಮ್-ಕೃಷ್ಣದಾಸ ಅಕಾಡೆಮಿ ವಾರಾಣಸೀ 2004
ಐಎಸ್‍ಬಿಎನ್ 81-218-0167-2 ಪು.ಸಂ-78
19) ಅದೇ-ಪು.ಸಂ-85
20) ಅದೇ-ಪು.ಸಂ-89
21) ಅದೇ-ಪು.ಸಂ-4ರಿಂದ 12
22) ಬರಹ ಮತ್ತು ಪ್ರಕಾಶನ-Alain Danielou, complete kamasutra, U.S.A, ISBN
       0-89281-492-6
    Lance Dane-kamasutra-Rochester,Vormont, ISBN-978-089281138-0
23) ಡಾ| ರಾಮಾನಂದಶರ್ಮಾ, ಕಾಮಸೂತ್ರಮ್-ಕೃಷ್ಣದಾಸ ಅಕಾಡೆಮಿ ವಾರಾಣಸೀ 2004
      ಐಎಸ್‍ಬಿಎನ್ 81-218-0167-2-ಪು.ಸಂ-89
24) ಅದೇ-ಪು.ಸಂ-90
25) ಅದೇ-ಪು.ಸಂ-84
26) ಅದೇ-ಪು.ಸಂ-78
27) ಡಾ| ಅನುಪಮಾ ನಿರಂಜನ, ಕೇಳುಕಿಶೋರಿ-ನ್ಯಾಷನಲ್ ಕಾಲೇಜು ಬಸವನಗುಡಿ,
     
ಬೆಂಗಳೂರು, 1972
28) ಡಾ| ರಾಮಾನಂದಶರ್ಮಾ, ಕಾಮಸೂತ್ರಮ್-ಕೃಷ್ಣದಾಸ ಅಕಾಡೆಮಿ ವಾರಾಣಸೀ 2004
       ಐಎಸ್‍ಬಿಎನ್ 81-218-0167-2 ಪು.ಸಂ-116
29) ಅದೆ-ಪು.ಸಂ-84
30) ಅದೇ-ಪು.ಸಂ-61
31) ಅದೇ-ಪು.ಸಂ-62

32) ಅಜ್ಞಾತ ಪುರುಷ ವಿರಚಿತ ಸುಭಾಷಿತ