Saturday, April 18, 2015

ಸಂಪಾದಕೀಯ -5ನೇ ವರ್ಷದ ಪ್ರಕಟಣೆಯೊಂದಿಗೆ



ಸಮಾಜಕಾರ್ಯದ ಹೆಜ್ಜೆಗಳು ತನ್ನ 5ನೇ ವರ್ಷದ ಪ್ರಕಟಣೆಯೊಂದಿಗೆ ಯಶಸ್ವಿಯಾಗಿ ಸಾಗುತ್ತಿದೆ ಹಾಗೂ ಪ್ರಸ್ತುತ ಸಂಚಿಕೆಯು 5 ಆಂಗ್ಲ ಲೇಖನಗಳನ್ನು, 3 ಕನ್ನಡ ಲೇಖನಗಳನ್ನು ಮತ್ತು ಪ್ರಮುಖ ಸಾಮಾಜಿಕ ಕಾರ್ಯಕರ್ತರೊಬ್ಬರ ದ್ವಿಭಾಷ ಲೇಖನವನ್ನು ಒಳಗೊಂಡಿದೆ. ಬಹುಶಃ ಇದು ಕೂಲಂಕುಶವಾಗಿ ವಿಮರ್ಶೆಗೊಳ್ಳುವ, ಪ್ರಾದೇಶಿಕ ಭಾಷೆ ಲೇಖನಗಳನ್ನು ಹೊಂದಿದ ಭಾರತದ ಏಕೈಕ ಪತ್ರಿಕೆಯಾಗಿದೆ. ಸಂಚಿಕೆಯಿಂದ, ಪತ್ರಿಕೆಯು ಹಿರಿಯ ಮಹಿಳಾ ಸಾಮಾಜಿಕ ಕಾರ್ಯಕರ್ತರ ಕುರಿತು ಪ್ರಕಟಿಸಲು ಬಯಸುತ್ತದೆ.
ಕೆ. ಪ್ರಭಾಕರ್ರವರ 'ಎವಲ್ಯೂಷನ್ ಆಫ್ ನರ್ಸಿಂಗ್ ಆಸ್ ಪ್ರೊಫೆಷನ್' ಲೇಖನವು ನರ್ಸಿಂಗ್, ಒಂದು ವೃತ್ತಿಯ ರೀತಿ, ವಿವಿಧ ಸಮಾಜದಲ್ಲಾದ ಐತಿಹಾಸಿಕ ಬೆಳವಣೆಗೆಯನ್ನು ನಿರೂಪಿಸುತ್ತದೆ. ಲೇಖನವು ನರ್ಸಿಂಗ್ ವೃತ್ತಿಯ ಗುಣಲಕ್ಷಣಗಳನ್ನು ಮತ್ತು ನರ್ಸ್ಗಳಿಗೆ ಅವಶ್ಯಕವಿರುವ ವ್ಯಕ್ತಿತ್ವವನ್ನು ಚರ್ಚಿಸುತ್ತದೆ. ನರ್ಸ್ಗಳ ವೃತ್ತಿಪರ ಹೊಣೆಗಾರಿಕೆ ಮತ್ತು ವೃತ್ತಿಪರ ನೀತಿಸಂಹಿತೆಯನ್ನು ಪ್ರಭಾಕರ್ರವರು ವಿವರವಾಗಿ ಪರಿಶೀಲಿಸಿದ್ದಾರೆ. ಲೇಖನವು ಭಾರತದಲ್ಲಿ ನರ್ಸಿಂಗ್ಕ್ಷೇತ್ರದ ಬೆಳವಣೆಗೆಯನ್ನು ವಿವರಿಸುತ್ತದೆ. ಲೇಖನವು ಎಲ್ಲಾ ಮಾನವ ಸೇವಾ ವೃತ್ತಿಪರರಿಗೆ ಮತ್ತು ಕ್ಷೇತ್ರದಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗಿದೆ.
ಏಪ್ರಿಲ್ 22 'ವಿಶ್ವ ಭೂಮಿ ದಿನ' ಆದುದರಿಂದ ಟಿ.ಕೆ ನಾಯರ್ ರವರ 'ಸಸ್ಟೈನೆಬಿಲಿಟಿ ಅಂಡ್ ಸೋಶಿಯಲ್ ವರ್ಕ್' ಲೇಖನವು ಏಪ್ರಿಲ್ ಸಂಚಿಕೆಗೆ ಸೂಕ್ತವಾಗಿದೆ. ಲೇಖನವು ಮೂರು ವಿಭಾಗಗಳನ್ನು ಹೊಂದಿದೆ. ಮೊದಲನೆಯ ಭಾಗದಲ್ಲಿ ಭೂಮಿಯ ಅಂಶಗಳನ್ನು ಮತ್ತು ದಶಕಗಳಿಂದ ನಡೆಯುತ್ತಿರುವ ಪರಿಸರ ನಾಶದ ಕುರಿತು ಲೇಖಕರು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ಎರಡನೆಯ ಭಾಗವು ಟಿ.ಕೆ ನಾಯರ್ರವರ ಮಾಜಿ ವಿದ್ಯಾರ್ಥಿ ಮತ್ತು ಈಗಿನ ಆಪ್ತ ಸಹಾಯಕರಾದ ಎಮ್. 'ನಡರಾಜ' ಪ್ರಸಿದ್ಧವಾದ ಪುಸ್ತಕ 'ಲಿವಿಂಗ್ ಪಾಥ್ ವೇಯ್ಸ್' ಸಾರಾಂಶವಾಗಿದೆ ಮತ್ತು ಮೂರನೆಯ ಭಾಗದಲ್ಲಿ ಮಾನವಕುಲಕ್ಕೆ ಆವರಿಸಿಕೊಂಡಿರುವ ಪರಿಸರದ ವಿಪತ್ತಿಗೆ ಸಮಾಜಕಾರ್ಯ ವೃತ್ತಿಪರರು ತೋರುತ್ತಿರುವ ನೀರಸ ಪ್ರತಿಕ್ರಿಯೆಯನ್ನು ಮಿಮರ್ಶಾತ್ಮಕವಾಗಿ ವಿಶ್ಲೇಶಿಸಿದ್ದಾರೆ.
ಸ್ಮಿತಾ ಬಮ್ಮಿಡಿರವರ 'ಫ್ಯಾಮಿಲಿ ರಿಲೇಶನ್ಸ್ ಇನ್ ಲಿವಿಂಗ್ ಅರೇಂಜ್ಮೆಂಟ್ಸ್ ಅಂಡ್ ದಿ ಕ್ವಾಲಿಟಿ ಆಫ್ ಲೈಫ್ ಆಫ್ ಓಲ್ಡರ್ ಪರ್ಸನ್ಸ್' ಸಂಶೋಧನಾ ಆಧಾರಿತ ಲೇಖನದಲ್ಲಿ ಜೀವನವ್ಯಶಕಗಳ ವ್ಯವಸ್ಥೆಯು (Living Arrangement) ಹಿರಿಯರಿಗೆ ತಮ್ಮ ಕುಟುಂಬದಲ್ಲಿ ಸಿಗುವ ಕಾಳಜಿ ಹಾಗೂ ಅನೌಪಚಾರಿಕ ಬೆಂಬಲ ಸ್ವರೂಪದ ಮೂಲ ನಿರ್ಣಾಯಕ ಮತ್ತು ಸೂಚಕ ಎಂದು ವಿವರಿಸಿದ್ದಾರೆ. ಸ್ಮಿತಾರವರ ಅಧ್ಯಯನವು ಭಾರತದಲ್ಲಿ ಹಿರಿಯರ ಪರಿಸ್ಥಿತಿಯ ಇತರೆ ಸಾಮಾನ್ಯ ಅಧ್ಯಯನಗಳಿಂದ ಭಿನ್ನವಾಗಿದೆ.
ಮಾನವ ಅಂಗ ಕಸಿಗೆ ವೈದ್ಯಕೀಯ ತಂತ್ರಜ್ಞಾನದ ಹುಟ್ಟು, ಆರೋಗ್ಯ ಮತ್ತು ಜೀವನದ ಪೋಷಣೆಯಲ್ಲಿ ಒಂದು ನಿರ್ಣಾಯಕ ಅಂಶವಾಗಿದೆ. ತಂತ್ರಜ್ಞಾನವು ಹೆಚ್ಚು ಹೆಚ್ಚು ಮುಂದುವರಿದರೂ ಸರಿಯಾದ ಸಮಯಕ್ಕೆ ಅವಶ್ಯಕವಿರುವ ಅಂಗಗಳ ಒದಗಿಸುವಿಕೆಯಲ್ಲಿನ ತೊಂದರೆಯು ಪ್ರಮುಖ ತೊಡಕಾಗಿದೆ. ಅಂಗಗಳ ಪೂರೈಕೆ ಮತ್ತು ಬೇಡಿಕೆಗಳ ನಡುವಿನ ದೊಡ್ಡ ಅಂತರವು ದೇಶದಲ್ಲಿ ವಿಷಮಸ್ಥಿತಿಯಲ್ಲಿರುವ ಅನೇಕ ರೋಗಿಗಳಿಗೆ ಕಂಟಕವಾಗಿದೆ. ಅಬ್ದುಲ್ ಅಜೀ಼ಜ್ 'ಆರ್ಗನ್ ಶಾರ್ಟೇಜ್ ಕ್ರೈಸಿಸ್ ಅಂಡ್ ಹೆಲ್ತ್ ಕೇರ್ : ರಿವಿಸಿಟಿಂಗ್ ದಿ ಚಾಲೆಂಜ್ ಅಂಡ್ ಪ್ರಾಸ್ಪೆಕ್ಟ್' ಲೇಖನವು ಸಕಾಲಿಕ ಮತ್ತು ಅತ್ಯಂತ ಗಮನಾರ್ಹವಾದುದು.
ಭಾರತದಲ್ಲಿ ಮಕ್ಕಳು ಒಟ್ಟು ಜನಸಂಖ್ಯೆಯ ಶೇಕಡ 39ರಷ್ಟು ಇದ್ದಾರೆ ಹಾಗೂ ಮಕ್ಕಳ ಜನಸಂಖ್ಯೆಯ ಮುಕ್ಕಾಲು ಭಾಗಕ್ಕೂ ಹೆಚ್ಚು ಗ್ರಾಮೀಣ ಪ್ರದೇಶದಲ್ಲಿದ್ದಾರೆ. ಎನ್.ವಿ. ವಾಸುದೇವ ಶರ್ಮಾರವರು ತಮ್ಮ 'ರೈಟ್ಸ್ ಆಫ್ ರೂರಲ್ ಚಿಲ್ಡ್ರನ್ ಫ್ರಮ್ ಪ್ರೊಟೆಕ್ಷನ್ ಪರ್ಸ್ಪೆಕ್ಟಿವ್' ಲೇಖನದಲ್ಲಿ ಬಹುತೇಕ ಗ್ರಾಮೀಣ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಬರೆದಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಚಾಲನೆಗೊಂಡ ಅನೇಕ ಕಾರ್ಯಕ್ರಮಗಳನ್ನು/ಯೋಜನೆಗಳನ್ನು ಕಾರ್ಯಗತಗೊಳಿಸುವುದಕ್ಕೆ ಮತ್ತು ಅದನ್ನು ಬಡವರಿಗೆ ತಲುಪುವಂತೆ ಮಾಡಲು ಸೂಕ್ತವಾದ ಜಿಲ್ಲಾ ಮಟ್ಟದ ಹೊಸ ಶಾಸನಬದ್ಧ ನ್ಯಾಯಕೇಂದ್ರಗಳ ತುರ್ತು ಅವಶ್ಯಕತೆಯಿದೆ ಎಂದು ಹೇಳಿದ್ದಾರೆ.

ಗೋವಿಂದರಾಜುರವರ 'ಪ್ರೋಗ್ರೆಸ್ ಆಫ್ ಹೈಯರ್ ಎಜುಕೇಷನ್ ಇನ್ ಇಂಡಿಯಾ : ಹ್ಯಾನ್ ಓವರ್ವ್ಯೂ' ಲೇಖನವು ಉನ್ನತ ಶಿಕ್ಷಣ ಸಂಸ್ಥೆಗಳ ರಚನೆ ಮತ್ತು ಬೆಳವಣೆಗೆ, ಒಟ್ಟು ದಾಖಲಾತಿ ಮಟ್ಟ, ವಿದ್ಯಾರ್ಥಿ-ಶಿಕ್ಷಕರ ಅನುಪಾತ ಮತ್ತು ಇತರ ಅಂಶವನ್ನು ವಿಶ್ಲೇಷಿಸುತ್ತದೆ. ಭಾರತದ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿನ ಸಂಶೋಧನಾ ಮತ್ತು ಅಭಿವೃದ್ಧಿಯ ಸಮಸ್ಯೆಗಳನ್ನು ಮತ್ತು ಸವಾಲುಗಳನ್ನು ಗೋವಿಂದರಾಜುರವರ ಲೇಖನದಲ್ಲಿ ವಿಮರ್ಶಾತ್ಮಕವಾಗಿ ಚಿರ್ಚಿಸಿದ್ದಾರೆ.
ಎಸ್.ಎಸ್. ಮಡಿವಾಳರು ಮತ್ತು ಆರ್. ದೇವರಾಜ್ರವರು ತಮ್ಮ  'ಇಂಪ್ರೂಯಿಂಗ್ ದಿ ಲೈವ್ಲಿವುಡ್ಸ್ ಆಫ್ ಸ್ಮಾಲ್ ಫಾರ್ಮರ್ಸ್ ತ್ರೂ ಡೈರಿ ಫಾರ್ಮಿಂಗ್ ಅಂಡ್ ದಿ ರೋಲ್ ಆಫ್ ಹ್ಯಾನ್ ಆರ್ಗನೈಸೇಷನ್ ಸ್ಟಡಿ ಆಫ್ ವರ್ಕೋಡು ವಿಲೇಜ್ ಇನ್ ಮೈಸೂರ್ ಡಿಸ್ಟ್ರಿಕ್ಟ್' ಲೇಖನದಲ್ಲಿ 'ನಿವೃತ್ ಟ್ರಸ್ಟ್' ಅಭಿವೃದ್ಧಿಯ ಕಾರ್ಯದ ಬಗ್ಗೆ ವಿವರಿಸಿದ್ದಾರೆ. ಸಣ್ಣ ರೈತರು ಅದರಲ್ಲೂ ಮಹಿಳೆಯರು ಹೈನುಗಾರಿಕೆ ಮತ್ತು ಮೇವು ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಅವರ ಜೀವನ ಮಟ್ಟದಲ್ಲಿ ಸುಧಾರಣೆಯಾಗುತ್ತದೆ ಎಂಬುದನ್ನು ಲೇಖನದ ಮೂಲಕ ತಿಳಿಸಿದ್ದಾರೆ.
ಲೈಂಗಿಕ ಕಾರ್ಯಕರ್ತರು ಭಾರತದ ಸಮಾಜದಲ್ಲಿ ಹೆಚ್ಚು ಶೋಷಣೆಗೆ ಒಳಗಾದವರು ಮತ್ತು ನಿರ್ಲಕ್ಷ್ಯಕ್ಕೊಳಗಾದ ಮಹಿಳೆಯರ ಗುಂಪು. ಬಿ ಭಾರತಿರವರು ತಮ್ಮ 'ಟ್ರೆಡಿಶನ್ ಅಂಡ್ ಕಮರ್ಶಿಯಲೈಸೇಷನ್ ಆಫ್ ಸೆಕ್ಸ್ಯೂಯಲ್ ಎಕ್ಸ್ಪ್ಲಾಯ್ಟೇಶನ್' ಲೇಖನದಲ್ಲಿ ಮಹಿಳೆಯರ ಲೈಂಗಿಕ ಶೋಷಣೆಯ ವಿವಿಧ ಸಂಪ್ರದಾಯದ ಆಯಾಮಗಳನ್ನು ಮತ್ತು ಅವರ ಸೇವೆಯ ಅಥವಾ ವ್ಯಪಾರದ ನಿರ್ಧಯ ವ್ಯಾಪಾರೀಕರಣವನ್ನು ತಿಳಿಸಲು ಪ್ರಯತ್ನಿಸಿದ್ದಾರೆ.


ಡಾ. ಒಲಿಂಡ ಪೆರೇರರವರು ಮಹೋನ್ನತ ಸಮಾಜಕಾರ್ಯ ಶಿಕ್ಷಕರು ಶಾಸ್ತ್ರಜ್ಞರು ಮತ್ತು ಮಾನವ ಸೇವಾ ವೃತ್ತಿಪರರು. ಇವರು ಸಮಾಜಕಾರ್ಯದ ಹೆಜ್ಜೆಗಳು ಸಲಹಾ ಮಂಡಳಿಯಿಂದ ಪತ್ರಿಕೆಯ ಹೊಸ ಉಪಕ್ರಮದಲ್ಲಿ ಕಾಣಿಸಿಕೊಳ್ಳಲಿರುವ ಪ್ರಥಮ ಸಾಮಾಜಿಕ ಕಾರ್ಯಕರ್ತರು. ಒಮಾಹ ವಿಶ್ವವಿದ್ಯಾಲಯದ ಸಮಾಜಕಾರ್ಯದ ಪ್ರೊಫೆಸರ್ ಆದ ಡಾ. ಹೆನ್ರಿ ಜೆ ಡಿಸೌಜ಼ ರವರು ತಮ್ಮ ಮತ್ತು ತಮ್ಮ ಪತ್ನಿಯ ಗುರುಗಳಾದ ಒಲಿಂಡ ಪೆರೇರರವರಿಗೆ ಅತ್ಯುತ್ತಮ ಗೌರವವನ್ನು ಸಲ್ಲಿಸುತ್ತಾರೆ.