Monday, December 8, 2014

ಸಮಾಜಕಾರ್ಯದ ಸಾಕ್ಷಾತ್ಕಾರದಲ್ಲೊಂದು ನಾವೀನ್ಯತೆ !



ಕಲ್ಪನಾ ಸಂಪತ್

ಸಂಕ್ಷಿಪ್ತ ವಿವರ: ಸಮಾಜಕಾರ್ಯದ ಕಲ್ಪನೆ ಮನೆಯಲ್ಲಿ ಆರಂಭವಾಗಿ, ಶಾಲೆಯಲ್ಲಿ ಅದರ ಕಲಿಕೆ ಮುಂದುವರೆಯುತ್ತದೆ ಮತ್ತು ಬದುಕು ಸಾಗಿದಂತೆ ಅದು ವಿಸ್ತಾರವಾಗುತ್ತಾ ಹೋಗುತ್ತದೆ. ಆದರೆ ತಮ್ಮ ಮತ್ತು ಸಮಾಜದ ಕುರಿತು ಜವಾಬ್ದಾರಿಯಿಂದ ವರ್ತಿಸಬಲ್ಲಂತಹ ಮೌಲ್ಯಗಳು ಮತ್ತು ಸ್ಪಷ್ಟತೆಯುಳ್ಳ ಸಧೃಡ ವ್ಯಕ್ತಿಗಳನ್ನ ನಿರ್ಮಾಣ ಮಾಡುವುದರ ಕುರಿತು ಇಂದಿನ ಶಿಕ್ಷಣ ರಾಜಿ ಮಾಡಿಕೊಂಡಿದೆ. ಆದುದರಿಂದಲೇ ಕೇವಲ ಜೀವನ ಕೌಶಲವಲ್ಲದೇ ಪ್ರಸ್ತುತ ಸಮಯಕ್ಕೆ ಅತ್ಯವಶ್ಯಕವಾದುದು ಜೀವನ್ಮುಖಿ ಶಿಕ್ಷಣ. ಬೆಂಗಳೂರು ನಗರದ 10-16 ವರ್ಷದ ಮಕ್ಕಳ ಜೊತೆ ನಡೆಸಲಾದ ಪ್ರಾಯೋಗಿಕವಾದ ಮತ್ತು ಸ್ವಾನುಭವದ ಸಂಶೋಧನೆಯ ಆಧಾರದ ಮೇಲೆ ರಚಿತವಾದ ಮತ್ತು ಮಕ್ಕಳನ್ನ ಸಬಲೀಕರಣಗೊಳಿಸಿ ವಿಕಸಿತಗೊಳಿಸುವ ಮತ್ತು ಉತ್ಕ್ರಷ್ಠತೆಯನ್ನು ಸಾಧಿಸಲು ಸಹಕರಿಸುವ ವಿಚಾರ ಮತ್ತು ಸಾಧನದ ಕುರಿತು ಲೇಖನ ಬೆಳಕು ಚೆಲ್ಲುತ್ತದೆ. ಇಲ್ಲಿ ವಿವರಿಸಲಾಗಿರುವ ಮಾಡ್ಯೂಲ್ ಕಲಿಯುವಿಕೆ, ಕ್ರಿಯಾಶೀಲತೆ ಮತ್ತು ಇವರೆಡನ್ನ ಸಮಗ್ರವಾಗಿ ಸಮಾಜದ ಒಳಿತಿಗೆ ಬಳಸುವ ಬಗೆಗೆ ಕೇಂದ್ರೀಕೃತವಾಗಿದೆ. ಇದಕ್ಕಾಗಿ ಮಕ್ಕಳಿಗೆ ಆಳವಾದ ಸಮಾಲೋಚನೆ ಮಾಡುವ ಪ್ರಕ್ರಿಯೆಯನ್ನ ತಿಳಿಸಿಕೊಡಲಾಗುವುದು. ಇದರ ಅತೀ ಮುಖ್ಯ ಅಂಶವು ಮಕ್ಕಳು ತಮ್ಮ 10ನೇ ತರಗತಿಯ ಭಾಗವಾಗಿ ಪೂರ್ಣಗೊಳಿಸುವ SAP (Social Action projects) ಸೋಷಿಯಲ್ ಆಕ್ಷನ್ ಪ್ರಾಜೆಕ್ಟ್ಸ್.
* * * *
ಸಮಾಜಕಾರ್ಯದ ಕಲ್ಪನೆ ಆರಂಭವಾಗುವುದು ಮನೆಯಲ್ಲಿ. ಅದರ ಬಗೆಗಿನ ಹೆಚ್ಚಿನ ಕಲಿಕೆ ಶಾಲೆಯ ವಾತಾವರಣದಲ್ಲೇ ಮುಂದುವರೆಯಬೇಕೆ ಹೊರತು ಸಮಾಜಕಾರ್ಯದ ಕುರಿತು ಪದವಿ ಪಡೆಯುವಾಗಲಲ್ಲ. ಭಾರತದ ಪ್ರಸ್ತುತ ಸನ್ನಿವೇಶದಲ್ಲಿ ಜನರನ್ನ ಇನ್ನೂ ಹೆಚ್ಚು ಸಮಾಜ ಮುಖಿಗಳನ್ನಾಗಿಸಬೇಕಿದೆ. ಸಮಾಜಕಾರ್ಯದ ಕುರಿತು ಶಿಕ್ಷಣವೆಂದರೆ ಸಮಾಜಕಾರ್ಯದ ಕುರಿತು ಪದವಿ ಮಾತ್ರವಲ್ಲ. ಪ್ರಪಂಚದಲ್ಲಿನ ಸಾಮಾನ್ಯ ಆಲೋಚನೆಯೆಂದರೆ ಸಮಾಜಕಾರ್ಯ ಎಂಬುದು ಅದರ ಪದವಿ ಪಡೆದು ಅಭಿವೃದ್ಧಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಮಾತ್ರ ಸೀಮಿತ ಎಂದು. ಏಕೆಂದರೆ ಅಂತಹ ಪದವಿ ಪಡೆದವರು ಮಾತ್ರ ಸಮಾಜದ ಅಭಿವೃದ್ಧಿಯನ್ನ ಚಿಂತಿಸಬೇಕು, ಸೃಷ್ಟಿಸಬೇಕು, ಕನಸು ಕಟ್ಟಬೇಕು ಮತ್ತು  ಮಾಡಬೇಕು ಎಂಬುದು ಎಲ್ಲರ ಆಲೋಚನೆ. ಇಂತಹ ಆಲೋಚನೆಗಳ ಅಸ್ತಿತ್ವಕ್ಕೆ ಸಮಾಜಕಾರ್ಯದ ಕರ್ಮಚಾರಿಗಳಾದ ನಾವೂ ಕಾರಣರಾಗಿದ್ದೇವೆ. ಸಮಾಜಕಾರ್ಯದ ಪದವಿಯನ್ನ ನೀಡುವುದು -
-    ಸಮಾಜಕಾರ್ಯದ ಕುರಿತಾದ ಆಲೋಚನೆ ಮತ್ತು ನೆಲೆಗೆ ತೆರೆದುಕೊಳ್ಳಲು, ಸೃಷ್ಟಿಸಲು ಮತ್ತು ಕೊಡಮಾಡಲು
-    ಸಮಾಜದ ಎಲ್ಲರೂ ತಮ್ಮ ವೈಯಕ್ತಿಕ ಪರಿಧಿಯಿಂದಾಚೆಗೆ ಬಂದು ಸಮಾಜದೊಂದಿಗೆ ಸಮ್ಮಿಳಿತಗೊಳ್ಳುವಂತಹ ಶಿಕ್ಷಣವನ್ನ ನೀಡುವುದು ಹಾಗೂ ಮೂಲಕ ನಾವೆಲ್ಲರೂ ಭಾಗವಾಗಬೇಕು ಎಂದು ಬಯಸುವ ಸುಸಮಾಜವನ್ನ ನಿರ್ಮಾಣ ಮಾಡುವುದು.
ಸಮಾಜಕಾರ್ಯದ ಕುರಿತು ಒಲವು, ಆಲೋಚನೆ ಮತ್ತು ಕ್ರಿಯೆ ಆರಂಭವಾಗುವುದು ಮೂಲಭೂತವಾಗಿ ಶಿಕ್ಷಣ ಕ್ಷೇತ್ರದಲ್ಲಿ. ಮಕ್ಕಳು ಸಮಾಜಕಾರ್ಯದ ಭಾಗವಾಗುವಂತೆ ಅವರೊಂದಿಗೆ ಕೆಲಸ ಮಾಡುವುದು ಒಂದು ಫ್ರೌಢ ಮತ್ತು ಪೋಷಕ ಸಮಾಜದ ಗುಣಲಕ್ಷಣ. ಯುವ ಮನಸ್ಸುಗಳು ಒಟ್ಟುಗೂಡುವಲ್ಲಿ ಮತ್ತು ಒಟ್ಟಿಗೇ ವಿಕಸನಗೊಳ್ಳುವಲ್ಲಿ ಶಾಲೆಗಳು ಯಾವಾಗಲೂ ಅಮೂಲ್ಯ ಪಾತ್ರವಹಿಸಿವೆ. ಆದರೆ ಈಗಿನ ಶಿಕ್ಷಣದ ದುರಂತವೆಂದರೆ ಅದು ಕೇವಲ ವ್ಯಕ್ತಿಯ ಜೀವನಾಧಾರಕ್ಕೆ ಅಗತ್ಯವಾದ ಜ್ಞಾನ, ಕೌಶಲ್ಯ ಮತ್ತು ಕಾರ್ಯಕ್ಷಮತೆಗೆ ಸೀಮಿತಗೊಂಡಿದೆ. ಹಾಗಾಗಿ ಮಗುವಿನಲ್ಲಿ ಸಮಾಜ ಮತ್ತು ಅದರ ನಡುವಿನ ಅಂತರ್ ಸಂಬಂಧದ ಕುರಿತ ಜ್ಞಾನ ತೀರಾ ಶೂನ್ಯ ಮಟ್ಟದಲ್ಲಿದೆ. ಶಿಕ್ಷಣವು ತನ್ನ ಶೈಕ್ಷಣಿಕ ಎಲ್ಲೆಯನ್ನ ದಾಟಿ ಅದರ ವಿದ್ಯಾರ್ಥಿಗಳನ್ನ ಜೀವನ ಎಂಬ ಬಹುಮುಖ್ಯ ಅಧ್ಯಾಯಕ್ಕೆ ತಯಾರಿಗೊಳಿಸಬೇಕಿದೆ. ಶಿಕ್ಷಣವು ಮಕ್ಕಳಿಗೆ ಜ್ಞಾನವನ್ನು ಕೊಡುವುದಲ್ಲದೆ ಮನುಷ್ಯನ ಅಸ್ತಿತ್ವದ ಆಳಕ್ಕಿಳಿದು ಮೂಲಭೂತವಾಗಿ ಪರಿಣಾಮ  ಬೀರಬಲ್ಲ ಮಗುವಿನ ದೂರದೃಷ್ಠಿ ಮತ್ತು ಮೌಲ್ಯಗಳ ಕುರಿತು ಗಮನಹರಿಸಬೇಕು ಮತ್ತು ಅವರನ್ನ ನಿರಂತರ ಕಲಿಕೆ ಮಾಡುವವರನ್ನಾಗಿಸಬೇಕು. ಹಾಗಾದಲ್ಲಿ ಮಾತ್ರ ಮಗುವಿನ ಅಂತರಾಳ ಮತ್ತು ಸಮಾಜದ ಬೇಡಿಕೆಗಳ ನಡುವೆ ಸೌಹಾರ್ದ ಉಂಟಾಗುತ್ತದೆ. ಶಿಕ್ಷಣವು ಮಕ್ಕಳಲ್ಲಿ ಸಾಮರ್ಥ್ಯವನ್ನ ಬೆಳೆಸುವುದರ ಜೊತೆಗೆ ಅವರಲ್ಲಿ ಆಳವಾಗಿ ವಿಚಾರ ಮಾಡಬಲ್ಲ ಶಕ್ತಿಯನ್ನ ಬೆಳೆಸಿದಾಗ ಮಾತ್ರ, ಅವರು ಸಮಗ್ರವಾಗಿ ಬದುಕನ್ನ ನಡೆಸಬಲ್ಲರು. ಇದಕ್ಕೆ ಅಗತ್ಯವಾದ ಶಿಕ್ಷಣವನ್ನ ಜೀವನ್ಮುಖಿ ಶಿಕ್ಷಣ ಎನ್ನಬಹುದು. ಮಗುವು ತನ್ನ ಅಸ್ತಿತ್ವ ಉದ್ದೇಶ ಮತ್ತು ಸಮಾಜದಲ್ಲಿಯ ಅದರ ಪಾತ್ರ ಎರಡನ್ನ ಅರಿತು ಬೆಳೆಯಬೇಕು. ಕಾರ್ಯ ಸಾಧಿಸುವಲ್ಲಿ ಸಮಾಜ ಕಾರ್ಯಕರ್ತನ ಪಾತ್ರ ಮಹತ್ವದ್ದಾಗಿದೆ.
ಶಿಕ್ಷಣ ಕ್ಷೇತ್ರದಲ್ಲಿ ಜೀವನ ಕೌಶಲ ಎಂಬುದು ಚಾಲ್ತಿಯಲ್ಲಿ ಬಂದಿದೆಯಾದರೂ ಅದೂ ಕೂಡ ಕಾರ್ಯದಕ್ಷತೆ ಮತ್ತು ಸಾಮರ್ಥ್ಯಕ್ಕೆ ಒತ್ತು ನೀಡಿದೆ. ಆದರೆ ಈಗ ಅತ್ಯವಶ್ಯಕವಾಗಿರುವುದು ಜೀವನ್ಮುಖಿ ಶಿಕ್ಷಣ. ತಮ್ಮಲ್ಲಿ ಮತ್ತು ಇತರರಲ್ಲಿ ಬದಲಾವಣೆ ತರಬಲ್ಲ ಸಂವೇದನಾಶೀಲ, ಗೌರವಿಸುವ, ಸ್ವನಿರ್ದೇಶಿತ ಮತ್ತು ದೂರದೃಷ್ಠಿ ಹೊಂದಿದ ವ್ಯಕ್ತಿಗಳ ನಿರ್ಮಾಣ ಮಾಡುವ ಕನಸು ನಮಗಿದ್ದಲ್ಲಿ ಮಕ್ಕಳಿಗೆ ಜೀವನ್ಮುಖಿ ಶಿಕ್ಷಣ ನೀಡುವುದು ಬಹಳಾ ಅಗತ್ಯ. ತಾವು ಮಾಡುವ ಆಯ್ಕೆಗಳು ಹೇಗೆ ವಿಶಾಲ ಅರ್ಥದಲ್ಲಿ ಮೌಲ್ಯ ವೃದ್ಧಿಸುತ್ತವೆ ಎಂದು ಆಳವಾಗಿ ಮಂಥನ ಮಾಡುವ ಶಕ್ತಿ ಅವರಲ್ಲಿ ಇರಬೇಕಾಗುತ್ತದೆ.
ನನ್ನ ಸಾಮರ್ಥ್ಯವನ್ನ ಅರಿಯುವುದು ಮಹತ್ವದ್ದು. ಅದಕ್ಕಿಂತಲೂ ಮಹತ್ವದ್ದೆಂದರೆ ಸಾಮರ್ಥ್ಯವನ್ನ ಏತಕ್ಕಾಗಿ ಉಪಯೋಗಿಸುತ್ತಿದ್ದೇನೆ ಎಂದು ಅರಿಯುವುದು (ಸಂಪತ್ 2003).
ಜೀವನ ಕೌಶಲವು ಬದುಕನ್ನ ನಡೆಸಲು ಬೇಕಾದ ಸಾಮರ್ಥ್ಯಗಳನ್ನ ಬೆಳೆಸಿದರೆ  ಜೀವನ್ಮುಖಿ ಶಿಕ್ಷಣವು ಸಾಮರ್ಥ್ಯವನ್ನ ಸರಿಯಾಗಿ ಬಳಸಲು ಮಾಡಬೇಕಾದ ಆಯ್ಕೆಗಳನ್ನ ನಿರ್ಧರಿಸಲು ಅಗತ್ಯವಾದ ಸ್ಪಷ್ಟತೆಯನ್ನ ನೀಡುತ್ತದೆ.
ಜೀವನ್ಮುಖಿ ಶಿಕ್ಷಣ ಎಂದರೇನು? ಇದು ಜೀವನ ಕೌಶಲಕ್ಕಿಂತ ಹೇಗೆ ಭಿನ್ನ?
ಜೀವನ್ಮುಖಿ ಶಿಕ್ಷಣವು ಹೆಚ್ಚು ಸಮಗ್ರವಾದದ್ದು ಮತ್ತು ವಿಕಸಿತವಾದದ್ದು. ಅದು ಜೀವನ ಕೌಶಲದ ಶಿಕ್ಷಣಕ್ಕಿಂತ ಹೆಚ್ಚು ಮನುಷ್ಯನನ್ನ ಸಶಕ್ತನನ್ನಾಗಿಸುತ್ತದೆ.
     ಜೀವನ್ಮುಖಿ ಶಿಕ್ಷಣವು ಮನುಷ್ಯನನ್ನು ಬದುಕಿನ ಸಂದರ್ಭವನ್ನ ಸೂಕ್ಷ್ಮವಾಗಿ ಗ್ರಹಿಸಿ ನಿರ್ಧಾರಗಳನ್ನ ತೆಗೆದುಕೊಳ್ಳಲು ಪ್ರೇರೇಪಿಸುತ್ತದೆ. ಜೀವನ್ಮುಖಿ ಶಿಕ್ಷಣವು ಜೀವನ ಕೌಶಲದ ಎಲ್ಲ ಭಾಗಗಳನ್ನ ಒಳಗೊಳ್ಳುವುದಲ್ಲದೆ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಕೌಶಲಗಳ ಮೂಲಕ ಹೇಗೆ ಜೀವನದ ಗುಣಮಟ್ಟವನ್ನು ಹೆಚ್ಚಿಸಬಹುದು ಎನ್ನುವುದರತ್ತ ಗಮನ ಹರಿಸುತ್ತದೆ. ಉದಾಹರಣೆಗೆ - ಬುದ್ಧಿವಂತಿಕೆಯನ್ನ ಸಂದರ್ಭಕ್ಕೆ ತಕ್ಕಂತೆ ಯುಕ್ತಿಯಿಂದ ಬಳಸಿ ತನ್ನ ಸ್ವಾರ್ಥ ಗುರಿಯ ಸಾಧನೆಗೂ ಉಪಯೋಗಿಸಬಹುದು ಅಥವಾ ಅದೇ ಬುದ್ಧಿವಂತಿಕೆಯನ್ನ ವಿಶಾಲವಾದ ಒಳಿತನ್ನ ಸೃಷ್ಟಿಸಲು ಮತ್ತು ನಡೆಸಲೂ ಬಳಸಬಹುದು.
     ಜೀವನ್ಮುಖಿ ಶಿಕ್ಷಣವು ಆಳವಾದ ವಿವೇಚನೆಯನ್ನ ನೀಡುವುದಲ್ಲದೆ ಸಾಂಧರ್ಬಿಕವಾಗಿ ಔಚಿತ್ಯ ಪೂರ್ಣವಾಗಿರಲು ಹೇಳಿಕೊಡುತ್ತದೆ.
ಜೀವನ್ಮುಖಿ ಶಿಕ್ಷಣವು ಜ್ಞಾನದ ಅರ್ಥವನ್ನ ತೆರೆದಿಟ್ಟರೆ ಜೀವನ ಕೌಶಲದ ಶಿಕ್ಷಣವು ಜ್ಞಾನವನ್ನ ಪಡೆಯಲು ಬೇಕಾದ ವಿವಿಧ ಮಾರ್ಗಗಳನ್ನ ಅಷ್ಟೇ ತಿಳಿಸಿಕೊಡುತ್ತದೆ. ಜ್ಞಾನದ ಅರ್ಥವಂತಿಕೆಯು ವ್ಯಕ್ತಿಯಲ್ಲಿ ಹುಟ್ಟಿಸುವ ಒಳನೋಟಗಳು ಬದುಕಿನೊಂದಿಗೆ ಮಿಳಿತಗೊಂಡಾಗ ವಿವೇಕದ ಅಣಿಮುತ್ತುಗಳಾಗುತ್ತವೆ. ಉದಾಹರಣೆಗೆ ಗಣಿತ ನನಗೆ ಕಷ್ಟದ ವಿಷಯ. ಆದರೆ ಗಣಿತದ ಬಗೆಗಿನ ಜ್ಞಾನ ನನಗೆ ಗಣಿತವು ಯಾವಾಗ, ಏಕೆ, ಹೇಗೆ, ಎಲ್ಲಿ ಮತ್ತು ಯಾರಿಂದ ಕಷ್ಟವಾಗುತ್ತದೆ ಎಂಬುದು ತಿಳಿಸುತ್ತದೆ. ಬಗೆಯ ಹುಡುಕಾಟ ನನ್ನ ಕಲಿಕೆಯ ಶೈಲಿ ಮತ್ತು ಕಲಿಕೆಯ ಬಗೆಗಿನ ನನ್ನ ಒಲವುಗಳ ಕುರಿತು ಒಳನೋಟಗಳನ್ನ ನೀಡುತ್ತದೆ.
ಜೀವನ್ಮುಖಿ ಶಿಕ್ಷಣವು ಮೂಲಕಾರಣಗಳ ಮಟ್ಟದಲ್ಲಿ ನಾವು ಬದಲಾಗಲು ಸಹಕರಿಸುತ್ತದೆ. ಶಿಕ್ಷಣವು ನಮ್ಮ ಸಮಸ್ಯೆಗಳಿಗೆ ನಡವಳಿಕೆಗಳ ಮಟ್ಟದಲ್ಲಿ ಉತ್ತರಗಳನ್ನ ಹುಡುಕದೆ, ಅದರ ಮೂಲವಾದ ನಂಬಿಕೆಗಳ ಮಟ್ಟದಲ್ಲಿ ನಮ್ಮ ಸಮಸ್ಯೆಗಳ ಕುರಿತು ವಿಚಾರ ಮಾಡಲು ಮತ್ತು ಉತ್ತರ ಹುಡುಕುವುದನ್ನ ಹೇಳಿಕೊಡುತ್ತದೆ. ನಮ್ಮ ನಡವಳಿಕೆಯು ಅದರ ಸೂತ್ರಧಾರಿಯಾದ ನಂಬಿಕೆಗಳ ದ್ಯೋತಕವಷ್ಟೇ. (ಸಂಪತ್ 1999 2006)
ನಮ್ಮ ಮಗುವಿನ ಅರ್ಥಭರಿತ ಬೆಳವಣಿಗೆಯನ್ನು ನಾವು ಬಯಸುವುದಾದರೆ ಜೀವನ್ಮುಖಿ ಶಿಕ್ಷಣಕ್ಕೆ ಆದ್ಯತೆಯನ್ನ ನೀಡಬೇಕಿದೆ. ಅದರಲ್ಲೂ ಹಿಂದೆಂದೂ ಕಾಣದ ಬಿಕ್ಕಟ್ಟಿನಲ್ಲಿರುವ ಪ್ರಪಂಚದ ಇಂದಿನ ಪರಿಸ್ಥಿತಿಯನ್ನ ಗಮನಿಸಿದಾಗ ಜೀವನ್ಮುಖಿ ಶಿಕ್ಷಣವು ಅತ್ಯಗತ್ಯವೆನ್ನಿಸುತ್ತದೆ.

ಜೀವನ್ಮುಖಿ ಶಿಕ್ಷಣದ ಪಠ್ಯಕ್ರಮ - EQUBE
 ಜೀವನ್ಮುಖಿ ಶಿಕ್ಷಣವು ಬದುಕಿನ ಉದ್ದೇಶ ಮತ್ತು ಪ್ರಕ್ರಿಯೆ ಎರಡಕ್ಕೂ ದಾರಿ ತೋರಿಸಬೇಕಾಗುತ್ತದೆ. ಉದ್ದೇಶವು ನಮ್ಮ ದೂರದೃಷ್ಟಿಗೆ ಹೊಂದಿಕೆಯಾದರೆ ಪ್ರಕ್ರಿಯೆಯು ನಮ್ಮ ಮೌಲ್ಯಕ್ಕೆ ಸಂಬಂಧಿಸಿದ್ದು. ವಿಕಸನಗೊಳ್ಳುತ್ತಲೇ ಇರುವ ಬದುಕಿನ ಪಯಣದಲ್ಲಿ ಮುಂದುವರೆಯಲು ಕಲಿಯುವಿಕೆಯನ್ನ ಕಲಿಯುವ ಆಯಾಮ ಅತೀ ಮುಖ್ಯವಾಗುತ್ತದೆ. ಒಂದು ಶತಮಾನಗಳ ಹಿಂದೆ ಕೂಡ ಪೂರ್ವ ಭಾಗದ ಪ್ರಪಂಚದಲ್ಲಿ ಅದರಲ್ಲೂ ಭಾರತದಲ್ಲಿ 90% ಭಾಗದ ಶಿಕ್ಷಣವು ಬದುಕಿನ ಕುರಿತಾಗಿದ್ದರೆ, 10% ಭಾಗದ ಶಿಕ್ಷಣವು ವಿಷಯಗಳ ಕೌಶಲ್ಯದ ಕುರಿತಾಗಿತ್ತು. ಆದರೀಗ ಶೇಕಡಾವಾರು ವಿಭಜನೆ ಅದಲು ಬದಲಾಗಿದೆ. ಶಿಕ್ಷಣವನ್ನ ಅತೀ ಮುಖ್ಯವಾಗಿ ಮಾಹಿತಿ ಮತ್ತು ವಿಷಯ ಜ್ಞಾನಗಳು ನಿರ್ದೇಶಿಸುತ್ತಿವೆ. ಜೀವನ್ಮುಖಿ ಶಿಕ್ಷಣವು ಮಕ್ಕಳಿಗೆ ಬದುಕನ್ನ ಸಮಗ್ರವಾಗಿ ನೋಡುವುದರಿಂದ ಹೇಗೆ ನಮ್ಮ ನಿರ್ಧಾರಗಳು ಜೀವನದ ಗುಣಮಟ್ಟವನ್ನ ಹೆಚ್ಚಿಸಬಲ್ಲದು ಎಂಬುದನ್ನ ತಿಳಿಯಪಡಿಸುತ್ತದೆ.
ಅಲ್ಲದೇ, ಪ್ರಜ್ಞಾ ಯುಗ ಎಂದು ಕರೆಯಲ್ಪಡುವ ಕಾಲಘಟ್ಟದಲ್ಲಿ ಮಕ್ಕಳಲ್ಲಿರುವ ಹೆಚ್ಚಿನ ಶಕ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಅವರ ವಿಚಾರ ಮಾಡುವ, ಅರ್ಥೈಸಿಕೊಳ್ಳುವ ಮತ್ತು ಬದುಕಿನೊಂದಿಗೆ ಸಂಯೋಜಿಸುವ ಪ್ರತಿಭೆಗೆ ಶಿಕ್ಷಣವು ಸ್ಪಂದಿಸಬೇಕಿದೆ. ಇಲ್ಲವಾದಲ್ಲಿ ಮಕ್ಕಳು ಶಿಕ್ಷಣದ ಮೇಲೆ ನಂಬಿಕೆಯನ್ನು ಕಳೆದುಕೊಂಡು ವಿಮುಖರು ಮತ್ತು ಪ್ರಕ್ಷುಬ್ಧರು ಆಗುತ್ತಾರೆ. ಇಂಡಿಗೋ ಮಕ್ಕಳ ಮೇಲೆ ನಡೆದಿರುವ ಸಂಶೋಧನೆ (ಕರೋಲ್ ಮತ್ತು ಟೋಬರ್ 1999) ಕೂಡ ಇದನ್ನೇ ಸೂಚಿಸುತ್ತದೆ. ಅದರ ಕೆಲ ಅಂಶಗಳು:
     ಯುಗದ ಮಕ್ಕಳ ದೃಷ್ಟಿಯಿಂದ ಹೇಳುವುದಾದರೆ - ಜೀವನದ ಕುರಿತ ಕಲಿಕೆಯು ವಿಚಾರವಂತಿಕೆಯ ಪ್ರಕ್ರಿಯೆಯಾಗಬೇಕೇ ಹೊರತು ನಿಯಮಿಸಲ್ಪಟ್ಟ ಪ್ರಕ್ರಿಯೆ ಅಲ್ಲ.
     ಶಿಕ್ಷಣವು ಕೇವಲ ಸಿದ್ಧಾಂತ ಮಟ್ಟದಲ್ಲಿ ಅಲ್ಲದೆ ಅನುಭವಕ್ಕೆ ಸಿಗುವಂತಾಗ ಬೇಕು.
     ಕಲಿಕೆಯು ಅನುದಿನದ ಬದುಕಿನೊಂದಿಗೆ ಗುರುತಿಸಿಕೊಳ್ಳುವಂತೆಯೂ ಮತ್ತು ಕಲಿತದ್ದನ್ನ ಬದುಕಿನೊಂದಿಗೆ ಸಂಯೋಜಿಸುವುದಕ್ಕೆ ಅವಕಾಶಗಳೂ ಇರಬೇಕು. ಆದುದರಿಂದಲೇ ಆತ್ಮಗತವೆನಿಸುವಂತ ಶಿಕ್ಷಣಕ್ಕಿಂತ ಅನ್ವೇಷಣೆಗೆ ಅವಕಾಶವಿರುವ ಶಿಕ್ಷಣ ನೀಡಬೇಕು.
ಎಲ್ಲ ಅಂಶಗಳನ್ನ ಗಮನದಲ್ಲಿಟ್ಟುಕೊಂಡು ವಿಚಾರವಂತಿಕೆಯ ಮನಸ್ಸುಗಳಿಗೆ ಹೊಂದುವಂತಹ ಜೀವನ್ಮುಖಿ ಶಿಕ್ಷಣ ಕಾರ್ಯಕ್ರಮವನ್ನ EFIL ಸಂಸ್ಥೆಯು ರೂಪಿಸಿದೆ. ಕಳೆದ ಎಂಟು ವರ್ಷಗಳಿಂದ ಪಠ್ಯಕ್ರಮವನ್ನು ವಿವಿಧ ಸಂಸ್ಥೆಗಳೊಂದಿಗೆ ಬಳಸುತ್ತಾ ಬಂದಿರುವುದರಿಂದ ಅದು ಇನ್ನೂ ಹೆಚ್ಚು ಉತ್ತಮವಾಗಿ ರೂಪಗೊಂಡಿದೆ. ಪ್ರತೀ ವರ್ಷ ಬೆಂಗಳೂರಿನಲ್ಲಿಯೇ ಸುಮಾರು 2500 ಮಕ್ಕಳು ಇದರ ಲಾಭ ಪಡೆಯುತ್ತಿದ್ದಾರೆ. ಕಾರ್ಯಕ್ರಮವನ್ನ EQUBE - ಅಂದರೆ E3 - ಇದು ಸೂಚಿಸುವುದು Enabling Evolutionary Excellence (ಸಬಲೀಕರಣ ವಿಕಸಿತಗೊಳ್ಳುವ ಉತ್ಕ್ರಷ್ಠತೆ)
ಕೆಳಗಿನ ಬೋಧನಾ ಮಾರ್ಗಸೂಚಿಗಳು ಮಾಡ್ಯೂಲ್ನ ವಿನ್ಯಾಸ ಮತ್ತು ಬೋಧನಾ ಕ್ರಮಗಳನ್ನ ನಿರ್ಣಯಿಸುತ್ತವೆ:
     ಸಹಕರಿಸಿ - ನಿಯಮಿಸಿದರಿ
     ಪ್ರಜ್ಞಾ ಯುಗದ ಮಕ್ಕಳು ಹೆಚ್ಚು ಪ್ರಜ್ಞಾಪೂರ್ವಕರಾಗಿದ್ದು ಅವರು ಕಲಿಕೆಯಲ್ಲಿ ಅನ್ವೇಷಕರಾಗಿರುತ್ತಾರೆ.
     ಪ್ರಸ್ತುತ ಕಾಲಕ್ಕೆ ಭೂತಕಾಲವು ಭವಿಷ್ಯಕಾಲಕ್ಕೆ ಬೇಕಾಗುವ ಪ್ರತಿಕ್ರಿಯೆಗಳನ್ನ ಕಲಿಸಲಾರದು (ಸಂಪತ್, 2008)
EQUBE ನ ಪ್ರತೀ ಅಧಿವೇಶನವನ್ನ ವಿಚಾರವಂತ ಮನಸ್ಸುಗಳು ತಮ್ಮ ಆಯ್ಕೆಗಳು ಹೇಗೆ ಬದುಕಿನ ಮೇಲೆ ಪ್ರಭಾವ ಬೀರುತ್ತವೆ ಎಂದು ಅರ್ಥ ಮಾಡಿಕೊಳ್ಳಲು ಸಹಕರಿಸುವಂತೆ ರೂಪಿಸಲಾಗಿದೆ. ಹಾಗಾಗಿ ಇಲ್ಲಿಯ ಶಿಕ್ಷಕರು ಬದುಕಿನ ಬೇರೆ ಬೇರೆ ಪರ್ಯಾಯಗಳ ಪರಿಣಾಮಗಳು ಏನೇನು ಎಂದು, ಮಕ್ಕಳು ಅನ್ವೇಷಣೆಯ ಮೂಲಕ ಅರ್ಥ ಮಾಡಿಕೊಳ್ಳಲು ಸಹಾಯಕರಾಗಿರುತ್ತಾರೆ (ಅನುವು ಮಾಡಿಕೊಡುತ್ತಾರೆ).
ಕಾರಣಗಳೊಂದಿಗೆ ಕೆಲಸ:
ಪ್ರೌಢರಾದ ನಾವು ಬದಲಾವಣೆಯನ್ನ ತರಲು ನಡವಳಿಕೆಯ ಹಿಂದಿನ ನಿಮಿತ್ತ (ಕಾರಣ) ಮೇಲೆ ಕೆಲಸ ಮಾಡಬೇಕೆ ಹೊರತು ನಡವಳಿಕೆಯ ಮೇಲಷ್ಟೇ ಅಲ್ಲ. ಜೀವನದುದ್ದಕ್ಕೂ ಪ್ರತೀ ಮನುಷ್ಯನಲ್ಲಿ ಅಸಂಖ್ಯ ನಿರ್ಧಾರಗಳು ಕ್ರೋಢೀಕರಣಗೊಳ್ಳುತ್ತ ಅವೇ ನಂಬಿಕೆಗಳಾಗಿ ಮಾರ್ಪಾಟುಗೊಂಡು ನಡವಳಿಕೆಗಳನ್ನ ನಿರ್ದೇಶಿಸುತ್ತವೆ
ಕೆಲ ನಂಬಿಕೆಗಳ ಬಗ್ಗೆ ನಮಗೆ ಅರಿವಿದ್ದರೂ, ಸುಪ್ತವಾಗಿರುವ ಇನ್ನೂ ಎಷ್ಟೋ ನಂಬಿಕೆಗಳು ಸೇರಿ ನಡವಳಿಕೆಗಳನ್ನ ನಿರ್ದೇಶಿಸುತ್ತವೆ (ಸಂಪತ್ 1999)
     ಮಕ್ಕಳಲ್ಲಿ ಕ್ರೋಢೀಕರಣದ ಮಟ್ಟದಲ್ಲೇ ನಾವು ಪರಿಹಾರ ಒದಗಿಸುವ ಪ್ರಯತ್ನ ಮಾಡಬೇಕು ಹಾಗಾಗಿ ಅವರಿಗೆ ಕ್ರೋಢೀಕರಣದ ಪ್ರಕ್ರಿಯಯ ಕುರಿತೇ ವಿವರಿಸಬೇಕು. ಹಾಗಾದಾಗ ಅವರಿಗೆ ಬೇಕಾದ ಬೀಜಗಳನ್ನಷ್ಟೇ ಬಿತ್ತುವ ಮತ್ತು ಬೇಡವಾದ ಕಳೆಯನ್ನು ಕಿತ್ತುಬಿಡುವ ಅರಿವು ಮೂಡುತ್ತದೆ.
ಪಡೆದುಕೊಳ್ಳುವ ಪ್ರತೀ ಅರಿವು ಒಂದು ಹೆಜ್ಜೆ ಮುಂದಿಟ್ಟಂತೆ. ಕಾರ್ಯಕ್ರಮವು ಮಕ್ಕಳಲ್ಲಿ ಬದುಕಿನಲ್ಲಿರುವ ವಿವಿಧ ದೃಷ್ಟಿಕೋನಗಳ ಕುರಿತು ಅರಿವು ಮೂಡಿಸುವೆಡೆ ಕೇಂದ್ರೀಕೃತವಾಗಿದೆ. ತದನಂತರ ಅವರು ಬೆಳೆದಂತೆಲ್ಲಾ ಅವರಲ್ಲಿಯೇ ಆಳವಾದ ಸಮಾಲೋಚನೆಗಳಾಗುತ್ತಾ ಬದುಕಿನೆಡೆಗೆ ಅವರ ಸೂಕ್ಷ್ಮತೆ ಹೆಚ್ಚುತ್ತಾ ಹೋಗುತ್ತದೆ.
     ಶಿಕ್ಷಣೋರಂಜನ ಎಂಬ ಪ್ರಕ್ರಿಯೆಯ ಮಾದರಿ, ಕಲಿಕೆಯನ್ನ ಮಕ್ಕಳು ಸುಲಭವಾಗಿ ಸ್ವೀಕರಿಸುವಂತೆ ಮಾಡುತ್ತದೆ. ಆಟದ ಜೊತೆ ಸಮ್ಮಿಳಿತಗೊಂಡದ್ದರಿಂದ ಹಂಚಿಕೊಳ್ಳುವಿಕೆ ನೈಸಗರ್ಿಕವಾಗುತ್ತದೆ ಮತ್ತು ಕಲಿಕೆ ಒತ್ತಡವಿಲ್ಲದೆ ನಡೆಯುತ್ತದೆ.
EQUBE ಮಕ್ಕಳ ಬೆಳವಣಿಗೆಯನ್ನ ರೂಪಿಸುವ ಐದು ವರ್ಷಗಳಾದ 5 ರಿಂದ 9ನೇ ತರಗತಿಗಳ ಕಡೆ ಗಮನ ಹರಿಸುತ್ತದೆ. ಹಾಗೂ ಕಾರ್ಯಕ್ರಮದ ಮುಕ್ತಾಯ ಹಂತದ ಭಾಗವಾಗಿ 10ನೇ ತರಗತಿಯಲ್ಲಿ ಅವರನ್ನ ಸಾಮಾಜಿಕ ಸಂಸ್ಥೆ ಮತ್ತು ಸಾಮಾಜಿಕ ಉದ್ದಿಮೆಗಳೊಡನೆ ಸಂಪರ್ಕ ಸೇತುವೆ ಮಾಡಿಕೊಡಲಾಗುವುದು.
5ನೇ ತರಗತಿಯ ಉದ್ದಿಶ್ಯವು - ಬದುಕೆಂದರೆ ಕಥೆಗಳ ಸರಪಳಿಯೆಂದೂ ಮತ್ತು ಪ್ರತೀ ಕಥೆಗೂ ಕಲಿಕೆಗಳು ನಿಯುಕ್ತಗೊಂಡಿದೆ ಎಂದು ತಿಳಿಸಿಕೊಡುವುದಾಗಿದೆ. ಅಧಿವೇಶನಗಳಲ್ಲಿ 16-18 ಮೌಲ್ಯಗಳನ್ನ ಡಿಸ್ಕವರಿ ಎಂಬ ಸಾಕ್ಷಾತ್ಕಾರದ ಸಾಧನದ ಮೂಲಕ ಅರ್ಥಮಾಡಿಕೊಳ್ಳಲಾಗುವುದು (ಸಂಪತ್ 2005). ಇಲ್ಲಿ ಮಕ್ಕಳಿಗೆ ಅರ್ಥವಾಗುವುದೇನೆಂದರೆ ಬದುಕಿನ ಪ್ರತೀ ಘಟನೆಯೂ ಒಂದು ಕಥೆಯೇ ಹಾಗೂ ಪ್ರತಿ ಕಥೆಯಿಂದ ಕಲಿಕೆಯನ್ನ ಪಡೆಯುವ ಆಯ್ಕೆ ಅವರಲ್ಲಿಯೇ ಇದೆ. ಅದರ ಜೊತೆಗೆ ವಿವಿಧ ದೃಷ್ಟಿಕೋನಗಳ ಸಾಧ್ಯತೆಗಳನ್ನ ಮತ್ತು 40 ಬೇರೆ ಬೇರೆ ಮೌಲ್ಯಗಳನ್ನ ಮಕ್ಕಳಿಗೆ ಪರಿಚಯಿಸಲಾಗುತ್ತದೆ. ಮಕ್ಕಳು ಮೌಲ್ಯಗಳನ್ನ ಒಳ್ಳೆಯದು/ಕೆಟ್ಟದ್ದು ಎಂಬ ನಿರ್ಣಯಾತ್ಮಕ ಮತ್ತು ಸೀಮಿತ ದೃಷ್ಟಿಕೋನದಿಂದ ನೋಡುವುದರ ಬದಲು ಮೌಲ್ಯಗಳನ್ನ ಸಹಕಾರಿ ಮತ್ತು ನಿರ್ಬಂಧನಕಾರಿ ದೃಷ್ಟಿಕೋನದಿಂದ ನೋಡುವಂತೆ ಅರಿವು ಮೂಡಿಸಲಾಗುತ್ತದೆ.
6ನೇ ತರಗತಿಯಲ್ಲಿ ಅವರು ತಿಳಿಯುವುದೇನೆಂದರೆ ಕಥೆಗಳಿಂದ ಅವರು ಪಡೆದ ಕಲಿಕೆಗಳೇ ಮುಂದೆ ನಿರ್ಧಾರಗಳಾಗಿ ನಂತರ ಅವುಗಳೇ ನಂಬಿಕೆಗಳಾಗಿ ಪರಿವರ್ತನೆಗೊಳ್ಳುತ್ತವೆ. ಸಾಲುಕ್ರಮದ ಮಾದರಿಯಲ್ಲಿ ಅನುಭವಗಳು ನಿರ್ಧಾರಗಳಾಗಿ ನಂತರ ನಂಬಿಕೆಗಳಾಗಿ ನಮ್ಮ ಮೌಲ್ಯಗಳು ರೂಪಗೊಳ್ಳುವುದನ್ನ ಪಾತ್ರಭಿನಯ ಮತ್ತು ಅಭಿಪ್ರಾಯ ವಿನಿಮಯದ ಅನುಭವದ ಪ್ರಕ್ರಯೆಯ ಮೂಲಕ ಮನನ ಮಾಡಿಕೊಡಲಾಗುವುದು. ಮಕ್ಕಳು ತಮ್ಮ ಅಂತರಾಳವನ್ನ ಅರ್ಥಮಾಡಿಕೊಳ್ಳಲು ಬಳಸುವ ಪ್ರಕ್ರಿಯೆಯನ್ನ ಕಲಿಯುತ್ತಾ ಅವರ ನಡವಳಿಕೆಯನ್ನ ರೂಪಿಸುವ ಪ್ರಕ್ರಿಯೆಯನ್ನ ಅನ್ವೇಷಣೆ ಮಾಡುವುದನ್ನ ಅರಿಯುತ್ತಾರೆ. ತಮ್ಮ ನಂಬಿಕೆಗಳನ್ನ ಬದಲಿಸುವ ಶಕ್ತಿ ಮತ್ತು ನಿರ್ಧಾರಗಳ ಬಗ್ಗೆ ಪ್ರಜ್ಞಾವಂತರಾಗಿರುವ ಸಾಮರ್ಥ್ಯ 6ನೇ ತರಗತಿಯ ಕಾರ್ಯಕ್ರಮದ ಮುಖ್ಯ ಅಂಶಗಳು. ಮಕ್ಕಳ ಮತ್ತು ಸಮಾಜದ ಅಂತರ್ ಸಂಬಂಧದ ಎಳೆಗಳು ವಯಸ್ಸಿನಲ್ಲೇ ಪ್ರಾರಂಭವಾಗುತ್ತದೆ.
ಹಿಂದಿನ ವರ್ಷದಲ್ಲಿ ತಮ್ಮ ನಂಬಿಕೆಗಳ ಕುರಿತು ತಿಳಿದುಕೊಂಡ ಮಕ್ಕಳು 7ನೆ ತರಗತಿಯಲ್ಲಿ ಕಲಿಯುವಿಕೆಯನ್ನ ಕಲಿಯುವೆಡೆ ಸಾಗುತ್ತಾರೆ. ಕಲಿಯುವಿಕೆ ಬದಲಾವಣೆಯನ್ನ ನಿಭಾಯಿಸಲು ಬೇಕಾದ ಅತಿ ಮುಖ್ಯ ಕೌಶಲ್ಯ. ಅವರದೇ ತರಗತಿಯ ಉದಾಹರಣೆಯ ಮೂಲಕ ಹೇಗೆ ಜಾಗರೂಕತೆಯಿಂದ ಕೂಡಿದ ಕಲಿಕೆಯು  ವಿವೇಕವಂತ ವ್ಯಕ್ತಿಯನ್ನ ಸೃಷ್ಟಿಸುತ್ತದೆ ಮತ್ತು ಜಾಗರೂಕತೆಯಿಂದ ಕಲಿಯದಿದ್ದಲ್ಲಿ ಅವಿವೇಕತನ ಮೂಡುತ್ತದೆಂದು ತೋರಿಸಿಕೊಡಲಾಗುತ್ತದೆ. 5 W - 1 H ಗಳನ್ನ ಬಳಸಿ ಹೇಗೆ ಅವರು ವಿಷಯಗಳು ಮತ್ತು ಬದುಕನ್ನ ಹೇಗೆ ಅನ್ವೇಷಣೆ ಮಾಡಬಲ್ಲರು ಮತ್ತು ಸಮ್ಮಿಳಿತಗೊಳಿಸಬಲ್ಲರು ಎಂದು ಕಲಿಯುತ್ತಾರೆ. ಇದು 12 ವರ್ಷದ ಮಕ್ಕಳಲ್ಲಿ ವಿಷಯಗಳ ಕಲಿಕೆಯನ್ನ ಪರೀಕ್ಷೆಯ ದೃಷ್ಟಿಕೋನದಿಂದಲ್ಲದೆ ಬದುಕಿನ ವಿಕಾಸದ ದೃಷ್ಟಿಕೋನದಿಂದ ನೋಡುವ ಅರಿವು ಮೂಡಿಸುತ್ತದೆ.
8ನೇ ತರಗತಿಯವರಿಗೆ ತಮ್ಮ ಅಸ್ತಿತ್ವಕ್ಕೊಂದು ಉದ್ದೇಶವಿದೆ ಮತ್ತು ಅದನ್ನು ಕಂಡುಕೊಳ್ಳುವ ಅವಶ್ಯಕತೆಯಿದೆ ಎಂಬ ಅರಿವು ಮೂಡಿಸಲಾಗುವುದು. ತಮ್ಮ ಉದ್ದೇಶವನ್ನ ಅವರು ಆದಷ್ಟು ಬೇಗ ಅರಿತ ಅವರಿಗೆ ಅದನ್ನು ಸಾಧಿಸಲು ಹೆಚ್ಚಿನ ಕಾಲಾವಕಾಶವಿರುತ್ತದೆ. ಅವರಿಗೆ ಉದ್ಯೋಗವು ಜೀವನದ ಉದ್ದೇಶವಲ್ಲ ಅದು ಅವರ ಜೀವನದ ಉದ್ದೇಶವನ್ನು ಈಡೇರಿಸಲು ಆಯ್ಕೆ ಮಾಡಿಕೊಂಡಿರುವ ಒಂದು ಮಾರ್ಗ. ಅವರಿಗೆ ಲಭ್ಯವಿರುವ ವಿವಿಧ ವೃತ್ತಿ ಜೀವನಗಳ ಪರಿಚಯ ಮಾಡಿಕೊಡುವುದಲ್ಲದೇ ವೃತ್ತಿ ಜೀವನ ಮತ್ತು ಸಮಾಜದ ನಡುವಿನ ಅಂತರ್ ಸಂಬಂಧದ ಅರಿವು ನೀಡಲಾಗುವುದು.
9ನೇ ತರಗತಿಯು 8ನೇ ತರಗತಿಯ ವಿಷಯಗಳನ್ನ ಅನುಕ್ರಮವಾಗಿ ಅನುಸರಿಸುತ್ತದೆ. ಹಿಂದಿನ ತರಗತಿಗಳಲ್ಲಿ ದೂರದೃಷ್ಟಿಯ ಶಕ್ತಿಯನ್ನ ಅರಿತ ಮಕ್ಕಳು ಈಗ ದೂರದೃಷ್ಟಿಯನ್ನ ಸಾಧಿಸಲು ಸಹಕರಿಸುವ ಮೌಲ್ಯಗಳನ್ನ ತಿಳಿದುಕೊಳ್ಳುತ್ತಾರೆ. ಶ್ರೇಷ್ಠತೆಯೆಡೆಗೆ ನಡೆಯಲು ಅಗತ್ಯವಾದ 5 ಮುಖ್ಯ ನೆಲೆಗಳನ್ನ ಕಲಿತುಕೊಳ್ಳುತ್ತಾರೆ:
·        ಸಾಧನೆಯ ನೆಲೆ
·        ಸಾಮಾಜಿಕ ನೆಲೆ
·        ನಾಯಕತ್ವದ ನೆಲೆ
·        ಕಲಿಕೆಯ ನೆಲೆ
·        ಪೂರ್ಣತೆಯ ನೆಲೆ
ವ್ಯಾಲ್ಯೂ ಪ್ರೊಫೈಲ್ ಇನಸ್ಟ್ರುಮೆಂಟ್VPI (Value Profile Instrument) ಬಳಸಿ ಮಕ್ಕಳಿಗೆ ಹಿಮ್ಮಾಹಿತಿ ಪ್ರಕ್ರಿಯೆಯನ್ನ ಪರಿಚಯಿಸಲಾಗುವುದು. ಇದು ಬಹುಮುಖಿ ಮಾಪಕವಾಗಿದೆ. ಕ್ರಿಯೆಯಿಂದ ಮಕ್ಕಳು ತಮ್ಮ ಸಹಪಾಠಿ, ಪೋಷಕರು, ಅಧ್ಯಾಪಕರು ಮತ್ತು ಗೆಳೆಯರು ಹೀಗೆ 360 ಡಿಗ್ರಿ ಹಿಮ್ಮಾಹಿತಿ ಪಡೆಯುತ್ತಾರೆ. ಮೌಲ್ಯಗಳಲ್ಲಾದ ಅಸಮತೋಲನದಿಂದ ಸಮಾಜದ ಮೇಲಾದ ಪ್ರಭಾವಗಳನ್ನ ಅರಿಯುವುದರ ಮೂಲಕ ಮಕ್ಕಳು ಕಲಿಯುತ್ತಾರೆ.
10ನೆ ತರಗತಿಯ ಅಧಿವೇಶನಗಳನ್ನ ಹೇಗೆ ವಿನ್ಯಾಸಗೊಳಿಸಲಾಗಿದೆ ಎಂದರೆ ಅವು ತರಗತಿಯ ಚಲನಶೀಲತೆಯ ಆಧಾರದ ಮೇಲೆ ವಿಕಸನ ಮತ್ತು ವಿಸ್ತಾರಗೊಳ್ಳುತ್ತವೆ. ಅಲ್ಲದೇ SAP (Social Action Projects) ಸೋಷಿಯಲ್ ಆಕ್ಷನ್ ಪ್ರಾಜೆಕ್ಟ್ಸ್ ಎಂಬ ಪ್ರಾಯೋಗಿಕವಾದ ಮಾಡ್ಯೂಲ್ನ ಮೂಲಕ ಕಲಿಕೆಗಳು ಸುಲಭವಾಗಿ ಅಂತರ್ಗತವಾಗುವಂತೆ ಮತ್ತು ಬದುಕಿನ ಇತರೆ ಸಾಂಸ್ಥಿಕ ರೂಪಗಳಾದ ಕುಟುಂಬಶಾಲೆ ಮತ್ತು ಸಮುದಾಯ ಇವುಗಳ ಜೊತೆ ಆರೋಗ್ಯಕರ ಸಂಪರ್ಕ ಸಾಧಿಸುವುದನ್ನ ತೋರಿಸಿಕೊಡುತ್ತದೆ. ಸೋಷಿಯಲ್ ಆಕ್ಷನ್ ಪ್ರಾಜೆಕ್ಟ್ ಎಂಬುದು ಮಕ್ಕಳಿಗೆ ತಮ್ಮ ಕ್ರಿಯೆಗಳ ಮೂಲಕ ಒಂದು ವಾತಾವರಣದಲ್ಲಿ ಅಥವಾ ಒಬ್ಬರ ಜೀವನದಲ್ಲಿ ತಾವು ಬಯಸಿದಂತ ಬದಲಾವಣೆ ತರಬಲ್ಲೆವು ಎಂದು ತಿಳಿಯುವ ಸಾಧನ ಮತ್ತು ಅಂತಹ ಸಂದರ್ಭದಲ್ಲಿ ತಾವು ಏನು ಮಾಡಬಲ್ಲೆವು ಎಂದು ಅರಿಯುವ ಅವಕಾಶ. ಪ್ರತೀ ವಿದ್ಯಾರ್ಥಿಯು ಕನಿಷ್ಠ 40 ಗಂಟೆ ಅಥವಾ ಹೆಚ್ಚು ಸಮಯ ಬಳಸಿ ಯೋಜನೆ ಪೂರೈಸಬೇಕು.
ವಿದ್ಯಾರ್ಥಿಗಳು ಭಿನ್ನವಾಗಿ ಮತ್ತು ಕ್ರಿಯಾಶೀಲರಾಗಿ ಯೋಚಿಸುವಂತೆ ಪ್ರೋತ್ಸಾಹಿಸಲಾಗುವುದು. ತಮ್ಮ SAP ಯೋಜನೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಕಲಿತ ದೂರದೃಷ್ಟಿ, ಮೌಲ್ಯ, ಇತರೆ ಸಂಗತಿಗಳನ್ನ ಉಪಯೋಗಿಸಿಕೊಂಡು ಉತ್ತಮ ಮಟ್ಟದಲ್ಲಿ ಯೋಜನೆ ಪೂರ್ಣಗೊಳಿಸಲು ಹುರಿದುಂಬಿಸಲಾಗುವುದು. ಅವರಿಗೆ ಸಮಾಜಕಾರ್ಯದ ಯೋಜನೆಯ ನಿರ್ವಹಣೆಯ ಕೌಶಲವನ್ನ ತಿಳಿಸಿಕೊಡಲಾಗುವುದು. EQUBE ಸಹಾಯಕರು ಅವರಿಗೆ ನಿರಂತರ ನೆರವು ನೀಡುತ್ತಿರುತ್ತಾರೆ. ವರ್ಷಾಂತ್ಯದಲ್ಲಿ ಅವರು ಪ್ರಶ್ನಾವಳಿಯುಳ್ಳ ವರದಿ ನೀಡುವುದಲ್ಲದೆ ವರದಿಯನ್ನ ತಮ್ಮ ತರಗತಿಯಲ್ಲಿ ಮಂಡನೆ ಕೂಡ ಮಾಡುತ್ತಾರೆ. ಅವರಿಗೆ ಯೋಜನೆಯ ಕಾರ್ಯಸಾಧನೆಯಲ್ಲಿ ಮತ್ತು ಮಂಡನೆಯ ಭಾಗವಾಗಿ ತಯಾರಿಸಿದ ವರದಿಯ ಗುಣಮಟ್ಟ, ಮಾಡಿದ ಕೆಲಸದ ಪ್ರಾಮಾಣಿಕತೆ, ಅನನ್ಯತೆ, ಸ್ಪಷ್ಟತೆ, ಆಳ, ಧೈರ್ಯ, ನಾವೀನ್ಯತೆ, ಉತ್ಕಟತೆ ಹೀಗೆ ಬೇರೆ ಬೇರೆ ಕೋನದ ಹಿಮ್ಮಾಹಿತಿಯನ್ನ ನೀಡಲಾಗುವುದು. ಯೋಜನೆಯನ್ನ ಸಮಷ್ಠಿಯಲ್ಲಿ ನೋಡಲಾಗುವುದು. ಅವರು, ಸಮಾಜ ಮತ್ತು ತಮ್ಮ ಕಲಿಕೆ ಇವುಗಳ ಸಂಪರ್ಕವನ್ನ ಯೋಜನೆಯ ಭಾಗವಾಗಿ ಹೇಗೆ ಸಾಧಿಸಿದರು ಎಂದೂ ಅಳೆಯಲಾಗುವುದು. ಮಾಪನ ಮಾಡುವ ತಂಡದ ಸದಸ್ಯರು ಸ್ವತಃ ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಾಗಿರುತ್ತಾರೆ ಹಾಗೂ ಅವರು ಉತ್ತಮವಾದ, ವಿಕಸಿತ ಮತ್ತು ಸಹಾನುಭೂತಿಯುಳ್ಳ ಸಮಾಜದ ಬಗೆಗೆ ದೂರದೃಷ್ಟಿ ಉಳ್ಳವರಾಗಿರುತ್ತಾರೆ.
ಉದಾಹರಣೆಗೆ - 2013 -2014ನೇ ಸಾಲಿನಲ್ಲಿ ವೈದ್ಯರಿಗಾಗಿ ಗುಣಮಟ್ಟ ಕಾಲವ್ಯಯ ಮಾಡುವ ಸಾಫ್ಟ್‍ವೇರ್ ಅಪ್ಲಿಕೇಷನ್ ತಯಾರಿಸಿದರಿಂದ ಹಿಡಿದು ತಮ್ಮ ಅಜ್ಜನಿಗೆ ಕಷ್ಟಕಾಲದಲ್ಲಿ ನೆರವು ನೀಡಿದರ ಕುರಿತಾದ ಹತ್ತು ಹಲವು SAP ಮಂಡನೆಗಳನ್ನ ಮಾಡಲಾಯಿತು! ಕಸ ಸಂಗ್ರಹಣೆ, ವಿಲೇವಾರಿ, ವಿಂಗಡಣೆ, ನಿರ್ವಹಣೆ, ಗೊಬ್ಬರ ತಯಾರಿಕೆ, ಸಂಚಾರಿ ಸಿಗ್ನಲ್ ಗಳಲ್ಲಿ ಇಂಧನ ಉಳಿತಾಯ ಕುರಿತು ಅರಿವು ಮೂಡಿಸುವುದು, ನೀರಿನ ಉಳಿತಾಯ (ಸಂರಕ್ಷಣೆ), ಅಂಧ ಮಕ್ಕಳಿಗೆ ವಿಷಯಗಳನ್ನ, ಕಲೆ, ಸಂಗೀತ, ನೃತ್ಯ ಕಲಿಸುವುದು, ಅಂಧರ ಪಠ್ಯ ಪುಸ್ತಕಗಳನ್ನ ಪರಿಷ್ಕರಿಸುವುದು, ಅವರಿಗಾಗಿ ಧ್ವನಿಮುದ್ರಣ ಮಾಡುವುದು, ಆಟ ಆಡುವುದು, ಸರಕಾರಿ ಶಾಲೆಗಳಲ್ಲಿ ಬೋಧಿಸುವುದು, ಅನಾಥಾಶ್ರಮದ ಮಕ್ಕಳೊಂದಿಗೆ ಸಂವಾದಿಸುವುದು, ಹಳೇ ಪತ್ರಿಕೆಗಳ ಸಹಾಯದ ಮೂಲಕ ಬಟ್ಟೆಗಳನ್ನ ಮತ್ತು ಪುಸ್ತಕಗಳನ್ನ ದಾನ ಮಾಡುವುದು, ಕೆರೆಗಳ ಏರಿಯನ್ನ ಸ್ವಚ್ಚಗೊಳಿಸಿ ಸೈಕಲ್ ದಾರಿಗಳನ್ನ ಸೃಷ್ಟಿಸುವುದು, ಬಟ್ಟೆಯ ಬ್ಯಾಗುಗಳನ್ನ ಮಾರಾಟ ಮಾಡುವುದು, ಪೇಪರ್ ಬ್ಯಾಗುಗಳನ್ನ ಮಾಡುವುದು, ವಿಕಲಚೇತನರಿಗೆ ನೃತ್ಯ ಕಲಿಸುವುದು, ಸೌಕರ್ಯಗಳಿಲ್ಲದ ಜನರಿಗೆ ಬ್ಯಾಂಕ್ ಖಾತೆ ತೆರೆಯುವುದು ಮತ್ತು  ತಮ್ಮ ಹಣಕಾಸನ್ನ ನಿರ್ವಹಿಸಲು ಸಹಕರಿಸುವುದು, ತಮ್ಮ ಮನೆಗೆಲಸದವರ ಮಕ್ಕಳಿಗೆ ಉಚಿತ ಮನೆಪಾಠ ಹೇಳಿಕೊಡುವುದು, ಮನೆಗೆಲಸದವರಿಗೆ ಇಂಗ್ಲೀಷ್ ಕಲಿಸಿಕೊಡುವುದು - ಹೀಗೆ ಪಟ್ಟಿ ಉದ್ದವಾಗುತ್ತಾ ಹೋಗುತ್ತದೆ. ಕಾರ್ಯಕ್ರಮದ ಸಣ್ಣ ಆಲೋಚನೆಯೊಂದು ಇಂದು ದೊಡ್ಡದಾಗಿ ಬೆಳೆದು “Thrash Mob” ಎಂಬ ಸರ್ಕಾರೇತರ ಸಂಸ್ಥೆಯಾಗಿ ರೂಪಗೊಂಡಿದೆ!
ಮಕ್ಕಳೆಲ್ಲರು ಉತ್ತಮ ಶೈಲಿಯಲ್ಲಿ ಮತ್ತು ಠೀವಿಯಿಂದ ಮಂಡನೆ ಮಾಡಿದರು. ತಮ್ಮಲ್ಲಿಯ ಮತ್ತು ಸಮಾಜದ ಬದಲಾವಣೆಯ ಕುರಿತು ಕೆಲಸ ಮಾಡಿದುದರ ಬಗ್ಗೆ ಅವರಲ್ಲಿ ಅತೀವ ವಿಶ್ವಾಸ ಕಾಣುತ್ತಿತ್ತು. ಇದರಿಂದ ಹೊರಬಂದ ಮುಖ್ಯ ಕಲಿಕೆಗಳೆಂದರೆ- ಹಂಚಿಕೊಳ್ಳುವುದು ಮತ್ತು ಕಾಳಜಿ ವಹಿಸುವುದು ಒಂದು ಸುಮಧುರ ಅನುಭವ; ಸಹಾನುಭೂತಿ ಮತ್ತು ಪ್ರಯತ್ನದಿಂದ ಬದಲಾವಣೆ ಸಾಧ್ಯ; ಸಿಕ್ಕ ಅವಕಾಶಗಳ ಕುರಿತು ಪ್ರಜ್ಞೆ/ಅರಿವು; ಪ್ರೀತಿಸುವ ನೆರವುದಾಯಕ ಕುಟುಂಬ, ಒಳ್ಳೆಯ ಆರೋಗ್ಯ ಮತ್ತು ಅಪರಿಮಿತ ಅವಕಾಶಗಳು ಹೀಗೆ ಅವರಿಗೆ ದೊರಕಿರುವ ಉಡುಗೊರೆಗಳ ಬಗ್ಗೆ ಧನ್ಯರಾಗಿರುವುದು; ತಮ್ಮ ನೆಮ್ಮದಿಯ ಗೂಡಿನಿಂದ ಹೊರಬಂದು ವಾಸ್ತವದ ಪ್ರಪಂಚವನ್ನ ಎದುರಿಸುವುದು. ಬಗೆಯ ಕಲಿಕೆಗಳು ವಿದ್ಯಾರ್ಥಿಗಳ ಕಣ್ತೆರೆಸಿದ್ದಲ್ಲದೆ ಅವರನ್ನ ದೂರದೃಷ್ಟಿ ಹೊಂದುವುದರ ಬಗ್ಗೆ ಮತ್ತು ಅದರ ಬಗೆಗೆ ಕೆಲಸ ಮಾಡಿ ತಮ್ಮದೇ ಸಮಾಜದಲ್ಲಿ ಬದಲಾವಣೆ ತರಲು ದೃಢ ಸಂಕಲ್ಪ ಮಾಡುವಂತೆ ಪ್ರೇರೇಪಿಸಿತು. ಇಡೀ ಅನುಭವವು ಅವರಲ್ಲಿ ಪೋಷಕರು, ಅಧ್ಯಾಪಕರು, ಗೆಳೆಯರು ಇತರರ ಬಗ್ಗೆ ಹೊಸ ಪರಿಕಲ್ಪನೆ ಮತ್ತು ದೃಷ್ಟಿಕೋನ ನೀಡಿತು ಹಾಗೂ ಅವರು ನಾನು, ನನಗೆ, ನನ್ನದು ಎಂಬ ಸಂಕುಚಿತ ಮನೋಭಾವದಿಂದ ಹೊರಬಂದು ವಿಶಾಲವಾಗಿ ಚಿಂತಿಸುವಂತೆ ಮಾಡಿದೆ.

ಕೊನೆಯ ಒಂದೆರಡು ಮಾತುಗಳು:
ವಿದ್ಯಾರ್ಥಿಗಳಲ್ಲಿ ಬಿತ್ತಿದ ಸಮಾಜಕಾರ್ಯದ ಬೀಜ ಅವರ ಪೋಷಕರ ಮೇಲೂ ಪ್ರಭಾವ ಬೀರುತ್ತದೆ. ಇದು ನಮ್ಮ ಎಂಟು ವರ್ಷಗಳ ಅನುಭವದಲ್ಲಿ ಋಜುವಾತಾಗಿದೆ ಕೂಡ. ಬೀಜವು ವಿದ್ಯಾರ್ಥಿಗಳು ಪ್ರೌಢರಾಗಿ ಪ್ರಭಾವಿ ಹುದ್ದೆಗಳನ್ನ ಅಲಂಕರಿಸಿದಾಗ ಅವರು ಸಮಾಜದ ಒಳಿತಿಗೆ ಹೆಚ್ಚಿನ ರೀತಿಯಲ್ಲಿ ಕೊಡುಗೆ ನೀಡುವಂತೆ ಅವರನ್ನು ಸಿದ್ಧಗೊಳಿಸುತ್ತದೆ. ಅದರ ಫಲಶೃತಿಯಿಂದ ಸಮಾಜವು ಇನ್ನೂ ಸುಂದರವಾಗುತ್ತದೆ. ಅವರು ಬದುಕಿನಲ್ಲಿ ಮುಂದುವರಿದಂತೆ ಕೇವಲ ಕಾರ್ಯದಕ್ಷತೆ ಮತ್ತು ಸ್ಪರ್ಧೆಯ ದೃಷ್ಟಿಯಿಂದ ಸಮಾಜವನ್ನ ನೋಡದೆ ಅದನ್ನ ಸಹಕಾರದ, ಸಹಾನುಭೂತಿಯ ಮತ್ತು ಸಮ್ಮಿಳಿತವಾದ ಕುಟುಂಬದಂತೆ ಕಾಣುತ್ತಾರೆ. ಹೀಗೆ ಸರ್ವರಲ್ಲೂ ಸಮಾಜದೆಡೆಗಿನ ಪ್ರೀತಿಯ ಬೀಜವನ್ನ ಬಿತ್ತುವ ಜವಾಬ್ದಾರಿಯು ಎಲ್ಲ ಸಮಾಜಕಾರ್ಯಕರ್ತರ ಜವಾಬ್ದಾರಿಯಾಗಿದೆ.

ಗ್ರಂಥ ವಿವರಣೆ
1.   Carroll, Lee & ToberJan :            The Indigo Children, Carlsbad, CA: Hay House, Inc
      1999                                         
2.   Sampath.J.M                     :     Evolutionary Leadership model. Arpitha Associates Pvt Ltd, Bangalore,
             1998                                          www.arpitha.com
3.   Sampath, J.M                    :     A sociological study of values clarification process in the development of
      1999                                          organization culture. Unpublished PhD thesis. Gujarat University
4.   Sampath, J M                    :     Inner Realities - Notes from the School of life, Bangalore, India: Insight
             2003                                          Publishers., p.160
5.   Sampath, Kalpana &        :     The changing face of human capital in the era of consciousness - development
             Sampath, J.M  2006                path forward for HR. Paper presented at NHRD conference, India
6.   Sampath, J.M                    :     Inaugural address at the Parents meet. Shishya school. Hosur, Tamil Nadu

      2008