Thursday, September 26, 2013

ರೂಮ್ ಟು ರೀಡ್

ರೂಮ್ ಟು ರೀಡ್

            Leaving Microsoft to change the world ಎಂಬ ಪುಸ್ತಕ ಓದಿದ ಪ್ರತಿಯೊಬ್ಬರ ಮನಸ್ಸು ಸಮಾಜಸೇವೆಯ ಕಡೆ ಮುಖ ಮಾಡುವುದು ಖಂಡಿತಾ. ಪುಸ್ತಕವು ಜಾನ್ವುಡ್ ಎಂಬ ವ್ಯಕ್ತಿಯು ತನ್ನ ಪ್ರತಿಷ್ಠೆಯ ಮೈಕ್ರೋಸಾಫ್ಟ್ ಕಂಪೆನಿಯನ್ನು ಬಿಟ್ಟು ಜಗತ್ತನ್ನು ಸುಧಾರಿಸಲು ಹೊರಟ ಕಥೆಯನ್ನು ವರ್ಣರಂಜಿತವಾಗಿ ಚಿತ್ರಿಸಿದೆ. ಪುಸ್ತಕವನನ್ನು ಓದುವ ಪ್ರತಿಯೊಬ್ಬ ವ್ಯಕ್ತಿಯೂ ಜಾನ್ವುಡ್ನಂತೆ ಪ್ರಪಂಚ ಬದಲಾವಣೆಯ ವಿನೂತನ ಮಾರ್ಗಗಳೆಡೆಗೆ ಚಿಂತಿಸುವ ಕ್ರಿಯಾಶೀಲತೆಯನ್ನು ಬೆಳೆಸಿಕೊಳ್ಳುವುದರಲ್ಲಿ ಸಂಶಯವಿಲ್ಲ. ಜಾನ್ ಪ್ರತಿಷ್ಠಿತ ಮೈಕ್ರೋಸಾಫ್ಟ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. ಅವನು ತನ್ನ ಅತೀ ಕಡಿಮೆ ವಯಸ್ಸಿನಲ್ಲಿ ಮೈಕ್ರೋಸಾಫ್ಟ್ ಬಹು ದೊಡ್ಡ ಜವಾಬ್ದಾರಿಯನ್ನು ವಹಿಸಿದ್ದ. ತನ್ನ ಸೊಗಸಾದ ಮಾತುಗಾರಿಕೆ, ಹಾಸ್ಯಮನೋಭಾವ ಮತ್ತು  ಕ್ರಿಯಾಶೀಲತೆಯಿಂದ ಎಲ್ಲರನ್ನು ತನ್ನ ಕಡೆ ಸೆಳೆದುಕೊಳ್ಳುತ್ತಿದ್ದ. ಆತನೊಂದಿಗೆ ಕೆಲಸ ಮಾಡಲು ಕಂಪೆನಿಯ ಇತರರು ಹಾತೊರೆಯುತ್ತಿದ್ದರು. ಹೆಚ್ಚಿನ ಸಮಯ ಕೆಲಸ ಮಾಡುವುದೆಂದರೆ ಜಾನ್ಗ್ ಗೆ ಖುಷಿ, ಆತ ಎಂದೂ ಸಾಮಾನ್ಯ ಕೆಲಸಗಳನ್ನು ಒಪ್ಪಿಕೊಳ್ಳುತ್ತಿರಲಿಲ್ಲ ಮತ್ತು ಒಪ್ಪಿಕೊಂಡ ಕೆಲಸವನ್ನು ನಿರೀಕ್ಷೆಗೂ ಮೀರಿ ಶೀಘ್ರವಾಗಿ, ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಿದ್ದ.
            ಜಾನ್ ವುಡ್ ಒಮ್ಮೆ ಕೆಲವು ದಿನಗಳ ರಜೆ ಪಡೆದುಕೊಂಡು ನೇಪಾಳದ ಗಿರಿ ಕಣಿವೆಗಳಲ್ಲಿ ಚಾರಣ ಹೋಗಬೇಕೆಂದು ನಿರ್ಧರಿಸಿದ.  ಗಿರಿ ಕಣಿವೆಗಳ ತಪ್ಪಲಿನಲ್ಲಿರುವ ಒಂದು ಶಾಲೆಗೆ ಭೇಟಿ ನೀಡಿದ. ಅಲ್ಲಿನ ಮಕ್ಕಳ ಪರಿಸ್ಥಿತಿ, ಶಾಲೆಯ ವಾತಾವರಣ ಜಾನ್ವುಡ್ನ ಇಡೀ ಜೀವನದ ಚಿತ್ರಣವನ್ನು ಬದಲಿಸುವಂತೆ ಮಾಡಿತು. ಪುಸ್ತಕಗಳಲ್ಲಿದ ಲೈಬ್ರರಿ, ಬೋರ್ಡ್ ಇಲ್ಲದ ಶಾಲೆ, ಹೆಂಚುಗಳಿಲ್ಲದ ಮೇಲ್ಛಾವಣಿ ಸೂರ್ಯನ ಕಿರಣಗಳು ನೇರವಾಗಿ ಮಕ್ಕಳ ಮೆಲೆ ಬೀಳುತ್ತಿದ್ದ ದೃಶ್ಯ ಅವನ ಮನಸ್ಸನ್ನು ಕಲುಕಿತು. ಅಲ್ಲಿನ ಮಕ್ಕಳ ಮುಖಗಳನ್ನು ನೋಡಿದ ಜಾನ್ ವುಡ್ ಏನು ತಪ್ಪೇ ಮಾಡಿರದ ಮಕ್ಕಳಿಗೇಕೆ ಶಿಕ್ಷೆ? ಎಂದು ಮನಸ್ಸಿನಲ್ಲಿಯೇ ಅಂದುಕೊಂಡ. ಮಕ್ಕಳ ಮತ್ತು ಇಲ್ಲಿನ ಶಾಲೆಗಳ ಪರಿಸ್ಥಿಯ ಬದಲಾವಣೆಯ ಮಾರ್ಗಗಳ ಬಗ್ಗೆ ಚಿಂತಿಸತೊಡಗಿದ.
            If we are not a part of solution then we are part of a problem ಎಂಬ ವಾಖ್ಯೆಯಿಂದ ಉತ್ತೇಜಿತನಾದಂತೆ ಶಾಲೆಗೆ ಹೋಗದ, ಸೌಲಭ್ಯವಂಚಿತ ಮಕ್ಕಳ ಸ್ಥಿತಿಯಲ್ಲಿ ಸುಧಾರಣೆ ತರಲು ಮುಂದಾದ. ಮೊದಲಿಗೆ ತನ್ನ ಮೈಕ್ರೋಸಾಫ್ಟ್ ಕಂಪೆನಿಗೆ ರಾಜೀನಾಮೆ ನೀಡಿದ ನಂತರ ತನ್ನ ಅಭಿಪ್ರಾಯಗಳನ್ನು ತನ್ನ ಸ್ನೇಹಿತರು ಮತ್ತು ಪರಿಚಯದವರೊಂದಿಗೆ ಹಂಚಿಕೊಂಡ. ಕೆಲವರು ಇವನ ಪರಿಕಲ್ಪನೆಗೆ ಟೀಕೆಗಳನ್ನು ಮಾಡಿದರೂ ಇವುಗಳ ಬಗ್ಗೆ ತಲೆಕೆಡಿಸಿಕೊಳ್ಳದ ಜಾನ್ ವುಡ್ ಕಾರ್ಯ ಪ್ರವೃತ್ತನಾದ. ಇಮೇಲ್ ಮತ್ತು ಮೆಸೇಜ್ ಗಳ ಮುಖಾಂತರ ತನ್ನ ಸ್ನೇಹಿತರಿಗೆ, ಪರಿಚಯದವರಿಗೆ ಮತ್ತು ಸಂಘ ಸಂಸ್ಥೆಗಳಿಗೆ ತನ್ನ ವಿಚಾರಗಳನ್ನು ಹಂಚಿಕೊಂಡ. ತಮ್ಮಲ್ಲಿ ಇರುವ ಉಪಯುಕ್ತ ಪುಸ್ತಕಗಳನ್ನು ನೀಡಿದರೆ ಅವುಗಳನ್ನು ಅಗತ್ಯವಿರುವ ಬಡ ಮಕ್ಕಳಿಗೆ ತಲುಪಿಸಲಾಗುವುದೆಂದು ಮನವಿ ಮಾಡಿಕೊಂಡ. ಇವನ ಮನವಿಗೆ ವಿಶ್ವದೆಲ್ಲಡೆಯಿಂದ ಅಭೂತಪೂರ್ವ ಪ್ರತಿಕ್ರಿಯೆ ಬಂದಿತು. 'ರೂಮ್ ಟು ರೀಡ್' ಹುಟ್ಟಿಕೊಂಡಿದ್ದು ಹೀಗೆ. ಜಗತ್ತಿನ ಎಲ್ಲ ಭಾಗಗಳಿಂದ ಬಂದು ಬೀಳುತ್ತಿದ್ದ ಪುಸ್ತಕಗಳ ರಾಶಿಯನ್ನು ನಿಜವಾದ ಫಲಾನುಭವಿಗಳಿಗೆ ತಲಪಿಸುವ ಕಾರ್ಯ ಅಷ್ಟೆನು ಸುಲಭದಾಗಿರಲಿಲ್ಲ. ವಿದ್ಯಾರ್ಥಿಗಳಿಗೆ ಪುಸ್ತಕವನ್ನು ತಲುಪಿಸುವುದರ ಜೊತೆಗೆ ಅದರಿಂದ ಅವರಿಗೆ ಜ್ಞಾನ ರವಾನೆಯಾಗಬೇಕೆಂಬುದು 'ರೂಮ್ ಟು ರೀಡ್' ಆಶಯವಾಗಿತ್ತು. ತನ್ನ ಸಂಸ್ಥೆಯ ವ್ಯಾಪ್ತಿಯನ್ನು ವಿಸ್ತಾರಗೊಳಿಸಿ ದೇಶದ ಮೂಲೆ ಮೂಲೆಯಲ್ಲಿಯೂ ತನ್ನ 'ರೂಮ್ ಟು ರೀಡ್' ಸಂಸ್ಥೆಯನ್ನು ಸ್ಥಾಪಿಸಿದ. ಪ್ರಬುದ್ಧ ಬರಹಗಾರರನ್ನು ಗುರುತಿಸಿ ಅವರಿಂದ ಸ್ಥಳೀಯ ಭಾಷೆಗಳಲ್ಲಿ ಬರೆಸಿ ಪ್ರಕಟಿಸಿದ. ಹಾಗೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹಣಕಾಸು ನೆರವು ನೀಡಿದ. ಕೇವಲ ಆರೇ ವರ್ಷದಲ್ಲಿ ಜಾನ್ ಜನಪ್ರಿಯತೆ ದೇಶದ ಎಲ್ಲ ಭಾಗಕ್ಕೂ ಹರಡಿತು
            ಚಾರಣದಲ್ಲಿ ಹುಟ್ಟಿದ ಸಣ್ಣ ಯೋಚನೆ, ಸ್ನೇಹಿತರಿಗೆ ಪುಸ್ತಕ ಕಳಿಸಿಕೊಡಿ ಎಂಬ -ಮೇಲ್ ಮನವಿ, ಸಮಾಜಕ್ಕಾಗಿ ಬದುಕವೆನೆಂಬ ಜಾನ್ ಹಠ, ಜಾನ್ ನನ್ನು ಇಲ್ಲಿ ತನಕ ಕರೆದುಕೊಂಡು ಬಂದಿದೆ. 'ರೂಮ್ ಟು ರೀಡ್' 442 ಗ್ರಾಮಗಳಲ್ಲಿ ಶಾಲೆಗಳನ್ನು ಹೊಸದಾಗಿ ಕಟ್ಟಿದೆ. 7000 ಹೆಣ್ಣು ಮಕ್ಕಳಿಗೆ ಸ್ಕಾಲರ್ಶಿಫ್ ನೀಡಿದೆ. 1000ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದೆ ಮತ್ತು ಸುಮಾರು 20ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಜೀವನವನ್ನು ಒಂದಿಲ್ಲೊಂದು ರೀತಿಯಲ್ಲಿ ಹಸನಾಗಿಸಿದೆ. ಭಾರತದಲ್ಲಿ 'ರೂಮ್ ಟು ರೀಡ್' ಸಂಸ್ಥೆಯು 2003ರಲ್ಲಿ ಪ್ರಾರಂಭವಾಯಿತು. ಇಲ್ಲಿ Ms. Sunisha Ahus ರವರು ಸಂಸ್ಥೆಯ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 52 ಜನ ಕಾರ್ಮಿಕರು ದೆಹಲಿ, ರಾಜಸ್ಥಾನ ಮತ್ತು ಮಧ್ಯ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಂಧ್ರಪ್ರದೇಶ, ಛತ್ತೀಸ್ಗಡ್, ಹಿಮಾಚಲಪ್ರದೇಶ, ಮಧ್ಯ ಪ್ರದೇಶ, ಜಾರ್ಖಂಡ್, ದೆಹಲಿ, ರಾಜಸ್ಥಾನ, ಉತ್ತರಾಂಚಲದಲ್ಲೂ 'ರೂಮ್ ಟು ರೀಡ್' ಸಂಸ್ಥೆಯು ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದೆ. ಕೊಳಗೇರಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣದ ವ್ಯವಸ್ಥೆ ಅಭಿವೃದ್ಧಿಪಡಿಸುವುದು ಇದರ ಪ್ರಮುಖ ಕಾರ್ಯಕ್ರಮ.
            ನೂರಕ್ಕೂ ಹೆಚ್ಚು ಜಾಗತಿಕ ಪ್ರಶಸ್ತಿಗಳಿಗೆ ಪಾತ್ರನಾಗಿರುವ ಜಾನ್ ವುಡ್ ಜೀವನಶೈಲಿ ಮತ್ತು ತನ್ನ ಒಳ್ಳೆಯ ಕೆಲಸ, ಕೈ ತುಂಬಾ ಸಂಬಳ, ಐಷರಾಮಿ ಬದುಕು, ಎಲ್ಲವನ್ನು ತ್ಯಜಿಸಿ ಹಿಂದೆ ಮುಂದೆ ನೋಡದೆ ಸಮಾಜ ಸೇವೆಗೆ ಇಳಿದ ಇವನ ವಿಶಿಷ್ಟ ಚಿಂತನೆ ಸಮಾಜಕಾರ್ಯಕರ್ತರಿಗೊಂದು ಮಾದರಿ.


No comments:

Post a Comment