Thursday, September 26, 2013

ಈ ವರ್ತನೆಗಳು ನಿಮ್ಮಲ್ಲಿ ಎಷ್ಟಿವೆ?



ಡಾ. ಮೀನಗುಂಡಿ ಸುಬ್ರಮಣ್ಯ
ಬೆಲೆ:  -60
ಪ್ರಕಾಶಕರು:
ನವಕರ್ನಾಟಕ ಪಬ್ಲಿಕೇಷನ್ ಪೈ.ಲಿ. (2005)

            ಇಲ್ಲಿ ಎರಡು ಬಗೆಯ ಸಮಸ್ಯಾವರ್ತನೆಯ ಚಿತ್ರಣಗಳಿವೆ-ವೈಯಕ್ತಿಕ ಅನಿಸಿಕೆಗಳಿಂದಾಗಿ ಜೀವನ ಸುಖದ ಮಟ್ಟ ಕೆಳಗಿಳಿಸಿಕೊಂಡು "ನನಗೆ ಮಾನಸಿಕ ಸಮಸ್ಯೆ" ಎಂದು ತಾನೇ ಚೀಟಿ ಅಂಟಿಸಿಕೊಂಡು ಕುಳಿತುಕೊಳ್ಳುವುದು (ಇಂಟ್ರಾಪರ್ಸನಲ್ ಡಿಸ್ಟರ್ಬೆನ್ಸ್) ಮತ್ತು ಸಂಪರ್ಕ ಶೈಲಿಯ ನ್ಯೂನತೆಯಿಂದಾಗಿ ಪರಸ್ಪರ ಸಂಬಂಧದಲ್ಲಿ ಕಹಿ ಸೃಷ್ಟಿಸಿಕೊಂಡು " ಇನ್ನೊಬ್ಬರಿಂದಾಗೆ ತನಗೆ ಸುಖವಿಲ್ಲ" - ಎಂದು ಪ್ರತಿಪಾದಿಸುತ್ತ ಕುಳಿತುಕೊಳ್ಳುವುದು (ಇಂಟರ್ಪರ್ಸನಲ್ ಡಿಸ್ಟರ್ಬೆನ್ಸ್).
            ಇಲ್ಲಿ ಬರುವ ವ್ಯಕ್ತಿಗಳ ಸಮಸ್ಯಾವರ್ತನೆಗಳನ್ನು ನೀವು ನಿಮ್ಮ ಸಹವರ್ತಿಗಳಲ್ಲಿ ಗುರುತಿಸಬಹುದು. ಅದು ಅರೆ ಪರಿಣಾಮಕಾರಿ ಓದು. ಇಲ್ಲಿ ಬರುವ ವ್ಯಕ್ತಿಗಳಲ್ಲಿ ನಿಮ್ಮನ್ನು ನೀವೆ ಗುರುತಿಸಿಕೊಂಡಿರಾದರೆ ಅದು ಪರಿಣಾಮಕಾರಿ ಓದು
            ಕೃತಿಯ ಲೇಖಕರಾದ ಡಾ. ಮೀನಗುಂಡಿ ಸುಬ್ರಮಣ್ಯ ತಮ್ಮ ಸರಳ ಶೈಲಿಯ ಮೂಲಕ, ಅವರ ಸಂಪರ್ಕಕ್ಕೆ ಬಂದ ವ್ಯಕ್ತಿಗಳ ಚಿತ್ರಗಳನ್ನು ನಮ್ಮ ಕಣ್ಣ ಮುಂದೆ ತಂದು ನಿಲ್ಲಿಸುತ್ತಾರೆ. ಇವರು "ಮಾನಸಿಕ ಸಮಸ್ಯೆಗಳಿಗೆ 'ಮನಸ್ಸು ಇಲ್ಲದ ಮಾರ್ಗ' ಎಂಬ ಕೃತಿಯಿಂದ ಓದುಗರಿಗೆ ಸುಪರಿಚಿತರು. ಇದು ಈಗಾಗಲೇ ಐದನೇ ಆವೃತ್ತಿ ಕಂಡಿರುವ ಯಶಸ್ವಿ ಕೃತಿ. ವರ್ತನೆಗಳ ಬಗ್ಗೆ ಅವರು ಬರೆದಿರುವ "ಮಡದಿ ಮತ್ತೊಬ್ಬ ಚೆಲುವಗೆ" ಸಹ ಜನಪ್ರಿಯವಾಗಿದೆ.



No comments:

Post a Comment