Thursday, September 26, 2013

ಪರಿಹಾರ ಮಾರ್ಗ



ನನ್ನ ನೆಚ್ಚಿನ ಸಲಹಾಗಾರರಿಗೆ ನನ್ನ ನಮಸ್ಕಾರಗಳು, ನಾನು ಎಂ.ಎಸ್.ಡಬ್ಲ್ಯೂ 3ನೇ ಸೆಮಿಸ್ಟರ್ ನಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ನಾನು ಎಂ.ಪಿ.ಎಸ್.ಡಬ್ಲ್ಯೂ.ವನ್ನು ನನ್ನ ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡಿದ್ದೇನೆ. ಒಬ್ಬ ಒಳ್ಳೆ Executive Officer  ಸ್ಥಾನಕ್ಕೆ ಹೋಗಬೇಕೆಂಬುದು ನನ್ನ ಆಸೆ. ಆದರೆ ಈಗ ನನ್ನ ಸಹಪಾಠಿಗಳು ಮತ್ತು ನನಗೆ ತಿಳಿದವರೆಲ್ಲರು ನೀನು ಹೆಚ್. ಆರ್. ತಗೋಬೇಕಿತ್ತು ಆಗ ನೀನು ಸ್ಥಾನಕ್ಕೆ ಹೋಗಬಹುದಿತ್ತು, ಈಗ ನೀನು ಯಾವುದಾದರು ಆಸ್ಪತ್ರೆಯಲ್ಲೋ, ಎನ್.ಜಿ..ನಲ್ಲೋ ಸಾಧಾರಣವಾದ ಸ್ಥಾನದಲ್ಲಿ ಉಳಿದುಕೊಳ್ಳಬೇಕಾಗುತ್ತದೆ ಎನ್ನುತ್ತಿದ್ದಾರೆ. ಇದರಿಂದ ನಾನು ಐಚ್ಛಿಕ ವಿಷಯದ ಆಯ್ಕೆಯಲ್ಲಿ ತಪ್ಪು ಮಾಡಿದೆನೇನೋ ಎಂಬ ಸಂಶಯ ಶುರುವಾಗಿದೆ. ದಯವಿಟ್ಟು ನನ್ನ ಸಂಶಯದಿಂದ ಹೊರಬರಲು ಸಹಾಯ ಮಾಡಿ ಮತ್ತು ನನ್ನ ಮುಂದಿನ ದಾರಿಯ ಬಗ್ಗೆ ಕೆಲವು ಸಲಹೆಗಳನ್ನು ನೀಡಿ ಎಂದು ಕೇಳಿಕೊಳ್ಳುತ್ತಿದ್ದೇನೆ.
ಉತ್ತರ:
            ಉತ್ತಮವಾದ ಪ್ರಶ್ನೆಯನ್ನು ಕೇಳಿದ್ದಕ್ಕೆ ಧನ್ಯವಾದಗಳು, ನೀವು ಕೆಳಕಂಡಂತೆ ಮಾಡಬಹುದು. ನಿಮ್ಮ ಸಂಪೂರ್ಣ ಸಮಯವನ್ನು 3ನೇ ಸೆಮಿಸ್ಟರ್ ನಲ್ಲಿ ಚೆನ್ನಾಗಿ ವ್ಯಾಸಂಗ ಮಾಡಿ ಹೆಚ್ಚಿನ ಜ್ಞಾನರ್ಜಾನೆಗಾಗಿ ಉಪಯೋಗಿಸಿ. ಇದರಿಂದ ಹೆಚ್ಚಿನ ಅಂಕ ಪಡೆಯುವುದರ ಜೊತೆಗೆ ನಿಮ್ಮ ಐಚ್ಛಿಕ ವಿಷಯದಲ್ಲಿ ಪರಿಣತಿ ಸಾಧಿಸುವುದಕ್ಕೆ ಅನಕೂಲವಾಗುತ್ತದೆ. ಮುಂದೆ ಕೆಲಸ ಸಿಗುವುದೂ, ಇಲ್ಲವೋ ಎಂಬ ಜಂಜಾಟ ಸದ್ಯಕ್ಕೆ ನಿಮಗೆ ಬೇಡ. ಎಂ.ಪಿ.ಎಸ್.ಡಬ್ಲ್ಯೂ ಐಚ್ಛಿಕ ವಿಷಯವಾಗಿ ತೆಗೆದುಕೊಂಡವರಿಗೆ ಉತ್ತಮ ಉದ್ಯೋಗ ಸಿಗುವುದಿಲ್ಲ ಎಂಬುದು ತಪ್ಪು ಕಲ್ಪನೆ. ಹಾಗೆಯೇ ಹೆಚ್. ಆರ್. ಕಲಿತವರಿಗೆ ಉನ್ನತ ಹುದ್ದೆ ದೊರೆಯುತ್ತದೆ ಎಂಬುದು ಸಹ ತಪ್ಪು ಕಲ್ಪನೆಯೇ. ಉದ್ಯೋಗ ಸಿಗುವುದು ಹಾಗೂ ಅದರಲ್ಲಿ ಉನ್ನತಿ ಪಡೆಯುವುದು ಅವರವರ ಕಾರ್ಯಕೌಶಲ್ಯದ ಮೇಲೆ ಅವಲಂಬಿಸಿರುತ್ತದೆ. ಎಂ.ಪಿ.ಎಸ್.ಡಬ್ಲ್ಯೂ. ಕಲಿತವರು ಆಸ್ಪತ್ರೆಗಳಲ್ಲಿ, ಕೆಲಸಮಾಡುವುದರ ಜೊತೆಗೆ ತಮ್ಮದೇ ಆದ ಆಪ್ತಸಲಹಾಕೇಂದ್ರಗಳನ್ನು ಪ್ರಾರಂಭಿಸಬಹುದು ಹಾಗೂ ಇಂತಹ ಕೇಂದ್ರಗಳಲ್ಲಿ ಸಂದರ್ಶಕರಾಗಿ ಕೆಲಸ ಮಾಡಬಹುದು. ಅನುಭವದ ಮೇಲೆ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಕ್ಕೇರಬಹುದು. ಎಂ.ಪಿ.ಎಸ್.ಡಬ್ಲ್ಯೂ. ಮಾಡಿದವರಿಗೆ, ಇತ್ತೀಚಿನ ದಿನಗಳಲ್ಲಿ ಕೈಗಾರಿಕೆಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಉತ್ತಮ ಅವಕಾಶಗಳಿವೆ. ಜೊತೆಗೆ ಅವರಿಗೆ ಹೆಚ್ಚಿನ ಬೇಡಿಕೆಯು ಇದೆ. ಎಲ್ಲದಕ್ಕಿಂತ ಹೆಚ್ಚಾಗಿ, ಕ್ಷೇತ್ರದಲ್ಲಿ ನಿರುದ್ಯೋಗ ಸಮಸ್ಯೆ ಇರುವುದಿಲ್ಲ. ಇಲ್ಲಿ ಹೆಚ್ಚಿನ ವ್ಯಾಸಂಗಕ್ಕೆ ಅವಕಾಶವಿದೆ (ಉದಾ:- M.Phil, Ph.D) ಆದುದರಿಂದ ನಿಮಗೆ ಯಾವುದೇ ಗೊಂದಲಬೇಡ

Dr. T.S. Chandrashekara
Prof. Kristu Jayanthi College,
Kottanur Post, K. Narayanapura, Bangalore - 77

ಪ್ರಶ್ನೆ 2.
            ನಿರಾತಂಕ ಸಲಹಾಗಾರರಿಗೆ ನನ್ನ ನಮಸ್ಕಾರಗಳು ನಾನು ಸಮಾಜಕಾರ್ಯದ ಮೊದಲನೆ ಸೆಮಿಸ್ಟರ್ ನಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ನನಗೆ ಎಂ.ಎಸ್.ಡಬ್ಲ್ಯೂ. ಮುಗಿದ ನಂತರದ ಕೋರ್ಸ್ ಗಳ ಬಗ್ಗೆ ಮಾಹಿತಿ ನೀಡುವಿರ. ಅವುಗಳು ನನ್ನ ವೃತ್ತಿ ಜೀವನಕ್ಕೆ ಸಹಕಾರಿಗಳಾಗುವಂತಹ ಕೋರ್ಸ್ ಗಳಾಗಿದ್ದರೆ ಒಳಿತು.
ಉತ್ತರ:
ಪ್ರಿಯ ವಿದ್ಯಾರ್ಥಿ ಮಿತ್ರರೆ. ಸಂಚಿಕೆಯಲ್ಲಿ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದೆ ಮಾಹಿತಿ ನೀಡಲಾಗಿದೆ. ಅದರ ಸದುಪಯೋಗ ಪಡೆದುಕೊಳ್ಳಿ.
ಅರುಣ್.

ಪ್ರಶ್ನೆ 3.
            ನಾನು ಸಮಾಜಕಾರ್ಯ ವಿದ್ಯಾರ್ಥಿ. ಇದುವರೆವಿಗೂ ಕನ್ನಡ ಮಾಧ್ಯಮದಲ್ಲಿ ಓದಿದೆ. ಆದರೆ ಈಗ ಎಂ.ಎಸ್.ಡಬ್ಲ್ಯೂ.ನಲ್ಲಿ ಇಂಗ್ಲಿಷ್ ಅವಶ್ಯಕತೆ ಹೆಚ್ಚಾಗಿದೆ. ಪದವಿಯಲ್ಲಿ 80% ಅಂಕ ಗಳಿಸಿ ಅತ್ಯುತಮ ವಿದ್ಯಾರ್ಥಿ ಎನಿಸಿಕೊಂಡಿದ್ದರೂ, ಇಲ್ಲಿ ಇಂಗ್ಲೀಷ್ ಬಾರದಿದ್ದರಿಂದ ನಾನು ಸಮಾಜಕಾರ್ಯವನ್ನು ಪಾಸು ಮಾಡುವುದು ಕಷ್ಠ ಎಂಬ ಭಯ ನನ್ನನ್ನು ಕಾಡುತ್ತಿದೆ. ಈಗಾಗಲೇ ಇಂಗ್ಲಿಷ್ ಕಲಿಯಲು ನಾನು ಕೋಚಿಂಗ್ ಕ್ಲಾಸ್ ಸೇರಿದ್ದೇನೆ. ಆದರೆ ನನಗೆ ಇಂಗ್ಲೀಷನ್ನು ಕಲಿಯುವೆನೆಂಬ ಭರವಸೆ ಬರುತ್ತಿಲ್ಲ. ನಾನೇನು ಮಾಡಲಿ?
ಉತ್ತರ
            ಪ್ರಿಯ ವಿದ್ಯಾರ್ಥಿ. ನಿನ್ನದೇ ರೀತಿಯ ಸಮಸ್ಯೆಯನ್ನು ಎಲ್ಲಾ ಗ್ರಾಮೀಣ ವಿದ್ಯಾರ್ಥಿಗಳು ಎದುರಿಸುವುದು ಸಾಮಾನ್ಯ ಸಂಗತಿ. ಗ್ರಾಮೀಣ ವಿದ್ಯಾರ್ಥಿಗಳೆಲ್ಲರಿಗೂ ಇಂಗ್ಲೀಷ್ ಕಬ್ಬಿಣದ ಕಡಲೆ ಎಂಬುದು ಸತ್ಯ. ನಿನ್ನದೇ ರೀತಿಯ ಸಮಸ್ಯೆಯಿಂದ ನಾನೂ ಸೇರಿದಂತೆ ನನ್ನ ಸಹಪಾಠಿಗಳಲ್ಲಿ ಹಲವರು ಎಂ.. ಬೋರಟ್ಟಿ ಯವರ ಬಳಿ ಇಂಗ್ಲೀಷ್ ಪಾಠ ಕಲಿತ ಬಳಿಕ ಇಂಗ್ಲೀಷ್ ಭೂತವೆಂಬ ಭಯದಿಂದ  ಹೊರಬಂದಿದ್ದೇವೆ. ಹಾಗೆಯೇ ನನ್ನ ಸಹಪಾಠಿಗಳು ಇಂದು ಪತಿಷ್ಠಿತ ಕಂಪೆನಿಗಳಲ್ಲಿ ನೌಕರಿ ಪಡೆದು 50-75 ಸಾವಿರ ಸಂಬಳ ಪಡೆಯುತ್ತಿದ್ದಾರೆ. ಶ್ರೀಯುತ ಬೋರಟ್ಟಿಯವರ ಇಂಗ್ಲೀಷ್ ಕಲಿಸುವ ವಿಧಾನ ವಿಶಿಷ್ಟ. ಕನ್ನಡದ ಮೂಲಕವೇ ಇಂಗ್ಲೀಷ್ ಕಲಿಸುತ್ತಾರೆ. ಇವರು ..ಎಸ್., ಕೆ..ಎಸ್. ಪ್ರೊಬೇಶನರಿಗಳಿಗೆ ಹಾಗೂ ವಕೀಲಿ ವೃತ್ತಿಯಲ್ಲಿರುವವರಿಗೂ ಇಂಗ್ಲೀಷ್ ಕಲಿಸುತ್ತಿದ್ದಾರೆ. ಇಲ್ಲಿ ಪಾಠ ಕೇಳಿದರೆ ಖಂಡಿತ ನಿನ್ನ ಭಯವೂ ಸಹ ದೂರವಾಗುವುದು, ಎಂಬ ನಂಬಿಕೆ ನನಗಿದೆ. ಅವರ ವಿಳಾಸವನ್ನು ನೀವು ನಮ್ಮ ಕಚೇರಿಯಿಂದ ಪಡೆಯಬಹುದು
-ರಮೇಶ್
ನಿರಾತಂಕ 


No comments:

Post a Comment