Thursday, September 26, 2013

'ನಿರಾತಂಕ'


ಸಮಾಜಕಾರ್ಯ ವಿದ್ಯಾರ್ಥಿಗಳು 2004ರಲ್ಲಿ ಕಟ್ಟಿಕೊಂಡ ಸಮಾನ ಮನಸ್ಕರ ಬಳಗ, ಎಂ.ಎಸ್.ಡಬ್ಲ್ಯೂ ಅಧ್ಯಯನ ಮಾಡುವಾಗ  ಕ್ಷೇತ್ರಕಾರ್ಯದ ಅನುಭವಗಳನ್ನು ಹಂಚಿಕೊಳ್ಳಲು ರಚಿಸಿದ ತಂಡ. ನಂತರದ ದಿನಗಳಲ್ಲಿ ಔಪಚಾರಿಕವಾಗಿ 2007ರಲ್ಲಿ ಟ್ರಸ್ಟ್ ಕಾಯಿದೆಯಡಿ ನೋಂದಣಿ ಮಾಡಿಸಿದ ವೃತ್ತಿಪರ ಬಳಗ. ಡಾ. ಎಚ್.ಎಂ. ಮರುಳಸಿದ್ಧಯ್ಯನವರ ಮಾರ್ಗದರ್ಶನದಲ್ಲಿ ಹಲವಾರು ಕಾರ್ಯಕ್ರಮಗಳನ್ನು ವಿದ್ಯಾರ್ಥಿ ದೆಶೆಯಿಂದಲೇ ಆಯೋಜಿಸಿಕೊಳ್ಳುತ್ತಾ ಇದುವರೆಗೂ ಮುನ್ನಡೆಯುತ್ತಾ ಬಂದಿದ್ದೇವೆ.
'ನಿರಾತಂಕ' ಬಳಗದ ವಿಶೇಷತೆಯೆಂದರೆ ಬಳಗದ ಬಹುಪಾಲು ಸದಸ್ಯರು ಸಮಾಜಕಾರ್ಯ ಸ್ನಾತಕೋತ್ತರ ಪದವೀಧರರಾಗಿದ್ದು ,ಹಲವು ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದವರಾಗಿದ್ದಾರೆ.
'ನಿರಾತಂಕ' ಸ್ಪೂರ್ತಿ

'ಮಣಿಯದಿಹ ಮನವೊಂದು
ಸಾಧಿಸುವ ಹಟವೊಂದು
ನಿಜದ  ನೇರಕೆ ನಡೆವ ನಿಶ್ಚಲತೆಯೊಂದು
ಅನ್ಯಾಯಕೆಂದೆಂದು ಬಾಗದೇಚ್ಚರವೊಂದು
ಮರುಕಕ್ಕೆ ಪ್ರೇಮಕ್ಕೆ ಚಿರ ತೆರೆದ ಎದೆಯೊಂದು'.
                                                 - ವಿ. ಸೀತಾರಾಮಯ್ಯ

'ನಿರಾತಂಕ' ಕಣಸು

'ಆತಂಕವನು ದೂರಸರಿಸಿ
            ವಿಶ್ವಮಾನವ ಸಂದೇಶವ ಪಸರಿಸಿ
            ನೆಮ್ಮದಿಯ ಬದುಕು ನಮ್ಮದಾಗಲಿ ಎನುವ
            ಸಮಾನ ಮನಸ್ಕ ಸಹೃದಯಿಗಳ ತಂಡ ನಿರಾತಂಕ'.

'ನಿರಾತಂಕ'ವು ತನ್ನದೇ ಆದ ಬ್ಯಾಂಕ್ ಖಾತೆಯನ್ನು ಹೊಂದಿದೆ. ಬ್ಯಾಂಕ್ ಖಾತೆ ನಂ. 04862010027661 ಸಿಂಡಿಕೇಟ್ ಬ್ಯಾಂಕ್ಡಾ.ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯ ಶಾಖೆ. ಬೆಂಗಳೂರು-560056. PAN No. AABTN2815K, 12ಎಗೆ ಅರ್ಜಿ ಸಲ್ಲಿಸಲಾಗಿದೆ.  ನಿರಾತಂಕವು ಟ್ರಸ್ಟ್ ಕಾಯಿದೆಯಡಿಯಲ್ಲಿ ನೋಂದಣಿಯಾಗಿದ್ದು, ನೋಂದಣಿ ಸಂಖ್ಯೆ: NGB-4-00018-2007-0

ನಿರಾತಂಕ ವೃದ್ಧಾಶ್ರಮ

            ವೃದ್ಧರ ಸಮಸ್ಯೆಗಳಿಗೆ ವೃದ್ಧಾಶ್ರಮಗಳು ಅಂತಿಮ ಪರಿಹಾರವೇ? ಎಂಬ ಜಿಜ್ಞಾಸೆ ನಮ್ಮ ತಂಡಕ್ಕೆ ಎದುರಾದಾಗ ನಮ್ಮ ತಂಡ 'ನಿರಾತಂಕ' ವೃದ್ಧಾಶ್ರಮವನ್ನು ಒಂದು ಸುಂದರವಾದ ತೋಟದಲ್ಲಿ ಸ್ಥಾಪಿಸಿದೆವು. ನಮ್ಮ ವೃದ್ಧಾಶ್ರಮ ಕೇವಲ ಅನಿವಾರ್ಯವಾಗಿ ವೃದ್ಧಾಶ್ರಮದ ಅವಶ್ಯಕತೆ ಇರುವವರಿಗೆ ಹಾಗೂ ಬಡವರಿಗೆ ಮಾತ್ರ ಅವಕಾಶ ಕಲ್ಪಿಸಿಕೊಡಲು ಮುಂದಾಗಿದೆ.
            ನಮ್ಮ ವೃದ್ಧಾಶ್ರಮದಲ್ಲಿ ವೃದ್ಧರೂ ಸಹ ಹಲವಾರು ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇವೆ. ಉದಾ:- ನಮ್ಮ ಪ್ರಿಂಟಿಂಗ್ ವಿಭಾಗದಲ್ಲಿ  ವೃದ್ಧರು ತಮ್ಮ ಶಕ್ತ್ಯಾನುಸಾರ ಕೆಲವು ಕೆಲಸಗಳನ್ನು ಮಾಡಲು ಅನುವು ಮಾಡಿಕೊಟ್ಟಿದ್ದೇವೆ.
            ಹಾಗೆಯೇ ತಮ್ಮ ತಂದೆ-ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸಲು ಬಂದ ಹಲವರಿಗೆ ಆಪ್ತಸಮಾಲೋಚನೆಯ ಮೂಲಕ ಮನವೊಲಿಸಿ ವೃದ್ಧರ ಉಳಿದ ಜೀವಮಾನವನ್ನು ತಮ್ಮ ಕಟುಂಬಗಳಲ್ಲೇ ಗೌರವಯುತವಾಗಿ ಕಳೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ
            ಪ್ರಸ್ತುತ ನಮ್ಮ ವೃದ್ಧಾಶ್ರಮವು  ಸುತ್ತಮುತ್ತಲಿನ ವೃದ್ಧರಿಗೆ ತಮ್ಮ ಸಮಾನ ವಯಸ್ಕರೊಂದಿಗೆ ತಮ್ಮ ಅನುಭವ, ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಒಂದು ವೇದಿಕೆಯಾಗಿದೆ. ಬೆಳಗ್ಗೆ ಒಂದೆಡೆ ಸೇರಿ  ತಮಗಿಷ್ಟದ ವಿಷಯದ ಬಗ್ಗೆ ಚರ್ಚಿಸುತ್ತಾ ಪುಸ್ತಕಗಳನ್ನು, ಪತ್ರಿಕೆಗಳನ್ನು ಓದುತ್ತಾ, ನಮ್ಮ 'ನಿರುತ ಮುದ್ರಣಾಲಯ'ದಲ್ಲಿ ತಮ್ಮ ಕೈಲಾದ ಕೆಲಸಗಳನ್ನು ಮಾಡುತ್ತಾ ಕಾಲಕಳೆಯುವ ನಮ್ಮ ಹಿರಿಯ ನಾಗರೀಕರು ಸಂಜೆಯಾದಂತೆ ತಮ್ಮ ತಮ್ಮ ಮನೆಗಳಿಗೆ ಹಿಂತಿರುಗುತ್ತಾರೆ.  

ನಿರಾತಂಕದ ಗುರಿ ಮತ್ತು ಉದ್ದೇಶಗಳು

·         ವಯೋವೃದ್ಧರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುದುವುದರ ಮೂಲಕ ಅವರ ಜೀವನ ಗುಣಮಟ್ಟವನ್ನು                ಅಭಿವೃದ್ಧಿಪಡಿಸಿ ಮೂಲಕ  ಅವರಲ್ಲಿ ಜೀವನೋತ್ಸಾಹವನ್ನು ತುಂಬಿ ಸಾರ್ಥಕ  ಜೀವನದೆಡೆಗೆ ಮುನ್ನಡಿಸುವುದು.
·         ವಯೋವೃದ್ಧರಿಗೆ ಸರ್ಕಾರಿ ಮತ್ತು ಸ್ವಯಂ ಸೇವಾ ಸಂಸ್ಥೆಗಳಿಂದ ಸಿಗುವಂತಹ ಸೇವೆಗಳನ್ನು ದೊರಕಿಸಿಕೊಡುವುದು
·         ದೈಹಿಕ ಹಾಗೂ ಯೋಗ ಶಿಬಿರಗಳ ಮೂಲಕ ವೃದ್ದರ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡುವುದು.
·         ವೃದ್ಧರಿಗೆ ಪುನರ್ವಸತಿ ಸೌಲಭ್ಯವನ್ನು ಕಲ್ಪಿಸುವುದರ ಜೊತೆಗೆ ಅಗತ್ಯವಿರುವ ವಿಶೇಷ ಪಾಲನೆ ಮತ್ತು ಸಹಾಯ,             ಸಹಕಾರವನ್ನು ಒದಗಿಸುವುದು.
·         ವಯೋವೃದ್ಧರಿಗೆ ಮನರಂಜನೆಯುಕ್ತವಾದ ದಿನಪಾಲನಾ ಸೇವೆಗಳನ್ನು ಒದಗಿಸುವುದು.


ವಯೋವೃದ್ಧರಿಗಾಗಿ ವಿಶೇಷ ಕಾರ್ಯಕ್ರಮಗಳು ಚಟುವಟಕೆಗಳು (ಕ್ರಿಯೆಗಳು)
1.      ವೃತ್ತಿಪರ ಆಪ್ತಸಮಾಲೋಚನೆ
2.      ಧ್ಯಾನ ಹಾಗೂ ವಿಶೇಷ ಯೋಗ ಶಿಬಿರಗಳು
3.      ಮನರಂಜನಾತ್ಮಕ  ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು.
1.      4.ಮನೋ ಚಿಕಿತ್ಸೆ.  
4.      ದಿನ ಪಾಲನಾ ಸೇವೆಗಳು
5.      ವರಮಾನಾಭಿವೃದ್ಧಿ  ಆಧಾರಿತ  ಚಟುವಟಿಕೆಗಳು(ಚಿತ್ರಕಲೆ, ನೇಯ್ಗೆ, ತೋಟಗಾರಿಕೆ, ಕರಕುಶಲ ತಯಾರಿಕೆ ಇತ್ಯಾದಿ).

ಫಲಾನುಭವಿಗಳು
1.      ವಯೋವೃದ್ಧರು 
2.      ದಿನಪಾಲನೆಗಾಗಿ ಮಾತ್ರ ಅವಲಂಬಿಸಿರುವ ವಯೋವೃದ್ಧರು
3.      ಕುಟುಂಬದೊಂದಿಗೆ ವಾಸವಿರುವ, ಹೊಂದಾಣಿಕೆ ಸಮಸ್ಯೆ ಅನುಭವಿಸುತ್ತಿರುವ ವಯೋವೃದ್ಧರು
4.      ಆಪ್ತ ಸಮಾಲೋಚನೆ ಅಗತ್ಯವಿರುವ ವಯೋವೃದ್ಧರು.

ನಿರುತ ಮುದ್ರಣಾಲಯ

            ಕೇಂದ್ರ ಸರ್ಕಾರವು ನೀಡುವ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನಾ ಯೋಜನೆಯಡಿಯಲ್ಲಿ ನಿರಾತಂಕವು 'ನಿರುತ ಮುದ್ರಣಾಲಯ'ವನ್ನು ಸ್ಥಾಪಸಿದೆ. ಇದರ ಮುಖ್ಯ ಉದ್ದೇಶ ವೃದ್ಧರಿಗೆ ವೃದ್ಧಾಪ್ಯದಲ್ಲಿ ಏಕತಾನತೆಯನ್ನು ದೂರಸರಿಸಲು ದಿನದ ಬಿಡುವಿನ ವೇಳೆಯನ್ನು ತಮ್ಮ ಇಚ್ಛೆಯ ಮೇರೆಗೆ ಮುದ್ರಣದ ಕಾರ್ಯಗಳಲ್ಲಿ ತೊಡಗಿಕೊಳ್ಳುವಂತೆ ಮಾಡುವುದು. ಹಾಗೂ ಸ್ವಯಂ ಸೇವಾ ಸಂಸ್ಥೆಗಳು, ಕೈಗಾರಿಕೆಗಳು ಇತರೆ ಉದ್ಯಮಗಳಿಗೆ ಅಗತ್ಯವಿರುವಂತಹ ಅಗತ್ಯ ಮುದ್ರಣ ಸಾಮಾಗ್ರಿಗಳನ್ನು ಮುದ್ರಿಸಿ ಅದರಿಂದ ಬರುವಂತಹ ಆದಾಯವನ್ನು ವೃದ್ಧಾಶ್ರಮದ ಅಭಿವೃದ್ಧಿಗೆ ಬಳಸಿಕೊಳ್ಳುವುದಾಗಿದೆ. 'ನಿರುತ ಮುದ್ರಣಾಲಯ' ಸಿಬ್ಬಂದಿಗಳು ಕರ್ನಾಟಕ ರಾಜ್ಯ ಮುದ್ರಕರ ಸಂಘದಿಂದ ತರಬೇತಿ ಹೊಂದಿದ್ದಾರೆ

ಮರುಬಳಕೆ
ನಿರಾತಂಕ ತಂಡವು ಪ್ರತಿವರ್ಷ ಶಾಲಾ-ಕಾಲೇಜು ಹಾಗೂ ಕಛೇರಿಗಳಲ್ಲಿ ಬರೆಯದೆ ಹಾಗೆ ಖಾಲಿ ಉಳಿದ ಹಾಳೆಗಳ ಸಂಗ್ರಹ ಮಾಡಿ, ನಮ್ಮ ಮುದ್ರಣಾಲಯದಲ್ಲಿ ಪುಸ್ತಕ ರೂಪಕ್ಕೆ ತಂದು ಅವುಗಳನ್ನು ಉಚಿತವಾಗಿ ಬಡ ವಿದ್ಯಾರ್ಥಿಗಳಿಗೆ ಹಂಚಲಾಗುತ್ತಿದೆ. ಕಳೆದ ವರ್ಷ 'ಕನ್ಯಾಕುಮಾರಿ ಶಾಲೆಗೆ ಮರುಬಳಕೆಯಿಂದ ತಯಾರಾದ ಪುಸ್ತಕಗಳನ್ನು ಹಂಚಲಾಯಿತು.
·         1 ಟನ್ ಕಾಗದ ತಯಾರಿಸಲು - 17ಬೃಹತ್ ಮರಗಳು, 26.500 ಲೀಟರ್ ನೀರು ಬೇಕಾಗುತ್ತದೆ.
·         1 ಟನ್ ಕಾಗದದಿಂದ - 21 ಲಕ್ಷ 20 ಸಾವಿರ ನೋಟ್ ಪುಸ್ತಕದ ಹಾಳೆ ತಯಾರಿಸಬಹುದು.

ಸಾರ್ವಜನಿಕರು ಹಾಗೂ ವೃತ್ತಿಪರರು ಕೆಳಕಂಡ ರೀತಿಯಲ್ಲಿ ಸಹಕರಿಸಬಹುದು:
            ಬೆಂಗಳೂರು ಶಾಲೆಗಳಲ್ಲಿ ಪ್ರತಿ ವರ್ಷ 100ಕೋಟಿಗೂ ಹೆಚ್ಚು ಹಾಳೆಗಳು ಪುನರ್ಬಳಕೆಗೆ       ಯೋಗ್ಯವಾಗಿರುತ್ತವೆ
·         ಶಾಲಾ- ಕಾಲೇಜು ವಿದ್ಯಾರ್ಥಿಗಳು ತಮ್ಮ ಬಳಿಯಿರುವ ಹಳೆಯ ನೋಟ್ ಪುಸ್ತಕಗಳನ್ನು ನೀಡಬಹುದು.
·         ಬ್ಯಾಂಕು ಉದ್ಯೋಗಿಗಳು, ಸರ್ಕಾರಿ ಮಹಾನಗರ ಪಾಲಿಕೆ ಕಛೇರಿ ಹಾಗೂ ಬೇರಾವುದೇ ಕಛೇರಿಗಳಲ್ಲಿ ಕೆಲಸ ಮಾಡುವವರು,    ತಮ್ಮ ಮನೆಯಲ್ಲಿ ಅಥವಾ ಪರಿಚಯದವರ ಮನೆಯಲ್ಲಿರಬಹುದಾದ ಹಳೆಯ  ನೋಟ್  ಪುಸ್ತಕಗಳನ್ನು ನಮ್ಮ ಕಛೇರಿಗೆ ತಂದು ನೀಡಬಹುದು, ಅಪಾರ್ಟ್ ಮೆಂಟ್ ಗಳಲ್ಲಿ ವಾಸಿಸುವವರು ತಮ್ಮ ನೆರೆಹೊರೆಯವರಿಂದ ಹಳೆಯ ನೋಟ್ ಪುಸ್ತಕಗಳನ್ನು ಸಂಗ್ರಹಿಸಿ ನಮಗೆ ಮಾಹಿತಿ ನೀಡಬಹುದು. ಬೈಂಡಿಂಗ್ ವೆಚ್ಚದಲ್ಲಿ ಸ್ವಲ್ಪ ಭಾಗವನ್ನು ಭರಿಸಬಹುದು. (ಹಳೆಯ ನೋಟ್ ಪುಸ್ತಕಗಳಿಂದ ಖಾಲಿ ಹಾಳೆಗಳನ್ನು ನಾಜೂಕಾಗಿ ಬೇರ್ಪಡಿಸಿ ಒಂದು ನೋಟ್ ಪುಸ್ತಕ ಬೈಂಡ್ ಮಾಡಲು 3-00 ರೂಪಾಯಿ ವೆಚ್ಚವಾಗುತ್ತದೆ).

            ಸಮಾಜಕಾರ್ಯ ವಿದ್ಯಾರ್ಥಿಗಳಾಗಿದ್ದಾಗಿನಿಂದಲೂ ನಿರಾತಂಕ ಬಳಗದ ಸದಸ್ಯರೆಲ್ಲರೂ ಸಮಾಜಕಾರ್ಯದ ಸಾಹಿತ್ಯ ಕೊರತೆಯನ್ನು ಅನುಭವಿಸಿದ್ದೆವು. ಹಾಗೆಯೇ ಇಂದಿನ ವಿದ್ಯಾರ್ಥಿಗಳೂ ಸಹ ಸಮಾಜಕಾರ್ಯದ ಸಾಹಿತ್ಯ ಕೊರತೆಯನ್ನು ಅನುಭವಿಸುತ್ತಿರುವುದನ್ನು ಮನಗಂಡು ನಮ್ಮ ವೃತ್ತಿಪರ ಸಮಾಜಕಾರ್ಯದಲ್ಲಿ ಸಾಹಿತ್ಯ ವೃದ್ಧಿಗೆ ಪ್ರೇರಣೆ ನೀಡಲೆಂದು ಮತ್ತು ವೃತ್ತಿಪರರ ಕ್ಷೇತ್ರಕಾರ್ಯದ ಅನುಭವಗಳ ಹಂಚಿಕೆಗೆ ಒಂದು ವೇದಿಕೆಯಾಗಲೆಂದು 'ಸಮಾಜಕಾರ್ಯದ ಹೆಜ್ಜೆಗಳು' ನಿಯತಕಾಲಿಕೆ ಆರಂಭವಾಗಿದೆ, ನಮ್ಮ ಪ್ರಯತ್ನ ಸಮಾಜಕಾರ್ಯ ವೃತ್ತಿಪರರೆಲ್ಲರೂ ಅಭೂತಪೂರ್ವವಾಗಿ ಸ್ಪಂದಿಸಿ ಸಹಕರಿಸುತ್ತಿದ್ದಾರೆ.

ನಿರಾತಂಕದ ಇತರೆ ಯೋಜನೆಗಳು:
1)         ಸ್ವಯಂ ಸೇವಾ ಸಂಸ್ಥೆಗಳ ಮಾಹಿತಿ ಕೈಪಿಡಿ: (Karnataka NGO's Directory)*
ಮಾಹಿತಿ ಕೈಪಿಡಿಯು ಕರ್ನಾಟಕದಲ್ಲಿರುವ ಎಲ್ಲಾ ಸ್ವಯಂಸೇವಾಸಂಸ್ಥೆಗಳ ಸಂಪೂರ್ಣ ವಿಳಾಸ, ಕಾರ್ಯ, ಕಾರ್ಯಕ್ಷೇತ್ರ ಮತ್ತು ಅವುಗಳ ವೆಬ್ ಸೈಟ್ ವಿವರಗಳನ್ನು ಒಳಗೊಂಡಿರುತ್ತದೆ. ಮಾಹಿತಿ ಕೈಪಿಡಿಯು ಸಮಾಜಕಾರ್ಯ ವೃತ್ತಿಪರರಿಗೆ ಒಂದು ಮಾಹಿತಿ ಕೈಪಿಡಿಯಾಗಿ ಹೊರಹೊಮ್ಮುವುದಲ್ಲದೆ ಕರ್ನಾಟಕದಲ್ಲಿರುವ ಎಲ್ಲಾ ಸ್ವಯಂಸೇವಾ ಸಂಸ್ಥೆಗಳ ನಡುವಿನ ಸಂಪರ್ಕ ಸೇತುವೆಯಾಗಲಿದೆ.
2)         ಸಮಾಜಕಾರ್ಯ ವೃತಿಗಳ ಮಾಹಿತಿ ಕೈಪಿಡಿ: (Social Work Careers Directory)*
ಸಮಾಜಕಾರ್ಯ ಕ್ಷೇತ್ರದಲ್ಲಿ ಇರುವ ವೃತ್ತಿ ಅವಕಾಶಗಳ ಸಮಗ್ರ ಮಾಹಿತಿಯನ್ನು ಕೈಪಿಡಿ ಒಳಗೊಂಡಿರುತ್ತದೆ. ಕೈಪಿಡಿಯಲ್ಲಿ ಸಮಾಜಕಾರ್ಯ ಕ್ಷೇತ್ರದ ವಿವಿಧ ವೃತ್ತಿಗಳಿಗೆ ಬೇಕಾದ ಅರ್ಹತೆ, ಮೌಲ್ಯಗಳು, ಸವಾಲುಗಳು ಮತ್ತು ವಿವಿಧ ವೃತ್ತಿಗಳಿಗೆ ಬೇಕಾದ ವಿಶೇಷ ತರಬೇತಿ ಮತ್ತು ತರಬೇತಿಗಳನ್ನು ನೀಡುವ ಸಂಸ್ಥೆಗಳ ಸಂಪೂರ್ಣ ವಿವರಗಳನ್ನು ಒಳಗೊಂಡಿರುತ್ತದೆ.
3)         ಸಮಾಜ ಕಾರ್ಯ ವೃತ್ತಿಪರರ ಮಾಹಿತಿಕೈಪಿಡಿ: (Professional Social Workers Directory)*
ಸಮಾಜಕಾರ್ಯ ವೃತ್ತಿಯಲ್ಲಿನ ಹಿರಿಯ ಹಾಗು ಕಿರಿಯ ವೃತ್ತಿಪರರ ನಡುವೆ ಸಂಪರ್ಕ ಕಲ್ಪಿಸಲು ನಮ್ಮ ನಿರಾತಂಕ ಸಂಸ್ಥೆಯು ಸಮಾಜ ಕಾರ್ಯ ವೃತ್ತಿಪರರ ಮಾಹಿತಿ ಕೈಪಿಡಿಯನ್ನು ಹೊರತರಲು ನಿರ್ಧರಿಸಿದೆ.
ಮಾಹಿತಿ ಕೈಪಿಡಿಯು ಹಿರಿಯ ಸಮಾಜಕಾರ್ಯ ವೃತ್ತಿಪರರ ಕಿರುಪರಿಚಯ ಹಾಗೂ ಅವರ  ಅನುಭವಗಳನ್ನು ಒಳಗೊಂಡಿರುತ್ತದೆ.
ವಿಶೇಷ ಸೂಚನೆ: ಕೈಪಿಡಿಗೆ ಸಂಬಂಧಿಸಿದ ಮಾದರಿ ನಮೂನೆಯನ್ನು ನಮ್ಮ ಸಂಸ್ಥೆಯ www.niratanka.org ಯಲ್ಲಿ ನೀಡಲಾಗಿದೆ. ಇದರಿಂದ ನಮೂನೆಯನ್ನು ಡೌನ್ ಲೋಡ್ ಮಾಡಿಕೊಂಡು ತಮ್ಮ ವೃತ್ತಿಗೆ ಸಂಬಂಧಿಸಿದ ಮಾಹಿತಿಯನ್ನು ಅದರಲ್ಲಿ ಬರೆದು ಇಮೇಲ್ ಅಥವಾ ಅಂಚೆ ಮೂಲಕ ನಮ್ಮ ನಿರಾತಂಕ ಸಂಸ್ಥೆಗೆ ಕಳುಹಿಸಿ ಕೊಡಬೇಕಾಗಿ ವಿನಂತಿ.





No comments:

Post a Comment