Friday, September 20, 2013

ಬೆಂಗಳೂರು ವಿಶ್ವವಿದ್ಯಾಲಯ ಸಮಾಜಕಾರ್ಯ ವಿಭಾಗಕ್ಕೆ ಇತ್ತೀಚೆಗೆ ಭೇಟಿ















ಬೆಂಗಳೂರು ವಿಶ್ವವಿದ್ಯಾಲಯ ಸಮಾಜಕಾರ್ಯ ವಿಭಾಗಕ್ಕೆ ಇತ್ತೀಚೆಗೆ ಭೇಟಿ ನೀಡಿದಾಗ ಅಲ್ಲಿನ ಅವ್ಯವಸ್ಥೆ ನೋಡಿ ಮನಸ್ಸಿಗೆ ಬೇಸರವಾಯಿತು. ಅತ್ಯಂತ ಸುಂದರ ಪರಿಸರದಲ್ಲಿರುವ ಸುಂದರ ಕಟ್ಟಡದಲ್ಲಿ ಮಳೆನೀರು ಜಿನುಗುವ ಪರಿಸ್ಥಿತಿ, ಮಳೆ ನೀರು ಜಿನುಗಿ ಕಟ್ಟಡದ ಆಂತರಿಕ ಸೌಂದರ್ಯ ಹಾಳಾಗಿದೆ. ಕಿಟಕಿಯ ಕಂಬಿಗಳು ಬಣ್ಣ ನೋಡಿ ಶತಮಾನಗಳು ಕಳೆದಿರಬಹುದು, ಸರಿಯಾದ ಶೌಚಾಲಯದ ನಿರ್ವಹಣೆಯಿಲ್ಲ, 60ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ.  ಆದರೆ ತರಗತಿಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುವುದು 40 ಜನರಿಗೆ ಮಾತ್ರ, ಮೂಲೆಗಳಲ್ಲಿ ಹಾಳಾಗಿ ಬಿದ್ದಿರುವ ಪೀಠೋಪಕರಣಗಳು, ಕಸ, ಕಟ್ಟಡದ ಮೇಲೆ ಹಲವಾರು ಚಿಕ್ಕ ಮರಗಳು ಬೆಳೆದು ಬೇರು ಬಿಟ್ಟಿರುವ ದೃಶ್ಯ ಸಾಮಾನ್ಯ, ಹೀಗೆ ಹಲವು ಸಮಸ್ಯೆಗಳಿವೆ. ಬೆಂಗಳೂರಿನಂತಹ ಮಹಾನಗರದಲ್ಲಿ ವಿಶ್ವವಿದ್ಯಾಲಯದ ಪರಿಸ್ಥಿತಿ ಹೀಗಾದರೆ ಹೇಗೆ ? ಕೇವಲ ಸಮಾಜಕಾರ್ಯ ವಿಭಾಗದಲ್ಲಿ ಮಾತ್ರವಲ್ಲದೆ ಇತರ ವಿಭಾಗಗಳಲ್ಲೂ ಈ ಪರಿಸ್ಥಿತಿ ಸಾಮಾನ್ಯವಾಗಿರಬಹುದು. ಬೆಂಗಳೂರು ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ ಸೂಕ್ತ ಕ್ರಮ ಕೈಗೊಂಡು ಈ ಎಲ್ಲಾ ಅವ್ಯವಸ್ಥೆಗಳನ್ನು ಸರಿಪಡಿಸಲು ಶ್ರಮಿಸಬೇಕು.   ಒಮ್ಮೆಯಾದರೂ ಈ ಪರಿಸ್ಥಿತಿಯನ್ನು ಸಮಾಜಕಾರ್ಯ ಪದವಿಧರರು ನೋಡಲೇಬೇಕು, ಈ ಬರಹಕ್ಕೆ ನಿಮ್ಮ ಪ್ರತಿಕ್ರಿಯೆ ನೀಡಿ, ಸಹೃದಯಿಗಳಾಗಿ ಸ್ಪಂದಿಸಿ.  ನಿಮ್ಮ ಪ್ರತಿಕ್ರಿಯೆಗಳನ್ನು ಸಂಗ್ರಹಿಸಿ ಬೆಂಗಳೂರು ವಿಶ್ವವಿದ್ಯಾಲಯದ ಆಡಳಿತ ಮಂಡಳಿಯವರಿಗೆ ಕಳುಹಿಸಿ ಕೊಡಲಾಗುವುದು.

ರಮೇಶ ಎಂ.ಎಚ್. 
ಸಂಪಾದಕ,
ನಿರಾತಂಕ

1 comment:

  1. this good for kannada readers they can express own language.

    ReplyDelete