Thursday, September 26, 2013

ಭಾರತೀಯ ಸಮಾಜ


ಶ್ಯಾಮಾಚರಣ ದುಬೆ
ಬೆಲೆ:  -29
ಮುದ್ರಣ: ನ್ಯಾಷನಲ್ ಬುಕ್ ಟ್ರಸ್ಟ್,
ಇಂಡಿಯಾ (1994)
ಅನುವಾದ: ಆರ್.ಎಲ್. ಅನಂತರಾಮಯ್ಯ

            ಮುಖ್ಯವಾಗಿ ಯುವ ಓದುಗರಿಗಾಗಿ ಬರೆದಿರುವ ಪುಸ್ತಕ ಭಾರತೀಯ ಸಮಾಜದ ಗತ ಮತ್ತು ಈಗಿನ ಬದುಕಿನತ್ತ ದೃಷ್ಟಿ ಹಾಯಿಸುತ್ತದೆ. ಭಾರತದ ವಿವಿಧತೆ ಮತ್ತು ಏಕತೆಯ ಬೆಳವಣಿಗೆಯನ್ನು ಅದರ ಸಂಕೀರ್ಣ ಇತಿಹಾಸದ ಮೂಲಕ ಇಲ್ಲಿ ಗುರುತಿಸಲಾಗಿದೆ. ಶತಮಾನಗಳಿಂದ ಬಂದಿರುವ ಜಾತಿ ಮತ್ತು ವರ್ಣ, ಕುಟುಂಬ ಮತ್ತು ಬಂಧುತ್ವದ ಕರ್ತವ್ಯಗಳನ್ನು ನಗರ ಮತ್ತು ಗ್ರಾಮೀಣ ಸಂದರ್ಭಗಳಲ್ಲಿ ನೋಡಲಾಗಿದೆ; ಹಾಗೆಯೆ ಲಿಂಗ ಸಂಬಂಧಗಳನ್ನೂ ಗುರುತಿಸಲಾಗಿದೆ. ಸಹಜವಾಗಿಯೆ ಪರಿಶೀಲನೆಯಲ್ಲಿ ಇಂದಿನ ಸಮಾಜದಲ್ಲಿ ಕಂಡುಬರುತ್ತಿರುವ ಬದಲಾವಣೆಗಳನ್ನೂ ಮುಂದೆ ಆಗಬಹುದಾದ ಬದಲಾವಣೆಗಳನ್ನೂ ಸಂಕ್ಷಿಪ್ತವಾಗಿ ಚರ್ಚಿಸಲಾಗಿದೆ. ಹೆಚ್ಚಿನ ಓದಿಗೆ ಮಾರ್ಗದರ್ಶಿಯಾಗಿ ಮಾಹಿತಿಯನ್ನು ಸಹ ನೀಡಲಾಗಿದೆ
            ಪ್ರೊಫೆಸರ್ ಶ್ಯಾಮಚರಣ ದುಬೆ ಅಂತರರಾಷ್ಟ್ರೀಯ ಖ್ಯಾತಿ ಪಡೆದ ಸಮಾಜ ವಿಜ್ಞಾನಿ. 1955ರಲ್ಲಿ ಪ್ರಕಟವಾದ ಅವರ ಇಂಡಿಯನ್ ವಿಲೇಜ್ ಪುಸ್ತಕವು ಭಾರತೀಯ ಸಮಾಜದ ಅಧ್ಯಯನ ಕ್ಷೇತ್ರದಲ್ಲೊಂದು ಮೈಲುಗಲ್ಲು. ಪ್ರೊ. ದುಬೆ ಅವರು ದೇಶವಿದೇಶಗಳ ವಿಶ್ವವಿದ್ಯಾಲಯಗಳಲ್ಲಿ ಸಾಮಾಜಿಕ ಮಾನವಶಾಸ್ತ್ರದ ಬಗ್ಗೆ ಪಾಠ ಮಾಡಿದ್ದಾರೆ. ಇಂಗ್ಲಿಷ್ ಮತ್ತು ಹಿಂದೀಗಳೆರಡರಲ್ಲೂ ಅವರು ಮುಖ್ಯವಾಗಿ ಸಮಾಜ ಅಭಿವೃದ್ಧಿ ಕುರಿತುಬರೆದಿದ್ದಾರೆ.



No comments:

Post a Comment