Wednesday, September 25, 2013

"ಪರಸ್ಪರರ ನಡುವಿನ ತೀವ್ರ ಸಂವೇದನೆಯನ್ನು ಜನರು ಕಳೆದುಕೊಂಡಿದ್ದಾರೆ."

ಸಂಪಾದಕೀಯ

"ಪರಸ್ಪರರ ನಡುವಿನ ತೀವ್ರ ಸಂವೇದನೆಯನ್ನು ಜನರು ಕಳೆದುಕೊಂಡಿದ್ದಾರೆ."
"People have lost Sensitivity towards one another"

ಜನರು ಭಾವುಕತೆಯನ್ನು ಪ್ರೀತಿ, ವಿಶ್ವಾಸ, ಬಾಂಧವ್ಯಗಳನ್ನು ಕಳೆದು ರೋಬೋಟ್ಗಳ ರೀತಿ ಯಂತ್ರಮಾನವರಾಗಿ ಬದುಕುತ್ತಿದ್ದಾರೆ. ಇತ್ತೀಚೆಗೆ ಗೌಹಾತಿಯಲ್ಲಿ ನಡುರಸ್ತೆಯಲ್ಲಿ ಒಬ್ಬ ಯುವತಿಯ ಮೇಲೆ ಲೈಂಗಿಕ ಹಲ್ಲೆ ನಡೆಯುತ್ತಿದ್ದರೆ ಜನ ನಿರ್ಭಾವುಕರಾಗಿ ಪ್ರತಿಕ್ರಿಯಿಸುತ್ತಿರುವುದು ನಾಗರಿಕ ಸಮಾಜದ ದುರಂತವಲ್ಲವೆ? ನಾವು ಎಷ್ಟೊಂದು ಅಸೂಕ್ಷ್ಮರಾಗಿದ್ದೇವೆಂದರೆ ತಂದೆ ತಾಯಿಯರ ಕಷ್ಟಗಳಿಗೆ ಸ್ಪಂದಿಸದಷ್ಟು, ಸ್ನೇಹಿತ ಸ್ನೇಹಿತನಿಗೆ ಸ್ಪಂದಿಸದಷ್ಟು, ನನ್ನ ಪಕ್ಕದ ಮನೆಯವರ ಉಸಾಬರಿ ನನಗೇಕೆ ಬೇಕೆನ್ನುವಷ್ಟರಮಟ್ಟಿಗೆ. ಹಿಂದಿನ ದಿನಗಳಲ್ಲಿ ಮದುವೆಯಾದರೆ ಊರವರೆಲ್ಲಾ ಮದುಮಗನ ಹಾಗೂ ಮದುಮಗಳ ಮನೆ ಮುಂದೆ ಚಪ್ಪರ ಹಾಕಲು ಬರುತ್ತಿದ್ದರು. ಆದರೆ ಈಗ ಹಣ ಬಿಸಾಕಿದರೆ ಯಾರಾದರೂ ಚಪ್ಪರಹಾಕಿ ಹೋಗುತ್ತಾರೆ ಎಂಬ ಭಾವ. ಇದೇ ಸಂದರ್ಭದಲ್ಲಿ ಒಂದು ಓಶೋ ಹೇಳಿದ ಕತೆ ನೆನಪಾಗುತ್ತದೆ
            ಇತ್ತೀಚೆಗೆ ರಷ್ಯಾದ ವಿಜ್ಞಾನಿ ಮಂಗಗಳ ಮೇಲೆ ಪ್ರಯೋಗ ಮಾಡುತ್ತಿದ್ದ. (ಮಂಗಗಳ ರೊಬೋಟ್) ಅವನು ಕೆಲವು ಹೆಣ್ಣು ಮಂಗಗಳ ಆಕೃತಿ ಮಾಡಿದನು. ವಿದ್ಯುತ್ತಿನ ಕೃತಕ ಯಂತ್ರ, ಇತ್ಯಾದಿಗಳ ಪಡಿಯಚ್ಚು ಸಿದ್ಧಗೊಳಿಸಿದ. ಯಾವ ಮಂಗಗಳು ಹುಟ್ಟುತ್ತವೋ ಅವುಗಳನ್ನು ಆಕೃತಿ ಮಂಗಗಳ ಜೊತೆ ಮಾಡಿದ, ಆಕೃತಿ ಮಂಗಗಳ ಜೊತೆಗೆ ಅಂಟಿಕೊಂಡವು. ಅವು (ರೊಬೋಟ್) ಮೊದಲ ದಿನದ ಮರಿ ಮಂಗಗಳಾಗಿದ್ದವು. ಅವುಗಳಿಗೆ ಯಾವುದು ನಿಜವಾದ ತಾಯಿ ಮತ್ತು ಯಾವುದು ಆಕೃತಿಯೆಂಬುವ ತಿಳಿವಳಿಕೆ ಇದ್ದಿಲ್ಲ. ಅವು ಆಕೃತಿ ತಾಯಿಯೊಂದಿಗೆ ಸದಾ ಇರುತ್ತಿದ್ದವು. ದೊಡ್ಡದಾಗುತ್ತಾ ಅವುಗಳು ಆಕೃತಿ ಸ್ತನಕ್ಕೆ ಅಂಟಿಕೊಂಡವು. ಆಕೃತಿಗಳು ನಿಜವಾದ ತಾಯಿ ಮಾಡುತ್ತಿದ್ದ ಎಲ್ಲಾ ಕೆಲಸ ಮಾಡುತ್ತಿದ್ದವು. ಹಲವು ದಿನ ಕಳೆಯುವ ತನಕ ಚೆನ್ನಾಗಿದ್ದವು. ದೊಡ್ಡವು ಕೂಡ ಆದವು ಆದರೆ ಎಲ್ಲಾ ಮಂಗಗಳು ಹುಚ್ಚರಂತಿದ್ದವು. ಆದರೆ ಅವುಗಳ ವ್ಯವಹಾರವು ವ್ಯಾಕುಲಮಯವಾಗಿತ್ತು ವಿಜ್ಞಾನಿ ಆಶ್ಚರ್ಯಗೊಳಗಾದನು. ಒಂದು ವಿಚಾರ ಲ್ಯಾಬೋರೆಟರಿಗೆ ತಿಳಿಯಿತು. ಮಂಗಗಳಿಗೆ ಕೊರತೆ ಕಂಡು ಬಂದಿದ್ದು ತಾಯಿಯ ನಿಜವಾದ ಪ್ರೀತಿ. ನಾವೆಲ್ಲರೂ ಪರಸ್ಪರರ ನಡುವಿನ ತೀವ್ರ ಸಂವೇದನೆಯನ್ನು ಕಳೆದುಕೊಂಡಿದ್ದೇವೆ.
ಪ್ರೀತಿ ಬಾಂಧವ್ಯ ರಹಿತ ಜೀವನ ನಮ್ಮನ್ನೂ ಒಮ್ಮೆ ವ್ಯಾಕುಲತೆಗೆ ಒಳಗಾಗುವಂತೆ ಮಾಡುವುದರಲ್ಲಿ ಸಂಶಯವಿಲ್ಲ.
* * * *
            ಇತ್ತೀಚೆಗೆ Outlook ಪತ್ರಿಕೆ ನಡೆಸಿದ ಸಮೀಕ್ಷೆಯಲ್ಲಿ ಭಾರತದ ಪ್ರಪ್ರಥಮ 10 ಸಮಾಜಕಾರ್ಯ ಕಾಲೇಜುಗಳ ಪಟ್ಟಿಯಲ್ಲಿ ಕರ್ನಾಟಕದ ಯಾವ ಸಮಾಜಕಾರ್ಯ ಕಾಲೇಜೂ ಸ್ಥಾನ ಗಳಿಸಿಲ್ಲ. ಇದರ ಬಗ್ಗೆ ಚಿಂತಿಸಬೇಕಾದ ಅಗತ್ಯವಿದೆ ಎಂದೆನಿಸುತ್ತದೆ. ಸಮಾಜಕಾರ್ಯ ವಿದ್ಯಾರ್ಥಿಗಳ ಗುಣಮಟ್ಟವನ್ನು ಹೆಚ್ಚಿಸಬೇಕಾದ ಅಗತ್ಯವಿದೆ. ಸ್ನಾತಕೋತ್ತರ ಮಟ್ಟದಲ್ಲಿ ವಿದ್ಯಾಭ್ಯಾಸದಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ  ಸುಲಭವಾದ 10 ಇಂಗ್ಲಿಷ್ ಪದಗಳನ್ನು, ಉದಾ- College, Bangalore, Master, School, Society ರೀತಿ ಯಾವುದೇ ಪದಗಳ  Spelling ಪರೀಕ್ಷಿಸಿ, ಶೇ70.ರಷ್ಟು ತಪ್ಪುಗಳು ಕಂಡುಬರುತ್ತವೆ ಹಾಗೆಯೆ ಸುಲಭವಾದ 10 ಕನ್ನಡ ಶಬ್ದಗಳಿಗೆ ಅರ್ಥ ಮತ್ತು ಪದ ಬಳಕೆ ಕೇಳಿನೋಡಿ; ಶೇಕಡ 70% ತಪ್ಪು ಬರೆದಿರುವ ಉದಾಹರಣೆಗಳಿವೆ. ಗುಣಾತ್ಮಕವಾದ ವಿದ್ಯಾರ್ಥಿಗಳು ಏಕೆ ನಮ್ಮಲಿಲ್ಲ ಎಂದಾಗ ಪದವಿ ಮಟ್ಟದಲ್ಲಿ ಅವರಿಗೆ ಉತ್ತಮ ಶಿಕ್ಷಣ ಇಲ್ಲ ಎಂಬ ಉತ್ತರ, ಪದವಿ ಮಟ್ಟದ ಶಿಕ್ಷಕರನ್ನು ಕೇಳಿದರೆ ಪ್ರೌಢಶಿಕ್ಷಣದಲ್ಲಿ ಉತ್ತಮ ಶಿಕ್ಷಣದ ಕೊರತೆ, ಪ್ರೌಢಶಿಕ್ಷಕರನ್ನು ಕೇಳಿದರೆ ಪ್ರಾಥಮಿಕ, ಪ್ರಾಥಮಿಕ ಶಿಕ್ಷಕರನ್ನು ಕೇಳಿದರೆ ಮನೆಯರು ಬಡವರು ಹಾಗೂ ಮನೆ ವಾತಾವರಣ ಸರಿ ಇಲ್ಲ ರೀತಿ ಒಬ್ಬರ ಮೇಲೆ ಒಬ್ಬರು ಗೂಬೆ ಕೂರಿಸುತ್ತಾ ಪಲಾಯನವಾದವನ್ನ ಮಂಡಿಸುತ್ತಾರೆ.
* * * *
            ಇತ್ತೀಚೆಗೆ ಸಮಾಜಕಾರ್ಯ ವೃತ್ತಿಪರ ಸಂಘವನ್ನು ಬಲಗೊಳಿಸಬೇಕು ಎಂಬ ಕೂಗು ಕೇಳಿಬರುತ್ತಿದೆ. ಈಗಾಗಲೇ KAPSW ಕರ್ನಾಟಕದ ಮಟ್ಟಿಗೆ ಅಸ್ತಿತ್ವದಲ್ಲಿದೆ. ಆದರೆ ಯಾವುದೇ ಕಾರ್ಯ ಚಟುವಟಿಕೆಗಳು ಜರುಗುತ್ತಿಲ್ಲ ಏಕೆ? ಯಾರೂ ಇದರ ಬಗ್ಗೆ ಆಸಕ್ತಿ ತೆಗೆದುಕೊಳ್ಳುತ್ತಿಲ್ಲವೇಕೆ? ಪದಾಧಿಕಾರಿಗಳನ್ನು ಕೇಳಿದರೆ ಯಾರಿಗೂ ಆಸಕ್ತಿ ಇಲ್ಲ. ಮೀಟಿಂಗ್ ಕರೆದಾಗ ಯಾರೂ ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದಿಲ್ಲ ಎಂಬ ಉತ್ತರ. ಹಾಗೆಯೇ ಸಮಾಜಕಾರ್ಯ ಸಂಘಟನೆಯಾಗದಿರುವುದಕ್ಕೆ ನಾವೆಲ್ಲರೂ ಹೊಣೆಗಾರರೇ. ಈಗಲಾದರೂ ಪರಸ್ಪರ ನಿಂದನೆ ಟೀಕೆ ಮಾಡದೆ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಚಿಂತಿಸಬೇಕಾದ ಅಗತ್ಯವಿದೆ.
* * * *
            ನಿರಾತಂಕ ಹಾಗೂ ಸಮಾಜಕಾರ್ಯದ ಹೆಜ್ಜೆಗಳ ಬಗ್ಗೆ Google Group ಮುಖಾಂತರ ಸಮಾಜಕಾರ್ಯಕರ್ತರೆಲ್ಲರೂ ಒಂದೆಡೆ ಸಂಪರ್ಕಕ್ಕೆ ಬರುತ್ತಿರುವುದು ಸಂತಸದ ಸಂಗತಿಯಾಗಿದೆ. ನಮ್ಮ ಪತ್ರಿಕೆಗೆ Nimhans Psychiatric Social Work Department ನಲ್ಲಿರುವ ಬಹುಪಾಲು ವೃತ್ತಿಪರರು ಚಂದಾದಾರರಾಗಿ ಸಹಕರಿಸಿದಕ್ಕಾಗಿ ನಮ್ಮ ತಂಡ ಅವರಿಗೆ ಋಣಿಯಾಗಿದೆ.
            ಸಮಾಜಕಾರ್ಯದ ಹೆಜ್ಜೆಗಳು ಹಾಗೂ ನಿರಾತಂಕ ತಂಡದಲ್ಲಿರುವ ಹಲವಾರು ಸಕ್ರಿಯ ಸದಸ್ಯರು ನಿರಾತಂಕದ ಸಹಕಾರದಿಂದ NET ಹಾಗೂ SLET ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವುದು ಸಂತೋಷದ ಸಂಗತಿಯಾಗಿದೆ. ಇವರೆಲ್ಲರಿಗೂ ನಮ್ಮ ತಂಡದ ಪರವಾಗಿ ಶುಭಾಶಯಗಳು.
            2ನೆಯ ವರ್ಷದ ವಾರ್ಷಿಕ ಸಮಾರಂಭವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲು ನಮ್ಮ ನಿರಾತಂಕ ಬಳಗವು ಸಿದ್ದತೆ ನಡೆಸುತ್ತಿದೆ. ಇದಕ್ಕೆ ಪೂರಕವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆ ನಮ್ಮದಾಗಿದೆ. ನಮ್ಮ ಪ್ರಯತ್ನಕ್ಕೆ ಸಕ್ರಿಯವಾಗಿ ಸ್ಪಂದಿಸಿ ನೀವೆಲ್ಲರೂ ಪಾಲ್ಗೊಳ್ಳುವಿರೆಂಬ ಭರವಸೆ ನಮ್ಮದಾಗಿದೆ. ನಮ್ಮೆಲ್ಲಾ ಪ್ರಯತ್ನಗಳಿಗೆ ಸೂಕ್ಷ್ಮ ಹಾಗೂ ಸಂವೇದನಶೀಲರಾಗಿ ಪ್ರತಿಕ್ರಿಯಿಸುವಿರೆಂಬ ಭರವಸೆಯೊಂದಿಗೆ.

ರಮೇಶ  ಎಂ.ಎಚ್.




No comments:

Post a Comment