Thursday, September 26, 2013

ಪರಿಹಾರ ಮಾರ್ಗ


To
Niratanka Team
            My self Rachana studying 4th sem MSW. I read your magazine titled “Samaja Karyada Hejjegalu”, it is very informative and it is useful to all the Social Workers, specially to the Social Work Students. First of all I wanted to extend my gratitude for that. Then my doubt is- do you agree that increasing the no. of Old Age Home is the ultimate or best way to rectify the problems of Old Age Population & also tell me what is exactly Gerontological Social Work means and from where this concept has been origined. Hoping that you clarify my doubt.
Yours faithfully
Rachana
4th sem MSW
Bengaluru.
Ans: Dear Rachana I respect your feeling. We also had the same doubt when we thought about registering old age home but when we interacted with the elites about this as a piolet study  the information what we got was fortified the idea of old age homes. As per our tradition concerned the younger ones should take care of there elders. But our changed lifestyles created the situation like 'No time for others'. This clearly shows their are the people who really need this kind of homes.  
            Then for your second question about  Gerontological Social Work read the article Gerontological Social Work-a note by Pro. Pai in page no. 17 of this issue. You will get the clear picture about Gerontological Social Work - what, why and how.
Smt Anitha Ashok




ಪ್ರಿಯ ಸಲಹೆಗಾರರಿಗೆ,
            ನಾನು ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂ.ಎಸ್.ಡಬ್ಲ್ಯೂ. ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ. ಇನ್ನೇನು ನನ್ನ ಮೊದಲನೆ ಸೆಮಿಸ್ಟರ್ ಪರೀಕ್ಷೆ ಕೂಡ ಮುಗಿಯುವುದು. ಅದರಲ್ಲಿ ನಾನು ಒಳ್ಳೆಯ ಅಂಕ ಪಡೆದು ಉತ್ತೀರ್ಣನಾಗುವೆನೆಂಬ ನಂಬಿಕೆಯು ಇದೆ. ಆದರೆ ಈಗ ನನ್ನಲ್ಲಿ ಮೂಡಿರುವ ಗೊಂದಲವೆಂದರೆ ನಾನು ನನ್ನ ಎರಡನೇ ವರ್ಷದಲ್ಲಿ ಮಾಡಬೇಕಾಗಿರುವ ಐಚ್ಛಿಕ ವಿಷಯದ ಆಯ್ಕೆಯ ಬಗ್ಗೆ. ಐಚ್ಛಿಕ ವಿಷಯದ ಆಯ್ಕೆ ನನ್ನ ಮುಂದಿನ ವೃತ್ತಿ ಜೀವನವನ್ನು  ನಿರ್ಧರಿಸುವುದಾದ್ದರಿಂದ ಅದರ ಆಯ್ಕೆಯ ಬಗ್ಗೆ ಎಚ್ಚರ ವಹಿಸುವುದು ಬಹುಮುಖ್ಯವೆನಿಸುತ್ತದೆ. ನೀವು ನನ್ನ ಗೊಂದಲ ನಿವಾರಣೆಗೆ ಸಹಕರಿಸುವಿರೆಂದು ನಂಬಿ ಪತ್ರ ಬರೆಯುತ್ತಿದ್ದೇನೆ. ದಯಮಾಡಿ ನಾನು ಐಚ್ಛಿಕ ವಿಷಯದ ಆಯ್ಕೆ ಹೇಗೆ ಮಾಡಬೇಕು ಮತ್ತು ಹಾಗೆ ಆಯ್ಕೆ ಮಾಡುವಾಗ ಯಾವ ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಬೇಕು ತಿಳಿಸಿಕೊಡಿ. ನಿಮ್ಮ ಉತ್ತಮ ಸಲಹೆಯ ನಿರೀಕ್ಷೆಯಲ್ಲಿ.
ಇತಿ ತಮ್ಮ ವಿಶ್ವಾಸಿ,
ಚಂದ್ರಶೇಖರ್ .ವಿ
ಬೆಂಗಳೂರು.
ಉತ್ತರ:            
            ನಿಮ್ಮ ಪತ್ರಕ್ಕೆ ಧನ್ಯವಾದಗಳು. ಇದು ಸಾಮಾನ್ಯವಾಗಿ ಎಲ್ಲ ವಿದ್ಯಾರ್ಥಿಗಳು ಅನುಭವಿಸುವ ಗೊಂದಲ. ಸಮಾಜಕಾರ್ಯ ವಿಷಯದಲ್ಲಿ ಎಲ್ಲಾ ಐಚ್ಛಿಕ ವಿಷಯಗಳು ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿವೆ. ಮೊದಲು ಐಚ್ಛಿಕ ವಿಷಯದ ಆಯ್ಕೆಯ ಬಗ್ಗೆ ಚಿಂತಿಸುವ/ಅರಿಯುವ ಮೊದಲು ನೀವು ನಿಮ್ಮ ಬಲ ಮತ್ತು ಬಲಹೀನತೆಗಳ ಬಗ್ಗೆ ತಿಳಿದುಕೊಳ್ಳಿ. ಇದರಿಂದ ನಿಮ್ಮ ಬಲಹೀನತೆಗಳನ್ನು ನಿಮ್ಮ ಬಲವಾಗಿ ಪರಿವರ್ತಿಸಿಕೊಳ್ಳಲು ಸಹಾಯವಾಗುತ್ತದೆ. ಮತ್ತು ಇದು ನೀವು ಯಾವುದೇ ರಂಗದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಲು ಸಹಾಯವಾಗುತ್ತದೆ. ಇದಾದ ನಂತರ ನೀವು ನಿಮ್ಮ ಆಕಾಂಕ್ಷೆ ಮತ್ತು ಗುಣಗಳಿಗೆ ಹೊಂದುವತಂಹ ವಿಷಯವನ್ನು ನಿಮ್ಮ ಐಚ್ಛಿಕ ವಿಷಯವಾಗಿ ಆಯ್ಕೆಮಾಡಿಕೊಳ್ಳಿ
            "ನಿಮ್ಮ ವೃತ್ತಿ ಬರಿಯ ಹಣ ಸಂಪಾದನೆಯ ಮೂಲವಲ್ಲ ಅದು ನಿಮಗೆ ಆತ್ಮತೃಪ್ತಿಯನ್ನು ನೀಡಬಲ್ಲ ಸಾಧನವಾಗಿರಬೇಕು."
ಎಸ್..ಶ್ರೀನಿವಾಮೂರ್ತಿ
ನಿವೃತ್ತ ಜನರಲ್ ಮ್ಯಾನೇಜರ್
ಮೋಟಾರ್ ಇಂಡಸ್ಟ್ರೀಸ್ ಕಂಪನಿ ಲಿಮಿಟೆಡ್, ಬೆಂಗಳೂರು.

            ನನ್ನ ಹೆಸರು ಉಷಾ, ನಾನು ಮೂರನೇ ಸೆಮಿಸ್ಟರ್ ನಲ್ಲಿ ಅಧ್ಯಯನ ಮಾಡುತ್ತಿದ್ದು, ಮೆಡಿಕಲ್ ಸೈಕಿಯಾಟ್ರಿ ನನ್ನ ಐಚ್ಛಿಕ ವಿಷಯವಾಗಿರುತ್ತದೆ. ನಾನು ಬೆಂಗಳೂರಿನಲ್ಲಿ ಡೆಸರ್ಟೇಶನ್ ಮಾಡಲು ಕೆಲವೊಂದು ಸಂಸ್ಥೆಯ ವಿವರಗಳನ್ನು ನೀಡಿ ?
ಉಷಾ, 3ನೇ ಸೆಮಿಸ್ಟರ್, ಎಂ.ಎಸ್.ಡಬ್ಲ್ಯೂ
ಮಂಗಳೂರು
ಉತ್ತರ: ನಿಮ್ಹಾನ್ಸ್, ಕಿದ್ವಾಯಿ, ಸ್ಪಂದನ ನರ್ಸಿಂಗ್ ಹೋಂ ಮತ್ತು ಸೆಂಟ್ ಜಾನ್ಸ್ ಆಸ್ಪತ್ರೆಗಳಲ್ಲಿ ನೀವು ಡೆಸರ್ಟೇಶನ್ ಮಾಡಬಹುದು. ಅವುಗಳ ವಿಳಾಸ ಮತ್ತು ವಿವರಣೆಯನ್ನು ನೀವು ಅಂತರ್ಜಾಲದಲ್ಲಿ  ಪಡೆದುಕೊಳ್ಳಬಹುದು ಅಥವಾ ನಮ್ಮ ನಿರಾತಂಕ ಸಂಸ್ಥೆಯನ್ನು ಸಂಪರ್ಕಿಸಬಹುದು.
ಶ್ರೀಮತಿ ಅನಿತ ಅಶೋಕ್
            ಸಮಾಜಕಾರ್ಯ ವಿದ್ಯಾರ್ಥಿಗಳು, ವೃತ್ತಿಪರರು ಮತ್ತು ನಮ್ಮೆಲ್ಲ ಓದುಗರು ಸಮಾಜಕಾರ್ಯ ವಿಷಯಕ್ಕೆ ಸಂಭಂದಪಟ್ಟ (HR, SD, MPSW, NGO, FIELD WORK) ಸಮಸ್ಯೆಗಳಿದ್ದರೆ (ಪ್ರಶ್ನೆಗಳು) ನಿಮ್ಮ ಸಮಸ್ಯೆಗಳನ್ನು ಎಸ್.ಎಮ್.ಎಸ್, -ಮೇಲ್ ಮತ್ತು ಪತ್ರ ಬರೆಯುವುದರ ಮೂಲಕ ತಿಳಿಸಬಹುದು. ನಿಮ್ಮ ಸಮಸ್ಯೆಗಳಿಗೆ ಸೂಕ್ತ ವ್ಯಕ್ತಿಗಳಿಂದ ಪರಿಹಾರವನ್ನು ತಿಳಿಸಿಕೊಡಲಾಗುವುದು. ಪ್ರಶ್ನೆ ಮತ್ತು ಉತ್ತರಗಳನ್ನು  ಮುಂದಿನ ಸಂಚಿಕೆಯ ಅಂಕಣದಲ್ಲಿ ಪ್ರಕಟಿಸಲಾಗುವುದು

-ಸಂಪಾದಕರು


No comments:

Post a Comment