Wednesday, September 25, 2013

75 ವರ್ಷಗಳ ಸಮಾಜಕಾರ್ಯದ ಇತಿಹಾಸದಲ್ಲಿ ಸಮಾಜಕಾರ್ಯದಲ್ಲಿ "Knowledge Management" ಸರಿಯಾಗಿ ಇಲ್ಲದೆ, ಹಿರಿಯರ ಜ್ಞಾನ ಕಿರಿಯರಿಗೆ ಲಭ್ಯವಾಗುತ್ತಿಲ್ಲ.

ಸಂಪಾದಕೀಯ

            ಸಂಚಿಕೆಯಲ್ಲಿ ಡಾ.ಕೆ.ವಿ.ಶ್ರೀಧರನ್ ಅವರ ಮುಖಪುಟವನ್ನು ಹೊರತಂದಿದ್ದೇವೆ. ನಮ್ಮ ಪತ್ರಿಕೆಯಲ್ಲಿ ಶ್ರೀಧರನ್ ಅವರ ಮುಖಪುಟವನ್ನು ಹೊರತರಬೇಕೆಂದು ಸಲಹೆ ನೀಡಿದವರು ಪ್ರೊ. ಶಂಕರ ಪಾಠಕ, ನಿವೃತ್ತ ಪ್ರಾಧ್ಯಾಪಕರು, ದಿಲ್ಲಿ ವಿಶ್ವವಿದ್ಯಾಲಯ. ಪಾಠಕ ಅವರು ಸಲಹೆ ನೀಡಿ ಸರಿ ಸುಮಾರು ಒಂದು ವರ್ಷವೇ ಕಳೆದಿದೆ. ಆದರೆ ಒಂದು ವರ್ಷಗಳಾದರೂ ನೀವೇಕೆ ಶ್ರೀಧರನ್ ಅವರ ಮುಖಪುಟವನ್ನು ತರಲಿಲ್ಲ ಎಂದು ಕೇಳಿದರು. ಅವರು ಕೇಳಿದಾಗ ಶ್ರೀ ಅವರ ವ್ಯಕ್ತಿತ್ವದ ಮೇಲಿನ ಗೌರವ, ನಿಷ್ಕಲ್ಮಷ ಪ್ರೀತಿ ಅವರ ಕಣ್ಣುಗಳಲ್ಲಿ ಕಾಣುತ್ತಿತ್ತು. ಬಗ್ಗೆ ಡಾ.ಎಚ್.ಎಂ.ಎಂ ಅವರೂ ಹಲವರನ್ನು ಸಂಪರ್ಕಿಸಿ ಶ್ರೀ ಅವರ ಬಗ್ಗೆ ಬರೆಯಬೇಕು ಎಂದು ವಿನಂತಿಸಿಕೊಂಡಿದ್ದರು. ನಾವು ಪಾಠಕ ರವರು ಸೂಚಿಸಿದ ಹಲವರನ್ನು ವಿಷಯ ಸಂಗ್ರಹಣೆ ಮಾಡಲು ಹೊರಟ ನಮಗೆ ನಿರಾಶೆ ಕಾದಿತ್ತು. ಅಂತರ್ಜಾಲದಲ್ಲಿ ಬಗ್ಗೆ ಹುಡುಕಾಡಿದೆವು. ಆದರೆ ನಮಗೆ ಮಾಹಿತಿ ಅಲಭ್ಯವಾಗಿತ್ತು. ಅಂತರ್ಜಾಲದಲ್ಲಿ ಎಲ್ಲವೂ ಸಿಗುತ್ತದೆಂಬ ನಮಗೆ ಭ್ರಮನಿರಶನವಾಯಿತು
            75 ವರ್ಷಗಳ ಸಮಾಜಕಾರ್ಯದ ಇತಿಹಾಸದಲ್ಲಿ ಸಮಾಜಕಾರ್ಯದಲ್ಲಿ "Knowledge Management" ಸರಿಯಾಗಿ ಇಲ್ಲದೆ, ಹಿರಿಯರ ಜ್ಞಾನ ಕಿರಿಯರಿಗೆ ಲಭ್ಯವಾಗುತ್ತಿಲ್ಲ. ಇದು ನಮ್ಮೆಲ್ಲರ ತಪ್ಪಲ್ಲವೇ? ಪ್ರತಿಯೊಂದನ್ನೂ ದಾಖಲಿಸಿದರೆ ಇದು ಮುಂದಿನ ತಲೆಮಾರಿಗೆ ಪ್ರಯೋಜನವಾಗುತ್ತದಲ್ಲವೇ? ಇದೇ ಪ್ರಯತ್ನದಲ್ಲಿ ಶ್ರೀ ಅವರ ವ್ಯಕ್ತಿತ್ತ್ವವನ್ನು, ನಮಗೆ ದೊರಕಿದಷ್ಟನ್ನು ಆಯ್ದು ಇಲ್ಲಿ ದಾಖಲಿಸಲಾಗಿದೆ.
            ಮತ್ತೆ ಶ್ರೀಯವರ ವಿಷಯಕ್ಕೆ ಬರೋಣ. ಪತ್ರಿಕೆಯ  ಮುಖಪುಟದ ಶ್ರೀ ಅವರ ಚಿತ್ರಕ್ಕಾಗಿ ನಾವು ಪಟ್ಟ ಪಾಡು ಅಷ್ಟಿಷ್ಟಲ್ಲ. ಇದೇ ಸಂದರ್ಭದಲ್ಲಿ ಒಂದು ಮಾತನ್ನು ಹೇಳಲು ಬಯಸುತ್ತೇನೆ, ನಾವು ಹೊರತಂದ ಹಿಂದಿನ ಸಂಚಿಕೆಗಳ ಮುಖಪುಟಗಳಿಗಾಗಿ ಅವರ ಮಕ್ಕಳು ಮತ್ತು ಸಂಬಂಧಿಕರನ್ನು ಸಂಪರ್ಕಿಸಿದಾಗ ನಮ್ಮ ತಂದೆ ಪೋಟೋ ನಮ್ಮಲ್ಲಿಲ್ಲ! ಅವರ ಪೋಟೋ ಹಾಕುವಂತಹ ಸಾಧನೆಯನ್ನೇನೂ ಅವರು ಮಾಡಿಲ್ಲ! ಎಂಬ ಉದಾಸೀನದ ಮಾತುಗಳು ಕೇಳಿಬಂದವು. ಆದರೂ ವ್ಯಕ್ತಿಗಳ ಪೋಟೊಗಳನ್ನು ವಿವಿಧ ಸಮಾಜಕಾರ್ಯ ಶಾಲೆಗಳ ಗ್ರಂಥಾಲಯಗಳಿಂದ, ಬೇರೆ ಬೇರೆ ಮೂಲಗಳಿಂದ  ಶ್ರಮವಹಿಸಿ  ಸಂಗ್ರಹಿಸಲಾಯಿತು
            ಅಂತೂ ಇಂತು ಶ್ರೀ ಅವರ ಪೋಟೋ ನಮಗೆ ದೊರೆಯಿತು. ಅದನ್ನು ಮುಖಪುಟಕ್ಕೂ ಬಳಸಿಕೊಂಡೆವು. ನಮ್ಮ ಪತ್ರಿಕೆಯಲ್ಲಿನ ಮುಖಪುಟದಲ್ಲಿ ಬಂದ ಪೋಟೋಗಳನ್ನು ಕೆಲವರು ಪ್ರೇಮ್ ಹಾಕಿಸಿಕೊಳ್ಳುತ್ತೇವೆ ಎನ್ನುತ್ತಾರೆ. ಆದರೂ ಇಷ್ಟೆಲ್ಲಾ ಶ್ರಮ ಹಾಕಿ ನಮ್ಮ ತಂಡ ಪ್ರತಿಫಲಾಪೇಕ್ಷೆ ಇಲ್ಲದೆ ಕಾರ್ಯ ನಿರ್ವಹಿಸುತ್ತಿರುವಾಗ ಹಲವರು ಕಾಲೆಳೆಯುವ ಪ್ರಯತ್ಮ ಹಾಗೂ ಅಸಹಕಾರ ತೋರಿಸುತ್ತಿದ್ದಾರೆ. ಇವರೆಲ್ಲರ ನಡುವೆ ನಾವು ನಮ್ಮ ಕೆಲಸಕ್ಕೆ ಮಾತ್ರ ಪ್ರಾಧಾನ್ಯ ಕೊಡಬೇಕೆಂಬ ಒಂದೇ ಧ್ಯೇಯದಿಂದ ಮುನ್ನಡೆಯುತ್ತಿದ್ದೇವೆ. ಸತ್ಕಾರ್ಯಕ್ಕೆ ನಿಮ್ಮೆಲ್ಲರ ಬೆಂಬಲ ಬಯಸುತ್ತೇವೆ. ಇದುವರೆವಿಗೂ ಅನೇಕ ವ್ಯಕ್ತಿಗಳು ನಮಗೆ ತುಂಬು ಹೃದಯದ ಸಹಕಾರ ನೀಡುತ್ತಿದ್ದಾರೆ. ಅವರಿಗೆ ನಮ್ಮ ಬಳಗದ ವತಿಯಿಂದ ನಮನಗಳು.
            "Google Group" ನಲ್ಲಿ ಸುಮಾರು 1200ಕ್ಕೂ ಹೆಚ್ಚು ಸಮಾಜಕಾರ್ಯ ಪದವೀಧರರು ಪ್ರತಿಕ್ರಿಯಿಸುತ್ತಿರುವುದು ಹೆಮ್ಮೆಯ ಸಂಗತಿ. ಸಂಪರ್ಕಜಾಲಕ್ಕೆ ಸುಮಾರು 3ವರ್ಷಗಳು ತುಂಬಿವೆ. ನಿಟ್ಟಿನಲ್ಲಿ ಸಮಾಜಕಾರ್ಯದಲ್ಲಿ NET EXAM ಗೆ ಅನುಕೂಲವಾಗಲೆಂದು ಮತ್ತೊಂದು Google Group ನ್ನು ರಚಿಸಲಾಗಿದೆ. ಇದರಲ್ಲಿ ಅಡಕವಾಗಿರುವ ಮಾಹಿತಿಯನ್ನು ಓದಿ ಅರಗಿಸಿಕೊಂಡರೆ NET EXAM ಪಾಸಾಗುವುದರಲ್ಲಿ ಎರಡು ಮಾತಿಲ್ಲ
            ಸಂಚಿಕೆಯಲ್ಲಿ ಸಮಾಜಕಾರ್ಯ ಕ್ಷೇತ್ರದ  ಬಗ್ಗೆ ಒಂದು ವಿಶೇಷವಾದ ಅಂಕಣವನ್ನು ಪ್ರಾರಂಭಿಸುತ್ತಿದ್ದೇವೆ. ಮೂಲಕ ಸಮಾಜಕಾರ್ಯದಲ್ಲಿರುವ ಕ್ಷೇತ್ರಗಳನ್ನು ಪರಿಚಯಿಸುವ ಪ್ರಯತ್ಮ ನಮ್ಮದು. ಸಮಾಜಕಾರ್ಯ ವೃತ್ತಿಗಳಲ್ಲಿರುವ ಸುಮಾರು 300 ಕ್ಕೂ ಹೆಚ್ಚು ವೃತ್ತಿಗಳನ್ನು ಪಟ್ಟಿಮಾಡಿ ಕ್ಷೇತ್ರದಲ್ಲಿ ಅನುಭವ ಹೊಂದಿರುವವರನ್ನು ಗುರುತಿಸಿ ಅವರ ವೃತ್ತಿಯ ಬಗ್ಗೆ ಸಂಪೂರ್ಣವಾಗಿ ವಿವರಗಳನ್ನು ಕಲೆಹಾಕುವ ಕಾರ್ಯಮಾಡುತ್ತಿದ್ದೇವೆ. ಸಮಾಜಕಾರ್ಯದಲ್ಲಿ ಮುಂದಿನ ಯುವ ಪೀಳಿಗೆಗೆ ಯಾವ ಯಾವ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲು ಅವರು ಸಮರ್ಥರು ಎಂಬುದನ್ನು ತಿಳಿಯಬಹುದಾಗಿದೆ. ವೃತ್ತಿಗೆ ಬೇಕಾದ ಜ್ಞಾನ, ಕೌಶಲ್ಯ, ಮತ್ತು ತರಬೇತಿಯ್ನು ಹಲವಾರು ಪರಿಣತರಿಂದ ಸಂದರ್ಶನ ಮಾಡಿ ಬರೆಸಿ ಮುಂದಿನ ತಲೆಮಾರಿಗೆ ಸದುಪಯೋಗವಾಗುವವೆಂಬ ಆಶಾವಾದವಷ್ಟೇ. ಮಾಹಿಯನ್ನು ಕಲೆಹಾಕಲು Professional Social Workers Directory ಹೊರತರುವ ಯೋಜನೆ ಹಮ್ಮಿಕೊಂಡಿದ್ದೇವೆ. ನೀವು ಸಹ ನಿಮ್ಮ ವಿವರಗಳನ್ನು ನೀಡಿದರೆ ಮೇಲ್ಕಂಡ ಎರಡನ್ನೂ ಪುಸ್ತಕ ರೂಪದಲ್ಲಿ ಹೊರತರಲಾಗುವುದು.
            ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ನಿರಾತಂಕ ಬಳಗದೊಂದಿಗೆ ಏಪ್ರಿಲ್ 15, 2012 ಭಾನುವಾರದಂದು ರಾಜ್ಯ ಮಟ್ಟದ ವಿಚಾರ ಸಂಕಿರಣ ಮತ್ತು ಪರಿಷತ್ತಿನ ಗೌರವ ಸದಸ್ಯತ್ವ ಪ್ರದಾನ ಸಮಾರಂಭವನ್ನು ಏರ್ಪಡಿಸುತ್ತು. ಕಾರ್ಯಕ್ರಮಕ್ಕೆ ಸಕ್ರಿಯವಾಗಿ ಸ್ಪಂದಿಸಿದ ಸಹೃದಯಿಗಳೆಲ್ಲರಿಗೂ ನಮ್ಮ ವಂದನೆಗಳು. ಸಮಾಜಕಾರ್ಯ ವೃತ್ತಿಪರರಿಗೆ ಉಪಯುಕ್ತವಾಗುವ ಹಲವಾರು ವಿಷಯಗಳನ್ನು ವಿಷಾರ ಸಂಕಿರಣದಲ್ಲಿ ಮಂಡಿಸಲಾಯ್ತು. ಆದರೆ ಸದುಪಯೋಗಪಡಿಸಿಕೊಳ್ಳಲು ನಮ್ಮ ವೃತ್ತಿಪರರಿಗೆ ಸಮಯ ಸಿಗಲಿಲ್ಲ! ವೃತ್ತಿಪರರ ನಿರಾಸಕ್ತಿ ನೋಡಿ ಯಾವುದೇ ಸಮಾಜಕಾರ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮ ಮಾಡಿದರೆ ವೃತ್ತಿಪರರು ಬಾಗವಹಿಸುವುದಿಲ್ಲ ಎಂಬ ಹೊಸ ಅಂಶ ಬೆಳಕಿಗೆ ಬಂದಂತಾಗಿದೆ. ಆದರೂ ರಾಜ್ಯದ ಮೂಲೆಮೂಲೆಗಳಿಂದ ಆಸಕ್ತರು ಭಾಗವಹಿಸಿದ್ದು ಸಂತೋಷ ನೀಡಿದೆ
            ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗವು ಇತರೆ ಸಂಯೋಜಿತ ಕಾಲೇಜುಗಳ ಸಹಯೋಗದೊಂದಿಗೆ ಸಮಾಜಕಾರ್ಯ ಗ್ರಾಮೀಣ ಕಲಿಕಾ ಶಿಬಿರವನ್ನು ರಾಮನಗರ ಜಿಲ್ಲೆಯ ಬನ್ನಿಕುಪ್ಪೆ ಗ್ರಾಮಪಂಚಾಯಿತಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಇದೊಂದು ಸಮಾಜಕಾರ್ಯ ಕ್ಷೇತ್ರದಲ್ಲಿನ ವಿನೂತನ ಪ್ರಯೋಗವಾಗಿದ್ದು ಇದರ ಯಶಸ್ಸಿಗೆ ಸಹಕರಿಸೋಣ. ರೀತಿಯ ವಿನೂತನ ಪ್ರಯೋಗಗಳು ಸಮಾಜಕಾರ್ಯ ಕ್ಷೇತ್ರದಲ್ಲಿ ಹೆಚ್ಚಾಗಲಿ ಹಾಗೂ ಪ್ರಯತ್ನದಲ್ಲಿ ಡಾ. ರಾಜೇಂದ್ರಕುಮಾರ್ ಹಾಗೂ ಅವರ ತಂಡದವರು ಯಶಸ್ವಿಯಾಗಲೆಂದು ಶುಭಕೋರುತ್ತೇವೆ.

ರಮೇಶ  ಎಂ.ಎಚ್.



No comments:

Post a Comment