Sunday, December 1, 2013

ಸಾಮಾನ್ಯ ಮನುಷ್ಯ, ಅಸಾಮಾನ್ಯ ಸೇವೆ: ಮಹಮ್ಮದ್ ಷರೀಫ್


ಎಪ್ಪತ್ತು ವರ್ಷದ ಮಹಮ್ಮದ್ ಷರೀಫ್ ಉತ್ತರದೇಶದ ಪೈಜಾಬಾದ್ ನವರು. ಪೈಜಾಬಾದ್ ಗೆ ಹೋಗಿ ಮಹಮ್ಮದ್ ಷರೀಫ್ ಎಂದರೆ ಸಾಕು ಅವರ ಮನೆಯ ಹತ್ತಿರವೇ ಕರೆದೊಯ್ಯುತ್ತಾರೆ ಸ್ಥಳೀಯರು. ಮಹಮ್ಮದ್ ಷರೀಫ್ ತನ್ನ ಸಮಾಜಸೇವೆಯಿಂದ ಎಲ್ಲರಿಗೂ ಪರಿಚಿತರು. ರಸ್ತೆಯಲ್ಲಿ ಏನಾದರೂ ಅಫಘಾತ, ಹತ್ತರದಲ್ಲೆಲ್ಲಾದರೂ ಕೊಲೆ ಮತ್ತು ಹತ್ತಿರದ ಆಸ್ಪತ್ರೆಯಲ್ಲಿ ಮರಣಗಳು ಇತ್ಯಾದಿಗಳು ನಡೆದಿದ್ದರೆ ಅಲ್ಲಿ ಹಾಜರಿರುತ್ತಾರೆ ಮಹಮ್ಮದ್ ಷರೀಫ್. ಅದೊಂದು ಅನಾಥ ಶವವಾಗಿದ್ದರೆ ಅದನ್ನು ಅಂತ್ಯಕ್ರಿಯೆ ಮಾಡುವ ಜವಾಬ್ದಾರಿ ಮಹಮ್ಮದ್ ಷರೀಫ್ರದ್ದು. ಪೋಲೀಸ್ ತನಿಖೆಯ ನಂತರ ಅದೊಂದು ಅನಾಥ ಶವವೆಂದು ಕಂಡುಬಂದಲ್ಲಿ ಶವವನ್ನು ಮಹಮ್ಮದ್ ಷರೀಫ್ ಒಪ್ಪಿಸುತ್ತಾರೆ. ಇಲ್ಲಿಯವರೆಗೂ ಮಹಮ್ಮದ್ ಷರೀಫ್ರು ಸುಮಾರು 1500ಕ್ಕೂ ಹೆಚ್ಚಿನ ಅನಾಥಶವಗಳಿಗೆ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಅಂತ್ಯಕ್ರಿಯೆ ನಡೆಸಿದ್ದಾರೆ. ಅದೂ ತಮ್ಮ ಸ್ವಂತ ಖರ್ಚಿನಲ್ಲಿಯೇ.

            ಮಹಮ್ಮದ್ ಷರೀಫ್ ವೃತ್ತಿಯಲ್ಲಿ ಒಂದು ಸೈಕಲ್ ರಿಪೇರಿ ಮಾಡುವ ಅಂಗಡಿಯನ್ನು ಇಟ್ಟುಕೊಂಡಿದ್ದಾರೆ. ಮಾಸಿಕ 5000 ದಿಂದ 6000 ರೂಗಳ ಆದಾಯ. ಆದಾಯದಲ್ಲೆ ತಮ್ಮ ಜೀವನ ನಿರ್ವಹಣೆ. ಒಂದು ಅಂತ್ಯಕ್ರಿಯೆಯನ್ನು ನಡೆಸಲು ಮಹಮ್ಮದ್ ಷರೀಫ್ರಿಗೆ ಸುಮಾರು 400ರಿಂದ 500 ರೂಗಳ ಖರ್ಚು ತಗಲುತ್ತದೆ. ಸತ್ತವರು ಹಿಂದೂಗಳಾಗಿದ್ದರೆ ಹಿಂದೂ ಸಂಪ್ರದಾಯದಂತೆ, ಮುಸ್ಲಿಂ ಆಗಿದ್ದರೆ ಮುಸ್ಲಿಂ ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡುತ್ತಾರೆ.

            ರೀತಿಯ ಸಮಾಜಸೇವೆಯನ್ನು ಮಾಡಲು ಮಹಮ್ಮದ್ ಷರೀಫ್ರಿಗೆ ಒಂದು ಮುಖ್ಯ ಕಾರಣವಿದೆ. ಅವರ ಮಗ ಡಾಕ್ಟರ್.  22 ವರ್ಷದವನಾಗಿದ್ದಾಗ ಒಂದು ಅಪಘಾತದಲ್ಲಿ ಮೃತರಾಗುತ್ತಾರೆ. ಒಂದು ತಿಂಗಳ ನಂತರ ತನ್ನ ಮಗ ಸತ್ತ ಸುದ್ದಿ ತಿಳಿಯುತ್ತದೆ. ಮಗನ ಶವ ದೊರೆಯುವುದಿಲ್ಲ. ಮತ್ತು ಆತ ಧರಿಸಿದ್ದಂತಹ ಬಟ್ಟೆಗಳು ಮಾತ್ರ ಮಹಮ್ಮದ್ ಷರೀಫ್ರಿಗೆ ದೊರೆಯುತ್ತದೆ. ಹಾಗಾಗಿ ಮಗನ ಅಂತ್ಯಕ್ರಿಯೆ ನೆರವೇರಿಸದ ಮಹಮ್ಮದ್ ಷರೀಫ್ ಈಗೆ ಅನಾಥ ಶವಗಳಿಗೆ ಅಂತ್ಯಕ್ರಿಯೆ ಮಾಡುವುದರೊಂದಿಗೆ ತನ್ನ ಮಗನ ಆತ್ಮಕ್ಕೆ ಶಾಂತಿ ನೀಡುತ್ತಿದ್ದಾರೆ.

            ಕಿಡ್ನಿ ವೈಪಲ್ಯದಿಂದ ಬಳಲುತ್ತಿರುವ ಮಹಮ್ಮದ್ ಷರೀಫ್ ತನ್ನ ಸಾವಿನ ನಂತರ ಯಾರೂ ಕೆಲಸ ಮಾಡಲು ಮಂದೆ ಬರುವುದಿಲ್ಲವೆಂಬ ನೋವಿದೆ, ಎನ್ನುತ್ತಾರೆ.

            A cycle mechanic by profession, Sharif earns Rs 5,000 per month, which is hardly sufficient to support his family. So the Rs 500-600 needed for each ritual are collected by a committee that he has formed. Suffering from a kidney ailment, Sharif bravely performs the last rites of the rotting bodies whose smell is enough to drive lesser mortals away. "I am worried no one is coming forward to take the responsibility after me," he says.

SHARIF MAY BE REACHED AT +91 92358 53230

 

ವೆಂಕಟೇಶ್ ಕೆ., ನಿರಾತಂಕ

ಆಕರ: ಪ್ರಪಂಚ ಪರಿವರ್ತನೆಯ ಮಾರ್ಗ

ಪುಸ್ತಕದಿಂದ ಸಂಗ್ರಹಿಸಿದ್ದು

No comments:

Post a Comment