Sunday, December 1, 2013

ವರ್ಷದ ವ್ಯಕ್ತಿ: ಅಜೀತ್ ಸಿಂಗ್


            ಇಂದು ಜಗತ್ತಿನಲ್ಲಿ ಮಾನವ ಕಳ್ಳಸಾಗಾಣಿಕೆ ಎಂಬುದು ಬಹುದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ದಂಧೆಯಾಗಿದೆ. (Polaris Project). ಸುಮಾರು 8 ಲಕ್ಷ ಜನ, ಪ್ರಾಥಮಿಕವಾಗಿ ಮಹಿಳೆಯರು, ಪ್ರತಿ ವರ್ಷಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಹರಣಕ್ಕೊಳಗಾಗುತ್ತಿದ್ದಾರೆ. (The 2007 U.S. Trafficking in Persons Report). 6 ಲಕ್ಷ ಮಹಿಳೆಯರನ್ನು ವೇಶ್ಯಾವಾಟಿಕೆಗೆ ಬಲವಂತವಾಗಿ ದೂಡುತ್ತಿದ್ದಾರೆ. (UN Global Initiative to Fight Human Trafficking) ಸುಮಾರು 3 ಮಿಲಿಯನ್ ಮಹಿಳೆಯರು ಇಂದು ವೇಶ್ಯಾವೃತ್ತಿಯಲ್ಲಿ ತೊಡಗಿದ್ದಾರೆ. ಅದರಲ್ಲಿ ಶೇ 40 ರಷ್ಟು ಮಕ್ಕಳು (1.2 ಮಿಲಿಯನ್) (CNN Article, May 2009) ಸೇರಿದ್ದಾರೆ. ಇಷ್ಟೆಲ್ಲಾ ಅಂಕಿ ಅಂಶಗಳು, ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮತ್ತು ಹೆಣ್ಣುಮಕ್ಕಳ ಅಪಹರಣ ಪ್ರಕರಣಗಳು ಹೆಚ್ಚಾಗಿವೆ. ಇಷ್ಟೆಲ್ಲಾ ಮಹಿಳೆಯರ ಮೇಲೆ ದೌರ್ಜನ್ಯಗಳಾಗುತ್ತಿದ್ದರೂ ಸರ್ಕಾರಗಳು ಯಾವುದೇ ರೀತಿಯಲ್ಲಿ ಮತ್ತು ಪರಿಣಾಮಕಾರಿಯಾಗಿ ಜಾಗೃತಗೊಳ್ಳದಿರುವುದು ವಿಷಾದನೀಯವೇ ಸರಿ. ದೌರ್ಜನ್ಯದ ಕತ್ತಲೆಯ ಪ್ರಪಂಚದಲ್ಲಿ ಬಳಲುತ್ತಿರುವ ಮಹಿಳೆಯರಿಗೆ ಅಜೀತ್ ಸಿಂಗ್ ಆಶಾಕಿರಣವಾಗಿದ್ದಾರೆ.

            ಅಜೀತ್ ಸಿಂಗ್ ಉತ್ತರಪ್ರದೇಶ ರಾಜ್ಯದ ವಾರಣಾಸಿಯ ಶಿವದಾಸಪುರದಲ್ಲಿ 1991 ರಲ್ಲಿ ಗುರಿಯಾ ಎಂಬ ಸ್ವಯಂಸೇವಾಸಂಸ್ಥೆಯನ್ನು ಸ್ಥಾಪಿಸಿ, ಅದರ ಮೂಲಕ ಶೋಷಣೆಗೆ ಒಳಗಾದ ನೇಪಾಳ, ಪಶ್ಚಿಮ ಬಂಗಾಳ, ಒಡಿಶಾ, ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ 100 ಕ್ಕಿಂತಲೂ ಹೆಚ್ಚಿನ ಮಹಿಳೆಯರಿಗೆ ಪುನರ್ವಸತಿ ಕಲ್ಪ್ಪಿಸಿದ್ದಾರೆ. ಲೈಂಗಿಕ ದೌರ್ಜನ್ಯ ಮತ್ತು ಹೆಣ್ಣು ಮಕ್ಕಳ ಅಪಹರಣದ ವಿರುದ್ದ ಹೋರಾಡುತ್ತಿದ್ದಾರೆ. ವೇಶ್ಯೆಯರ ಮಕ್ಕಳ ಶಿಕ್ಷಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ  ಅಜೀತ್ ಸಿಂಗ್ ತನ್ನ 17ನೆಯ ವಯಸ್ಸಿನಿಂದಲೇ ಸಮಾಜಕಾರ್ಯದೆಡೆಗೆ ಮುಖ ಮಾಡಿದವರು.

            ಬಲವಂತದಿಂದ ವೇಶ್ಯಾವಾಟಿಕೆಗೆ ದೂಡಿದ ಮಹಿಳೆಯರಿಗೆ ಪುನರ್ವಸತಿ ಕಲ್ಪಿಸುವುದು, ಮಹಿಳೆಯರ ಮತ್ತು ಮಕ್ಕಳ ಅಪಹರಣ ತಡೆಗಟ್ಟುವುದು, ಹೆಚ್..ವಿ/ಏಡ್ಸ್ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡುವುದು, ಲೈಂಗಿಕ ಕಾರ್ಯಕರ್ತೆಯರ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡುವುದು ಗುರಿಯ ಸಂಸ್ಥೆಯ ಪ್ರಮುಖ ಧ್ಯೇಯೊದ್ದೇಶಗಳಾಗಿವೆಒಂದು ಚಿಕ್ಕ ಉದಾಹರಣೆಯೊಂದಿಗೆ ಹೇಳುವುದಾದರೆ ಜನವರಿ 2007 ಒಂದು ಸಂಜೆ ಶೀಲಾ ಎಂಬ ಬಾಲಕಿ ತನ್ನ 15ನೆಯ ವಯಸ್ಸಿನಲ್ಲಿ ಅಪಹರಣಕ್ಕೊಳಗಾಗುತ್ತಾಳೆ. ನಂತರ ಅವಳನ್ನು ಅಪಹರಣಕಾರರು ಮುಂಬಯಿಗೆ ಕರೆದೊಯ್ದು ವೇಶ್ಯಾವಾಟಿಕೆಗೆ ತಳ್ಳುತ್ತಾರೆ. ನಂತರ ಅವಳನ್ನು ಅಪಹರಣಕಾರರಿಂದ ರಕ್ಷಿಸಿದ ಅಜೀತ್ ಸಿಂಗ್ ಅವಳನ್ನು ಶಾಲೆಗೆ ಸೇರಿಸಿ ಅವಳಿಗೆ ವಿದ್ಯಾಭ್ಯಾಸವನ್ನು ನೀಡುತ್ತಿದ್ದಾರೆ. 15 ವರ್ಷದ ಶೀಲಾ ತನ್ನ ತಾಯಿಯೊಂದಿಗೆ ಬಟ್ಟೆಗೆ ಹಾಕುವ ಪಿನ್ನುಗಳನ್ನು ತಯಾರು ಮಾಡಿ ಹತ್ತಿರದ ಹೋಲ್ ಸೇಲ್ ಅಂಗಡಿಗೆ ನೀಡುತ್ತಾಳೆ. ಪ್ರತಿ ತಿಂಗಳು 4000 ರೂಗಳ ಆದಾಯ. 15 ವರ್ಷದ ಶೀಲಾಳಿಗೆ ಲಾಯರ್ ಆಗುವಾಸೆ. ಇವಳ ಆಸೆಗೆ ನೀರೆರೆಯುತ್ತ ಅವಳನ್ನು ಪೋಷಿಸುತ್ತಿದ್ದಾರೆ ಅಜೀತ್ ಸಿಂಗ್. ರೀತಿಯ ಅದೆಷ್ಟೋ ಮುಗ್ಧ ಮಕ್ಕಳಿಗೆ ದಾರಿದೀಪವಾಗಿದ್ದಾರೆ ಅಜೀತ್ ಸಿಂಗ್. ಪ್ರತಿ ನಿತ್ಯ ಸಂಜೆ ಅವರೇ ಮಕ್ಕಳಿಗೆ ಪಾಠವನ್ನು ಹೇಳಿಕೊಡುತ್ತಾರೆ.

            ವರ್ಷ ಗುರಿಯಾ ಸ್ವಯಂಸೇವಾಸಂಸ್ಥೆಯು 300 ಮಕ್ಕಳಿಗೆ ಸಹಕಾರ ನೀಡಿದೆ. ಸುಮಾರು 100ಕ್ಕಿಂತಲೂ ಹೆಚ್ಚು ಮಕ್ಕಳನ್ನು ಶಾಲೆಗೆ ಸೇರಿಸಿದೆ. ಮುಂದಿನ ದಿನಗಳಲ್ಲಿ ಇದರ ಸಂಖ್ಯೆಯನ್ನು ಹೆಚ್ಚಿಸುವ ಮತ್ತು ಲೈಂಗಿಕ ಕಾರ್ಯಕರ್ತೆಯರಿಗೂ ಶಿಕ್ಷಣವನ್ನು ನೀಡುವ ಉದ್ದೇಶವನ್ನು ಹೊಂದಿದೆ.

            Guria is a Human Rights Organisation fighting against the sexual exploitation of women and children, particularly those forced into prostitution and trafficking.

          Manju and her husband Ajeet Singh are running this non-profit organisation at great personal risk, providing shelter and hope to many children.

          A few days ago they were nominated for the 2010 Front Line Award, an international foundation for the protection of Human Rights defenders.

          There are many ways to help and give a kind of support to Guria, this is its website,www.guriaindia.org and you may contact Manju and Ajeet at guriaajeet@rediffmail.com

 

GURIA SWAYAM SEVI SANSTHAN

S-8/395, Khajuri Colony,Varanasi-2. U.P. India

Tel: 91-542-2504253 . Fax: 91-542-2504253

E-mail: guriaajeet@rediffmail.com

No comments:

Post a Comment