Sunday, December 1, 2013

ಜಾಣ ಗಾಂಭೀರ್ಯ ಮೂಗ / ಕುರುಡ/ ಕಿವುಡರು


ಸಮಾಜಕಾರ್ಯಕರ್ತರನ್ನು ಆಯ್ದುಕೊಳ್ಳುವ ಸರಿಯಲ್ಲದ ಕ್ರಮ

            ಸಮಾಜಕಾರ್ಯದ ಅವಿಭಾಜ್ಯ ಅಂಗ ಕ್ಷೇತ್ರಕಾರ್ಯ. ಕ್ಷೇತ್ರಕಾರ್ಯವನ್ನು ಪ್ರಾಮುಖ್ಯವಾಗಿರಿಸಿಕೊಂಡು ಸಂಚಿಕೆ ಹೊರತರಲಾಗಿದೆ. ಕ್ಷೇತ್ರಕಾರ್ಯದ ಪ್ರಾಮುಖ್ಯತೆಯನ್ನು ಮತ್ತು ಅದರಲ್ಲಿನ ಪ್ರಯೋಗಗಳನ್ನು ಸಮಾಜಕಾರ್ಯಕ್ಷೇತ್ರದ ಹಿರಿಯರಾದ ಶಂಕರ ಎಚ್ ಪಾಠಕ (ನಿವೃತ್ತ ಪ್ರಾಧ್ಯಾಪಕರು, ಸಮಾಜಕಾರ್ಯ ವಿಭಾಗ, ದಿಲ್ಲಿ ವಿಶ್ವವಿದ್ಯಾಲಯ), ಹಾಗೂ ಡಾ. ಎಚ್.ಎಂ. ಮರುಳಸಿದ್ಧಯ್ಯ ಅವರ ಸಂದರ್ಶನದಲ್ಲಿ ಹೊರತರಲಾಗಿದೆ. ವಿಧವಾಗಿ ಸಂಚಿಕೆ ಹೊರತರಬೇಕೆಂದು 3 ತಿಂಗಳ ಹಿಂದೆ ನಮ್ಮ ಪತ್ರಿಕೆಯ ಮೂಲಕ ತಿಳಿಸಲಾಯಿತು ಹಾಗೂ ಹಲವಾರು ಹಿರಿಯ ವೃತ್ತಿಪರರು ವಿಷಯದ ಕುರಿತಾಗಿ ಬರೆಯಿರಿ ಎಂದು ವಿನಂತಿಸಲಾಯಿತು. ಆದರೆ ಪ್ರತಿಕ್ರಿಯೆಗಳು ಕಡಮೆ ಹಾಗೂ ಬರೆದವರು ಬೆರಳೇಣಿಕೆಯಷ್ಟು. ಇದು ನಮ್ಮ ವೃತ್ತಿಯ ದುರಂತ. ಬರೆಯುವುದಿಲ್ಲ, ಒಂದು ಕಡೆ ಸೇರಿ ಚರ್ಚಿಸುವುದಿಲ್ಲ, ವೃತ್ತಿಯಿಂದ ಅವರವರ ಹೊಟ್ಟೆ ತುಂಬಿದರೆ ಸಾಕು. ಸಮಾಜಕಾರ್ಯ ಕ್ಷೇತ್ರ ಒಂದು ವೃತ್ತಿಯಾಗಿ ಬೆಳೆಯಬೇಕಾದ ಮಟ್ಟ ಇಂದು ಬೆಳೆದಿಲ್ಲ ಎಂದರೆ ತಪ್ಪಾಗಲಾರದು.

            ಮತ್ತೊಂದು ಉದಾಹರಣೆಯೆಂದರೆ  ಕರ್ನಾಟಕ ಲೋಕಸೇವಾ ಆಯೋಗವು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿನ ಪರಿವೀಕ್ಷಣಾಧಿಕಾರಿ ದರ್ಜೆ-1 ಕ್ಕೆ 35 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಹುದ್ದೆಗಳನ್ನು ಭರ್ತಿ ಮಾಡುವುದು ಸ್ನಾತಕೋತ್ತರ  ಪದವಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ. ಕರ್ನಾಟಕದಲ್ಲಿ ಸುಮಾರು 150 ಸ್ನಾತಕೋತ್ತರ  ಪದವಿ ನೀಡುವ ಕಾಲೇಜುಗಳಿವೆ. ಹಾಗೆಯೇ ವಿದ್ಯಾರ್ಥಿ ಗಳಿಸಿರುವ ಶೇಕಡಾನ್ವಯ ಅಂಕಗಳ ಆಧಾರದ ಮೇಲೆ ಸಂದರ್ಶನಕ್ಕೆ ಆಹ್ವಾನಿಸುವುದರಿಂದ ಅರ್ಹರಿಗೆ ಅನ್ಯಾಯವಾಗುವುದಿಲ್ಲವೇ???

            ಇರುವುದೊಂದೇ ಕಾಲೇಜು. ಕಾಲೇಜಿನಲ್ಲಿ ಅಂಕ ಕೊಡುವ ಮಾನದಂಡವೂ ಒಂದೇ ಎಂದಾಗ ಶೇಕಡಾನ್ವಯ ಅಂಕಗಳ ಆಧಾರದ ಮೇಲೆ ಆಯ್ಕೆ ಸರಿ ಎನಿಸುತ್ತದೆ. ಇಂದು ಒಖಘ  ಕಲಿಸುವ ಸುಮಾರು 150 ಕೇಂದ್ರಗಳಿವೆ. 150ರಲ್ಲೂ ಬೇರೆ ಬೇರೆ ಪಠ್ಯಕ್ರಮ, ಅಂಕಗಳನ್ನು ನೀಡುವ ಮಾನದಂಡ ಬೇರೆ ಬೇರೆ, ಹಾಗೆಯೇ  Internal Marks ಗಳನ್ನು ಮನ ಬಂದಂತೆ ಕೊಡುವ ಕಾಲೇಜುಗಳಿವೆ. ಕೆಲವೊಂದು ಕಾಲೇಜುಗಳಂತೂ ದೂರ ಶಿಕ್ಷಣದ ಮೂಲಕ ತರಗತಿ ನಡೆಸದೇ, ಶೇ 75ಕ್ಕಿಂತ ಅಧಿಕ ಅಂಕಗಳನ್ನು ನೀಡಿರುವುದು ವಿಪರ್ಯಾಸವೇ ಸರಿ ನಡುವೆ ರೀತಿಯ ಅವೈಜ್ಞಾನಿಕ ಪದ್ಧತಿಯಂತೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೆ ಸರ್ಕಾರದ ಕೆಲಸಕ್ಕೆ ಅನರ್ಹರನ್ನು ನೇಮಿಸಿಕೊಂಡಂತೆ ಹಾಗೂ ಅರ್ಹರಿಗೆ ಅನ್ಯಾಯ ಮಾಡಿದಂತೆ ಆಗುವುದಿಲ್ಲವೇ? ಇದು ಸರಿಯೆ? ಇದನ್ನೆಲ್ಲ ನೋಡುತ್ತಾ ಸಮಾಜಕಾರ್ಯ ವೃತ್ತಿಪರರು ಹಾಗೂ ಸಂಘಟನೆಗಳು ಯಾವುದೇ ರೀತಿಯದಾದ ಪ್ರತಿಕ್ರಿಯೆ ನೀಡದೆ ಶಾಂತವಾಗಿರುವುದು ದುರಂತ.

            ಹಲವಾರು ಸಮಾಜಕಾರ್ಯ ವೃತ್ತಿಪರರು ನಿರಾತಂಕ ಸಂಸ್ಥೆಗೆ ಕರೆ ಮಾಡಿ ಕರ್ನಾಟಕ ಲೋಕಸೇವಾ ಆಯೋಗವು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿನ ಪರಿವೀಕ್ಷಣಾಧಿಕಾರಿ ದರ್ಜೆ-1 ಕ್ಕೆ 35 ಹುದ್ದೆಗಳಿಗೆ ನೇರ ನೇಮಕಾತಿ ಮಾಡುತ್ತಿರುವುದು ಅವೈಜ್ಞಾನಿಕ ಎಂದು ಮತ್ತು ಇದರಿಂದ ಹಲವಾರು ಸಮಾಜಕಾರ್ಯ ವೃತ್ತಿಪರರಿಗೆ ಅನ್ಯಾಯವಾಗುತ್ತಿದೆ ಹಾಗೂ ಇದನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನಡೆಸಬೇಕು ಎಂದು ಸೂಚಿಸಿದರು. ಕೇವಲ ಕೆಲಸ ಹಾಗೂ ಸ್ವಹಿತ ಆಸಕ್ತಿ ಬಂದಾಗ ಮಾತ್ರ ಒಗ್ಗೂಡುವ ನಮ್ಮ ವೃತ್ತಿಪರರ ಮನೋಭಾವ ವೃತ್ತಿಯ ಸಮಗ್ರ ಬೆಳವಣಿಗೆಗೆ ಸ್ಪಂದಿಸುವುದಿಲ್ಲ ಹಾಗೂ ಆಸಕ್ತಿ ತೋರಿಸುವುದಿಲ್ಲಇಂಥ ಮನಃಸ್ಥಿತಿ ಬದಲಾಗಬೇಕು. ಬದಲಾಗದ ಹೊರತು ಪರಿವರ್ತನೆ ಅಸಾಧ್ಯ.

            ನಮ್ಮ ಸಂಚಿಕೆಯು ಕ್ಷೇತ್ರಕಾರ್ಯವನ್ನಾಧರಿಸಿ ಹೊರತರಲು ಸಂಚಿಕೆಯ ಸಂಪಾದಕರಾದ ಡಾ.ಕೆ. ಹೇಮಲತ ಅವರು ಸಹಕರಿಸಿದ್ದಾರೆ. ಇವರಿಗೆ ನಮ್ಮ ತಂಡ ಅಭಾರಿಯಾಗಿದೆ. ಇದೇ ಸಂಚಿಕೆಯಲ್ಲಿ ಸಹಕರಿಸಿದ ಎಲ್ಲರಿಗೂ ಋಣಿಯಾಗಿದ್ದೇವೆ.

 

-ರಮೇಶ ಎಂ.ಎಚ್.

ಸಂಪಾದಕರು

No comments:

Post a Comment