Sunday, December 1, 2013

​​ಜಲ ಸಂರಕ್ಷಕ: ಶ್ರೀಯುತ ಅಯ್ಯಪ್ಪ ಮಸಗಿ


ನಮ್ಮ ಕರ್ನಾಟಕದ ಗದಗ ಜಿಲ್ಲೆಯ, ವೀರಾಪುರದವರಾಗಿರುವ ಅಯ್ಯಪ್ಪ ಮಸಗಿಯವರು ಬಡ ರೈತರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಸಲುವಾಗಿ ಜಲ ಸಂಪನ್ಮೂಲದ ಬಗ್ಗೆ ಶಿಕ್ಷಣ ನೀಡಿದರು. ಮಸಗಿಯವರ ಶಿಕ್ಷಣ ಕಾರ್ಯಕ್ರಮಗಳ ಮೂಲಕ ರೈತರು ಬರಗಾಲದ ಪ್ರಭಾವವನ್ನು ತಡೆಯುವುದಕ್ಕೋಸ್ಕರ ಜಲ ಸಂಪನ್ಮೂಲದ ನಿರ್ವಹಣೆಯನ್ನು ತಿಳಿದುಕೊಂಡರು. ಅಯ್ಯಪ್ಪ ಮಸಗಿಯವರು ಕರ್ನಾಟಕದ ಬರಪೀಡಿತ ಪ್ರದೇಶವೊಂದರಲ್ಲಿ ಬೆಳೆದು ಬಂದವರು. ಮಸಗಿಯವರ ತಂದೆ ಒಬ್ಬ ರೈತನಾಗಿದ್ದು, ಇತರ ಧನಿಕ ರೈತನಿಂದ ಭೂಮಿಯನ್ನು ಬಾಡಿಗೆಗೆ ಪಡೆದು, ಉಳುಮೆ ಮಾಡಿ ಬಂದ ಫಸಲಿನಿಂದ ಬಾಡಿಗೆಯನ್ನು ತೀರಿಸುತ್ತಿದ್ದರು. ಮಸಗಿಯವರೂ ಕೂಡ ತಂದೆಯ ಜಮೀನಿನಲ್ಲಿ ಸ್ವಲ್ಪ ಸಮಯವನ್ನು ಕಳೆದು ಸಾಂಪ್ರದಾಯಿಕ ತಂತ್ರಜ್ಞಾನದ ಬಳಕೆ ಮತ್ತು ಅದರ ಹಿಂದಿನ ವೈಜ್ಞಾನಿಕತೆಯನ್ನು ಅರ್ಥ ಮಾಡಿಕೊಳ್ಳಲು ಯತ್ನಿಸುತ್ತಿದ್ದರು.

            ಮಸಗಿಯವರು ಮೆಕಾನಿಕಲ್ ಎಂಜಿನಿಯರ್ ಆದರು. ತನ್ನ ಕುಟುಂಬವನ್ನು ಸಹಕರಿಸಲು ಹಾಗೂ ಒಡಹುಟ್ಟಿದವರನ್ನು ವಿದ್ಯಾವಂತರನ್ನಾಗಿಸಲು ಒಂದು ದೊಡ್ಡ ಕೈಗಾರಿಕಾ ಸಂಸ್ಥೆಯಲ್ಲಿ ಲಾಭದಾಯಕ ಹುದ್ದೆಗೆ ಸೇರಿಕೊಂಡರು. 1994ರಲ್ಲಿ ಒಂದು ತುಂಡು ಜಮೀನನ್ನು ಖರೀದಿಸಿ ಹಲವಾರು ಕೃಷಿ ಪ್ರಯೋಗಗಳನ್ನು ನಡೆಸುವುದರ ಮೂಲಕ ತಂದೆಯು ಜಮೀನಿಗೆ ಹೆಚ್ಚು ದರದ ಬಾಡಿಗೆ ಕೊಡುವುದನ್ನು ತಪ್ಪಿಸಿದರು. ಕರ್ನಾಟಕದ ಬರಪೀಡಿತ ಪ್ರದೇಶದಲ್ಲಿ ನೀರಿಗೆ ಅಭಾವವಿರುವುದು ಮನದಟ್ಟಾಗಿ ಮಸಗಿಯವರು ಪರೀಕ್ಷಿಸಿ ಮಳೆನೀರನ್ನು ಸಂರಕ್ಷಿಸಲು ಹೊಸ ತಂತ್ರಜ್ಞಾನವನ್ನು ಹೂಡಿದರು. 1998ರಲ್ಲಿ ಅವರ ಅಧ್ಯಯನ ಮತ್ತು ತಂತ್ರಜ್ಞಾನದ ಬಗ್ಗೆ ಇತರೆ ರೈತರುಗಳ ಜೊತೆ ಹಂಚಿಕೊಳ್ಳಲು ಪ್ರಾರಂಭಿಸಿದರು ಮತ್ತು 4 ವರ್ಷಗಳ ನಂತರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು.

            ಮಸಗಿಯವರು ತಮ್ಮ ವಿವಿಧ ಕಾರ್ಯಕ್ರಮಗಳ ಮೂಲಕ ರೈತರಿಗೆ ಮಳೆನೀರಿನ ಸಂಗ್ರಹ ಮತ್ತು ನಿರ್ವಹಣೆಯ ಬಗ್ಗೆ ತರಬೇತಿ ನೀಡಿದರು. ನೀರಿನ ಅಗತ್ಯತೆಗಳನ್ನು ಪೂರೈಸಿಕೊಳ್ಳುವುದು ಹೇಗೆ? ಯಾವ ಬೆಳೆಯನ್ನು ಬೆಳೆಯುವುದು? ಎಂಬುದರ ಬಗ್ಗೆ ರೈತರಿಗೆ ಸಲಹೆಗಳನ್ನು ನೀಡಿದರು. ಮಸಗಿಯವರ ಎಲ್ಲಾ ಶ್ರಮ ಹಾಗೂ ಪ್ರಯತ್ನದಿಂದ ರೈತರು ತಮ್ಮ ಕಾಲ ಮೇಲೆ ನಿಂತು, ಸ್ವಾವಲಂಭಿಯಾಗಿ ಹೆಚ್ಚು ಆದಾಯ ಗಳಿಸಿ, ನೀರಿಗಾಗಿ ಇತರೆ  ಹಾಗೂ ಹೊರ ಆಧಾರಕ್ಕೆ ಅವಲಂಬಿತವಾಗುವುದು ಕಡಿಮೆಯಾಯಿತು

            ಮಸಗಿಯವರು ರೈತರಿಗೆ ವಿವಿಧ ಬೆಳೆಗಳ ನಿರ್ಧಾರ ಮಾಡಿ ಆದಾಯವನ್ನು ಲಾಭದಾಯಕವಾಗಿಸಿ ನೀರಿನ ಬಳಕೆಯನ್ನು ಕಡಿಮೆ ಮಾಡಿ, ಕೃಷಿಗೆ ತಗುಲುವ ವೆಚ್ಚವನ್ನು ಕಡಿಮೆಗೊಳಿಸಲು ಬೆಂಬಲ ನೀಡಿದರುಹನಿ ನೀರಾವರಿ ಪದ್ಧತಿ, ತುಂತುರು ನೀರಾವರಿ ಪದ್ಧತಿ, ರಂಧ್ರಗಳ ಮೂಲಕ ನೀರು ಇಂಗುವಿಕೆ, ಸಾವಯವ ಗೊಬ್ಬರಗಳ ಬಳಕೆಗಳನ್ನು ಪರಿಚಯಿಸಿದರು. ಬೆಳೆಯ ಆಯ್ಕೆ ಮತ್ತು ಲಾಭದಾಯಕ ಆದಾಯ, ಭೂಮಿಯ ಆದ್ರ್ರತೆಯನ್ನು ಕಾಪಾಡಿಕೊಳ್ಳುವುದರ ತರಬೇತಿ ನೀಡಿದರು ಮತ್ತು ಅರಣ್ಯವನ್ನು ಬೆಳೆಸಿ ಮಣ್ಣಿನ ಸವಕಳಿಯನ್ನು ತಡೆಗಟ್ಟುವುದನ್ನು ಪ್ರೇರೇಪಿಸಿದರು.

            ಮಸಗಿಯವರು ಜಲ ಸಾಕ್ಷರತಾ ಆಂದೋಲನ ಹಾಗೂ ಮಳೆ ನೀರು ನಗಾರಿ ಎಂಬ ಕಾರ್ಯಕ್ರಮದ ಮೂಲಕ ಮಳೆ ನೀರಿನ ಬಗ್ಗೆ ತಿಳಿವಳಿಕೆ ನೀಡುತ್ತಿದ್ದಾರೆ. ಇವರ ನೆಲ-ಜಲ-ಜನ ಎಂಬ ಪುಸ್ತಕವು ವರ್ಷ ಏಳನೆಯ ಮುದ್ರಣದಲ್ಲಿದೆ.

            ಮಸಗಿಯಂತಹ ಒಳ್ಳೆಯ ಕಾರ್ಯವನ್ನು ಎಷ್ಟು ಜನರು ಕೈಗೊಳ್ಳುತ್ತಾರೆ? ಇದರಿಂದ ನೀರಿನ ಯೋಗ್ಯ ರೀತಿಯ ಬಳಕೆಯ ಬಗ್ಗೆ ಒಬ್ಬರಿಗೆ ಅರಿವು ಮೂಡಿದರೂ ನಮ್ಮ ಪತ್ರಿಕೆಯ ಉದ್ದೇಶ ಈಡೇರಿದಂತೆ.

            Ayyapa Masagi's technology saves million of liters of water every year for farmers and mining companies.

 

MASAGI 

Mob: 91 9448379497

 

ನಿರ್ಮಲ ಎಲ್., ನಿರಾತಂಕ

ಮೊ: 963295588


No comments:

Post a Comment