Wednesday, October 2, 2013

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ.


ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳು
            ಅಸಂಘಟಿತ ವಲಯದ ಭಾಗವಾಗಿರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಮತ್ತು ಅವರ ಮಕ್ಕಳಿಗಾಗಿ ಮಂಡಳಿಯು ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದೆ.
            ಮಂಡಳಿಯ ವತಿಯಿಂದ ನೀಡಲಾಗುತ್ತಿರುವ ಸೌಲಭ್ಯ ಪಡೆಯಲು ಕಾರ್ಮಿಕ ಇಲಾಖೆಯ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಬಳಿ ನಮೂನೆ 5ರಲ್ಲಿ ಅರ್ಜಿ ಸಲ್ಲಿಸಿ ನೋಂದಾಯಿಸಬೇಕಾಗುತ್ತದೆ.

ಅರ್ಹತೆಗಳು:
18 ವರ್ಷದಿಂದ 60ವರ್ಷದೊಳಗಿನ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಾಗಿರಬೇಕು.
ನೋಂದಾಯಿಸುವ ವಿಧಾನ: ರೂ. 25 ನೊಂದಣಿ ಶುಲ್ಕ, ಮೂರು ಭಾವ ಚಿತ್ರಗಳು, ಉದ್ಯೋಗ ಪ್ರಮಾಣ ಪತ್ರ, ವಯಸ್ಸಿನ ದೃಢೀಕರಣ ಪತ್ರ ಹಾಗೂ ನಮೂನೆ 6 ರಲ್ಲಿ ನಾಮ ನಿರ್ದೇಶನ ಅರ್ಜಿ ಇವುಗಳನ್ನು ಸಲ್ಲಿಸಬೇಕಾಗುತ್ತದೆ. ನಂತರ ಗುರುತಿನ ಚೀಟಿಯನ್ನು ಫಲಾನುಭವಿಗಳಿಗೆ ನೀಡಲಾಗುತ್ತದೆ

1. ಫಲಾನುಭವಿಯೆಂದು ನೊಂದಣಿಯಾದ ತಕ್ಷಣ ದೊರೆಯುವ ಸೌಲಭ್ಯಗಳು:
            1. ಕಾರ್ಮಿಕರು ಸರ್ಕಾರಿ ಆಸ್ಪತ್ರೆಯಲ್ಲಿ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ ಒಳ ರೋಗಿಯಾಗಿ ಚಿಕಿತ್ಸೆ ಪಡೆದುದಕ್ಕೆ ಗರಿಷ್ಠ ರೂ. 2000/-ಗಳ ಧನ ಸಹಾಯ.
            2. ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಅಪಘಾತಕ್ಕೀಡಾಗಿ ಮೃತರಾದರೆ ಅಥವಾ ಶಾಶ್ವತ ಅಂಗವಿಕಲರಾದರೆ ರೂ. 100000/- ಪರಿಹಾರ ಧನ.
            3. ಸರ್ಕಾರಿ/ಸರ್ಕಾರದಿಂದ ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ ಕಾರ್ಮಿಕರ ಹೃದ್ರೋಗ, ಕಿಡ್ನಿ ಜೋಡಣೆ, ಕ್ಯಾನ್ಸರ್ ಶಸ್ತ್ರ ಚಿಕಿತ್ಸೆಗಾಗಿ ರೂ.50000/- ವರೆಗೆ ಧನ ಸಹಾಯ.
            4. ಮೃತ ಕಾರ್ಮಿಕರ ಅಂತ್ಯಕ್ರಿಯೆಗಾಗಿ ರೂ.4000/- ಧನ ಸಹಾಯ.

2. ಒಂದು ವರ್ಷ ಸದಸ್ಯತ್ವ ಪೂರ್ಣಗೊಂಡ ಫಲಾನುಭವಿಗಳಿಗೆ ದೊರಕುವ ಸೌಲಭ್ಯಗಳು:
1. ಮಹಿಳಾ ಕಾರ್ಮಿಕರಿಗೆ ಎರಡು ಸಲ ಮಾತ್ರ ತಲಾ ರೂ.6000/- ಹೆರಿಗೆ ಸೌಲಭ್ಯ.
2. ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಧನ ಸಹಾಯ:
ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ. ಪಾಸಾದವರಿಗೆ                        -ರೂ. 3000/-
.ಟಿ. ಅಥವಾ ಡಿಪ್ಲೋಮಾ ಓದುತ್ತಿರುವವರಿಗೆ                                  -ರೂ. 3000/-
ಪದವಿ ಓದುತ್ತಿರುವವರಿಗೆ                                                               -ರೂ. 3000/-
ಸ್ನಾತಕೊತ್ತರ ಪದವಿ ಓದುತ್ತಿರುವವರಿಗೆ                                            -ರೂ. 6000/-
ಮೆಡಿಕಲ್ / ಎಂಜಿನಿಯರಿಂಗ್ ಓದುತ್ತಿರುವವರಿಗೆ                                -ರೂ. 10000/-

3. ಎರಡು ವರ್ಷ ಸದಸ್ಯತ್ವ ಪೂರ್ಣಗೊಂಡ ಫಲಾನುಭವಿಗಳಿಗೆ ದೊರಕುವ ಸೌಲಭ್ಯಗಳು:
            ಕಟ್ಟಡ ನಿರ್ಮಾಣ ಉಪಕರಣಗಳನ್ನು ಖರೀದಿಸುವ ಸಲುವಾಗಿ ರೂ. 5000/- ಬಡ್ಡಿರಹಿತ ಸಾಲ

4. ಐದು ವರ್ಷ ಸದಸ್ಯತ್ವ ಪೂರ್ಣಗೊಂಡ ಫಲಾನುಭವಿಗಳಿಗೆ ದೊರಕುವ ಸೌಲಭ್ಯಗಳು.
            ಕುಷ್ಠರೋಗ, ಕ್ಯಾನ್ಸರ್, ಪಾಶ್ರ್ವವಾಯು, ಕ್ಷಯರೋಗ ಕಾಯಿಲೆಗಳಿಂದ ಶಾಶ್ವತ ಅಂಗವಿಕಲತೆಗಾಗಿ ಮಾಹೆಯಾನ ರೂ. 300/- ಅಂಗವಿಕಲತೆಯ ಪಿಂಚಣಿ.
            ಅಂಗವಿಕಲತೆಯ ಶೇಕಡಾವಾರು ಪ್ರಮಾಣವನ್ನು ಆಧರಿಸಿ ರೂ.5000/- ಧನ ಸಹಾಯ.

50 ವರ್ಷದ ಮಹಿಳಾ ಫಲಾನುಭವಿಗಳಿಗೆ ಮತ್ತು 55 ವರ್ಷದ ಪುರುಷ ಫಲಾನುಭವಿಗಳಿಗೆ,
            ಮಾಹೆಯಾನ ರೂ. 300/-  ಪಿಂಚಣಿ.
            ಮನೆಕಟ್ಟಲು ಅಥವಾ ಖರೀದಿಸಲು ರೂ.50000/- ಸಾಲ (ವರ್ಷಕ್ಕೆ ಶೇ.5 ಬಡ್ಡಿ ದರ)

ಸಂಪರ್ಕಿಸಬೇಕಾದ ವಿಳಾಸ:
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಬೆಂಗಳೂರು, ಕೌಶಲ್ಯ ಭವನ, ಬನ್ನೇರು ಘಟ್ಟ ರಸ್ತೆ, ಬೆಂಗಳೂರು - 29
ದೂರವಾಣಿ ಸಂಖ್ಯೆ: 22721602/03/04


-ವೆಂಕಟೇಶ್ ಕೆ., ನಿರಾತಂಕ

No comments:

Post a Comment