Tuesday, October 1, 2013

ರಾಣಿಚನ್ನಮ್ಮ ವಿಶ್ವವಿದ್ಯಾನಿಲಯದ ಸಮಾಜಕಾರ್ಯ ಸಹಾಯಕ ಉಪನ್ಯಾಸಕರ ನೇಮಕಾತಿಯಲ್ಲಿ ಪ್ರವರ್ಗ- 1 ಕ್ಕೆ ಅನ್ಯಾಯ


ಉನ್ನತ ಶಿಕ್ಷಣದ ನೇಮಕಾತಿಯಲ್ಲಿ ಪಾರದರ್ಶಕತೆ ಇಲ್ಲದಿದ್ದರೆ ಅದು ಮರುಭೂಮಿಯ ಮರಿಚಿಕೆಯೇ ಸರಿ. ಈ ನಿಟ್ಟಿನಲ್ಲಿ ರಾಣಿಚನ್ನಮ್ಮ ವಿಶ್ವವಿದ್ಯಾನಿಲಯದಲ್ಲಾದ ನೇಮಕಾತಿ ಪ್ರಕ್ರಿಯೆಯಲ್ಲಿ ಸ್ಥಳೀಯರಿಗೆ  ಆದ್ಯತೆ ಕೊಡುವುದರ ಮುಖಾಂತರ ಉಪಕುಲಪತಿಗಳು ಸ್ಥಳೀಯರ ವಿರೋದವೆನೋ ಕಟ್ಟಿಕೊಳ್ಳಲಿಲ್ಲ . ವಿಶ್ವವಿದ್ಯಾನಿಲಯದಲ್ಲಿ ಪಾಂಡಿತ್ಯಕ್ಕೆ ಆದ್ಯತೆ ಇರಬೇಕೇ ಹೊರತು ಸ್ಥಳೀಯ ರಾಜಕಾರಣಿಗಳ ಮತ್ತು ಪ್ರತಿಷ್ಠಿತ ಖಾಸಗಿ ವಿಶ್ವವಿದ್ಯಾಲಯಗಳ ಹಾಗೂ ಪ್ರಭಾವಿ ಜಾತಿಗಳ ಒತ್ತಡಗಳಿಂದ ಪಾರಾಗಲು ಮತ್ತು ಅಧಿಕಾರದಲ್ಲಿ ಉಳಿಯುವ ಏಕೈಕ ದುರುದ್ದೇಶದಿಂದ ಕುಲಪತಿಗಳು ವಿಶ್ವವಿದ್ಯಾನಿಲಯಗಳ ಪಾವಿತ್ರತೆಯನ್ನು ಹಾಳುಗೆಡುವುತ್ತಿರುವುದು ಶೋಚನೀಯ ಸಂಗತಿ. ರಾಣಿಚನ್ನಮ್ಮ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರ/ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಮುಗಿದಿದ್ದು ಪ್ರಾಧ್ಯಾಪಕರ/ಉಪನ್ಯಾಸಕರಿಗೆ ನೇಮಕಾತಿ ಪತ್ರ ಕಳಿಸಲಾಗಿದೆ ಆದರೆ ಸಮಾಜಕಾರ್ಯ ವಿಭಾಗದ ನೇಮಕಾತಿಯಲ್ಲಿ ಪ್ರವರ್ಗ-1 ರ ಮಿಸಲಾತೀಯ ಸಹಾಯಕ/ಉಪನ್ಯಾಸಕರ ಹುದ್ದೆಯ ನೇಮಕಾತಿಯನ್ನು ಅನರ್ಹಗೊಳಿಸಲಾಗಿದೆ. ವಿಶ್ವವಿದ್ಯಾನಿಲಯ ನಿಯಮದ ಪ್ರಕಾರ ಒಂದು ಹುದ್ದೆಗೆ ಕನಿಷ್ಠ ಮೂರು ಅರ್ಹ ಅಭ್ಯರ್ಥಿಗಳು ಬಾರದಿದ್ದಾಗ ಅಂತಃ ನೇಮಕಾತೀಯನ್ನು ಅನರ್ಹಗೊಳಿಸಲಗುತ್ತದೆ ಆದರೆ ರಾಣಿಚನ್ನಮ್ಮ ವಿಶ್ವವಿದ್ಯಾನಿಲಯದ ಸಹಾಯಕ/ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯಲ್ಲಿ ಹಿಂದುಳಿದ ಪ್ರವರ್ಗ- 1ರ  ಉದ್ಯೋಗ ಬಯಸಿ ಬಂದಿದ್ದ ಅರ್ಹ ಅಭ್ಯರ್ಥಿಗಳ ಸಂಖ್ಯೆ ಒಂಬತ್ತು ಆದರೂ ಅಭ್ಯರ್ಥಿಯ ನೇಮಕಾತಿ ಆಗದಿರುವುದಕ್ಕೆ ಯಾವ ಕಾರಣಗಳು ತಿಳಿದುಬಂದಿಲ್ಲಾ ಅದೆ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು/ಉಪನ್ಯಾಸಕರು ಹೇಳುವ ಪ್ರಕಾರ ಈ ಮೀಸಲಾತಿಯ ಉದ್ಯೋಗವನ್ನು ಮುಂಬರುವ ನೇಮಕಾತಿ ಪ್ರಕ್ರಿಯೆಯಲ್ಲಿ ಬೇರೊಂದು ಮೀಸಲಾತಿಗೆ ವರ್ಗಾಯಿಸುವ ಎಲ್ಲಾ ಮುನ್ಸೂಚನೆಗಳು ಕಂಡುಬರುವುದರಿಂದಾಗಿ ಈ ಮಿಸಲಾತೀಯನ್ನು ಯಥಾವತ್ತಾಗಿ  ಕಾಯ್ದಿರಿಸಬೇಕೆಂದು  ಈ ಮೂಲಕ ರಾಣಿಚನ್ನಮ್ಮ ವಿಶ್ವವಿದ್ಯಾನಿಲಯದ ಆಡಳಿತವರ್ಗಕ್ಕೂ ಮತ್ತು ಉಪಕುಲಪತಿಗಳಿಗೂ ನನ್ನ ನಿವೇದನೆ. 

ಗುರಾದೇ 


No comments:

Post a Comment