Sunday, November 24, 2013

ದಶಕದ ಹಿಂದೆ ಆಕೆ ಹೇಳಿದ ಮಾತು, ಪ್ರಸ್ತುತ ಸಮಾಜಕಾರ್ಯದಲ್ಲಿ ನಿಜವೆನಿಸುತ್ತಿದೆ


ದಶಕದ ಹಿಂದೆ ಆಕೆ ಹೇಳಿದ ಮಾತುಪ್ರಸ್ತುತ ಸಮಾಜಕಾರ್ಯದಲ್ಲಿ ನಿಜವೆನಿಸುತ್ತಿದೆ
           
ನಮ್ಮ ಚಟಾಕಿ ಪ್ರಶ್ನೆಗಳಿಗೆ ಭೋರ್ಗರೆವ ಉತ್ತರಗಳನ್ನು ಆಕೆ ನೀಡುತ್ತಿದ್ದ ರೀತಿ ನಿಜಕ್ಕೂ ವೈಧಕೀಯ ಸಮಾಜ  ಕಾರ್ಯವೆಂಬ ಅಗಾಧ ಸಾಗರದಲ್ಲಿ  ಆಕೆ ಮಿಂದವರಂತೆ ಕಾಣುತ್ತಿದ್ದರು. ವೈಧ್ಯಕೀಯ ಸಮಾಜ ಕಾರ್ಯದ ಜ್ಞಾನದ ಮೇಲೆ ಆಕೆ ಸಾದಿಸಿದ್ದ ಪ್ರಭುತ್ವಕ್ಕೆ ಮನಸ್ಸು ಸೈಲೆಂಟ್ ಆಗಿ ಸೆಲ್ಯೂಟ್ ಹೊಡಿದಿತ್ತು. ಆಕೆ ಹೇಳಿಕೊಟ್ಟ ಅಷ್ಞು ಮಾಹಿತಿ ನಮಗೆ ಇಂದು ನೆನಪಿಲ್ಲದಿರಬಹುದು. ಆದರೆ ಅಂದು ಆಕೆ ಪ್ರಶ್ನೆಯೊಂದಕ್ಕೆ ನೀಡಿದ ಉತ್ತರ ಇಂದು ನಮ್ಮ ಸಮಾಜ ಕಾರ್ಯವೃತ್ತಿಯಲ್ಲಿ ಒಂದು ಪ್ರಶ್ನೆಯಾಗಿ ಕಾಡುತ್ತಿರುವುದು ವಿಶೇಷ. ಇಷ್ಟಕ್ಕೂ ಪ್ರಶ್ನೆಯಾದರೂ ಏನು ಗೊತ್ತಾ?. ನಿಮಗೆಲ್ಲಾ ತಿಳಿದಿರುವಂತೆ ಸ್ನಾತಕೋತ್ತರ ಸಮಾಜಕಾರ್ಯದಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಓರಿಯಂಟೇಷನ್ ಗೆ ಕರೆಯೋಯ್ಯವಂತೆ ನಮ್ಮನ್ನು ವೈಧ್ಯಕೀಯ ಲೋಕಕ್ಕೆ ಸವಾಲು ಎನಿಸಿರುವ ಕ್ಯಾನ್ಸರ್ ದವಡೆಯಿಂದ ರೋಗಿಯನ್ನು ಪಾರು ಮಾಡುವ ಪ್ರಕ್ರಿಯೆಯಲ್ಲಿ ವೃತ್ತಿಪರ ಸಮಾಜ ಕಾರ್ಯದ ಮಹತ್ವ ತಿಳಿಯಲು ಬೆಂಗಳೂರಿನ ಪ್ರಸಿದ್ದ ಕ್ಯಾನ್ಸರ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
            ಅಂದು ಎಲ್ಲರಿಗೂ ವೈದ್ಯಕೀಯ ಸಮಾಜ ಕಾರ್ಯಕರ್ತರ ಪಾತ್ರದ ಬಗ್ಗೆ ಕುತೂಹಲ ಮೊಳೆತರೆ, ನನಗೆ ಮಾತ್ರ ಆಕೆ ಅಂದು ನೀಡಿದ ಉತ್ತರದ ಮೇಲೆ ಕುತೂಹಲ ಮೂಡಿಸಿತ್ತು. ವೈದ್ಯಕೀಯ ರಂಗದಲ್ಲಿ ವೃತ್ತಿಪರ ಸಮಾಜ ಕಾರ್ಯದ ಪಾತ್ರದ ಬಗ್ಗೆ ವಿದ್ಯಾರ್ಥಿಯೊಬ್ಬ ಕೇಳಿದ ಪ್ರಶ್ನೆಗೆ, ಸರಳವಾಗಿ ಆಕೆ ನಗುತ್ತಲೇ ಊಟದಲ್ಲಿ ಬಳಸಲಾಗುವ ಕರಿಬೇವುನಂತೆ ವೈದ್ಯಕೀಯ ಸಮಾಜಕಾರ್ಯ ಎಂಬ ಉತ್ತರ, ಸಮಾಜ ಕಾರ್ಯದ ಮೇಲೆ ಅಗಾದ ಭರವಸೆ ಹಾಗೂ ಹಗಲು ಗನಸುಗಳನ್ನು ಹೊಂದಿದ್ದ ನನ್ನಂತಹವನಿಗೆ ರುಚಿಸಿರಲಿಲ್ಲ. ಆದರೆ ಹಲವು ವರ್ಷಗಳ ಕಾಲ ಆರೋಗ್ಯ ಕ್ಷೇತ್ರದಲ್ಲಿ ಒಬ್ಬ ಆಪ್ತಸಮಾಲೋಚಕನಾಗಿ, ಇನ್ನೀತರ ಹುದ್ದೆಗಳಲ್ಲಿ ದುಡಿದ ಮೇಲೆ ಹಾಗೂ ಮಾಜಿ ಆರೋಗ್ಯ ಇಲಾಖೆಯ ನಿರ್ದೇಶಕರೊಬ್ಬರು ಆಪ್ತಸಮಾಲೋಚನೆ ಯಾರೂ ಬೇಕಾದರೂ ಮಾಡಬಹುದು, ಅದಕ್ಕೇಕೆ ವೃತ್ತಿಪರ ಸಮಾಜಕಾರ್ಯಕರ್ತರು ಎಂದು ಪ್ರಶ್ನಿಸಿದಾಗ, ಮರೆತಂತೆ ಇದ್ದ ಆಕೆಯ ಉತ್ತರ ಮನದಲ್ಲಿ ಒಂದು ಯಕ್ಷಪ್ರಶ್ನೆಯಾಗಿ ತಲೆ ಎತ್ತಿತ್ತುನಿಜ ನಮ್ಮ ದೇಶದಲ್ಲಿ ಒಬ್ಬ ವಕೀಲ, ವೈದ್ಯ, ಪರ್ತಕರ್ತನಿಗೆ ಇರುವ ವೃತ್ತಿಪರ ಇಮೇಜು, ವೃತ್ತಿಪರ ಸಮಾಜಕಾರ್ಯಕರ್ತನಿಗೆ ಇಲ್ಲಾ. ಕಾರಣ  ಯಾವುದೇ ವೃತ್ತಿಯನ್ನು ಕೈಗೊಳ್ಳಲು ವೃತ್ತಿಪರ ತರಭೇತಿ ಅತ್ಯಗತ್ಯ. ಆದರೆ ನಮ್ಮಲ್ಲಿ ಸಮಾಜ ಕಾರ್ಯ ಹಾಗಲ್ಲ, ಇಲ್ಲಿ ಯಾರೂ ಬೇಕಾದರೂ ಮಾಡಬಹುದು ಎನ್ನುವ ನಿಲುವು. ಅಲ್ಲದೇ ಯಾರಾದರೂ ಪುಣ್ಯ ಪುರಷರು ಇವೆಲ್ಲವನ್ನು ಪವಾಡ ಮಾಡಿದಂತೆ ಎಲ್ಲವೂ ಸರಿಪಡಿಸಿಲಿ ನಮಗ್ಯಾಕೆ ಎಂಬ ನಮ್ಮ ಇರಾದೆ, ನಮ್ಮ ವೃತ್ತಿಯನ್ನು ಇತರರು ಯಾಕೇ ಬೆಳೆಸಬೇಕು. ಹಗಲಿರಳು ಅದೇ ವೃತ್ತಿಯಲ್ಲಿ ಜೀವನ ಮಾಡುವ ನಾವು ಯಾಕೇ ನಮ್ಮ ವೃತ್ತಿಪರ ಸಮಾಜಕಾರ್ಯಕ್ಕೆ ಅಂತಹ ಒಂದು ಗಟ್ಟಿಯಾದ ಇಮೇಜನ್ನು ತರಲು ಸಾದ್ಯವಾಗಲಿಲ್ಲ ಎನ್ನುವ ಮೂಲಭೂತ ಪ್ರಶ್ನೆ ಮನದಲ್ಲಿ ಸದಾ ಕಾಡುತ್ತಿರುತ್ತದೆಸರ್ಕಾರಿ, ಅರೆ ಸರ್ಕಾರಿ, ಸ್ವಯಂ ಸೇವಾ ಸಂಸ್ಥೆಗಳು, ಖಾಸಗಿ ಸಂಸ್ಥೆಗಳಲ್ಲಿನ ಸಮಾಜ ಕಾರ್ಯಕ್ಕೆ ಸಂಬಂದಿಸಿದ ಹುದ್ದೆಗಳ ನೇಮಕಾತಿ ವಿಚಾರದಲ್ಲಿ ಇಂತಹ ವೃತ್ತಿಗೆ ಇಂತಹ ಕೋರ್ಸಿನವರೇ ಬೇಕು ಎನ್ನುವ ನೀತಿಯ ಕೊರತೆಯೋ?, ಅಥವಾ ಕೆಲವೆಡೆ ನೀತಿ ಇದ್ದರೂ ಅದನ್ನು ಕಟ್ಟುನಿಟ್ಟಾಗಿ ಅನುಸರಿಸುವಲ್ಲಿನ ಬದ್ದತೆಯ ಕೊರತೆಯೋಇಂತಂಹ ದೋರಣೆಗಳಿಂದ ನಮ್ಮನ್ನು ಮತ್ತು ನಮ್ಮ ಸಮಾಜ ಕಾರ್ಯವನ್ನು ಭವಿಷ್ಯದ ವೃತ್ತಿ ಸಮಸ್ಯೆಗಳಿಗೆ ಭವಿಷ್ಯದ ಕೀಲಿಕೈ ಆಗಿ ಬೆಳೆಸುವಲ್ಲಿ ಅಡ್ಡಿಯಾಗುತ್ತಿದೆ.

ಕರ್ನಾಟಕದಲ್ಲಿ ಸಮಾಜ ಕಾರ್ಯವನ್ನು ಪರಿಚಯಿಸುವಲ್ಲಿ ಹಲವಾರು ಮೇಧಾವಿಗಳ ಕೊಡುಗೆ ಆಪಾರ. ಅವರು ಪರಿಚಯಿಸಿದ ವೃತ್ತಿಪರ ಸಮಾಜ ಕಾರ್ಯಕ್ಕೆ ಒಂದು ಪ್ರಖರ ಇಮೇಜನ್ನು ತಂದು ಕೊಡುವುದು ನಮ್ಮ ನಿಮ್ಮಲ್ಲೆರ ಆದ್ಯ ಕಾರ್ಯವಲ್ಲವೇ?. ಒಬ್ಬ ವಕೀಲ, ವೈಧ್ಯ, ಪತ್ರಕರ್ತ ತನ್ನ ವೃತ್ತಿಯನ್ನು ಹೆಮ್ಮೆ ಎನ್ನಿಸುವಂತೆ ಬೆಳೆಸಿರುವುದು ನಮಗೆ ಆದರ್ಶವಲ್ಲವೇ?. ಅದೆಷ್ಟೋ ಮಂದಿಯ ಸಮಾಜ ಕಾರ್ಯದ ಪಾತ್ರ ಅಡುಗೆಯಲ್ಲಿನ ಕರಿಭೇವಿನ ರೀತಿ ಇದ್ದು ಇಲ್ಲದಂತೆ, ಇಲ್ಲದೇ ಹೋದರೆ ರುಚಿಸದು ಎನ್ನುವ ಹಂತಕ್ಕೆ ಸಮಾಜ ಕಾರ್ಯ ತಲುಪಿದರೆ ಅದಕ್ಕಿಂತ ದೊಡ್ಡ ದುರಂತ ಮತ್ತೊಂದು ಇರುವುದಿಲ್ಲ. ದಶಕದ ಹಿಂದೆ ಆಕೆ ಹೇಳಿದ ಮಾತು ಇಂದು ನನಗೆ ಸಮಾಜ ಕಾರ್ಯದ ಆನೇಕ ಕ್ಷೇತ್ರಗಳಲ್ಲಿ ನಿಜವೆನಿಸುವಂತಿದೆ. ನೂರು ಕೋಟಿ ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ ಇರಬಹುದಾದ ಮಾನಸಿಕ ಮತ್ತು ಭೌತಿಕ ಆರೋಗ್ಯದ ಸಮಸ್ಯೆಗಳೆಷ್ಟುಅವುಗಳ ಚಿಕಿತ್ಸೆಗೆ ಹಾಗೂ ತಡೆಗಟ್ಟುವಿಕೆಗೆ ಬಾರತದಲ್ಲಿ ಬಳಸಲಾಗುತ್ತಿರುವ ವೈಧ್ಯಕೀಯ ಸಮಾಜಕಾರ್ಯಕರ್ತರ ಪ್ರಮಾಣವೆಷ್ಟು ಎಂದು ಯೋಚಿಸಿದರೆ, ನಮಗೆ ನಮ್ಮ ವೃತ್ತಿ ದಶಕದಿಂದ ದಶಕಕ್ಕೆ ಬೆಳವಣಿಗೆಗೊಳ್ಳುತ್ತಿರುವ ಮಂದಗತಿ ಯೋಚಿಸುವಂತೆ ಮಾಡಿಬಿಡುತ್ತದೆಕಾರಣ ಆಕೆಯಂತೆ ನನಗೂ ಕೂಡ ವೃತ್ತಿಪರ ಸಮಾಜಕಾರ್ಯ ಅಂತುಹುದೇ ಅನುಭವದ ಪಾಠ ಹೇಳಿಕೊಟ್ಟಿದೆ. ನಮ್ಮ ವೃತ್ತಿಯು  ಸಮಾಜದಲ್ಲಿ ಎಲ್ಲ ವೃತ್ತಿಗಳಂತೆ ತನ್ನದೇ ಆದ ಹಿರಿಮೆಯನ್ನು ಪಡೆಯುವ ಕಾಲ ಹತ್ತಿರದಲ್ಲಿ ಇರಬಹುದೇ? ಅಡುಗೆಗೆ ಕರಿಬೇವಿನಂತೆ ಅಲ್ಲದೇ, ನಿತ್ಯವು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವ ಒಂದು ನಿತ್ಯೋತ್ಸವದಂತೆ ಆಗಬಹುದೇ?. ಕಾದು ನೋಡೋಣ, ಕಾರಣ ಕಾಲಾಯ ತಸ್ಮೈ ನಮಃ

                                                         ಮೋಹನ್ ಕುಮಾರ್. ವಿ
                                                  ಅತಿಥಿ ಉಪನ್ಯಾಸಕರು, ಸಮಾಜಕಾರ್ಯ ವಿಭಾಗ
                                                          ಸ್ನಾತಕೋತ್ತರ ಕೇಂದ್ರ- ಕೋಲಾರ
                                                          ಮೊಬೈಲ್ ಸಂ: 9242039018



No comments:

Post a Comment