Friday, November 15, 2013

ಸಮಾಜ ಕಾರ್ಯದಲ್ಲಿ ಹಸಿದವನಿಗೆ ಮೀನೇಕೆ ಹಿಡಿದುಕೊಡಬಾರದ್ದು ಅಂತಾ ಹೇಳ್ತಾರೆ?



2001ನೇ ಶೈಕ್ಷಣಿಕ ಸಾಲಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದಿಂದ ಸಮಾಜ ಕಾರ್ಯದ ಗೀಳು ಹತ್ತಿಸಿಕೊಂಡ 27 ವಿದ್ಯಾರ್ಥಿ ಗೆಳೆಯರೊಂದಿಗೆ ಇಂದಿನ ರಾಮನಗರ ಜಿಲ್ಲೆಯ ಕನಪುರ ತಾಲ್ಲೂಕಿನ ಗಾಣಾಳ ದೊಡ್ಡಿಯಲ್ಲಿ ವಿನೂತನ ಸಮುದಾಯ ಕಾರ್ಯಗಳ ಮೂಲಕ ಸಮಾಜ ಕಾರ್ಯವನ್ನು ಕಲಿಯುವ ಹೆಬ್ಬಯಕೆಯೊಂದಿಗೆ ಸ್ವಯಂ ಪ್ರೇರಿತರಾಗಿ ಒಂದು ದಿನದ ವಿಶೇಷ ಶಿಭಿರನ್ನು ಹಮ್ಮಿಕೊಂಡಿದ್ದೆವುಪೂರ್ವ ಯೋಜನೆಯಂತೆ ಶ್ರಮದಾನದ ಮೂಲಕ ಹಳ್ಳಿಯ ಶಾಲೆಯ ಆವರಣ ಮತ್ತು ಚರಂಡಿ ಶುಚಿತ್ವದ ಕಾರ್ಯಕ್ಕೆ ಕೈಹಾಕಿದ್ದೆವು. ಗ್ರಾಮದ ಮೂಲ ಪರಿಚಯವೇ ಇಲ್ಲದ ನಮ್ಮ ಅದೆಷ್ಟೋ ವಿದ್ಯಾರ್ಥಿ ಮಿತ್ರರು ಕೊಳಕು ತುಂಬಿದ ಊರಿನ ಚರಂಡಿಗಳನ್ನು ಶ್ರದ್ದೆಯಿಂದ ಶುಚಿಗೊಳಿಸುತ್ತಿದ್ದನ್ನು ಕಂಡ ಗ್ರಾಮದ ಜನರು, ನಮ್ಮನ್ನು ತಮ್ಮ ಮನೆಗಳಿಗೆ ಗ್ರಾಮದೇವತೆಗಳನ್ನು ಆಹ್ವಾನಿಸುವಂತೆ ನಮ್ಮ ಮನೆ ಕಡೆ ಬನ್ನಿ, ನಮ್ಮ ಏರಿಯಾಗೆ  ಬನ್ನಿ ಎಂದು ದುಂಬಾಲು ಬಿದ್ದಿದ್ದರು. ಜನರ ಪ್ರತಿಕ್ರಿಯೆಗಳಿಂದ ಮತ್ತಷ್ಟು ಉಬ್ಬಿದ ನಾವು ಸಿಕ್ಕಾಪಟ್ಟೆ ಕೆಲಸ ಮಾಡಿ ಊರಿನ ರಸ್ತೆಗಳನ್ನು ಶುಚಿಗೊಳಿಸಲು ನಾ ಮುಂದು ತಾ ಮುಂದು ಎನ್ನುವಂತೆ ಸ್ಪರ್ಧೆಗಿಳಿದುಬಿಟ್ಟಿದ್ದೆವು.
ಸಂಜೆ ಶಾಲೆಯ ಆವರಣದಲ್ಲಿ ಶಿಕ್ಷಣ, ಆರೋಗ್ಯ, ಪರಿಸರದ ಮಹತ್ವದ ಕುರಿತು ಭರ್ಜರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿ ಜನರಿಂದ ಸೈಎನಿಸಿಕೊಂಡಿದ್ದೇವುಮನೆಗಳಲ್ಲಿ ಕಸ ಹೊಡೆಯದ ನಾವು ಸಿಕ್ಕಾಪಟ್ಟೆ ಬೆವರು ಹರಿಸಿ ಕೈಗೊಂಡ ಶ್ರಮದಾನದಿಂದ  ಖುಷಿಗೊಂಡಿದ್ದ ಗ್ರಾಮಸ್ಥರು ಖುಷಿಯಿಂದಲೇ ಬಿಳ್ಕೋಡುಗೆ ನೀಡಿ, ಬಸ್ ಹತ್ತಿಸಲು ಬಸ್ ನಿಲ್ದಾಣಕ್ಕೆ ಊರಿನ ಜನರೆಲ್ಲ ನಮ್ಮೊಂದಿಗೆ ಹೆಜ್ಜೆ ಹಾಕುತ್ತಿದ್ದನ್ನು ನೋಡಿ ನಮ್ಮಲ್ಲೇ ಒಂದು ರೀತಿಯ ಪುಳಕ. ಇನ್ನೇನು ಬಸ್ ಹತ್ತಬೇಕು ಎನ್ನುವಷ್ಟರಲ್ಲಿ  ಗ್ರಾಮದ ಮುಖಂಡನೊಬ್ಬ ನಮ್ಮ ದೂರವಾಣಿ ಸಂಖ್ಯೆಯನ್ನು ನೀಡಬೇಕೆಂದು ದುಂಬಾಲು ಬಿದ್ದಿದ್ದಮೊಬೈಲ್ ಇಲ್ಲದ ಕಾಲಕ್ಕೆ ಕಾಲೇಜಿನ ದೂರವಾಣಿ ಸಂಖ್ಯೆಯನ್ನು ಬರೆಯತ್ತಾ, ಕುತೂಹಲದಿಂದ ಯಾಕೇ ಎನ್ನುವಂತೆ ಸಂಜ್ಙೆ ಮಾಡಿದ್ದೆ, ಅದಕ್ಕೆ ಆತ ಇನ್ನಾರು ತಿಂಗಳ ನಂತರ ನಿಮ್ಮನ್ನು ಕರೆಸಬೇಕಲ್ಲ ಅದಕ್ಕೆ ಎಂದಿದ್ದಅರ್ಥವಾಗದೇ ಆಶ್ಚರ್ಯಕರ ರೀತಿಯಲ್ಲಿ ಯಾಕೇ ಎಂದೆಅದಕ್ಕೆ ಆತ ತಕ್ಷಣ ಇನ್ನಾರು ತಿಂಗಳ ನಂತರ ಊರಿನ ಚರಂಡಿ ಮತ್ತು ಶಾಲೆಯ ಆವರಣ ಕಸದಿಂದ ತುಂಬಿರುತ್ತದೆ. ಅದನ್ನು ಶುಚಿಗೊಳಿಸಬೇಕಲ್ಲ  ಎಂದು ಒಂದೇ ಸಮನೆ ಉಸಿರಿದಾಗ, ದೇಹದಲ್ಲಿ ಉಳಿದಿದ್ದ ಕಸುವೆಲ್ಲ ಉಡುಗಿ ಹೋಗಿತ್ತುಅಲ್ಲದೇ ಸಮುದಾಯ ಕಾರ್ಯಗಳ ಮೂಲಕ ಸಮಾಜಕಾರ್ಯವನ್ನು ಕಲಿಯಬೇಕೆಂಬ ಆತುರದಲ್ಲಿ ಜನರು ತಮ್ಮ ಸಮಸ್ಯೆಗಳನ್ನು ತಾವೇ ಪರಿಹರಿಸಿಕೊಳ್ಳಲು ನೆರವಾಗುವುದೇ ಸಮಾಜ ಕಾರ್ಯದ ನಿಜವಾದ ಉದ್ದೇಶ ಎಂದು ಮನಗಾಣದೇ, ಜನರು ನಿರ್ಲಕ್ಷಿಸಿದ್ದ ಜವಾಬ್ದಾರಿಯನ್ನು ನೆನೆಪಿಸುವ ಬದಲು ಅವರ ಕೆಲಸವನ್ನು ನಾವು ಮಾಡಿ ಅದನ್ನು ಸಮಾಜ ಕಾರ್ಯವೆಂದು ಭಾವಿಸಿಬಿಟ್ಟಿದ್ದ ತಪ್ಪು ನಮಗೆ ಮನವರಿಕೆಯಾಗಿತ್ತು  ಕಾರ್ಯದ ಬಗ್ಗೆ ಜನರಲ್ಲಿ ಸೂಕ್ತ ಅರಿವನ್ನು ಮೂಡಿಸಿ, ಸಾರ್ವಜನಿಕರ ಸಹಬಾಗಿತ್ವದಲ್ಲಿ ಕಾರ್ಯನಿರ್ವಹಿಸಿದ್ದರೆ, ಬಹುಶಃ ಅವರು ನಮ್ಮನ್ನು ಕಾಯುಬಹುದಾದ ಪ್ರಮೇಯವೇ ಬರುತ್ತಿರಲಿಲ್ಲ ಎಂಬ ಕಟುಸತ್ಯ ನಮಗೆ ಅರ್ಥವಾಗಿತ್ತು. ಪ್ರಯಾಣದಲ್ಲಿ ದಿನವಿಡೀ ಶ್ರಮದಾನ ಮಾಡಿ ದಣಿದ ದೇಹವು ನಿದ್ದೆಗೆ ಜಾರುತ್ತಿದ್ದರೆ, ಆತ ಕೇಳಿದ ಪ್ರಶ್ನೆ ನಮ್ಮ ಮನಸ್ಸನ್ನು ನಿದ್ದೆಯಿಂದ ಏಳುವಂತೆ ಮಾಡಿ, ಸಮಾಜ ಕಾರ್ಯದ ಸಮಗ್ರ ರೂಪವನ್ನು ಅರಿಯಲು ಮತ್ತು ಆಳವಡಿಸಿಕೊಳ್ಳಲು ಪ್ರೇರಕವಾಯಿತು. ಆಗಾಗ ಸಹಪಾಠಿಗಳು ಆರು ತಿಂಗಳಾಯಿತು ಎಂದೊಡನೆ, ಇದೆಲ್ಲಾ ನೆನಪಾಗಿ ಹೊಟ್ಟೆ ಹುಣ್ಣಾಗುವಂತೆ ನಗುತ್ತಾಸಮಾಜ ಕಾರ್ಯವೆಂಬುದು ಪುಸ್ತಕ ಬದನೆಕಾಯಿಗಿಂತ ವಿಸ್ತಾರವಾದುದೆಂದುಸಮಾಜ ಕಾರ್ಯದಲ್ಲಿ ಹಸಿದವನಿಗೆ ಮೀನು ಹಿಡಿದು ಕೊಡುವುದಿಕ್ಕಿಂತ, ಮೀನು ಹೇಗೆ ಹಿಡಿಯಬೇಕೆಂದು ಕಲಿಸುವುದು ಮಖ್ಯ ಎಂಬುದನ್ನು ಅರ್ಥ ಮಾಡಿಕೊಳ್ಳತೊಡಗಿದೆವು. ಗೆಲ್ಲಿಸದ ಅದೆಷ್ಟೋ ಪ್ರಯತ್ನಗಳು ನಮ್ಮನ್ನು ನಮ್ಮ ವೃತ್ತಿಯ ಮುಖ್ಯ ತಿರುಳಿನ ಕಡೆ ಮುಖ ಮಾಡುವಂತೆ ಮಾಡಿಬಿಡುತ್ತವೆ. ನಿಜವಾದ ಸಮಾಜ ಕಾರ್ಯವನ್ನು ಅರಿಯಬೇಕಾದರೆ ಮೊದಲು ಪುಸ್ತಕದಿಂದ ಹೊರಬರಬೇಕುಕಾರಣ ಸಮಾಜ ಕಾರ್ಯ ಹೆಚ್ಚು ವಿಸ್ತಾರವಾದ್ದದು.

ರಮೇಶ್ ರಾಜ್ ಗಿರಿ
ಉಪನ್ಯಾಸಕರು, ಮಂಡ್ಯ ಜಿಲ್ಲೆ.
           
        



No comments:

Post a Comment