Wednesday, November 20, 2013

ನಾನೇಕೆ ಸಮಾಜಕಾರ್ಯ ಮಾಡಬೇಕು ?

ಮೊನ್ನೆ ಆಗರ್ಭ ಶ್ರೀಮಂತರ ಮನೆಗೆ ಹೋಗಿದ್ದೆ. ಹುಟ್ಟಿನಿಂದಲೂ ಆಗರ್ಭ ಶ್ರೀಮಂತೆ. ಈಗ ವಯಸ್ಸು 22 ಇರಬಹುದು.  ನಾವಿಬ್ಬರೂ ಬಾಲ್ಯದಿಂದಲೂ ಸ್ನೇಹಿತರು ಹೀಗೇ ಹರಟುತ್ತಾ ಇರಬೇಕಾದರೆ ನಾನೇಕೆ ಸಮಾಜಸೇವೆ ಮಾಡಬೇಕು ಎಂಬ ಪ್ರಶ್ನೆ ಮುಂದಿಟ್ಟರು. ತುಂಬಾ ಸರಳವಾದ ಪ್ರಶ್ನೆ. ಆದರೆ ಉತ್ತರಿಸಲು ತುಸು ಕಷ್ಟ ಅನಿಸಿತು, ತಡವರಿಸಿದೆ. ಹೌದು 
ಬಹುಪಾಲು ಜನರಿಗೆ ಈ ಪ್ರಶ್ನೆ ಕಾಡಿದೆ ಅನ್ನಿಸುವುದಿಲ್ಲವೆ ?

1.      ಸಮಾಜಕಾರ್ಯ ಕೇವಲ ಸಮಾಜಕಾರ್ಯ ಕಲಿತ ಪದವಿಧರರು ಮಾತ್ರ ಮಾಡಬೇಕೆ ?
2.     ಸಮಾಜಕಾರ್ಯ ಅಥವಾ ಸಮಾಜ ಸೇವೆ ಮಾಡದಿದ್ದರೆ ಅದರ ಪರಿಣಾಮಗಳೇನು ?
3.     ಸಮಾಜಕಾರ್ಯ ಮಾಡಿದರೆ ಅದರಿಂದಾಗುವ ವೈಯಕ್ತಿಕ ಲಾಭಗಳೇನು ?
4.    ಸಮಾಜಕಾರ್ಯ ಮಾಡದದ್ದರೆ ಅದರಿಂದಾಗುವ ನಷ್ಟಗಳೇನು ?
5.     ಸಮಾಜಕಾರ್ಯ ಎಂಬ ಹೆಸರಿನಲ್ಲಿ ನಡೆಯುತ್ತಿರುವ ವ್ಯವಹಾರಗಳೇನು ?
ಹೀಗೆ ಹತ್ತು ಹಲವು ಪ್ರಶ್ನೆಗಳು ನನ್ನನ್ನು ಕಾಡುತ್ತಿವೆ.

ನೀವು ಉತ್ತರಿಸಲು ಪ್ರಯತ್ನಿಸಿ.

No comments:

Post a Comment