Thursday, April 9, 2015

ಡಾ. ಒಲಿಂಡಾ ಪೆರೀರಾ ಸಮಾಜಕಾರ್ಯ ಶಿಕ್ಷಣ ಕ್ಷೇತ್ರದಲ್ಲಿ ಒಂದು ನಕ್ಷತ್ರ

ಡಾ. ಒಲಿಂಡಾ ಪೆರೀರಾ ಸಮಾಜಕಾರ್ಯ ಶಿಕ್ಷಣ ಕ್ಷೇತ್ರದಲ್ಲಿ ಒಂದು ನಕ್ಷತ್ರ ಎಂದರೆ ಅತಿಶಯೋಕ್ತಿಯಾಗಲಾರದು. ಅವರ ಧೀಮಂತ ವ್ಯಕ್ತಿತ್ವ, ಸರಳತೆ, ವೃತ್ತಿಪರತೆ ಎಲ್ಲರಿಗೂ ಒಂದು ಮಾರ್ಗದರ್ಶಿ. 15ನೇ ಆಗಸ್ಟ್ 2015ಕ್ಕೆ 90 ವರುಷಗಳನ್ನು ದಾಟುತ್ತಿರುವ ಡಾ. ಒಲಿಂಡಾ ಪೆರೀರಾ ಇನ್ನೂ ಹದಿಹರೆಯದ ಜೀವನೋತ್ಸಾಹವನ್ನು ಇಟ್ಟುಕೊಂಡಿದ್ದಾರೆ. ಇವರ ಸಂದರ್ಶನ ಮಾಡಿದ ಶ್ರೀ ಎಸ್.ಎನ್. ಗೋಪಿನಾಥ್ ಮತ್ತು ಶ್ರೀ ಭೀಮರಾವ್ ಡಾ. ಒಲಿಂಡಾ ಪೆರೀರಾ ಅವರ ಹಳೆ ವಿದ್ಯಾರ್ಥಿಗಳು. ಇವರಿಬ್ಬರಿಗೆ ನಾನು ಕೃತಜ್ಞ.
- ಸಂಪಾದಕ
1)         ಸಮಾಜಕಾರ್ಯ ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮ ಆಗಮನ ಹಾಗೂ ಪ್ರಾರಂಭ ಹೇಗಾಯಿತು ?
ನಾನು 1946 ರಲ್ಲಿ Mathematics ನಲ್ಲಿ B.A. ಪದವಿ ನಂತರ 1947-48ರಲ್ಲಿ B.Ed. ಪದವಿಯನ್ನು ಪಡೆದು St. Marys ನಲ್ಲಿ ಅಧ್ಯಾಪಕಿಯಾಗಿದ್ದೆ. 1958ರಲ್ಲಿ Bombay University ಯಿಂದ ಮನಶಾಸ್ತ್ರದಲ್ಲಿ MA ಪದವಿಯನ್ನು ಪಡೆದು, 1960ರಲ್ಲಿ ಬಾಂಬೆಯ ನಿರ್ಮಲಾ ನಿಕೇತನ ದಲ್ಲಿ Diploma in Social Work ಪದವಿಯನ್ನು ಸಂಪಾದಿಸಿದೆ. 1960ರಲ್ಲಿ ಆಗ ತಾನೇ ಮಂಗಳೂರಿನ St. Agnes College ಸಮಾಜಕಾರ್ಯದಲ್ಲಿನ ತಮ್ಮ Course ನ್ನು ನಿಲ್ಲಿಸಿತ್ತು. ಆಗ ನಿರ್ಮಲಾ ನಿಕೇತನ ಬೊಂಬಾಯಿನ ನೇತೃತ್ವದಲ್ಲಿ 1960ರಲ್ಲಿ ಸಮಾಜಕಾರ್ಯದಲ್ಲಿ Certificate Course ಪ್ರಾರಂಭದೊಂದಿಗೆ ರೋಶನಿ ನಿಲಯದ ಸ್ಥಾಪನೆಯಾಯಿತು.
ನಿರ್ಮಲಾ ನಿಕೇತನ್ನ Mr. Dorothy Bekal ಮತ್ತು USA Mr. ARLINE A-hearrne ಇವರ ನೇತೃತ್ವದಲ್ಲಿ 10 Mths Course ಪ್ರಾರಂಭವಾಯಿತು. ನಂತರ ನಾನು ಮೈಸೂರು ವಿಶ್ವವಿದ್ಯಾಲಯದ ಸಹಯೋಗದೊಂದಿಗೆ 1964ರಲ್ಲಿ DSW ಪದವಿಯನ್ನು ಪ್ರಾರಂಭಿಸಿದೆ.
ಅದಾದ ನಂತರ 1967ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಶ್ರೀ ಶೀಮಾಲಿ ಮತ್ತಿ ರಿಜಿಸ್ಟ್ರಾರ್ ಶ್ರೀ ಕೆ.ಸಿ. ರಾಮಚಂದ್ರನ್, ಶ್ರೀ ಕೆಎಸ್ಎನ್ ಅಡಿಗ, ಸಿಂಡಿಕೇಟ್ ಸದಸ್ಯ ಇವರ ನೆರವಿನೊಂದಿಗೆ MC ಗೆ affiliate ಆಗಿ 1969ರಲ್ಲಿ MSW ಮೊದಲನೇ Batch ನ್ನು ಹೊರ ತಂದೆ.
1970-72 ಸಾಲಿನ MSW ಗೆ Specialization ಗಳನ್ನು ಅಳವಡಿಸಿದೆ. ನಂತರ 1974-75ರಲ್ಲಿ ಮೈಸೂರು ವಿಶ್ವವಿದ್ಯಾಲಯದ Prof. ಕೃಷ್ಣನ್ ಮಾರ್ಗದರ್ಶನದಲ್ಲಿ Clinical Psychology ನಲ್ಲಿ Ph.D. ಯನ್ನು ಪಡೆದೆ.
ಅಲ್ಲಿಂದ ಸಮಾಜಕಾರ್ಯ ಶಿಕ್ಷಣ ಕ್ಷೇತ್ರದಲ್ಲಿ ನಾನು ಹಂತಹಂತವಾಗಿ ಬೆಳೆದೆ ಎಂದರೆ ತಪ್ಪಾಗಲಾರದು.
2) ರೋಶನಿ ನಿಲಯದ ಸುಂದರವಾದ ಕ್ಯಾಂಪಸ್ಗೆ  ಸ್ಫೂರ್ತಿ ಯಾರು ?
ಪ್ರಾರಂಭದಲ್ಲಿ 1965ರಲ್ಲಿ ನಿರ್ಮಲಾ ನಿಕೇತನ್, ಬೊಂಬಾಯಿ ಇವರ ರೂ. 5 ಲಕ್ಷದ ಕೊಡುಗೆಯೊಂದಿಗೆ ಕಂಕನಾಡಿಯಲ್ಲಿ 6 ಎಕರೆ ಜಾಗವನ್ನು ತೆಗೆದುಕೊಂಡು ಅದರಲ್ಲಿ Family Service Agency ಸ್ಥಾಪನೆಯಾಗಿತ್ತು. ಅದರೊಂದಿಗೆ ಜೆಪ್ಪು ನಲ್ಲಿ ಜನತಾ ಕೇಂದ್ರ ಮತ್ತು ನವಜೀವನ್ ಮಾರ್ಗ ಇವುಗಳ ಸ್ಥಾಪನೆಯೊಂದಿಗೆ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಹಲವು ಹತ್ತು ಕಾರ್ಯಕ್ರಮಗಳನ್ನು ರೂಪಿಸಿದೆವು. ರೋಶನಿ ನಿಲಯದ ಸ್ಥಾಪನೆ ಸುಂದರವಾದ ಪರಿಸರ 6 ಎಕರೆ ಆಯಿತು. ಶ್ರೀ ರಬೀಂದ್ರನಾಥ ಟಾಗೂರ್ ಅವರ ಸ್ಫೂರ್ತಿ “Love is made fruitful in service” ನಮ್ಮ ಧ್ಯೇಯವಾಯಿತು. ಅಂದಿನಿಂದ ಇಂದಿನವರೆಗೆ ಇದನ್ನು ಅವಿರತವಾಗಿ ಚಾಚೂ ತಪ್ಪದೆ ಪಾಲಿಸಿಕೊಂಡು ಬರಲಾಗಿದೆ.
3) ಮೈಸೂರು ವಿ.ವಿ. ನಿಂದ ಮಂಗಳೂರು ವಿ.ವಿ. ಗೆ ಯಾವಾಗ ಬದಲಾಯಿತು ?
1979ರಲ್ಲಿ ಆಗ ನಮ್ಮ Syllabus ನ್ನು ಉತ್ತಮ ಗುಣಮಟ್ಟದಲ್ಲಿ ರೂಪಿಸಬೇಕೆಂದು Delhi School of Social Work Mr. Gangrade ಮತ್ತು Madras S.S.W. Prof. K.N. George ಇವರ ಸಲಹೆ ಮತ್ತು ಮಾರ್ಗದರ್ಶನವನ್ನು ಪಡೆದು ನಮ್ಮ MSW Syllabus ನ್ನು ರೂಪಿಸಿದೆವು. ಅವರಿಬ್ಬರಿಗೆ ರೋಶನಿ ಯಾವಾಗಲೂ ಕೃತಜ್ಞ. ಆಗ ನಾನು ಪ್ರಿನ್ಸಿಪಾಲ್ ಹುದ್ದೆಯಲ್ಲಿದ್ದೆ. 1982ರಲ್ಲಿ ಮೊದಲ Batch ಗೆ Mangalore University ಪದವಿ ಪತ್ರ ದೊರಕಿತು.
4) ರೋಶನಿ ನಿಲಯದ Principal ಆಗಿ ತಮ್ಮ ಸವಿನೆನಪುಗಳೇನು ?
ನಾನು ಪ್ರಿನ್ಸಿಪಾಲಳಾಗಿದ್ದಾಗ ನಮ್ಮ MSW ವಿದ್ಯಾರ್ಥಿ ಸಂಖ್ಯೆ ತುಂಬಾ ಚಿಕ್ಕದಿತ್ತು. ಅದರಿಂದಾಗಿ ಪ್ರತಿಯೊಬ್ಬ ವಿದ್ಯಾರ್ಥಿಯ ಜೊತೆ ವೈಯಕ್ತಿಕ ಹಾಗೂ ಭಾವನಾತ್ಮಕ ಸಂಬಂಧ ಬೆಳೆದು ನಮ್ಮ ಬಾಂಧವ್ಯ-ಒಡನಾಟ ತುಂಬಾ ಆಳವಾದ-ಶಕ್ತಿಯುತವಾದ ಸಂಬಂಧ ಆಯಿತು ಅಂದರೆ ತಪ್ಪಾಗಲಾರದು.
5) HR Specialization ನ್ನು ಪ್ರತ್ಯೇಕವಾಗಿ ನಡೆಸಬೇಕೇ ಬೇಡವೇ ಎಂಬ ಬಗ್ಗೆ ನಿಮ್ಮ ಅಭಿಪ್ರಾಯ ?
ಸಮಾಜಕಾರ್ಯದ ತಳಹದಿಯ ಮೇಲೆ ಎಲ್ಲಾ Specializations ನಿಲ್ಲಬೇಕು. ಭದ್ರ ಬುನಾದಿ ಇದ್ದರೇನೇ ಅದಕ್ಕೊಂದು ಮಹತ್ವ. ಬುನಾದಿಯನ್ನಿಟ್ಟುಕೊಂಡು HR ನ್ನು ಪ್ರತ್ಯೇಕಿಸುವುದರಲ್ಲಿ ತಪ್ಪಿಲ್ಲ.
6) ಇಂದಿನ ಸಮಾಜಕಾರ್ಯ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನ ಅಂಕ ಗಳಿಸಲು ವಿದ್ಯಾರ್ಥಿಗಳು ಶ್ರಮಿಸುತ್ತಿರುವ ಬಗ್ಗೆ ತಮ್ಮ ಅಭಿಪ್ರಾಯ ?
ಸಮಾಜಕಾರ್ಯದ ಶಿಕ್ಷಣ ಸಂಸ್ಥೆಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ, ಎತ್ತುತ್ತಿವೆ, ಬೋಧನೆಯ ಗುಣಮಟ್ಟ ಕಡಿಮೆಯಾಗುತ್ತಿದೆ, Field Work ಗೆ ಪ್ರಾಮುಖ್ಯತೆ ಕಡಿಮೆಯಾಗುತ್ತಿದೆ, ಅನುಭವ ಮತ್ತು ಜ್ಞಾನ ಇರುವ ಬೋಧಕರ ಸಂಖ್ಯೆ ಕಡಿಮೆಯಾಗುತ್ತಿದೆ, UGC ಯನ್ನು NAAC ನ್ನು ತೃಪ್ತಿ ಪಡಿಸುವ ನಿಟ್ಟಿನಲ್ಲಿ ಪ್ರಯತ್ನ ಹೆಚ್ಚಾಗುತ್ತಿದೆ. ಬೋಧಕ ವರ್ಗದ ಜ್ಞಾನವನ್ನು ಹೆಚ್ಚಿಸುವ, ಉನ್ನತ ಮಟ್ಟಕ್ಕೆ ಕರೆದೊಯ್ಯುವ ಪ್ರಯತ್ನ ಕಡಿಮೆಯಾಗುತ್ತಿದೆ. ಬೋಧಕವರ್ಗದಲ್ಲಿ ಮಹಿಳೆಯರು ಹೆಚ್ಚಾಗುತ್ತಿದ್ದಾರೆ. Syllabus ಶುದ್ಧೀಕರಣ ಪರಿಷ್ಕರಣೆಯತ್ತ ಗಮನ ಹರಿಸಬೇಕಾಗಿದೆ. ಸಮಾಜಕಾರ್ಯ ಶಿಕ್ಷಣದಲ್ಲಿ ವಿದ್ಯಾರ್ಥಿಗಳಲ್ಲಿ ವೃತ್ತಿಪರತೆಯನ್ನು ಹೆಚ್ಚಿಸುವಂತಹ ಪ್ರಯತ್ನ ಹೆಚ್ಚಾಗಬೇಕಿದೆ.
'ಸಮಾಜಕಾರ್ಯ' ಸಮಾಜ ವಿಜ್ಞಾನದ ಒಂದು ಅವಿಭಾಜ್ಯ ಅಂಗ, ಅದನ್ನು ಪ್ರತ್ಯೇಕಿಸುವ ಅಗತ್ಯ ಇಲ್ಲ. MSW ವಿದ್ಯಾರ್ಥಿಗಳಿಗೆ ಈಗ ನಿಗದಿಪಡಿಸಿರುವ Block Placement ಅವಧಿ ತುಂಬಾ ಕಡಿಮೆ. ಕನಿಷ್ಠ 3 ರಿಂದ 6 ತಿಂಗಳ ಅವಧಿಯನ್ನು ನಿಗದಿಪಡಿಸಬೇಕು. ಅವಧಿಯಲ್ಲಿ ವಿದ್ಯಾರ್ಥಿಗಳ Accountability ಕಡಿಮೆಯಾಗಿದೆ, ಜ್ಞಾನ ದಾಹ ಕಡಿಮೆಯಾಗಿದೆ, ಅವರನ್ನು ಪ್ರೇರೇಪಿಸುವ ಪ್ರಯತ್ನಗಳು ಹೆಚ್ಚಾಗಬೇಕಿದೆ. ಪ್ರಸ್ತುತ ಸಮಾಜಕಾರ್ಯ ಶಿಕ್ಷಣ ವ್ಯವಸ್ಥೆಯಲ್ಲಿ ಮೌಲ್ಯಾಧಾರಿತ ವ್ಯವಸ್ಥೆ ಬರಬೇಕಾಗಿದೆ, ಶಿಕ್ಷಣ ಸಂಸ್ಥೆಗಳಲ್ಲಿ ರಾಜಕಾರಿಣಿಗಳ ಪ್ರವೇಶ ಕಡಿಮೆಯಾಗಬೇಕಾಗಿದೆ. ಹಲವು ಹತ್ತು ದಿಕ್ಕುಗಳಿಂದ ಸತತವಾದ ಪ್ರಯತ್ನಗಳನ್ನು ನಡೆಸಿದಾಗ ಮಾತ್ರ ಗುಣಮಟ್ಟದ ಶಿಕ್ಷಣವನ್ನು ಕೊಡಲು ಸಾಧ್ಯ-ಒಳ್ಳೆಯ ವೃತ್ತಿಪರ ವಿದ್ಯಾರ್ಥಿಗಳನ್ನು ರೂಪುಗೊಳಿಸಲು ಸಾಧ್ಯ.
7) ಸಮಾಜಕಾರ್ಯ ವೃತ್ತಿಗೆ ಸಮಾಜದ ಮುಖಂಡರುಗಳಿಂದ ತೊಂದರೆ ಆಗುತ್ತಿದೆ ಎಂದು ತಮಗೆ ಅನಿಸುತ್ತಿದೆಯೇ ? ಸಮಾಜಸೇವೆಯ ಸೋಗಿನಲ್ಲಿ ಸಣ್ಣ ಪುಟ್ಟ ಕಾರ್ಯಗಳನ್ನು ಮಾಡಿ ಅದನ್ನೇ ದೊಡ್ಡದಾಗಿ ತೋರಿಸಿ ತಮ್ಮ ಸ್ವಹಿತಾಸಕ್ತಿಯ ಬೇಳೆಯನ್ನು ಬೇಯಿಸಿಕೊಳ್ಳುವ So called ಸಮಾಜಸೇವಕರು ಹೆಚ್ಚಾಗುತ್ತಿದ್ದಾರೆಯೇ ?
ವೃತ್ತಿಪರ ಸಮಾಜಕಾರ್ಯ ಮತ್ತು ಸಮಾಜ ಸೇವೆ ಎರಡೂ ಭಿನ್ನವಾದವುಗಳು. ರಾಜಕಾರಣಿಗಳು ಇವೆರಡನ್ನೂ ಹಾಳು ಮಾಡಿದ್ದಾರೆ, ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. CSR ಹೆಸರಲ್ಲಿ ಸುಮಾರು ಸಂಸ್ಥೆಗಳು ತಮ್ಮ ಘನತೆಯನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡುತ್ತಿವೆಯೇ ಹೊರತು, ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವುದಾಗಲೀ, ಸಂಬಂಧಿಸಿದ ವ್ಯಕ್ತಿಗಳಿಗೆ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು, ಪರಿಹಾರ ಕಂಡುಕೊಳ್ಳಲು ಸಶಕ್ತೀಕರಣಗೊಳಿಸುವುದಾಗಲೀ ಮಾಡುತ್ತಿಲ್ಲ. Counselling ಎಂಬ ಪದದ ಅರ್ಥ ಗೊತ್ತಿಲ್ಲದೇ ಅದನ್ನು ದುರುಪಯೋಗ ಪಡಿಸಿಕೊಳ್ಳುವ ಸಂಸ್ಥೆಗಳಿಗೆ ಕೊರತೆ ಇಲ್ಲ.
8) ಸಮಾಜಕಾರ್ಯದಲ್ಲಿ ಈಗ ಹಲವು ಹತ್ತು ಕ್ಷೇತ್ರಗಳಿವೆಉದಾ : ಸಾಂಸಾರಿಕ ಸಮಸ್ಯೆಗಳು, ಮಕ್ಕಳ ಸಮಸ್ಯೆಗಳು, ವಿಚ್ಛೇದನಾ ಸಮಸ್ಯೆ, ಅಪರಾಧಿ ಮತ್ತು ಬಾಲಾಪರಾಧಿಗಳ ಸಮಸ್ಯೆ, ಆತ್ಮಹತ್ಯೆ ಪ್ರಕರಣಗಳು, ಬಡತನ ಇತ್ಯಾದಿ-ಇಂದಿನ MSW ವಿದ್ಯಾರ್ಥಿಗಳು ಕ್ಷೇತ್ರಗಳಲ್ಲಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದ್ದಾರೆಯೇ ?
ನಿಟ್ಟಿನಲ್ಲಿ ನನ್ನದೇ ಆದ ಅನುಮಾನಗಳಿವೆ. ಬೇರೆ ವೃತ್ತಿಗಳಂತೆ ಸಮಾಜಕಾರ್ಯ ಇನ್ನು ಆಳವಾಗಿ ಬೇರೂರಿಲ್ಲ. ತಮ್ಮ ಸ್ವಇಚ್ಛೆಯಿಂದ ಪ್ರೇರಿತರಾಗಿ ಕೋರ್ಸ್ಗೆ ಬರುವವರು ಕಡಿಮೆ. MSW ಮಾಡಿದರೆ ಒಳ್ಳೆ ಸಂಬಳ ಬರೋ ಕೆಲಸ ಸಿಗುತ್ತೆ ಎಂದು MSW ಗೆ ಸೇರಿಕೊಳ್ಳುವವರೇ ಹೆಚ್ಚು.
9) ತಮ್ಮ ವಿಶ್ವಾಸ್ ಟ್ರಸ್ಟ್ ಹೇಗೆ ರೂಪುಗೊಂಡಿತು, ಅದಕ್ಕೆ ಸ್ಫೂರ್ತಿ ಏನು ?
ನಾನು 1984ರಲ್ಲಿ ರೋಶನಿ ನಿಲಯದಿಂದ ನಿವೃತ್ತಳಾದ ನಂತರ ದೆಹಲಿಯಲ್ಲಿನ Women’s Centre Hostel ಮೇಲ್ವಿಚಾರಣೆಯಲ್ಲಿ ತೊಡಗಿದೆ.
ನಂತರ 1991ರಲ್ಲಿ ನೈರೋಬಿಯಲ್ಲಿ Centre for Social Work ಸ್ಥಾಪನೆಯಲ್ಲಿ ತಲ್ಲೀನಳಾದೆ.
ಅದಾದ ನಂತರ 1995ರಿಂದ 1998ರವರೆಗೆ ಪುನಃ ದೆಹಲಿಯ ಕೆಲಸಕ್ಕೆ ಮರಳಿದೆ.
1999ರಲ್ಲಿ International year of Elderly ಸವಿನೆನಪಿನಲ್ಲಿ ಮಂಗಳೂರಿನ ಹಲವು ಸಾಮಾಜಿಕ ಧುರೀಣರ ನೆರವಿನೊಂದಿಗೆ-ವೃದ್ಧರ ನೆರವಿಗಾಗಿ ವಿಶ್ವಾಸ್ ಟ್ರಸ್ಟ್ ಪ್ರಾರಂಭಿಸಿದೆ. ಇದನ್ನು ಪ್ರಾರಂಭಿಸುವಾಗ St. Agnes College ನವರ ಸಹಾಯದೊಂದಿಗೆ ಮಂಗಳೂರಿನಲ್ಲಿ Survey ಮಾಡಿಸಿ ಸುಮಾರು 3000 ಮನೆಗಳನ್ನು ಸಂದರ್ಶಿಸಿ Data ಸಂಗ್ರಹಿಸಿದೆವು. ಅದರಲ್ಲಿ ಸುಮಾರು ಕಾಲು ಭಾಗದಷ್ಟು ಸಂಸಾರಗಳಲ್ಲಿ ವೃದ್ಧರನ್ನು ತೀರಾ ಕಡೆಗಣಿಸಲಾಗಿತ್ತು. ಅದರಿಂದಾಗಿ ಕೆಳಗಿನ ಮೂರು ಧ್ಯೇಯಗಳನ್ನಿಟ್ಟುಕೊಂಡು ವಿಶ್ವಾಸ್ ಟ್ರಸ್ಟ್ ಪ್ರಾರಂಭಿಸಿದೆವು.
1.           ವೃದ್ಧರಿಗೆ ಮನೆಯೇ ಆಧಾರ
2.           ಹಿರಿಯರ ಮೇಲೆ ಪ್ರೀತಿ ಇರಲಿ
3.           ಬದುಕಿನುದ್ದಕ್ಕೂ ನಮ್ಮ ಹಿರಿಯ ನಾಗರಿಕರು ಸುಖದಿಂದ ಬಾಳಲಿ.
10) ಸಮಾಜಕಾರ್ಯ ಕ್ಷೇತ್ರದಲ್ಲಿ ನಿರತರಾದವರಿಗೆ ಮತ್ತು ವಿದ್ಯಾರ್ಥಿಗಳಿಗೆ ತಮ್ಮ ಸಂದೇಶ ಏನು ?

ವೃತ್ತಿಪರತೆಯನ್ನು ಬೆಳೆಸಿಕೊಳ್ಳಿ, ವೃತ್ತಿಯ ಬಗ್ಗೆ ಹೆಮ್ಮೆ, ಆದರ, ಗೌರವ ಇಟ್ಟುಕೊಳ್ಳಿ, ನಿಮ್ಮ ಸ್ವಯಂ ಬೆಳವಣಿಗೆಯತ್ತ ಗಮನ ಹರಿಸಿ, ಮೌಲ್ಯಾಧಾರಿತ ಜೀವನವನ್ನು ನಡೆಸಿ, ಬೇರೆಯವರಿಗೆ ಮಾದರಿಯಾಗಿ ನಾವು ಸಮಾಜದಿಂದ ಪಡೆದುದಕ್ಕಿಂತ ಹೆಚ್ಚಿನದನ್ನು ವಾಪಸು ನೀಡೋಣ ಎಂಬ ಮನೋಭಾವವನ್ನು ಬೆಳೆಸಿಕೊಂಡು ದಿಕ್ಕಿನಲ್ಲಿ ಮುನ್ನಡೆಯಿರಿ.

ಶ್ರೀ ಎಸ್.ಎನ್ಗೋಪಿನಾಥ್ ಮತ್ತು ಶ್ರೀ ಭೀಮರಾವ್

No comments:

Post a Comment