Thursday, April 2, 2015

ವೃತ್ತಿ ಮಾಹಿತಿ ಕೈಪಿಡಿ





ಡಾ. ಮೋಹನ್ ದಾಸ್ ಹಾಗೂ ನಾಗೇಶ್ ರವರು ವೃತ್ತಿ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ ಅನುಭವದ ಆಧಾರದ ಮೇಲೆ   “ವೃತ್ತಿ ಮಾಹಿತಿ ಕೈಪಿಡಿಪುಸ್ತಕವನ್ನು ನಿರುತ ಪ್ರಕಾಶನದಿಂದ ಹೊರತಂದಿದ್ದೇವೆ. ಪುಸ್ತಕವು SSLC, PUC  ಪದವಿ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಅತ್ಯಂತ ಉಪಯುಕ್ತಕಾರಿಯಾಗಿದೆ. ಹಲವಾರು ವೃತ್ತಿಗಳು ಮತ್ತು ವೃತ್ತಿಗಳ ಕುರಿತು ತರಬೇತಿ ನೀಡುವ ಸಂಸ್ಥೆಗಳ ಕುರಿತು  ಪುಸ್ತಕದಲ್ಲಿ ಮಾಹಿತಿ ನೀಡಲಾಗಿದೆ.

ಹಾಗೆಯೇ ಜನನಾಯಕರು, ಸಮಾಜಸೇವಕರು, ಸೇವಾಸಂಸ್ಥೆಗಳು, ಶಾಲಾ-ಕಾಲೇಜುಗಳು ಪುಸ್ತಕದ ಪ್ರಿಂಟಿಂಗ್ ವೆಚ್ಚವನ್ನು ಪ್ರಾಯೋಜಿಸಿ ತಮ್ಮ ಜಾಹಿರಾತಿನೊಂದಿಗೆ ಸಾರ್ವಜನಿಕರಿಗೆ ಉಚಿತವಾಗಿ/ಕೊಡುಗೆಯನ್ನಾಗಿ ನೀಡಬಹುದು. ಪುಸ್ತಕವು ಕನ್ನಡ ಹಾಗೂ ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಪ್ರಕಟವಾಗಿದೆ.
ಪುಸ್ತಕದ ಉದ್ದೇಶಗಳು:
1.      ವಿದ್ಯಾರ್ಥಿಗಳನ್ನು ವೃತ್ತಿ ಆಕಾಂಕ್ಷಿಗಳನ್ನಾಗಿ  ಮಾಡುತ್ತದೆ.
2.    ವೃತ್ತಿ ಆಕಾಂಕ್ಷಿಗಳು ತಮ್ಮ ಆಸಕ್ತಿ, ಯೋಗ್ಯತೆ ಮತ್ತು ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳುವಂತೆ ಮಾಡುತ್ತದೆ.
3.    ವೃತ್ತಿ ಆಕಾಂಕ್ಷಿಗಳಿಗೆ ವೃತ್ತಿ ಪ್ರಪಂಚವನ್ನು (ಉದ್ಯೋಗದ ಮಾರುಕಟ್ಟೆ) ಅರ್ಥಮಾಡಿಕೊಳ್ಳಲು ಸಹಾಯಮಾಡುತ್ತದೆ.
4.    ವೃತ್ತಿ ಆಕಾಂಕ್ಷಿಗಳಿಗೆ ತಮ್ಮ  ವೃತ್ತಿ ಜೀವನದ ಸಿದ್ಧತೆಯಲ್ಲಿ ಮತ್ತು ಬೆಳವಣಿಗೆಯಲ್ಲಿ ಸಹಾಯಮಾಡುತ್ತದೆ.


 ಪುಸ್ತಕವನ್ನು ಆಸಕ್ತರು ನಿರುತ ಪ್ರಕಾಶನದಿಂದ ತರಿಸಿಕೊಳ್ಳಬಹುದು.
ಪುಸ್ತಕಗಳನ್ನು ಕೊಳ್ಳಲಿಚ್ಛಿಸುವವರು ಪುಸ್ತಕದ ಬೆಲೆ 550/- ರೂಗಳನ್ನು ನಿರುತ ಪ್ರಕಾಶನದ ಹೆಸರಿಗೆ ಚೆಕ್/ಡಿ.ಡಿ.ಯನ್ನು ಕಳುಹಿಸಿಕೊಡಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ನಿರುತ ಪ್ರಕಾಶನ
ನಂ. 326, 1ನೇ ಮಹಡಿ, ಸಿಂಡಿಕೇಟ್ ಬ್ಯಾಂಕ್ ಎದುರು,
ಡಾ. ಅಂಬೇಡ್ಕರ್ ಕಾಲೇಜು ಹತ್ತಿರ, ಬೆಂಗಳೂರು – 560 056

ದೂ : 080-23213710, 8064521470

No comments:

Post a Comment