Saturday, April 18, 2015

ಪ್ರೊಫೆಸರ್


ಪುಸ್ತಕ ಪ್ರಕಾಶನ ಮಾಡಲು ಹೆಸರಾಂತ ಪ್ರೊಫೆಸರ್ ಒಬ್ಬರನ್ನು ಕೇಳಿಕೊಂಡೆಆಗ ಅವರು 30 ದಿನಗಳ ಕಾಲಾವಕಾಶ ಕೊಡಿನಿಮಗೆ ತಿಳಿಸುತ್ತೇನೆ ಎಂದು ಹೇಳಿದರು.30 ದಿನ ಕಳೆದ ನಂತರ ಪ್ರೊಫೆಸರ್ ಕರೆ ಮಾಡಿ ನನ್ನ ಪುಸ್ತಕ ಪ್ರಕಟಿಸಲು ನಿಮಗೆ ಅನುಮತಿ ನೀಡಿದ್ದೇನೆನೀವು ನನ್ನ ಕರಡುಪ್ರತಿಯನ್ನು ತೆಗೆದುಕೊಂಡು ಹೋಗಬಹುದು ಎಂದು ಹೇಳಿದರುನಾನು ಸಂತೋಷದಿಂದ ಒಪ್ಪಿಕೊಂಡೆಆದರೆ ಕೈಯಲ್ಲಿ  ಪುಸ್ತಕವನ್ನು ಪ್ರಕಟಿಸುವಷ್ಟು ಹಣವಿರಲಿಲ್ಲಸಾಲ ಮಾಡಿಯಾದರೂ  ಪುಸ್ತಕ ಪ್ರಕಟಿಸಬೇಕೆಂಬ ಬಯಕೆ ನನ್ನದಾಗಿತ್ತು ಪುಸ್ತಕದ ಮೊದಲ ಪ್ರಕಟಣೆ Macmillan ಅಂತರಾಷ್ಟ್ರೀಯ ಸಂಸ್ಥೆಯಿಂದ ಪ್ರಕಟಿಸಿತ್ತುಹಾಗಾಗಿ ಅತ್ಯಂತ ಕಾಳಜಿಯಿಂದ ಪ್ರಕಟಿಸಿ ಪ್ರೊಫೆಸರ್ರವರನ್ನು ಮೆಚ್ಚಿಸಬೇಕೆಂಬ ಬಯಕೆ ನನ್ನದಾಗಿತ್ತು.




ಪ್ರೊಫೆಸರ್ ಅತ್ಯಂತ ಕಾಳಜಿ ವಹಿಸಿ  ಪುಸ್ತಕವನ್ನು ತಿದ್ದುವುದು ಹಾಗೂ ಹಲವಾರು ಅಂತರಾಷ್ಟ್ರೀಯ ಗುಣಮಟ್ಟದ ಪುಸ್ತಕಗಳನ್ನು ತೋರಿಸಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಸೂಚನೆ ನೀಡುತ್ತಿದ್ದರುನನ್ನ ಪರಿಸ್ಥಿತಿ ಚೆನ್ನಾಗಿ ಅರಿತಿದ್ದ ಪ್ರೊಫೆಸರ್  ಪುಸ್ತಕ ಪ್ರಕಟಿಸಲು ಎಷ್ಟು ವೆಚ್ಚವಾಗಬಹುದು ಎಂಬ ಅಂದಾಜು ಪಟ್ಟಿ ತಯಾರಿಸಲು ಸೂಚಿಸಿದರುಅಂದಾಜು ಪಟ್ಟಿ ತಯಾರಿಸಿ ಸುಮಾರು 95 ಸಾವಿರ ಖರ್ಚಾಗಬಹುದು ಎಂದು ತಿಳಿಸಿದೆಹೀಗೆ ಪುಸ್ತಕದ ಸಂಪೂರ್ಣ ಕೆಲಸ ಮುಗಿಸಿ ಪುಸ್ತಕ ಮುದ್ರಿಸುವ ಹಂತಕ್ಕೆ ತಲುಪಿದಾಗ ಬೇರೆಯವರಲ್ಲಿ ಸಾಲ ಕೇಳಿದ್ದೆಸಾಲ ಕೊಡುತ್ತಾರೆ ಎಂಬ ಭರವಸೆ ಇತ್ತುಇದ್ದಕ್ಕಿದ್ದಂತೆ ಪ್ರೊಫೆಸರ್ ಫೋನ್ ಮಾಡಿ ಅವರ ಮನೆಗೆ ಕರೆಸಿಕೊಂಡರುಪ್ರೊಫೆಸರ್ ಮಾತನಾಡುತ್ತ ನನ್ನ ಕೈಗೆ ಒಂದು ಪತ್ರವನ್ನು ನೀಡಿದರು ಪತ್ರದಲ್ಲಿ Rawat ಪ್ರಕಾಶನದಿಂದ ಪ್ರೊಫೆಸರ್ ಪುಸ್ತಕ ಪ್ರಕಟಿಸುವುದಾಗಿ ತಿಳಿಸಿದ್ದರುಹೆಸರಾಂತ Rawat ಪ್ರಕಾಶನ ಸಂಸ್ಥೆ ಪ್ರಕಟಿಸುತ್ತೇನೆ ಎಂದಾಗ ಪ್ರೊಫೆಸರ್ ಎಲ್ಲಿ  ಪುಸ್ತಕ Rawat ಪ್ರಕಾಶನಕ್ಕೆ ನೀಡಿರುತ್ತಾರೋ ಎಂಬ ಭಯ ನನ್ನನ್ನು ಕಾಡಲು ಶುರುವಾಯಿತುಹಾಗೆಯೇ  ಪತ್ರದಲ್ಲಿ ಪ್ರೊಫೆಸರ್ಗೆ ಗೌರವಧನ ನೀಡುವ ಬಗ್ಗೆ ಚರ್ಚೆ ಮಾಡಲಾಗಿತ್ತು.
ಪ್ರೊಫೆಸರ್ ನನ್ನತ್ತ ನಗುತ್ತಾನಾನು ನಿಮಗೆ 30 ದಿನ ವಾಯಿದೆ ಕೇಳಿದ್ದೆ ಏಕೆಂದರೆ Rawat ಪ್ರಕಾಶನದವರ ಹತ್ತಿರ ನನ್ನ ಪುಸ್ತಕ ಪ್ರಕಟಿಸಲು ಮನವಿ ಮಾಡಿ 6 ತಿಂಗಳಾಯಿತುಆದರೆ  ಮನವಿ ಪತ್ರವನ್ನು ಅವರು ನೋಡಿರಲಿಲ್ಲವಂತೆನಂತರ ಪ್ರೊಫೆಸರೊಬ್ಬರ ಮಿತ್ರರು ಪ್ರೊಫೆಸರ್ ಬಗ್ಗೆ ಅವರ ಅಂತರಾಷ್ಟ್ರೀಯ ಖ್ಯಾತಿಯ ಕುರಿತು ಹೇಳಿದ ಮೇಲೆ ಅವರ ತಪ್ಪಿನ ಅರಿವಾಗಿ ಪುಸ್ತಕವನ್ನು ಸಂಸ್ಥೆಗೆ ಕೊಡಬೇಕು ಎಂದು ಹೇಳುತ್ತಿದ್ದಾರೆ ಎಂದು ಮಾತು ನಿಲ್ಲಿಸಿದರುನನಗೆ ನಡುಕಒಳ್ಳೆಯ ಅವಕಾಶ ತಪ್ಪಿದ ಭಾವ ಶುರುವಾಯಿತುಪ್ರೊಫೆಸರ್ ಹಾಗೂ ನನ್ನ ನಡುವೆ ಮೌನ ಆವರಿಸಿತುಪ್ರೊಫೆಸರ್ ನನ್ನ ಪುಸ್ತಕದ ಕುರಿತು ಹಲವಾರು ಅಂತರಾಷ್ಟ್ರೀಯ ಪತ್ರಿಕೆಗಳಲ್ಲಿ ವಿಮರ್ಶೆ ಬಂದಿದೆಇಂತಹ ಒಳ್ಳೆ ಪುಸ್ತಕವನ್ನು ನಾನು Rawat ಪ್ರಕಾಶನಕ್ಕೆ ಕೊಡಬೇಕೆಂಬ ಆಸೆಆದರೆ ನಾನು ನಿಮಗೆ ಮಾತು ಕೊಟ್ಟಿದ್ದೇನೆಆದುದರಿಂದ Rawat ಪ್ರಕಾಶನದವರು ಗೌರವಧನ ನೀಡುತ್ತಾರೆ ಎಂಬ ಆಸೆಯನ್ನು ಪಡದೆ ನಿಮ್ಮ ಮಾತಿಗೆ ಗೌರವ ನೀಡಿನಿಮಗೆ ಸಂತೋಷದಿಂದ  ಪುಸ್ತಕ ಪ್ರಕಾಶನ ಮಾಡಲು ಅನುಮತಿ ನೀಡುತ್ತಿದ್ದೇನೆಪ್ರಕಾಶನ ಮಾಡಿ ಎಂದರುಮನಸ್ಸಿನಲ್ಲಿ ಅಳುಕಿನಿಂದಲೆ ಒಪ್ಪಿಕೊಂಡೆಜೇಬಲ್ಲಿ ಕಾಸಿಲ್ಲ ದೊಡ್ಡ ಜವಾಬ್ದಾರಿ ತಲೆ ಮೇಲೆಪ್ರೊಫೆಸರ್ ನೀವು  ಪುಸ್ತಕ ಪ್ರಕಾಶನ ಮಾಡುವಷ್ಟು ಸಾಹುಕಾರರಲ್ಲ ಎಂದು ತಿಳಿದಿದೆಆದರೆ ನನ್ನ ಜೀವಮಾನದಲ್ಲಿ ನಾನು ಹಣ ನೀಡಿ ನನ್ನ ಲೇಖನ ಪ್ರಕಟಿಸಿಕೊಂಡ ಪರಿಪಾಟವಿಲ್ಲಆಗಾಗಿ 90 ಸಾವಿರ ನಿಮಗೆ ಸಾಲದ ರೂಪದಲ್ಲಿ ಹಣ ನೀಡುತ್ತಿದ್ದೇನೆನಿಮಗೆ ಪುಸ್ತಕ ಮಾರಿ ಬಂದ ಹಣದಿಂದ  ನನ್ನ ಸಾಲದ ಹಣವನ್ನು ವಾಪಸ್ಸು ಮಾಡಬಹುದು ಎಂದು ಹೇಳಿದಾಗ ನನಗೆ ಮನಸ್ಸಲ್ಲಿ 1 ಕೋಟಿ ಲಾಟರಿ ಹೊಡೆದಷ್ಟು ಸಂತೋಷವಾಗಿತ್ತು.
ಪುಸ್ತಕವನ್ನು ಪ್ರಕಟಿಸಲು ಚೈನಾದಿಂದ ಅವರು ಮಾಡಿದ ಮುಖಪುಟ ಹೊದಿಕೆ ತರಿಸಿ ಅಚ್ಚುಕಟ್ಟಾಗಿ ಪ್ರಿಂಟ್ ಮಾಡಿ ಪ್ರೊಫೆಸರ್ ಕೈಗೆ ಪುಸ್ತಕ ನೀಡಿದೆಒಮ್ಮೆ ಕಣ್ಣಾಡಿಸಿದ ಪ್ರೊಫೆಸರ್ ನಾನು Rawat ಪ್ರಕಾಶನಕ್ಕೆ ನೀಡಿದ್ದರೂ  ಪುಸ್ತಕ ಇಷ್ಟೊಂದು ಗುಣಮಟ್ಟದಲ್ಲಿ ಬರುತ್ತಿರಲಿಲ್ಲವೇನೋತುಂಬಾ ಚೆನ್ನಾಗಿದೆಹಾಗೆಯೇ ವೈಯಕ್ತಿಕವಾಗಿ ನಾನು ಪುಸ್ತಕದ ಪ್ರತಿ ಪುಟದ ಪ್ರತಿ ಪದಗಳನ್ನು ಕೊನೆಯವರೆವಿಗೂ ಗಮನ ನೀಡಲು Rawat ಪ್ರಕಾಶನಕ್ಕೆ ನೀಡಿದ್ದರೆ ಆಗುತ್ತಿರಲಿಲ್ಲ ಎಂದು ಸಂತೋಷ ವ್ಯಕ್ತಪಡಿಸಿದರು.
 ಪುಸ್ತಕದ ಬಿಡುಗಡೆ ಸಮಾರಂಭವನ್ನು ಆಯೋಜಿಸಿದ್ದೆವು ಸಮಾರಂಭಕ್ಕೆ ಡಾಎಚ್.ಎಸ್ದೊರೆಸ್ವಾಮಿಹಿರಿಯ ಸ್ವತಂತ್ರ ಹೋರಾಟಗಾರರು ಹಾಗೂ ಶ್ರೀಮತಿ ಅನಿತಾರೆಡ್ಡಿರವರು ಆಗಮಿಸಿದ್ದರುಹೆಚ್ಚಿನ ಪ್ರಚಾರ ನೀಡದೆ ಆಯೋಜಿಸಿದ್ದ  ಕಾರ್ಯಕ್ರಮಕ್ಕೆ ಹಾಜರಾದವರು ಕೇವಲ 10 ರಿಂದ 15 ಜನರುಪ್ರೊಫೆಸರ್ ಮೊದಲೇ ನಾನು  ಕಾರ್ಯಕ್ರಮಕ್ಕೆ ಹೆಚ್ಚಿನ ಜನರನ್ನು ಆಹ್ವಾನಿಸುವುದಿಲ್ಲ ಎಂದಿದ್ದರುತೋರಿಕೆಯ ಸ್ವಭಾವ ಅವರದಾಗಿರಲಿಲ್ಲಕೇವಲ ಕೆಲವೇ ಪತ್ರಕರ್ತರುಆಸಕ್ತರು ಆಗಮಿಸಿದ್ದರು ಕಾರ್ಯಕ್ರಮದಲ್ಲಿ ಹಾಜರಿದ್ದ ಕೆಲವೇ ಜನರನ್ನು ಕಂಡು ಕಾರ್ಯಕ್ರಮದ ಆಯೋಜಕನಾದ ನನಗೆ ಮುಜುಗರಸಂಕೋಚಬೇಸರವಾಗಿ ಸ್ವಾಗತ ಭಾಷಣ ಮಾಡಲು ತಡಕಾಡಿದೆಆದರೆ ಅತಿಥಿಗಳಾಗಿ ಆಗಮಿಸಿದ್ದ ಎಚ್.ಎಸ್ದೊರೆಸ್ವಾಮಿರವರು ಸುಮಾರು 1 ಗಂಟೆ 30 ನಿಮಿಷ ಪುಸ್ತಕದ ಕುರಿತಾಗಿ ಮಾತನಾಡಿದರುಅವರು ಮಾತನಾಡಬೇಕಾದ್ದನ್ನು ಬರೆದುಕೊಂಡು ಬಂದಿದ್ದರುಅವರ ಭಾಷಣವನ್ನು ಸಮಾಜಕಾರ್ಯದ ಹೆಜ್ಜೆಗಳು ಪತ್ರಿಕೆಯಲ್ಲಿ ಮುದ್ರಿಸಲಾಯಿತುಹಾಗೆಯೇ ಶ್ರೀಮತಿ ಅನಿತಾರೆಡ್ಡಿರವರು ಸುಮಾರು 1 ಗಂಟೆ 20 ನಿಮಿಷ ಮಾತನಾಡಿದರುಇವರು ಸಂಪೂರ್ಣ ಪುಸ್ತಕವನ್ನು ಓದಿ ಬರೆದುಕೊಂಡು ಬಂದು ಮಾತನಾಡಿದ್ದರುಇಬ್ಬರೂ ಹಿರಿಯರು ಕೇವಲ ಕೆಲವೇ ಸಭಿಕರಿದ್ದುದನ್ನು ಕಂಡು ಬೇಸರಗೊಂಡಿದ್ದಾಗಲಿಮುಜುಗರಗೊಂಡಿದ್ದಾಗಲಿಸಂಕೋಚಗೊಂಡ ಯಾವುದೇ ಮುಖಭಾವ ಅವರಲ್ಲಿರಲಿಲ್ಲಅವರಿಗೆ ಪುಸ್ತಕದ ಬಗ್ಗೆ ಅಪಾರವಾದ ಗೌರವಹೆಮ್ಮೆಪ್ರೀತಿ ಇತ್ತುಕೊನೆಗೆ ಇದನ್ನೆಲ್ಲಾ ಅನುಭವಿಸಿದ ಪ್ರೊಫೆಸರ್ ಪುಸ್ತಕ ಸಮಾರಂಭದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರುಅವರಿಗೆ ದೊರೆಸ್ವಾಮಿ ಹಾಗೂ ಅನಿತಾರೆಡ್ಡಿರವರ ವಿಮರ್ಶೆ  ಖುಷಿ ನೀಡಿತ್ತು.
ಸುಮಾರು ದಿನಗಳು ಕಳೆದವುNBT ಯಿಂದ Subsidy Scheme ಗೆ  ಪುಸ್ತಕವನ್ನು ಕಳುಹಿಸಲು ನಿರ್ಧರಿಸಿದೆ Subsidy Scheme  ಪ್ರಕಾರ  Scheme ಗೆ ಆಯ್ಕೆಯಾದ ಪುಸ್ತಕದ ಪ್ರಕಾಶಕರಿಗೆ ಹಾಗೂ ಲೇಖಕರಿಗೆ ಹಣ ನೀಡುತ್ತಾರೆ ಪುಸ್ತಕವನ್ನು NBT ಸಂಸ್ಥೆ ಪರಿಶೀಲಿಸಿ ಪುಸ್ತಕವನ್ನು ಆಯ್ಕೆ ಮಾಡಿತುಆದರೆ ಮತ್ತೊಮ್ಮೆ  ಪುಸ್ತಕವನ್ನು ಮುದ್ರಿಸಬೇಕುಮುದ್ರಿಸಲು ಹಣ ಬೇಕು ಮೊದಲು ಮುದ್ರಿಸಿದ ಪ್ರತಿಗಳು ಖಾಲಿಯಾಗಿಲ್ಲಆದರೆ NBT ಯಂತಹ ಸಂಸ್ಥೆ ಆಯ್ಕೆ ಮಾಡಿದ ಮೇಲೆ ಪುಸ್ತಕ ಮುದ್ರಿಸುವ ಸುವರ್ಣ ಅವಕಾಶ ಕಳೆದುಕೊಳ್ಳಲು ನಾನು ಸಿದ್ಧನಿರಲಿಲ್ಲಹಾಗಾಗಿ  ಪುಸ್ತಕ ಮುದ್ರಿಸಲು ಪ್ರೊಫೆಸರ್ ಬಳಿ ಮತ್ತೆ ಚರ್ಚೆ ಶುರುವಾಯಿತುಪ್ರೊಫೆಸರ್ ನಿಮಗೆ ಮೊದಲನೆ ಪ್ರಕಟಣೆ ಮಾಡಲು ಹಣವಿರಲಿಲ್ಲಮತ್ತೊಮ್ಮೆ ಮುದ್ರಿಸುವ ಭಂಡ ಧೈರ್ಯವೇಕೆ ? ಹಾಗೆಯೇ ನನ್ನ ಪುಸ್ತಕ NBT ಯಿಂದ ಆಯ್ಕೆಯಾಗಿದೆ ಎಂಬ ಸಂತೋಷವಿದೆಆದರೆ ಪ್ರಕಾಶಕರಾಗಿ ನೀವು ಸ್ವಲ್ಪ ಯೋಚಿಸಿ 2ನೇ ಮುದ್ರಣ ಬಂದರೆ ಮೊದಲ ಮುದ್ರಣದ ಪ್ರತಿಗಳು ಖರ್ಚಾಗದೆ ಹಾಗೆಯೇ ಉಳಿಯಬಹುದು ಎಂದರುಏಕೆಂದರೆ ಮೊದಲ ಮುದ್ರಣದ ಪುಸ್ತಕದ ಬೆಲೆ 695/-. 2ನೇ ಮುದ್ರಣದ ಪುಸ್ತಕದ ಬೆಲೆ 295/-, NBT ಸಂಸ್ಥೆ ಪ್ರಾಯೋಜಿಸಿ ಪ್ರಕಟಿಸಿರುವುದರಿಂದ ಅತಿ ಕಡಿಮೆ ಬೆಲೆ ನಿಗದಿಗೊಳಿಸಲಾಗಿತ್ತುಆದರೆ  ಪುಸ್ತಕ NBT ಯಿಂದ ಪ್ರಕಟವಾದರೆ ನಮ್ಮ ನಿರುತ ಪ್ರಕಾಶನಕ್ಕೆ ಗೌರವ ಎಂಬ ಸ್ವಾರ್ಥದಿಂದ NBT ನೀಡಿದ ಆಹ್ವಾನವನ್ನು ಸಂತೋಷದಿಂದ ಕಿಸೆಯಲ್ಲಿ ಹಣವಿಲ್ಲದಿದ್ದರೂ ಒಪ್ಪಿಕೊಂಡಿದ್ದೆ.
NBT ನೀಡಿದ ವೇಳೆಗೆ ಪುಸ್ತಕ ಮುದ್ರಿಸಿ ಪ್ರಥಮ ಪ್ರತಿ ಪ್ರೊಫೆಸರ್ಗೆ ನೀಡಿದೆಪ್ರೊಫೆಸರ್ ನನಗೆ ಮಕ್ಕಳಿಲ್ಲನಿಮ್ಮ ಆಸಕ್ತಿಶ್ರದ್ಧೆಪ್ರಾಮಾಣಿಕತೆಗಾಗಿ ನಾನು ನಿಮಗೆ  ಪುಸ್ತಕದ ಹಕ್ಕುದಾರಿಕೆಯನ್ನು ನೀಡುತ್ತಿದ್ದೇನೆಮುಂದೊಮ್ಮೆ ನನ್ನ ಅಣ್ಣನ ಮಕ್ಕಳುನನ್ನ ಸಂಬಂಧಿಕರು  ಪುಸ್ತಕದ ಕುರಿತು ತಗಾದೆ ತೆಗೆಯಬಾರದು ಎಂದು ಹೇಳಿ  ಪುಸ್ತಕದ ಸಂಪೂರ್ಣ ಹಕ್ಕುಗಳನ್ನು ನನಗೆ ಬರೆದುಕೊಟ್ಟರು.
ಸುಮಾರು ದಿನಗಳು ಕಳೆದವುಪ್ರೊಫೆಸರ್ರವರನ್ನು ಆಗಾಗ್ಗೆ ಭೇಟಿ ಮಾಡುತ್ತಿದ್ದೆಆದರೆ ಪ್ರೊಫೆಸರ್ ನೀಡಿದ 90 ಸಾವಿರ ವಾಪಸ್ಸು ನೀಡಲು ನನ್ನ ಬಳಿ ಹಣ ಇರಲಿಲ್ಲ ಸಂದರ್ಭದಲ್ಲಿ NBT ಪುಸ್ತಕಕ್ಕೆ ಗೌರವಧನವಾಗಿ ಪ್ರೊಫೆಸರ್ಗೆ ಸುಮಾರು 50 ಸಾವಿರ ನೀಡಲಾಯಿತುಪ್ರಕಾಶಕರಿಗೆ ಸುಮಾರು 35 ಸಾವಿರ ನೀಡಲಾಗಿತ್ತು ಸಂದರ್ಭದಲ್ಲಿ ನನ್ನ ಹಣಕಾಸಿನ ಪರಿಸ್ಥಿತಿ ಚೆನ್ನಾಗಿರದಿದ್ದ ಕಾರಣದಿಂದ ಅಂತು ಇಂತು ಪ್ರೊಫೆಸರ್ಗೆ ನಿರೀಕ್ಷಿಸದಿದ್ದ 50 ಸಾವಿರ ನನ್ನ ಕಾರಣದಿಂದ ಬಂದಿದೆಆಗಾಗಿ ನನಗೆ 90 ಸಾವಿರ ನೀಡಿದ ಹಣದಲ್ಲಿ 50 ಸಾವಿರ ಮನ್ನ ಮಾಡಿದರೆ ಚೆನ್ನಾಗಿರುತ್ತದೆ ಅನಿಸುತ್ತಿತ್ತುಹಲವಾರು ಸಂಘ ಸಂಸ್ಥೆಗಳಿಗೆ ಪ್ರೊಫೆಸರ್ ದೇಣಿಗೆ ನೀಡುತ್ತಿದ್ದರುನಾನು ಇಷ್ಟೊಂದು ಕಷ್ಟದಲ್ಲಿರುವ ನನಗೆ ಸಾಲವಾಗಿ ನೀಡಿದ್ದಾರೆಹಾಗೆಯೇ ಅವರ ಪುಸ್ತಕ NBT ಗೆ ಆಯ್ಕೆಯಾಗುವಲ್ಲಿ ನನ್ನ ಶ್ರಮವಿದೆ ಹಾಗೂ 50 ಸಾವಿರ ಹಣ ಗೌರವಧನವಾಗಿ ಪ್ರೊಫೆಸರ್ಗೆ ಬಂದಿದೆ ಹಾಗೂ ನಾನು ಕಷ್ಟದಲ್ಲಿದ್ದೇನೆ ಪರಿಸ್ಥಿತಿಯಲ್ಲಿ ನನ್ನ ತಲೆಯಲ್ಲಿ ಹಲವಾರು ಚಿಂತೆಗಳುಆತಂಕಗಳು ಶುರುವಾದವು.
ಪ್ರಾಮಾಣಿಕವಾಗಿ ಪ್ರೊಫೆಸರ್ಗೆ 1 ಪತ್ರ ಬರೆಯಲು ನಿರ್ಧರಿಸಿದೆಪ್ರೀತಿಯ ಪ್ರೊಫೆಸರ್ ನನ್ನ ಹಣಕಾಸಿನ ಪರಿಸ್ಥಿತಿ ಚೆನ್ನಾಗಿಲ್ಲಆದರೆ ನಾನು ನಿಮಗೆ 90 ಸಾವಿರ ಹಣ ಸಾಲವಾಗಿ ಪಡೆದು ಬಹಳ ದಿನ ಕಳೆದಿವೆಅದನ್ನು ಹಿಂದಿರುಗಿಸುತ್ತೇನೆ ಎಂದು ಮಾತು ನೀಡಿದ್ದೆ ಆದರೆ ಹಿಂದಿರುಗಿಸಲು ಸ್ವಲ್ಪ ಸಮಯಾವಕಾಶ ನೀಡಿನೀವು ನಿಮ್ಮ ಹಣ ವಾಪಸ್ಸು ಮಾಡಬೇಕೆಂದು ಬಯಸಿದ್ದಲ್ಲಿ ನಾನು  ಪತ್ರದೊಂದಿಗೆ 1 ಚೆಕ್ ಅನ್ನು ಲಗತ್ತಿಸಿರುತ್ತೇನೆ ಚೆಕ್ನಲ್ಲಿ ನೀವೆ ಹಣ ನಮೂದಿಸಿ ನಿಮ್ಮ ಖಾತೆಗೆ ಜಮಾ ಮಾಡುವ ಮೊದಲು ನನಗೆ ತಿಳಿಸಿ ನಾನು ನನ್ನ ಖಾತೆಯಲ್ಲಿ ಹಣವಿರುವಂತೆ ನೋಡಿಕೊಳ್ಳುತ್ತೇನೆಬೇರೆಯವರ ಬಳಿ ಸಾಲ ಮಾಡಿ ಜಮಾ ಮಾಡುತ್ತೇನೆ ಎಂದು ಬರೆದು ಪತ್ರ ಕಳುಹಿಸಲು ಮನಸ್ಸು ಬಾರದೆನೇರವಾಗಿ ಪ್ರೊಫೆಸರನ್ನು ಭೇಟಿ ಮಾಡಿ ಹೇಳಲೆಪತ್ರ ಕಳುಹಿಸಲೆ ಎಂಬ ಗೊಂದಲದಲ್ಲಿ ಬಿದ್ದೆಸುಮಾರು 3 ದಿನ ಕಳೆದ ನಂತರ ಪ್ರೊಫೆಸರ್ ಕಡೆಯಿಂದ ನನಗೊಂದು ಪತ್ರ ಬಂತು ಪತ್ರವನ್ನು ಪುಸ್ತಕ ಮಾರಾಟದ ಕುರಿತು ಹಾಗೂ 90 ಸಾವಿರದ ಸಾಲದ ಮರುಪಾವತಿಸಲು ಸೂಚಿಸಲಾಗಿತ್ತು ಪತ್ರವನ್ನು ಪ್ರೊಫೆಸರ್ ಕಡೆಯಿಂದ ನಾನು ನಿರೀಕ್ಷಿಸಿರಲಿಲ್ಲ.
ಪತ್ರ ತಲುಪಿದ ಮರುಗಳಿಗೆಯಲ್ಲಿ ನನ್ನ ಸ್ನೇಹಿತ ಮಹದೇವರನ್ನು ಕರೆದು ನನ್ನ ತಮ್ಮನ ಬಳಿ ಸಾಲ ಮಾಡಿ 40 ಸಾವಿರ ನಗದು ಹಾಗೂ ಮೊದಲೇ ತಯಾರಿಸಿದ್ದ ಚೆಕ್ ನೀಡಿ ಪ್ರೊಫೆಸರ್ಗೆ ಕಳುಹಿಸಿದೆ ಪ್ರಾಮಾಣಿಕ ನಡೆಯಿಂದ ಸಂತೋಷಗೊಂಡ ಪ್ರೊಫೆಸರ್ 1 ತಿಂಗಳ ನಂತರ ನಾನು ನೀಡಿದ ಚೆಕ್ ವಾಪಸ್ಸು ಕಳುಹಿಸಿಕೊಟ್ಟಿದ್ದರು ಹಾಗೂ ನನ್ನೆಲ್ಲ ಮುಂದಿನ ಪ್ರಯತ್ನಗಳಿಗೆ ಶುಭವಾಗಲಿ ಎಂದು ಹಾರೈಸಿದ್ದರು.
ಇಷ್ಟೆಲ್ಲಾ ಹೇಳಿದ ಮೇಲೆ  ಪ್ರೊಫೆಸರ್ರವರ ಹೆಸರು ಹೇಳದಿದ್ದರೆ ಹೇಗೆ ?


ಅವರ ಹೆಸರು ಪ್ರೊಫೆಸರ್ ಶಂಕರ್ ಪಾಠಕ್, ನಿವೃತ್ತ ಪ್ರೊಫೆಸರ್ದೆಹಲಿ ವಿಶ್ವವಿದ್ಯಾಲಯಸಮಾಜಕಾರ್ಯ ವಿಭಾಗ ಹಾಗೂ ನಾವು ಮುದ್ರಿಸಿದ ಪುಸ್ತಕದ ಹೆಸರು Social Work and Social Welfare.

1 comment:

  1. Congratulations.victory will come only when we are mentally and spiritually prepared to accept all the sufferings and agony.

    ReplyDelete