Wednesday, October 8, 2014

ಜನಧನ

ಜನಧನ

ಜನಧನದಾನದೇಣಿಗೆಚಂದಾವಂತಿಗೆ ನಿರ್ದಿಷ್ಟ ಕೆಲಸವೊಂದಕ್ಕೆ ಸಮೂಹದಿಂದ ಹಣ ಸಂಗ್ರಹಿಸುವ ಪರಿಕಲ್ಪನೆಗಳಿವುಆಧುನಿಕ ಸಂದರ್ಭದಲ್ಲಿ ಕ್ರೌಡ್ ಫಂಡಿಂಗ್ ಸಹ ಅನಿಸಿಕೊಂಡಿದೆಕೆಲವೊಮ್ಮೆ ಕ್ರೌಡ್ ಫಂಡಿಂಗ್ ಕೆಲವೊಮ್ಮೆ ಹಣ ಉಚಿತ ಕೊಡುಗೆ ಆಗಿರುವುದರ ಬದಲಿಗೆ ಬಂಡವಾಳ ಹೂಡಿಕೆಯ ಸ್ವರೂಪ ಹೊಂದಿರುತ್ತದೆ ಪರಿಕಲ್ಪನೆ ಉಚಿತವಾಗಿ ನೀಡುವ ಹಾಗೂ ಇದೇ ಪರಿಕಲ್ಪನೆ ಬಂಡವಾಳ ಹೂಡಿಕೆ ಎಂದು ಅಂದುಕೊಂಡು ಸಮೂಹದಿಂದ ಹಣ ಸಂಗ್ರಹಿಸುವ ಪರಿಕಲ್ಪನೆಗಳಿವು. ಹಳ್ಳಿಗಳಲ್ಲಿ ದೇವಸ್ಥಾನ ಕಟ್ಟಿಸುವಾಗ  ರೀತಿ ‘ಕ್ರೌಡ್ ಫಂಡಿಂಗ್’ ಪರಿಕಲ್ಪನೆ ತಣ್ಣಗೆ ಜಾರಿಗೆ ಬಂದಿರುವುದನ್ನು ನಾವು ಕಂಡಿದ್ದೇವೆಗಣೇಶನನ್ನು ಕೂರಿಸುವ ಹುಡುಗರು ಮಾಡುವುದೂ ಒಂದು ರೀತಿಯಲ್ಲಿ ಇದನ್ನೇಆದರೆಅಲ್ಲಿ ಕೊಟ್ಟ ಹಣವನ್ನು ‘ಹೂಡಿಕೆ’ ಎನ್ನಲಾಗುವುದಿಲ್ಲ.  ‘ಕ್ರೌಡ್ ಫಂಡಿಂಗ್ನಲ್ಲಿ ಸಂಗ್ರಹವಾಗುವ ಹಣಕ್ಕೆ ‘ಬಂಡವಾಳ’ ಎಂಬ ಅರ್ಥ ದಕ್ಕಿದೆ.
ವೆಬ್ ಸೈಟ್ ಗಳುಸಾಮಾಜಿಕ ಜಾಲತಾಣಗಳು `ಅಂಗೈನಲ್ಲಿಆದ ಮೇಲೆ ಅವನ್ನು ಹೂಡಿಕೆಯ ದಾರಿ ಮಾಡಿಕೊಳ್ಳಲು ಮನಸ್ಸು ಮಾಡಿದವರು ಹಲವರುಜನರಿಂದಲೇ ಎಷ್ಟು ಸಾಧ್ಯವೋ ಅಷ್ಟು ಬಂಡವಾಳ ಸಂಗ್ರಹಿಸಿಹಮ್ಮಿಕೊಳ್ಳಬೇಕಾದ ಯೋಜನೆಯನ್ನು ಸಾಕಾರಗೊಳಿಸುವ  ಆಧುನಿಕ ಸಹಕಾರಿ ತತ್ವವೇ `ಕ್ರೌಡ್ ಫಂಡಿಂಗ್'. ಇಲ್ಲಿ ಸಹಕಾರ ಎಂಬುದು ದಾನದ ರೂಪದಲ್ಲೋಸಹಾಯ ಎಂಬುದಾಗಿಯೋ ಇರುವುದಿಲ್ಲಬದಲಿಗೆ ಅದು ಬಂಡವಾಳ ಹೂಡಿಕೆಯಾಗುತ್ತದೆಹಾರ್ಡ್ ವೇರ್ ಅಭಿವೃದ್ಧಿಹೊಸ ಉದ್ಯಮಕ್ಕೆ ಮೂಲ ಬಂಡವಾಳ ಹೊಂದಿಸುವುದುಸಮಾನ ಮನಸ್ಕರು ಸೇರಿ ಪತ್ರಿಕೆಯನ್ನೋ ಚಾನೆಲ್ಲನ್ನೋ ಪ್ರಾರಂಭಿಸುವುದುಕೃತಿಗಳನ್ನು ಪ್ರಕಟಿಸುವುದು-ಹೀಗೆ ಅನೇಕ ಸಾಂಘಿಕ ಕೆಲಸಗಳಿಗೆ ಜನರಿಂದಲೇ ಬಂಡವಾಳ ಸಂಗ್ರಹಿಸಲು ಹಲವು ವೆಬ್ಸೈಟ್ ಗಳು ವೇದಿಕೆಯಾಗಿವೆಸಾಮಾಜಿಕ ಜಾಲತಾಣಗಳು ತೋರುದೀಪಗಳಾಗಿವೆ.

ಮೊದಲನೇ ಪ್ರಯತ್ನ
ಮೊದಲನೇ ಪ್ರಯತ್ನ ಸಮಾಜಕಾರ್ಯ ಕಲಿಯುತ್ತಿರುವಾಗಲೆ ``ಸಮಾಜಕಾರ್ಯದ'' ಗ್ರಾಮೀಣ ಶಿಬಿರಕ್ಕೆ ಅಗತ್ಯವಾದ ವಸ್ತುಗಳನ್ನು ಹಣವನ್ನು ಸಂಗ್ರಹಿಸಲು ಸಮಾಜದ ಗಣ್ಯ ವ್ಯಕ್ತಿಗಳನ್ನು ಭೇಟಿ ಮಾಡುತ್ತಿದ್ದೆವು. 10 ಜನ ಸಹಪಾಟಿಗಳು ಪರಿಚಿತರ ನೆರವಿನೊಂದಿಗೆ ಚಂದಾ ದೇಣಿಗೆ ಪಡೆದಾಗ ಚಂದಾ ದೇಣಿಗೆ ಪಡೆಯುವುದು ಸುಲಭದ ಕೆಲಸ ಅನಿಸಿತ್ತುಸಮಾಜಕಾರ್ಯ ಸ್ನಾತಕೋತ್ತರ ಪದವಿ ಪೂರೈಸಿ ವೃದ್ಧಾಶ್ರಮ ಶುರು ಮಾಡಬೇಕೆಂಬ ಕನಸು ಹೊತ್ತು ಚಂದಾ ಹಣ ಸ್ವೀಕರಿಸಲು ನಿರ್ಧರಿಸಿದಾಗ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳು ಬರತೊಡಗಿದವು ಸಮಯದಲ್ಲಿ ನನಗೆ ಅನುಭವದ ಕೊರತೆ ಹಾಗೂ  ವಿಷಯದಲ್ಲಿ ಅನುಭವ ಹೊಂದಿರುವ ಗುರು ಇಲ್ಲಸಮಾಜಕಾರ್ಯದ ಸ್ನಾತಕೋತ್ತರ ಪದವಿ ಪಡೆದಾಗಿನ ತರಗತಿಯ ಅನುಭವ ಸಮಯದಲ್ಲಿ ನನ್ನ ಮೊದಲ ಅನುಭವ ನನ್ನ ಸಮಾಜಕಾರ್ಯ ತರಗತಿಯಲ್ಲಿರುವವರನ್ನೇ ಕೇಂದ್ರೀಕರಿಸಿ ನಾನು ವೃದ್ಧಾಶ್ರಮ ಮಾಡಬೇಕೆಂಬ ನೀವು ಸಹಕರಿಸಿ ಎಂಬ ಮನವಿ ಮುಂದಿಟ್ಟೆಕೆಲವರು ಸ್ಪಂದಿಸಿದರುಹಲವರು ಸ್ಪಂದಿಸದೆ ದೂರವಾದರು.
ನನ್ನ ಅನಿಸಿಕೆಯಲ್ಲಿ ಚಂದಾ ಹಣ ಬೇಡುವುದು ನಿಮ್ಮ ವ್ಯಕ್ತಿತ್ವದ ಭಾಗವಾದ ``Ego''  ಅಹಂನ್ನು ಸಂಪೂರ್ಣವಾಗಿ ನಾಶವಾಗಿಸುವ ಪ್ರಕ್ರಿಯೆಯ ಭಾಗಮೊದಲು ಅಹಂನ್ನು ಜಯಿಸಿ ಸಂಪೂರ್ಣವಾಗಿ ಶರಣಾದ ಮೇಲೆ ಮತ್ತೊಬ್ಬರ ಹತ್ತಿರ ಚಂದ ಕೇಳಲು ಮನಸ್ಸು ಮಾಡಬಹುದು.
ಮೊದಲು ನನಗೆ ಚಂದ ಕೇಳುವುದೆಂದರೆ ಅವಮಾನದ ಸಂಗತಿನನ್ನನ್ನು ಒಬ್ಬ ಭಿಕ್ಷುಕನ ರೀತಿ ಜನ ನೋಡಿದರೆನನ್ನ ಬಗ್ಗೆ ತಪ್ಪು ಅಭಿಪ್ರಾಯ ವ್ಯಕ್ತಪಡಿಸಿದರೆನನ್ನನ್ನು ಕೀಳಾಗಿ ಕಂಡರೆ ಹೀಗೆ ಮನಸ್ಸು ತವಕಿಸುತ್ತದೆಗೊಂದಲಕ್ಕೆ ಸಿಲುಕುತ್ತದೆ ಎಲ್ಲಾ ಗೊಂದಲ ತವಕ ತಲ್ಲಣಗಳನ್ನು ಅನುಭವಿಸಿ ನಂತರ ನಾನು ನನ್ನ ಸ್ವಾರ್ಥಕ್ಕಾಗಿ  ಚಂದಾ ಹಣ ಕೇಳುತ್ತಿಲ್ಲ ಒಂದು ಒಳ್ಳೆಯ ಕಾರ್ಯಕ್ಕೆ  ಚಂದಾ ಹಣ ಕೇಳುತ್ತಿದ್ದೇನೆಅಂಜಿಕೆ ಏಕೆಎಂಬ ಬೆಳ್ಳಿರೇಖೆ ಕಾಣತೊಡಗುತ್ತದೆ ಆತ್ಮವಿಶ್ವಾಸ ನನ್ನದಾಗಲು ನಾವು ಮಾಡುತ್ತಿರುವ ಕೆಲಸ ಸಮಾಜಮುಖಿಯಾಗಿರಬೇಕುಸಮಾಜಮುಖಿಯಾಗಿರದಿದ್ದರೆ ಸಂಸ್ಥೆ ಸಮಾಜಮುಖಿ ಎಂದು ಅನಿಸಿದ ಮೇಲೆ ಚಂದಾ ಕೇಳಲು ಸ್ವಲ್ಪ ಧೈರ್ಯ ಬರುತ್ತದೆ.

ಎರಡನೆ ಪ್ರಯತ್ನ
ಎರಡನೆ ಬಾರಿ ಚಂದಾ ಕೇಳಲು ನಿರ್ಧರಿಸಿದ್ದೆಮಾಜಿ ಪ್ರಧಾನಿಗಳನ್ನು ನಾವು ಒಳ್ಳೆಯ ಕೆಲಸ ಮಾಡುತ್ತಿದ್ದೇವೆ. ``ವೃದ್ಧಾಶ್ರಮ''  ಕೆಲಸಕ್ಕೆ ಚಂದಾ ನೀಡಲು ಮಾಜಿ ಪ್ರಧಾನಿಗಳು ನಿರಾಕರಿಸುವರೆ ? ಖಂಡಿತ ನಮಗೆ ಚಂದಾ ಹಣ ಸಿಗುತ್ತದೆ ಎಂಬ ಅತಿಯಾದ ಆತ್ಮವಿಶ್ವಾಸಮಾಜಿ ಪ್ರಧಾನಿಗಳ ಮನೆಗೆ ಭೇಟಿ ನೀಡಿದ್ದು ಬೆಳಗ್ಗೆ ಸುಮಾರು 10 ಗಂಟೆಗೆನಾವು ಭೇಟಿಯಾಗಿದ್ದು 1.30 ನಿಮಿಷಕ್ಕೆನಮ್ಮ ಕೈಯಲ್ಲಿದ್ದ ವೃದ್ಧಾಶ್ರಮದ Brochure ನೀಡಿ ನಾವು ಸಮಾಜಕಾರ್ಯ ಸ್ನಾತಕೋತ್ತರ ಪದವೀಧರರುದಯಮಾಡಿ ನಾವೊಂದು ವೃದ್ಧಾಶ್ರಮ ಮಾಡಿದ್ದೇವೆನೀವು ನಿಮ್ಮ ಸಲಹೆ ಹಾಗೂ ಚಂದಾಹಣ ನೀಡಬೇಕು ಎಂದು ಮನವಿ ಮಾಡಿದೆವುನಮ್ಮನ್ನು ಕುಳಿತುಕೊಳ್ಳಲು ಹೇಳದೆನೀವು ಮಹತ್ಕಾರ್ಯ ಮಾಡಲು ಹೊರಟಿದ್ದೀರನಿಮಗೆ ಶುಭವಾಗಲಿ ಎಂದು ಹರಸಿದರುಚಂದಾ ಹಣದ ಬಗ್ಗೆ ಏನನ್ನು ಪ್ರಸ್ತಾಪಿಸಲಿಲ್ಲನಿರಾಶೆಯಾಯಿತುಹೊರಗಡೆ ಬಂದು ನಾವು ಸುಮಾರು 40 K.M. ನಿಂದ ಬಂದ ಪೆಟ್ರೋಲ್ ಖರ್ಚುನಮ್ಮ ಪಾಕೆಟ್ ನಿಂದ ಹೋಯಿತಲ್ಲಮಾಜಿ ಪ್ರಧಾನಿಗಳು ಸ್ನಾತಕೋತ್ತರ ಪದವಿ ಪಡೆದು ಸಮಾಜಮುಖಿಯಾಗಿ ಕೆಲಸ ಮಾಡಲು ಹೊರಟ ನಮ್ಮನ್ನು ಇತರೆ ಚಂದಾ ಕೇಳಲು ಬಂದವರಂತೆ ಪರಿಗಣಿಸಿದರಲ್ಲಚಂದಾ ಹಣ ತರುವುದು ಇಷ್ಟೊಂದು ಕಷ್ಟವೇ ? ಪ್ರಶ್ನೆಗಳ ಸುರಿಮಳೆ ನಮ್ಮನ್ನು ಆವರಿಸಿ ದಾರಿಯುದ್ದಕ್ಕೂ ತಲೆ ಕೊರೆಯುತ್ತಿದ್ದವುಮಧ್ಯಾಹ್ನ ಊಟ ಮಾಡಲು ಮನಸ್ಸಾಗಲಿಲ್ಲನಮಗೆ ನಮ್ಮ ಮೇಲಿದ್ದ ಆತ್ಮವಿಶ್ವಾಸ ಕರಗಿ ನಮ್ಮ ಬೆವರಿನಲ್ಲಿ ಹರಿದುಹೋಯಿತು.

ಮೂರನೆ ಪ್ರಯತ್ನ
ಮೂರನೆ ಪ್ರಯತ್ನವಾಗಿ ನಮ್ಮ ತಂತ್ರಗಾರಿಕೆ ಬದಲಾಯಿಸಬೇಕು ಎಂದು ನಿರ್ಧರಿಸಲಾಯಿತುಆಗ ತಾನೆ ಕರ್ನಾಟಕ ವಿಧಾನಸಭಾ ಚುನಾವಣೆ ನಡೆದು ಹೊಸ ಸರ್ಕಾರ ಬಂದಿತ್ತುಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿ ನಮ್ಮ ವೃದ್ಧಾಶ್ರಮ ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತಿತ್ತು ಕ್ಷೇತ್ರವನ್ನು ಪ್ರತಿನಿಧಿಸಿದ ಶಾಸಕರು ಸಮಾಜಕಾರ್ಯ ಸ್ನಾತಕೋತ್ತರ ಪದವೀಧರರು ಹಾಗೂ ಕರ್ನಾಟಕ ಸರ್ಕಾರದ ಮಂತ್ರಿಗಳಾಗಿ ಕೆಲಸ ನಿರ್ವಹಿಸುತ್ತಿದ್ದರುಇದನ್ನು ಅರಿತ ನಾವು  ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕುಖಂಡಿತ ವೃತ್ತಿಪರ ಸಮಾಜಕಾರ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಮಂತ್ರಿಗಳು ನಮಗೆ ಖಂಡಿತ ಸ್ಪಂದಿಸುವರು ಎಂಬ ಭರವಸೆ ಹೊತ್ತು ಸುಮಾರು 15 ಜನ ನನ್ನ MSW ಸ್ನೇಹಿತರನ್ನೊಳಗೊಂಡು ಶಾಸಕರ ಭವನದಲ್ಲಿ ಮಂತ್ರಿಗಳನ್ನು ಚಂದಾಹಣ ನೀಡಬೇಕೆಂದು ಕೇಳಲು ನಿರ್ಧರಿಸಿ ಶಾಸಕರ ಭವನಕ್ಕೆ ಭೇಟಿ ನೀಡಿದೆವುಸುಮಾರು 2 ಗಂಟೆ ಕಾದ ಮೇಲೆ ಮಂತ್ರಿಗಳು ಆಗಮಿಸಿದರುಸುಮಾರು 15 ಜನ ಮಂತ್ರಿಗಳಲ್ಲಿ ಅವರವರ ಸಮಸ್ಯೆ ಕೇಳಿಕೊಂಡರುನಮ್ಮ ಹೆಸರನ್ನು ಕರೆದರುಮೇಡಂನಾವೆಲ್ಲ ಸಮಾಜಕಾರ್ಯ ಸ್ನಾತಕೋತ್ತರ ಪದವೀಧರರುವೃದ್ಧಾಶ್ರಮ ಸ್ಥಾಪಿಸಿದ್ದೇವೆ ವೃದ್ಧಾಶ್ರಮ ನಿಮ್ಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆಹಾಗಾಗಿ ತಾವು ನಮ್ಮ ವೃದ್ಧಾಶ್ರಮಕ್ಕೆ ಭೇಟಿ ನೀಡಬೇಕು ಎಂದು ಹಾಗೂ ನೀವು ಚಂದಾ ಹಣ ನೀಡಬೇಕು ಎಂದು ಮನವಿ ಮಾಡಿದೆವು ಮನವಿಗೆ ಮಂತ್ರಿಗಳು ಚಂದಾ ನೀಡುವ ಶಕ್ತಿ ನನ್ನಲ್ಲಿಲ್ಲ ಎನ್ನುವ ಉತ್ತರ ನೀಡಿದರುಮತ್ತು Next ಯಾರಿದ್ದಾರಪ್ಪ ಎಂದು ತಮ್ಮ ಆಪ್ತ ಸಹಾಯಕನನ್ನು ಕರೆದರು ಕರೆ ನೀವು ದಯಮಾಡಿ ಇಲ್ಲಿಂದ ಜಾಗ ಖಾಲಿ ಮಾಡಿ ಎಂಬ ಸೂಚನೆಯಂತಿತ್ತುಬೆಳಗಿನ ಉಪಾಹಾರ ಮಾಡದೆ ಶಾಸಕರ ಭವನ ತಲುಪಿದ ನಮಗೆ ಮಂತ್ರಿಗಳ ಮಾತು ಕೇಳಿ ಹೊಟ್ಟೆ ತುಂಬಿದ ಅನುಭವವಾಗಿತ್ತು.

 ಮೇಲಿನ ಅನುಭವಗಳು ನನಗೆ ಕಲಿಸಿದ ಪಾಠಗಳು,
1.         ದೊಡ್ಡವರನ್ನು ಚಂದಾ ಕೇಳಿದರೆ ಚಂದಾಹಣ ಸಿಗುತ್ತವೆ ಎಂಬುದು ಭ್ರಮೆ.
2.         ನೀವು ಎಷ್ಟು ಒಳ್ಳೆಯ ಕೆಲಸ ಮಾಡಿ ನಿಮಗೆ ಚಂದಾ ಹಣ ಸಿಗದಿರಬಹುದು.
3.         ಚಂದಾ ಹಣ ಕೂಡದಿದ್ದರೆ ನೀವು ಬೇಸರ ಮಾಡಿಕೊಂಡು ತಲೆ ಕೆಡಿಸಿಕೊಳ್ಳಬೇಕಾದ ಅನಿವಾರ್ಯವಿಲ್ಲ.
4.         ಚಂದ ಕೊಡದವರ ಬಗ್ಗೆ ಅಪಪ್ರಚಾರ ಮಾಡಿ ಅವರನ್ನು ಅವಮಾನಿಸುವದನ್ನು ಬೆಳೆಸಿಕೊಳ್ಳಬೇಡಿ.





No comments:

Post a Comment