Thursday, September 4, 2014

ಸರ್ಕಾರೇತರ ಸಂಸ್ಥೆ (NGO) ಎಂದರೇನು?



ವಿಶ್ವ ಸಂಸ್ಥೆಯ ಮಾಜಿ ಅಧ್ಯಕ್ಷ ಕೋಫಿ ಅನ್ನಾನ್ 21ನೇ ಶತಮಾನವನ್ನು ಎನ್ ಜಿ ಒ ಗಳ ಯುಗ ಎಂದು ಬಣ್ಣಿಸಿದ್ದಾರೆ.
ಎನ್ ಜಿ ಒ ಎಂದರೆ ಸರ್ಕಾರೇತರ ಸಂಸ್ಥೆ. ವಿಶ್ವಬ್ಯಾಂಕ್ ಪ್ರಕಾರ ಎನ್ ಜಿ ಒ ಗಳು ಖಾಸಗಿ ಸಂಸ್ಥೆಗಳು. ಸಂಕಷ್ಟದಲ್ಲಿರುವವರಿಗೆ ಪರಿಹಾರ ದೊರಕಿಸುವ ಚಟುವಟಿಕೆಯಲ್ಲಿ ತೊಡಗಿರುತ್ತವೆ. ಅಲ್ಲದೆ, ಬಡವರ ಹಿತರಕ್ಷಣೆ, ಪರಿಸರ ಕಾಳಜಿ, ಪ್ರಾಥಮಿಕ ಸಾಮಾಜಿಕ ಸೇವೆಗಳನ್ನು ಒದಗಿಸುವುದು, ಇಲ್ಲವೆ ಸಮುದಾಯದ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳುವುದು. ವಾಸ್ತವವಾಗಿ, ಎನ್ಜಿಒಗಳು ಕಾನೂನು ಬದ್ಧವಾಗಿ ಸ್ಥಾಪಿತಗೊಂಡ ಸಂಸ್ಥೆಗಳು. ಸರ್ಕಾರದಿಂದ ಪ್ರತ್ಯೇಕಗೊಂಡು ಸ್ವತಂತ್ರವಾಗಿ ಕಾರ್ಯನಿರ್ವಹಿಸುವುವು ಮತ್ತು ಸರಳ ಅರ್ಥದಲ್ಲಿ ಹೇಳುವುದಾದರೆ ಸರ್ಕಾರೇತರ, ಲಾಭರಹಿತ, ಬದ್ಧತೆ ಇರುವ ಸಮೂಹ. ಸಾರ್ವಜನಿಕರ ಹಿತರಕ್ಷಣೆಯೇ ಸಮೂಹಗಳ ಉದ್ದೇಶ. ಮಾನವ ಹಕ್ಕುಗಳು, ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಡುವುದೇ ಇವುಗಳ ಮೂಲ ಉದ್ದೇಶವಾಗಿದೆ. ಸಾಮಾನ್ಯವಾಗಿ ಎನ್ ಜಿ ಒ ಗಳು ಸರ್ಕಾರದಿಂದ ಪೂರ್ಣ ಪ್ರಮಾಣದಲ್ಲಿ ಅನುದಾನ ಪಡೆದುಕೊಳ್ಳುತ್ತವೆ. ಕೆಲವು ಸಂದರ್ಭಗಳಲ್ಲಿ ಭಾಗಶಃ ದೇಣಿಗೆಯನ್ನು ಪಡೆಯುತ್ತವೆ. ಸರ್ಕಾರೇತರ ಸಂಸ್ಥೆ ಎನ್ನಿಸಿಕೊಳ್ಳಲು ಸರ್ಕಾರಿ ಪ್ರತಿನಿಧಿಗಳನ್ನು ತನ್ನ ಸಂಸ್ಥೆಯ ಪ್ರತಿನಿಧಿತ್ವದಿಂದ ಅಥವಾ ಸದಸ್ಯತ್ವದಿಂದ ಹೊರಗಿರಿಸುತ್ತದೆ. ಹಾಗೆಯೇ ಎನ್ ಜಿ ಒ ಗಳು ಎಂದಾಗ ಅವುಗಳು ಯಾವುದೇ ರಾಷ್ಟ್ರ ಇಲ್ಲವೇ ಅಂತಾರಾಷ್ಟ್ರೀಯ ಕಾನೂನುಗಳಿಗೆ ಅನುಗುಣವಾಗಿ ಕಾನೂನು ಪರಿಹಾರ ದೊರಕಿಸಿಕೊಡುವ ಸಂಸ್ಥೆಗಳಲ್ಲ ಎನ್ನುವುದು ಗಮನದಲ್ಲಿರಬೇಕು.
ವಿಶ್ವ ಬ್ಯಾಂಕ್ ಪ್ರಧಾನವಾಗಿ ಎರಡು ರೀತಿಯಲ್ಲಿ ಎನ್ ಜಿ ಒ ಗಳನ್ನು ಗುರುತಿಸಿದೆ. ಕಾರ್ಯಾತ್ಮಕ ಎನ್ಜಿಒಗಳು, ಸಲಹಾತ್ಮಕ ಎನ್ ಜಿ ಒ ಗಳೆಂದು ಸ್ಥೂಲವಾಗಿ ಅವುಗಳನ್ನು ವಿಂಗಡಿಸಲಾಗಿದೆ. ಇವೆರಡರ ಪ್ರಮುಖ ಉದ್ದೇಶಗಳು ಅಭಿವೃದ್ಧಿ ಆಧಾರಿತ ಯೋಜನೆಗಳನ್ನು ವಿನ್ಯಾಸಗೊಳಿಸಿ ಅವುಗಳ ಅನುಷ್ಠಾನಗೊಳಿಸುವುದು ಎನ್ ಜಿ ಒ ಗಳ ಪ್ರಮುಖ ಉದ್ದೇಶವಾಗಿದೆ. ಕಾರ್ಯಾತ್ಮಕ ಎನ್ ಜಿ ಒ ಗಳನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮತ್ತು ಸಮುದಾಯ ಆಧಾರಿತ ಸಂಘಟನೆಗಳೆಂದು ವರ್ಗೀಕರಿಸಬಹುದು. ಇನ್ನೊಂದೆಡೆ ಸಲಹಾತ್ಮಕ ಎನ್ ಜಿ ಒ ಗಳನ್ನು ಅಂತರಾಷ್ಟ್ರೀಯ ಸಂಘಟನೆಗಳೆಂದು ವಿಂಗಡಿಸಲಾಗುತ್ತದೆ. ಅವುಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯ ನಿರ್ವಹಿಸುವುದರ  ಜೊತೆಗೆ ನೀತಿ ನಿರೂಪಣೆಗಳನ್ನು ರೂಪಿಸುವಲ್ಲಿ ಪ್ರಧಾನ ಪಾತ್ರವಹಿಸುತ್ತವೆ.

ಕೃಪೆ : ಯೋಜನಾ, ನವೆಂಬರ್ 2011
ಜೋಮನ್ ಮ್ಯಾಥ್ಯು, ಜೊಬೈ ವರ್ಗೀಸ್

ಕನ್ನಡಕ್ಕೆ : ರಶ್ಮಿ ಎಸ್

1 comment:

  1. Please provide yojana magazine 2011 in Kannada in PDF form please

    ReplyDelete