Wednesday, September 25, 2013

THINK GLOBALLY ACT LOCALLY



ಮೂರು ದಶಕಗಳಿಂದ ಆದಿವಾಸಿಗಳಿಗೆ ಉಚಿತ ಚಿಕಿತ್ಸೆ ನೀಡುತ್ತಾ ಅವರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಡಾ. ವಿನಾಯಕ್ ಸೇನ್ ಅವರು ನಕ್ಸಲೀಯರ ಹೋರಾಟದ ಬಗೆಗೆ ಹೊಂದಿರುವ ಅನುಕಂಪವೇ "ದೇಶ ದ್ರೋಹದ ಕೃತ್ಯ ಎಂದು ಜೀವಾವಧಿ ಶಿಕ್ಷೆಗೆ ಒಳಗಾಗಿದ್ದುದು ವಿಪರ್ಯಾಸ. ಸೇನ್ ಅವರಿಗೆ ಸುಪ್ರೀಂಕೋರ್ಟ್ ಜಾಮೀನು ನೀಡುವ ಮೂಲಕ ನ್ಯಾಯದಾನದಲ್ಲಿನ ದೋಷವನ್ನು ಎತ್ತಿತೋರಿಸಿದೆ. ಸಂದರ್ಭದಲ್ಲಿ ವ್ಯಕ್ತಿಯೋರ್ವನ ಬಳಿ ಮಾವೋವಾದಿ ಕರಪತ್ರ ಅಥವಾ ಸಂಬಂಧದ ಸಾಹಿತ್ಯ ಇದ್ದ ಮಾತ್ರಕ್ಕೆ ಆತನನ್ನು ದೇಶದ್ರೋಹಿ ಎನ್ನಲಾಗದು. ಹಾಗೆಯೇ ಗಾಂಧೀಜಿಯ ಕುರಿತ ಪುಸ್ತಕಗಳನ್ನು ಇಟ್ಟುಕೊಂಡವರೆಲ್ಲಾ ಗಾಂಧೀವಾದಿ ಎಂದು ಹೇಳಲು ಬರುವುದಿಲ್ಲ ಎನ್ನುವುದರ ಮೂಲಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ವಿರೋಧಿಸಿ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಇದರಿಂದ ನಾಗರಿಕ ಹಕ್ಕುಗಳ ಹಲವಾರು ಸಂಘಟನೆಗಳು ನಡೆಸಿದ ಪ್ರತಿಭಟನೆಯ ದನಿಗೆ ಬೆಲೆಸಿಕ್ಕಂತಾಗಿದೆ
            ಅಣ್ಣಾ ಹಜಾರೆಯ ಮುಂದಾಳತ್ವದಲ್ಲಿ ಜನಪ್ರಿಯವಾದ ಭ್ರಷ್ಟಾಚಾರ ವಿರುದ್ಧದ ಅಭಿಯಾನ ಎಲ್ಲರ ಕಲ್ಪನೆಗಳನ್ನು ಮೀರಿ ಮತದಾನ ಮತ್ತು ನ್ಯಾಯಾಂಗ ಸುಧಾರಣೆಯ ಅಗತ್ಯತೆಯನ್ನು ಎತ್ತಿ ತೋರಿಸಿದೆ. ಚಳುವಳಿ ಯಶಸ್ವಿಯಾಗಲು ಕಾರಣವೇನೆಂದರೆ ಏಪ್ರಿಲ್ 11 ಅಣ್ಣಾ ಹಜಾರೆಯವರ ಮಿಸ್ಡ್ ಕಾಲ್ ಅಭಿಯಾನಕ್ಕೆ ಮೂವತ್ತೊಂದು ಲಕ್ಷ ಜನರು ಬೆಂಬಲಿಸಿದರು. ಅಭಿಯಾನಕ್ಕೆ ಸುಮಾರು ನಾಲ್ಕು ಕೋಟಿಗಳಿಗಿಂತಲೂ ಹೆಚ್ಚಿನ ಸಂದೇಶಗಳು ಟ್ವಿಟ್ಟರ್ನಲ್ಲಿ ಮೂಡಿದ್ದವು. ಏಪ್ರಿಲ್ 15 ರಂದು ಗೂಗಲ್ನಲ್ಲಿ ಅಣ್ಣಾ ಹಜಾರೆಯವರ ಹೆಸರು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಅನ್ವೇಷಣೆಗೆ ಒಳಗಾಗಿತ್ತು. ಪ್ರತಿಸಲದಂತೆ ಮೇಲಿನ ಹೋರಾಟಗಳಲ್ಲಿ ಸಮಾಜಕಾರ್ಯದ ವೃತ್ತಿಪರರ ಪಾಲ್ಗೊಳ್ಳುವಿಕೆ ಹಾಗೂ ಸ್ಪಂದಿಸಿದ ರೀತಿಯಿಂದ ನಮ್ಮನ್ನು ನಾವೇ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ನಮ್ಮಲ್ಲಿ ಕರ್ನಾಟಕ ಅಸೋಸಿಯೇಶನ್ ಆಫ್ ಪ್ರೊಫೆಶನಲ್ ಸೋಷಿಯಲ್ ವರ್ಕರ್ಸ್ (ಕೆಎಪಿಎಸ್ಡಬ್ಲ್ಯೂ) ಅಥವಾ ವಿಶ್ವವಿದ್ಯಾಲಯಗಳ ಮಟ್ಟದಲ್ಲಾದರೂ ಬಗ್ಗೆ ಚಿಂತನೆ ಕಾರ್ಯಗಾರಗಳು ನಡೆಯಬೇಕಾದದ್ದು ಅತ್ಯಗತ್ಯ.
            ಇತ್ತೀಚೆಗೆ ನಿಧನರಾದ ಶ್ರೀ ಸತ್ಯ ಸಾಯಿಬಾಬಾರವರು ಮಾಡಿದ ಪವಾಡಗಳ ಬಗ್ಗೆ ಡಾ|| ಎಚ್. ನರಸಿಂಹಯ್ಯನವರ ವೈಚಾರಿಕ ಚಿಂತನೆ, ಹಲವಾರು ದಿನ ನನ್ನನ್ನು ಬಾಬಾರ ಬಗ್ಗೆ ನಿರ್ಲಕ್ಷ್ಯ ತೋರುವ ಹಾಗೆ ಮಾಡಿತ್ತು. ಆದರೆ ಅವರು ಮಾಡಿರುವ ಸತ್ಕಾರ್ಯ, ಸಮಾಜಸೇವೆಗಳ ಬಗ್ಗೆ ಒಮ್ಮೆ ಇಣುಕಿ ನೋಡಿದಾಗ ಎಂತಹ ವ್ಯಕ್ತಿಗಳಿಗೂ ಅವರ ಬಗ್ಗೆ ಪೂಜ್ಯ ಭಾವನೆ ಉಂಟಾಗುತ್ತದೆ.
            ಹತ್ತಾರು ಆಸ್ಪತ್ರೆ, ಶಾಲಾ-ಕಾಲೇಜುಗಳನ್ನು ನಿರ್ಮಿಸಿ ಸತ್ಯ ಸಾಯಿಬಾಬಾರವರು ಸಮಾಜಸೇವೆ ಮಾಡಿದರು. ಅದಕ್ಕಿಂತ ಮುಖ್ಯವಾಗಿ ಸಾವಿರಾರು ಬರಪೀಡಿತ ಹಳ್ಳಿಗಳಿಗೆ ಕುಡಿಯುವ ನೀರನ್ನು ಕೊಟ್ಟರು. ಇನ್ನೂ ಅನೇಕ ಸಾಧನೆಗಳನ್ನು ಮಾಡಿದ ಶ್ರೀ ಸತ್ಯ ಸಾಯಿಬಾಬಾರವರ ಆತ್ಮಕ್ಕೆ ಎಲ್ಲರೂ  ಶಾಂತಿ ಕೋರೋಣ
            ನಮ್ಮ ಪತ್ರಿಕೆಯನ್ನು ಮೆಚ್ಚಿ ಅನೇಕ ಹಿರಿಯರೂ ಬರೆಯುತ್ತಿದ್ದಾರೆ. ಇತ್ತೀಚೆಗೆ ತೊಂಬತ್ತು ವರ್ಷದ, ಹಿರಿಯ ಗ್ರಂಥಭಂಡಾರಿ  ಶ್ರೀ ಬಿ.ಎಸ್. ಕುಮೇದನ್ರವರು ದಿಲ್ಲಿಯಿಂದ ಪತ್ರ ಬರೆದು ಹರಸಿದ್ದಾರೆ. ಇಂಥವರಿಗೆಲ್ಲಾ ನಾವು ಕೃತಜ್ಞರು.
            ನಮ್ಮ ಪತ್ರಿಕೆಯ ಜಿಲ್ಲಾ ವರದಿಗಾರರಾಗಿ ನಿರಾತಂಕಕ್ಕೆ ಸಹಕಾರ ನೀಡುತ್ತಿರುವ  ಶಶಿಕಾಂತ್ ರಾವ್, ಉಲ್ಲಾಸ್ ಹಾಗೂ ಪತ್ರಿಕೆಯ ಗುಣಮಟ್ಟವನ್ನು ಹೆಚ್ಚಿಸಲು ನಮ್ಮ ಕ್ರಿಯಾ ಸಮಿತಿಯ ಸದಸ್ಯರಾಗಿ   ವೆಂಕಟೇಶ್ ಮೂರ್ತಿ, ಶಶಿಧರ್, ಗುಂಡಪ್ಪ, ಆನಂದ್ ಮತ್ತು ಮಂಜುನಾಥ್ ಇವರೆಲ್ಲರೂ ನಮ್ಮೊಂದಿಗೆ ಸಕ್ರಿಯವಾಗಿ ಕಾರ್ಯ ನಿರ್ವಹಿಸಲು ಸಮ್ಮತಿಸಿರುವುದು ನಮ್ಮ ನಿರಾತಂಕ ತಂಡಕ್ಕೆ ಸಂತಸ ನೀಡಿದೆ, ಹುರುಪು ತಂದಿದೆ

ರಮೇಶ  ಎಂ.ಎಚ್.


No comments:

Post a Comment